Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಗೆಲುವಿನ ಬೆನ್ನಲ್ಲೇ CSK ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ

IPL 2025 LSG vs CSK: ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 166 ರನ್ ಕಲೆಹಾಕಿದರೆ, ಸಿಎಸ್​ಕೆ ತಂಡ ಈ ಗುರಿಯನ್ನು 19.3 ಓವರ್​ಗಳಲ್ಲಿ ಚೇಸ್ ಮಾಡಿದೆ.

IPL 2025: ಗೆಲುವಿನ ಬೆನ್ನಲ್ಲೇ CSK ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ
Csk
Follow us
ಝಾಹಿರ್ ಯೂಸುಫ್
|

Updated on:Apr 16, 2025 | 12:25 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-18 ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಕೊನೆಗೂ ಜಯ ಸಾಧಿಸಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 30ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಸಿಎಸ್​ಕೆ 5 ವಿಕೆಟ್​ಗಳ ಗೆಲುವು ದಾಖಲಿಸಿದೆ. ಈ ಗೆಲುವಿನ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ.

ಏಕೆಂದರೆ ಈ ಪಂದ್ಯದ ಟಾಸ್ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಇತರರು ಕೇಳುವಂತೆ ಟಾಸ್ ಕೂಗಿರಲಿಲ್ಲ. ಬದಲಾಗಿ ಮ್ಯಾಚ್ ರೆಫರಿ ನಾರಾಯಣ್ ಕುಟ್ಟಿ ಅವರ ಕಿವಿಯಲ್ಲಿ ತನ್ನ ನಿರ್ಧಾರ ತಿಳಿಸಿದ್ದರು. ಅತ್ತ ಟಾಸ್ ಹೆಡ್ ಬೀಳುತ್ತಿದ್ದಂತೆ ಇತ್ತ ಕಡೆಯಿಂದ ಕಾಮೆಂಟೇಟರ್ ಮುರಳಿ ಕಾರ್ತಿಕ್, ಧೋನಿ ಅವರ ಆಯ್ಕೆ ಟೇಲ್ಸ್ ಅಲ್ವಾ ಎಂದು ಕೇಳಿದ್ದಾರೆ. ಆದರೆ ಮ್ಯಾಚ್​ ರೆಫರಿ ಹೆಡ್ಸ್ ಎಂದಿದ್ದಾರೆ.

ಇದನ್ನೂ ಓದಿ
Image
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
Image
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
Image
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
Image
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ರಿಷಭ್ ಪಂತ್ ಅವರ ಕೈಯಲ್ಲಿ ಮೈಕ್ ಇದ್ದರೂ, ಮುರಳಿ ಕಾರ್ತಿಕ್ ಹತ್ತಿರವೇ ಇದ್ದರೂ ಧೋನಿ ಟಾಸ್ ಆಯ್ಕೆಯನ್ನು ಕಿವಿಯಲ್ಲಿ ಹೇಳುವ ಅವಶ್ಯಕತೆ ಏನಿತ್ತು ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ. ಇದೀಗ ಈ ಟಾಸ್ ಪ್ರಕ್ರಿಯೆ ವಿಡಿಯೋ ವೈರಲ್ ಆಗಿದ್ದು, ಅನೇಕರು ಫಿಕ್ಸಿಂಗ್ ಬಗ್ಗೆ ಸಂಶಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ ಪರ ರಿಷಭ್ ಪಂತ್ ಅತ್ಯಂತ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಲ್ಲೂ ಅವರು ಅರ್ಧಶತಕ ಪೂರೈಸಲು ತೆಗೆದುಕೊಂಡಿದ್ದು ಬರೋಬ್ಬರಿ 42 ಎಸೆತಗಳು. ಡೇವಿಡ್ ಮಿಲ್ಲರ್​ನಂತಹ ಸ್ಪೋಟಕ ಬ್ಯಾಟರ್​ಗಳು ಇದ್ದರೂ ಕೊನೆಯ ಓವರ್​ ತನಕ ಬಿರುಸಿನ ಹೊಡೆತಕ್ಕ ಮುಂದಾಗದೇ ರಿಷಭ್ ಪಂತ್ ವಿಕೆಟ್ ಕಾಯ್ದುಕೊಂಡಿದ್ದೇಕೆ? ಎಂಬ ಪ್ರಶ್ನೆಗಳನ್ನು ಸಹ ಸೋಷಿಯಲ್ ಮೀಡಿಯಾದಲ್ಲಿ ಮುಂದಿಡಲಾಗುತ್ತಿದೆ.

ಹಾಗೆಯೇ ಒಂದು ಹಂತದಲ್ಲಿ ಗೆಲುವಿನತ್ತ ಸಾಗಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೊನೆಯ ಓವರ್​ಗಳ ವೇಳೆ ಸ್ಪಿನ್ನರ್​ಗಳನ್ನು ಬಳಸಿಕೊಳ್ಳದಿರುವುದಕ್ಕೂ ಅನೇಕರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಧೋನಿ ಅವರ ವೀಕ್ನೆಸ್ ಸ್ಪಿನ್ ಬೌಲಿಂಗ್. ಈ ಹಂತದಲ್ಲಿ ಅದಾಗಲೇ ಲಯವಿಲ್ಲದೆ ಬೌಲಿಂಗ್ ಮಾಡುತ್ತಿದ್ದ ಶಾರ್ದೂಲ್ ಠಾಕೂರ್ ಅವರಿಂದ ಬೌಲಿಂಗ್ ಮಾಡಿಸಿದ್ಯಾಕೆ ಎಂದು ಅನೇಕರು ಪ್ರಶ್ನಿಸಿದ್ದಾರೆ.

ಅದರಲ್ಲೂ ರವಿಬಿಷ್ಣೋಯ್ 3 ಓವರ್​ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಇದಾಗ್ಯೂ ಧೋನಿ ಬ್ಯಾಟಿಂಗ್​ಗೆ ಇಳಿದಾಗ ಬಿಷ್ಣೋಯ್​ಗೆ ಪಂತ್ ಓವರ್ ನೀಡಿರಲಿಲ್ಲ. ಬದಲಾಗಿ 3 ಓವರ್​ಗಳಲ್ಲಿ 37 ರನ್ ಬಿಟ್ಟು ಕೊಟ್ಟಿದ್ದ ಶಾರ್ದೂಲ್ ಠಾಕೂರ್​ಗೆ 19ನೇ ಓವರ್​ ನೀಡಿದ್ದರು. ಪರಿಣಾಮ ಶಾರ್ದೂಲ್ ನಿರ್ಣಾಯಕ ಓವರ್​ನಲ್ಲಿ ಫುಲ್ ಟಾಸ್ ನೋಬಾಲ್​ನೊಂದಿಗೆ 19 ರನ್ ನೀಡಿದ್ದರು.

ರಿಷಭ್ ಪಂತ್ ಅವರ ಈ ನಿರ್ಧಾರದ ಬಗ್ಗೆ ಕಾಮೆಂಟೇಟರ್​ಗಳು ಸಹ ಅಚ್ಚರಿಗಳನ್ನು ವ್ಯಕ್ತಪಡಿಸಿದ್ದರು. ಇದನ್ನೇ ಮುಂದಿಟ್ಟುಕೊಂಡು ಅನೇಕು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸುತ್ತಿದ್ದಾರೆ.

ಒಟ್ಟಿನಲ್ಲಿ ಸತತ 5 ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೊನೆಗೂ ಒಂದು ಗೆಲುವು ದಾಖಲಿಸಿದೆ. ಈ ಗೆಲುವಿನ ಬೆನ್ನಲ್ಲೇ ಸಿಎಸ್​ಕೆ ವಿರುದ್ಧ ಫಿಕ್ಸಿಂಗ್ ಆರೋಪಗಳು ಕೇಳಿ ಬರುತ್ತಿರುವುದು ಮಾತ್ರ ವಿಪರ್ಯಾಸ.

ಇದನ್ನೂ ಓದಿ: ಮೋಸದಾಟದ ಡೌಟ್… ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್

ಅಂದಹಾಗೆ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣಗಳ ಕಾರಣದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 2016 ಮತ್ತು 2017 ರ ಐಪಿಎಲ್​​ನಿಂದ ಬ್ಯಾನ್ ಮಾಡಲಾಗಿತ್ತು. ಇದೀಗ ಮತ್ತೆ ಸಿಎಸ್​ಕೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಟಾಸ್ ಫಿಕ್ಸಿಂಗ್ ಆರೋಪಗಳು ಕೇಳಿ ಬಂದಿದೆ.

Published On - 7:09 am, Tue, 15 April 25