IND vs NZ: ಮುಂಬೈ ಟೆಸ್ಟ್​ನಲ್ಲಿ ಟಾಸ್ ಸೋತ ಭಾರತ; ತಂಡದಲ್ಲಿ 1 ಬದಲಾವಣೆ

IND vs NZ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈಗಾಗಲೇ ಈ ಸರಣಿಯನ್ನು ಕಳೆದುಕೊಂಡಿರುವ ಟೀಮ್ ಇಂಡಿಯಾಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಇನ್ನು ಈ ಪಂದ್ಯದ ಟಾಸ್ ಮುಗಿದಿದ್ದು, ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದ್ದಾರೆ. ಭಾರತ ತಂಡದಲ್ಲಿ 1 ಬದಲಾವಣೆ ಮಾಡಲಾಗಿದ್ದು, ವೇಗಿ ಜಸ್ಪ್ರೀತ್ ಬುಮ್ರಾ ಕೊನೆಯ ಟೆಸ್ಟ್​ನಿಂದ ಹೊರಗುಳಿದಿದ್ದಾರೆ.

IND vs NZ: ಮುಂಬೈ ಟೆಸ್ಟ್​ನಲ್ಲಿ ಟಾಸ್ ಸೋತ ಭಾರತ; ತಂಡದಲ್ಲಿ 1 ಬದಲಾವಣೆ
ಭಾರತ- ನ್ಯೂಜಿಲೆಂಡ್ 3ನೇ ಟೆಸ್ಟ್
Follow us
|

Updated on:Nov 01, 2024 | 9:15 AM

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಇಂದು ಮುಂಬೈನಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಭಾರತ ತಂಡ 24 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವೈಟ್ ವಾಶ್ ಭೀತಿ ಎದುರಿಸುತ್ತಿದೆ. ಕಿವೀಸ್ ತಂಡ ಈಗಾಗಲೇ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಹೀಗಾಗಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ನಿಂದ ಪಾರಾಗಲು ಪ್ರಯತ್ನಿಸಲಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಎಂಟು ವಿಕೆಟ್‌ಗಳಿಂದ ಮತ್ತು ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 113 ರನ್‌ಗಳಿಂದ ಗೆದ್ದಿತ್ತು. ಇದೀಗ ಮೂರನೇ ಟೆಸ್ಟ್ ಗೆಲ್ಲುವುದರೊಂದಿಗೆ ಟೂರ್ನಿಗೆ ವಿದಾಯ ಹೇಳುವುದಕ್ಕೆ ಉಭಯ ತಂಡಗಳು ಸಜ್ಜಾಗಿವೆ. ಇನ್ನು ಈ ಪಂದ್ಯದ ಟಾಸ್ ಮುಗಿದಿದ್ದು, ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದ್ದಾರೆ. ಇದರೊಂದಿಗೆ ಉಭಯ ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ.

ಉಭಯ ತಂಡಗಳಲ್ಲಿ ಬದಲಾವಣೆ

ಟಾಸ್ ಗೆದ್ದ ಬಳಿಕ ಮಾತನಾಡಿದ ಕಿವೀಸ್ ನಾಯಕ ಲೇಥಮ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಅಲ್ಲದೆ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಎರಡು ಬದಲಾವಣೆಗಳನ್ನು ಮಾಡಿದ್ದಾರೆ. ಕಳೆದ ಪಂದ್ಯದಲ್ಲಿ ಭಾರತಕ್ಕೆ ತೊಂದರೆ ನೀಡಿದ್ದ ಮಿಚೆಲ್ ಸ್ಯಾಂಟ್ನರ್ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಸ್ಥಾನದಲ್ಲಿ ಇಶ್ ಸೋಧಿ ಅವರನ್ನು ಪ್ಲೇಯಿಂಗ್-11 ರಲ್ಲಿ ಸೇರಿಸಲಾಗಿದೆ. ಅದೇ ಸಮಯದಲ್ಲಿ, ಟಿಮ್ ಸೌಥಿ ಬದಲಿಗೆ ಮ್ಯಾಟ್ ಹೆನ್ರಿಯನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇತ್ತ ಟೀಂ ಇಂಡಿಯಾ ಕೂಡ ತನ್ನ ಪ್ಲೇಯಿಂಗ್-11 ರಲ್ಲಿ ಬದಲಾವಣೆ ಮಾಡಿದ್ದು, ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್​ಗೆ ಅವಕಾಶ ನೀಡಲಾಗಿದೆ.

ಉಭಯ ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.

ನ್ಯೂಜಿಲೆಂಡ್ ತಂಡ: ಟಾಮ್ ಲೇಥಮ್ (ನಾಯಕ), ಡೆವೊನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಇಶ್ ಸೋಧಿ, ಮ್ಯಾಟ್ ಹೆನ್ರಿ, ಅಜಾಜ್ ಪಟೇಲ್, ವಿಲಿಯಂ ಓ’ರೂರ್ಕ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:07 am, Fri, 1 November 24

ಮೋಕ್ಷಿತಾ ಜೊತೆ ಕುಟುಂಬದವರ ವಿಡಿಯೋ ಕಾಲ್; ಇದು ದೀಪಾವಳಿ ಗಿಫ್ಟ್
ಮೋಕ್ಷಿತಾ ಜೊತೆ ಕುಟುಂಬದವರ ವಿಡಿಯೋ ಕಾಲ್; ಇದು ದೀಪಾವಳಿ ಗಿಫ್ಟ್
ಶ್ರೀಶೈಲ ದೇವಾಲಯದ ಶಿಖರ ದರ್ಶನದ ಹಿಂದಿನ ರಹಸ್ಯ ಇದುವೇ ನೋಡಿ
ಶ್ರೀಶೈಲ ದೇವಾಲಯದ ಶಿಖರ ದರ್ಶನದ ಹಿಂದಿನ ರಹಸ್ಯ ಇದುವೇ ನೋಡಿ
ಇಂದು ಸರ್ವಸಿದ್ಧಿ ಕಾಲ ಎಷ್ಟೊತ್ತಿಗೆ, ದಿನ ಭವಿಷ್ಯ ಹೇಗಿರಲಿದೆ? ಇಲ್ಲಿದೆ
ಇಂದು ಸರ್ವಸಿದ್ಧಿ ಕಾಲ ಎಷ್ಟೊತ್ತಿಗೆ, ದಿನ ಭವಿಷ್ಯ ಹೇಗಿರಲಿದೆ? ಇಲ್ಲಿದೆ
ಸಿದ್ದರಾಮಯ್ಯ ಸೂಚನೆ ಮೇರೆಗೆ ವಕ್ಫ್​ ಅದಾಲತ್ ಮಾಡಿದ್ದೇನೆ: ಜಮೀರ್ ಸ್ಪಷ್ಟನೆ
ಸಿದ್ದರಾಮಯ್ಯ ಸೂಚನೆ ಮೇರೆಗೆ ವಕ್ಫ್​ ಅದಾಲತ್ ಮಾಡಿದ್ದೇನೆ: ಜಮೀರ್ ಸ್ಪಷ್ಟನೆ
ಬಿಗಿ ಭದ್ರತೆಯಲ್ಲಿ ಶ್ರೀನಗರದ ಲಾಲ್ ಚೌಕ್‌ನಲ್ಲಿ ದೀಪಾವಳಿ ಸಂಭ್ರಮಾಚರಣೆ
ಬಿಗಿ ಭದ್ರತೆಯಲ್ಲಿ ಶ್ರೀನಗರದ ಲಾಲ್ ಚೌಕ್‌ನಲ್ಲಿ ದೀಪಾವಳಿ ಸಂಭ್ರಮಾಚರಣೆ
ಪೊಲೀಸ್​ಗಾಗಿ ಗಂಡ, ಪ್ರೇಮಿಯ ನಡುವೆ ಕಿತ್ತಾಟ; ರೈಲು ನಿಲ್ದಾಣದಲ್ಲೇ ಹೈಡ್ರಾಮ
ಪೊಲೀಸ್​ಗಾಗಿ ಗಂಡ, ಪ್ರೇಮಿಯ ನಡುವೆ ಕಿತ್ತಾಟ; ರೈಲು ನಿಲ್ದಾಣದಲ್ಲೇ ಹೈಡ್ರಾಮ
ಎಲ್ಲರ ಕ್ರಶ್ ಆಗಿರುವ ನಟಿ ರುಕ್ಮಿಣಿ ವಸಂತ್​ಗೆ ಲವ್ ಬ್ರೇಕಪ್ ಆಗಿದ್ಯಾ?
ಎಲ್ಲರ ಕ್ರಶ್ ಆಗಿರುವ ನಟಿ ರುಕ್ಮಿಣಿ ವಸಂತ್​ಗೆ ಲವ್ ಬ್ರೇಕಪ್ ಆಗಿದ್ಯಾ?
ಬಿಸಿ ಬಿಸಿ ಇಡ್ಲಿಯಲ್ಲಿ ಜಿರಳೆ ಪತ್ತೆ; ಹೋಟೆಲ್ ಗ್ರಾಹಕರ ಆಕ್ರೋಶ
ಬಿಸಿ ಬಿಸಿ ಇಡ್ಲಿಯಲ್ಲಿ ಜಿರಳೆ ಪತ್ತೆ; ಹೋಟೆಲ್ ಗ್ರಾಹಕರ ಆಕ್ರೋಶ
ಗ್ಯಾರಂಟಿ ಯೋಜನೆಗಳ ಬಗ್ಗೆ ಯೋಚನೆ ಮಾಡಿದ್ದೇ ಡಿಕೆ ಶಿವಕುಮಾರ್: ಹೆಬ್ಬಾಳ್ಕರ್
ಗ್ಯಾರಂಟಿ ಯೋಜನೆಗಳ ಬಗ್ಗೆ ಯೋಚನೆ ಮಾಡಿದ್ದೇ ಡಿಕೆ ಶಿವಕುಮಾರ್: ಹೆಬ್ಬಾಳ್ಕರ್
ವೈಟ್​ಹೌಸ್​ನಲ್ಲೂ ದೀಪಾವಳಿ; ಭಕ್ತಿಗೀತೆ ನುಡಿಸಿದ ಮಿಲಿಟರಿ ಬ್ಯಾಂಡ್
ವೈಟ್​ಹೌಸ್​ನಲ್ಲೂ ದೀಪಾವಳಿ; ಭಕ್ತಿಗೀತೆ ನುಡಿಸಿದ ಮಿಲಿಟರಿ ಬ್ಯಾಂಡ್