ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ
India Vs West Indies: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಸರಣಿಯು ಡಿಸೆಂಬರ್ 15 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಒಟ್ಟು 6 ಪಂದ್ಯಗಳನ್ನಾಡಲಾಗುತ್ತದೆ. ಮೊದಲಿಗೆ 3 ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಈ ಪಂದ್ಯಗಳಿಗೆ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಜರುಗಲಿದೆ.
ಡಿಸೆಂಬರ್ 15 ರಿಂದ ಶುರುವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ 6 ಪಂದ್ಯಗಳ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಈ ಸರಣಿಯಲ್ಲೂ ನಾಯಕಿಯಾಗಿ ಹರ್ಮನ್‌ಪ್ರೀತ್ ಕೌರ್ ಮುಂದುವರೆಯಲಿದ್ದು, ಉಪನಾಯಕಿಯಾಗಿ ಸ್ಮೃತಿ ಮಂಧಾನ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಟಿ20 ತಂಡದಲ್ಲಿ ಹೊಸಮುಖವಾಗಿ ನಂದಿನಿ ಕಶ್ಯಪ್ ಕಾಣಿಸಿಕೊಂಡರೆ, ಏಕದಿನ ತಂಡದಲ್ಲಿ ಇದೇ ಮೊದಲ ಬಾರಿಗೆ ರಾಘ್ವಿ ಬಿಸ್ತ್ ಮತ್ತು ಪ್ರತೀಕಾ ರಾವಲ್ ಸ್ಥಾನ ಪಡೆದಿದ್ದಾರೆ. ಇನ್ನೂ ಟಿ20 ಮತ್ತು ಏಕದಿನ ತಂಡಗಳಲ್ಲಿ ಶಫಾಲಿ ವರ್ಮಾ ಹಾಗೂ ಶ್ರೇಯಾಂಕಾ ಪಾಟೀಲ್ಗೆ ಸ್ಥಾನ ನೀಡಲಾಗಿಲ್ಲ ಎಂಬುದು ವಿಶೇಷ. ಅದರಂತೆ ವೆಸ್ಟ್ ಇಂಡೀಸ್ ಸರಣಿಗೆ ಟೀಮ್ ಇಂಡಿಯಾ ಈ ಕೆಳಗಿನಂತಿದೆ…
ಭಾರತ ಟಿ20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ನಂದಿನಿ ಕಶ್ಯಪ್, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಸಜನಾ ಸಜೀವನ್, ರಾಘ್ವಿ ಬಿಸ್ತ್, ರೇಣುಕಾ ಸಿಂಗ್ ಠಾಕೂರ್, ಪ್ರಿಯಾ ಮಿಶ್ರಾ, ಟಿಟಾಸ್ ಸಾಧು, ಸಾಯಿ ಠಾಕೋರ್, ಮಿನ್ನು ಮಣಿ, ರಾಧಾ ಯಾದವ್.
ಇದನ್ನೂ ಓದಿ: ಗಾಬಾ ಟೆಸ್ಟ್ನಿಂದ 7 ಆಟಗಾರರು ಔಟ್..!
ಭಾರತ ಏಕದಿನ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರತೀಕಾ ರಾವಲ್, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ತೇಜಲ್ ಹಸಬ್ನಿಸ್, ದೀಪ್ತಿ ಶರ್ಮಾ, ಮಿನ್ನು ಮಣಿ, ಪ್ರಿಯಾ ಮಿಶ್ರಾ, ತನುಜಾ ಕನ್ವೆರ್, ಟಿಟಾಸ್ ಸಾಧು , ಸೈಮಾ ಠಾಕೂರ್, ರೇಣುಕಾ ಸಿಂಗ್ ಠಾಕೂರ್.
ಭಾರತ ಮತ್ತು ವೆಸ್ಟ್ ಇಂಡೀಸ್ ಸರಣಿಯ ವೇಳಾಪಟ್ಟಿ |
|||||
ಸಂಖ್ಯೆ | ದಿನ ಮತ್ತು ದಿನಾಂಕ | ಸಮಯ | ಪಂದ್ಯ | ಸ್ಥಳ | |
1 | ಭಾನುವಾರ | 15-ಡಿಸೆಂಬರ್-24 | 7:00 PM | 1ನೇ ಟಿ20 | ಡಿವೈ ಪಾಟೀಲ್ ಸ್ಟೇಡಿಯಂ, ನವಿ ಮುಂಬೈ |
2 | ಮಂಗಳವಾರ | 17-ಡಿಸೆಂಬರ್-24 | 7:00 PM | 2ನೇ ಟಿ20 | ಡಿವೈ ಪಾಟೀಲ್ ಸ್ಟೇಡಿಯಂ, ನವಿ ಮುಂಬೈ |
3 | ಗುರುವಾರ | 19-ಡಿಸೆಂಬರ್-24 | 7:00 PM | 3ನೇ ಟಿ20 | ಡಿವೈ ಪಾಟೀಲ್ ಸ್ಟೇಡಿಯಂ, ನವಿ ಮುಂಬೈ |
4 | ಭಾನುವಾರ | 22-ಡಿಸೆಂಬರ್-24 | 1:30 PM | 1ನೇ ಏಕದಿನ | ಕೊಟಂಬಿ ಕ್ರೀಡಾಂಗಣ, ವಡೋದರ |
5 | ಮಂಗಳವಾರ | 24-ಡಿಸೆಂಬರ್-24 | 1:30 PM | 2ನೇ ಏಕದಿನ | ಕೊಟಂಬಿ ಕ್ರೀಡಾಂಗಣ, ವಡೋದರ |
6 | ಶುಕ್ರವಾರ | 27-ಡಿಸೆಂಬರ್-24 | 9:30 AM | 3ನೇ ಏಕದಿನ | ಕೊಟಂಬಿ ಕ್ರೀಡಾಂಗಣ, ವಡೋದರ |