AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಅಡಿಲೇಡ್‌ನಲ್ಲಿ ಟಾಸ್ ಗೆದ್ದ ಭಾರತ; ತಂಡದಲ್ಲಿ 3 ಬದಲಾವಣೆ

IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಶುಕ್ರವಾರದಿಂದ ಆರಂಭವಾಗಿದೆ. ಇದು ಹಗಲು ರಾತ್ರಿ ಟೆಸ್ಟ್ ಆಗಿರುವುದರಿಂದ ಪಿಂಕ್ ಬಾಲ್​ನೊಂದಿಗೆ ಆಡಿಲೇಡ್ ಓವಲ್‌ನಲ್ಲಿ ಈ ಟೆಸ್ಟ್ ಆಡಲಾಗುತ್ತಿದೆ. ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದ್ದಾರೆ. ಇದರ ಜೊತೆಗೆ ಎರಡು ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ.

IND vs AUS: ಅಡಿಲೇಡ್‌ನಲ್ಲಿ ಟಾಸ್ ಗೆದ್ದ ಭಾರತ; ತಂಡದಲ್ಲಿ 3 ಬದಲಾವಣೆ
ಟೀಂ ಇಂಡಿಯಾ
ಪೃಥ್ವಿಶಂಕರ
|

Updated on:Dec 06, 2024 | 9:27 AM

Share

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಅಡಿಲೇಡ್‌ನಲ್ಲಿ ನಡೆಯುತ್ತಿದೆ. ಇದು ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಗಿರುವ ಕಾರಣ ಈ ಪಂದ್ಯಕ್ಕೆ ಪಿಂಕ್ ಬಾಲ್ ಬಳಸಲಾಗುತ್ತಿದೆ. ಇನ್ನು ಭಾರತ ತಂಡವು ಪ್ರಸ್ತುತ 5-ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಕಾರಣ ಈಗ ಆ ಮುನ್ನಡೆಯನ್ನು 2-0 ಗೆ ಹೆಚ್ಚಿಸಲು ನೋಡುತ್ತಿದೆ. ಇತ್ತ ಆತಿಥೇಯ ಆಸ್ಟ್ರೇಲಿಯಾ ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು 1-1 ರಿಂದ ಸಮಬಲಗೊಳಿಸಲು ಎದುರು ನೋಡುತ್ತಿದೆ. ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದ್ದಾರೆ. ಇದರ ಜೊತೆಗೆ ಎರಡು ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ.

ತಂಡದಲ್ಲಿ 3 ಬದಲಾವಣೆ

ಈ ಮೊದಲು ನಿರೀಕ್ಷಿಸಿದಂತೆ ಪಿಂಕ್ ಬಾಲ್ ಟೆಸ್ಟ್‌ಗೆ ಭಾರತ ತಂಡದಲ್ಲಿ ಬದಲಾವಣೆಗಳಿವೆ. ನಾಯಕ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ತಂಡದಲ್ಲಿ ಸ್ಥಾನ ಪಡೆದಿದ್ದರೆ, ದೇವದತ್ ಪಡಿಕ್ಕಲ್ ಹಾಗೂ ಧೃವ್ ಜುರೇಲ್​ ತಂಡದಿಂದ ಹೊರಬಿದ್ದಿದ್ದಾರೆ. ರೋಹಿತ್ ತನ್ನ ಎರಡನೇ ಮಗುವಿನ ಜನನದ ಕಾರಣ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದರೆ, ಗಿಲ್ ಬೆರಳಿನ ಗಾಯದಿಂದಾಗಿ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದರು. ಇದೀಗ ಈ ಇಬ್ಬರು ತಂಡವನ್ನು ಕೂಡಿಕೊಂಡಿದ್ದು, ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಿದ್ದಾರೆ. ಉಳಿದಂತೆ ಭಾರತ ತಂಡದ ಸ್ಪಿನ್ ವಿಭಾಗದಲ್ಲಿ ಮೂರನೇ ಬದಲಾವಣೆಯಾಗಿದ್ದು, ವಾಷಿಂಗ್ಟನ್ ಸುಂದರ್ ಬದಲಿಗೆ ಅಶ್ವಿನ್ ಸ್ಥಾನ ಪಡೆದಿದ್ದಾರೆ.

ಅಶ್ವಿನ್‌ಗೆ ಅವಕಾಶ

ಅಡಿಲೇಡ್‌ನಲ್ಲಿ ನಡೆದ ಕೊನೆಯ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಅಶ್ವಿನ್​ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಕಳೆದ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಅಶ್ವಿನ್ 5 ವಿಕೆಟ್ ಪಡೆದಿದ್ದರು. ಅಡಿಲೇಡ್‌ನಲ್ಲಿ ಒಟ್ಟಾರೆಯಾಗಿ ನೋಡುವುದಾದರೆ, ಅಶ್ನಿನ್ 3 ಟೆಸ್ಟ್‌ಗಳನ್ನು ಆಡಿದ್ದು, ಅದರಲ್ಲಿ 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅಂಕಿಅಂಶಗಳನ್ನು ಪರಿಗಣಿಸಿರುವ ತಂಡದ ಮ್ಯಾನೇಜ್​ಮೆಂಟ್ ವಾಷಿಂಗ್ಟನ್ ಸುಂದರ್‌ಗಿಂತ ಅಶ್ವಿನ್‌ಗೆ ಆದ್ಯತೆ ನೀಡಿದೆ.

ಉಭಯ ತಂಡಗಳು

ಭಾರತ ತಂಡ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ರವಿಚಂದ್ರನ್ ಅಶ್ವಿನ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ ತಂಡ: ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:17 am, Fri, 6 December 24

Follow Us
NEET ಹೋರಾಟದ ವಿಡಿಯೋ ಅಲ್ಲ, ಬಿಹಾರ ಅಪಘಾತದ್ದು: ಸಿಟಿ ರವಿ ಏನಂದ್ರು ನೋಡಿ
NEET ಹೋರಾಟದ ವಿಡಿಯೋ ಅಲ್ಲ, ಬಿಹಾರ ಅಪಘಾತದ್ದು: ಸಿಟಿ ರವಿ ಏನಂದ್ರು ನೋಡಿ
ಹೀರೋ ಆಗಬೇಕೆಂಬ ಕನಸು ಈಡೇರಿಸಿಕೊಂಡ ರೈತ ಚೇತನ್: ವಿಡಿಯೋ
ಹೀರೋ ಆಗಬೇಕೆಂಬ ಕನಸು ಈಡೇರಿಸಿಕೊಂಡ ರೈತ ಚೇತನ್: ವಿಡಿಯೋ
ಬಾಗಲಕೋಟೆಯಲ್ಲಿ ಏಕಾಏಕಿ ಕಾರು ಸ್ಫೋಟ: ಬಾಂಬ್ ಶಂಕೆ, ಖಾಕಿ ತನಿಖೆ
ಬಾಗಲಕೋಟೆಯಲ್ಲಿ ಏಕಾಏಕಿ ಕಾರು ಸ್ಫೋಟ: ಬಾಂಬ್ ಶಂಕೆ, ಖಾಕಿ ತನಿಖೆ
ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ದಿಟ್ಟ ನಿರ್ಧಾರ ಕೈಗೊಂಡ ಮೋದಿ, ಏನದು?
ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ದಿಟ್ಟ ನಿರ್ಧಾರ ಕೈಗೊಂಡ ಮೋದಿ, ಏನದು?
ಯುವಕರೊಂದಿಗೆ ಮೋದಿ ಸಂವಾದ ಹೇಗಿತ್ತು? ವಿದ್ಯಾರ್ಥಿಗಳು ಹೇಳಿದ್ದೇನು?
ಯುವಕರೊಂದಿಗೆ ಮೋದಿ ಸಂವಾದ ಹೇಗಿತ್ತು? ವಿದ್ಯಾರ್ಥಿಗಳು ಹೇಳಿದ್ದೇನು?
102 ಮೀ. ಉದ್ದದ ಸಿಕ್ಸರ್ ಬಾರಿಸಿದ ವೈಭವ್; ವಿಡಿಯೋ
102 ಮೀ. ಉದ್ದದ ಸಿಕ್ಸರ್ ಬಾರಿಸಿದ ವೈಭವ್; ವಿಡಿಯೋ
ವಿಕಸಿತ್ ವೈಬ್ರೆಂಟ್‌ ವಿಲೇಜ್‌:ಯುವಕರೊಂದಿಗೆ ಮೋದಿ ಸಂವಾದ ನೇರ ಪ್ರಸಾರ
ವಿಕಸಿತ್ ವೈಬ್ರೆಂಟ್‌ ವಿಲೇಜ್‌:ಯುವಕರೊಂದಿಗೆ ಮೋದಿ ಸಂವಾದ ನೇರ ಪ್ರಸಾರ
ಬಾಗಲಕೋಟೆಯ ಹಿಪ್ಪರಗಿ ಬಳಿ ಕಾರು ಸ್ಫೋಟದ ಬಗ್ಗೆ ಎಸ್​ಪಿ ಹೇಳಿದ್ದೇನು?
ಬಾಗಲಕೋಟೆಯ ಹಿಪ್ಪರಗಿ ಬಳಿ ಕಾರು ಸ್ಫೋಟದ ಬಗ್ಗೆ ಎಸ್​ಪಿ ಹೇಳಿದ್ದೇನು?
ರಾಜ್ ಬಿ. ಶೆಟ್ಟಿ ಹೋದಲ್ಲೆಲ್ಲ ‘ಕರಾವಳಿ’ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ
ರಾಜ್ ಬಿ. ಶೆಟ್ಟಿ ಹೋದಲ್ಲೆಲ್ಲ ‘ಕರಾವಳಿ’ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ
ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿ ಅಧಿಕಾರ ಸ್ವೀಕಾರ
ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿ ಅಧಿಕಾರ ಸ್ವೀಕಾರ