IPL 2022: ಐಪಿಎಲ್ನಿಂದ ಚೀನಾ ಕಂಪೆನಿ ವಿವೋಗೆ ಗೇಟ್ ಪಾಸ್: ಇನ್ಮುಂದೆ TATA IPL 2022
TATA IPL 2022: 2018 ರಲ್ಲಿ ವಿವೋ ಕಂಪೆನಿ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ 440 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿತ್ತು. ಈ ಪ್ರಾಯೋಜಕತ್ವದ ಒಪ್ಪಂದವು ಐಪಿಎಲ್ 2023 ರ ನಂತರ ಮುಕ್ತಾಯಗೊಳ್ಳಬೇಕಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಶೀರ್ಷಿಕೆ ಪ್ರಾಯೋಜಕತ್ವದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಈ ಹಿಂದಿನ ವಿವೋ ಬದಲಿಗೆ ಟಾಟಾ ಗ್ರೂಪ್ ಟೈಟಲ್ ಪ್ರಾಯೋಜಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಮುಂದಿನ ಸೀಸನ್ ಟಾಟಾ ಐಪಿಎಲ್ 2022 (TATA IPL 2022) ಹೆಸರಿನಲ್ಲಿ ಕಾಣಿಸಿಕೊಳ್ಳಲಿದೆ. ಮಂಗಳವಾರ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಪ್ರಾಯೋಜಕತ್ವ ಬದಲಾವಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗಿದ್ದು, ಅದರಂತೆ ಟಾಟಾ ಸಮೂಹಕ್ಕೆ ಪ್ರಾಯೋಜಕತ್ವವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಚೀನಾ ವಿರೋಧಿ ಭಾವನೆಯಿಂದಾಗಿ VIVO 2020 ರಲ್ಲಿ IPL ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. ಇದಾಗ್ಯೂ 2021 ರಲ್ಲಿ ವಿವೋ ಮುಖ್ಯ ಪ್ರಾಯೋಜಕರಾಗಿ ಮರಳಿತ್ತು. ಆದರೀಗ ಮತ್ತೆ ಹೊಸ ಆವೃತ್ತಿಗಾಗಿ ನೂತನ ಪ್ರಾಯೋಜಕರನ್ನು ಆಯ್ಕೆ ಮಾಡಲಾಗಿದ್ದು, ಅದರಂತೆ ಟಾಟಾ ಗ್ರೂಪ್ ಐಪಿಎಲ್ ಟೈಟಲ್ ಸ್ಪಾನ್ಸರ್ ಆಗಲು ಮುಂದಾಗಿದ್ದಾರೆ.
2018 ರಲ್ಲಿ ವಿವೋ ಕಂಪೆನಿ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ 440 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿತ್ತು. ಈ ಪ್ರಾಯೋಜಕತ್ವದ ಒಪ್ಪಂದವು ಐಪಿಎಲ್ 2023 ರ ನಂತರ ಮುಕ್ತಾಯಗೊಳ್ಳಬೇಕಿತ್ತು. ಆದರೆ ಬಿಸಿಸಿಐ ಹಾಗೂ ವಿವೋ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಪ್ರಾಯೋಜಕತ್ವ ಬದಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದ ಕುರಿತು ಬಿಸಿಸಿಐ ಜೊತೆಗಿನ ತನ್ನ ಅಸ್ತಿತ್ವದಲ್ಲಿರುವ ಒಪ್ಪಂದವನ್ನು ಟಾಟಾಗೆ ವರ್ಗಾಯಿಸಲು ವಿವೋ ಕೂಡ ಒಪ್ಪಿದೆ. ಇದಕ್ಕೆ ಐಪಿಎಲ್ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಅದರಂತೆ TATA, IPL 2022 ಮತ್ತು 2023 ಸೀಸನ್‌ಗಳಿಗೆ ಶೀರ್ಷಿಕೆ ಪ್ರಾಯೋಜಕತ್ವವನ್ನು ಹೊಂದಿರಲಿದೆ. ಈ ಎರಡು ಸೀಸನ್‌ಗಳ ಪ್ರಾಯೋಕತ್ವದ ಒಪ್ಪಂದ ಮೊತ್ತ ಇನ್ನೂ ಬಹಿರಂಗವಾಗಿಲ್ಲ. ಇದಾಗ್ಯೂ ಈ ಹಿಂದಿಕ್ಕಿಂತ ದೊಡ್ಡ ಮೊತ್ತಕ್ಕೆ ಟಾಟಾ ಸಮೂಹ ಟೈಟಲ್ ಪ್ರಾಯೋಕತ್ವ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.
ಏಕೆಂದರೆ ಈ ಬಾರಿ ಒಟ್ಟು 10 ತಂಡಗಳಿದ್ದು, ಪಂದ್ಯಗಳ ಸಂಖ್ಯೆ 56 ರಿಂದ 74ಕ್ಕೆ ಏರಿಕೆಯಾಗಲಿದೆ. ಹೀಗಾಗಿ ಐಪಿಎಲ್ ಟೈಟಲ್ ಪ್ರಾಯೋಜಕತ್ವದ ಮೊತ್ತ ಕೂಡ ಹೆಚ್ಚಾಗಲಿದೆ. ಅದರಂತೆ ಎರಡು ಸೀಸನ್ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಟಾಟಾ ದೊಡ್ಡ ಮೊತ್ತ ಪಾವತಿಸಿರುವ ಸಾಧ್ಯತೆಯಿದೆ.
ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್
ಇದನ್ನೂ ಓದಿ: Sachin Tendulkar: ಆಲ್ ಟೈಮ್ ಬೆಸ್ಟ್ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(IPL 2022: TATA to Replace VIVO as Title Sponsors)
Published On - 3:02 pm, Tue, 11 January 22