IPL Mega Auction 2025 highlights: ಐಪಿಎಲ್ ಹರಾಜು ಅಂತ್ಯ: 2ನೇ ದಿನ ಯಾರು ಎಷ್ಟಕ್ಕೆ ಸೇಲ್?
IPL Auction 2025 highlights Updates in kannada: 2025ರ 18ನೇ ಆವೃತ್ತಿಯ ಐಪಿಎಲ್ಗೆ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದ ಜೆದ್ದಾ ನಗರದಲ್ಲಿ ನಡೆಯುತ್ತಿದೆ. ಮೊದಲ ದಿನದ ಬಿಡ್ಡಿಂಗ್ನಲ್ಲಿ ಒಟ್ಟು 72 ಆಟಗಾರರು ಹರಾಜಾಗಿದ್ದಾರೆ. ರಿಷಭ್ ಪಂತ್ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಬಿಕರಿಯಾಗಿದ್ದಾರೆ. ಹರಾಜಿನ ಎರಡನೇ ದಿನದ ಲೈವ್ ಅಪ್ಡೇಟ್ಸ್ಗಾಗಿ ಲೈವ್ ವೀಕ್ಷಿಸಿ.

ಐಪಿಎಲ್ ಫೀವರ್ ಶುರುವಾಗಿದೆ. 2025ರ 18ನೇ ಆವೃತ್ತಿಯ ಐಪಿಎಲ್ಗೆ ಆಟಗಾರರ ಹರಾಜು ಪ್ರಕ್ರಿಯೆ ನಿನ್ನೆಯಿಂದ ಆರಂಭವಾಗಿದ್ದು, ಫ್ರಾಂಚೈಸಿಗಳು ಅಳೆದು ತೂಗಿ ಕೋಟಿ ಕೋಟಿ ರೂ. ಬೆಲೆಗೆ ಆಟಗಾರರನ್ನು ಖರೀದಿಸಿವೆ. ಹರಾಜು ಪ್ರಕ್ರಿಯೆಯ ಎರಡನೇ ದಿನವಾಗಿರುವ ಇಂದು ಕೂಡ ತಮ್ಮ ನೆಚ್ಚಿನ ಆಟಗಾರರು ಆಯಾ ತಂಡ ಸೇರಿದ್ದಾರೆ. ನಿನ್ನೆಯ ಮೆಗಾ ಹರಾಜಿನಲ್ಲಿ ಐಪಿಎಲ್ ಇತಿಹಾಸದಲ್ಲೇ ಅತಿದೊಡ್ಡ ಮೊತ್ತಕ್ಕೆ ಸೇಲಾಗುವ ಮೂಲಕ ರಿಷಭ್ ಪಂತ್ ದಾಖಲೆ ಬರೆದಿದ್ದರು. ಇಂದು ಫ್ರಾಂಚೈಸಿಗಳು ಯಾವೆಲ್ಲಾ ಆಟಗಾರರ ಮೇಲೆ ದುಡ್ಡಿನ ಮಳೆ ಸುರಿಸಲಿದೆ ಎಂಬ ಕ್ಷಣ ಕ್ಷಣದ ಅಪ್ಡೇಟ್ಸ್ಗಾಗಿ ಲೈವ್ ನೋಡಿ.
LIVE NEWS & UPDATES
-
IPL Mega Auction 2025 Live: ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯ
ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಒಟ್ಟು 182 ಒಟ್ಟು ಆಟಗಾರರನ್ನು ಖರೀದಿಸುವ 10 ಫ್ರಾಂಚೈಸಿಗಳು ಒಟ್ಟು 639.15 ಕೋಟಿ ರೂ. ಭರಿಸಿದೆ.
-
IPL Mega Auction 2025 Live: ಡೆಲ್ಲಿ ಪಾಲಾದ ತಿವಾರಿ, ತ್ರಿಪೂರ್ಣ
ಅನ್ ಕ್ಯಾಪ್ಡ್ ಆಟಗಾರರಾದ ಮಾಧವ್ ತಿವಾರಿ ಮತ್ತು ತ್ರಿಪೂರ್ಣ ವಿಜಯ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಲಾ 30 ಲಕ್ಷ ರೂ.ಗಳ ಮೂಲ ಬೆಲೆಗೆ ಖರೀದಿಸಿದೆ.
-
-
IPL Mega Auction 2025 Live: ಪಂಜಾಬ್ ಕಿಂಗ್ಸ್ನಲ್ಲಿ 25 ಆಟಗಾರರು
ಪಂಜಾಬ್ ಕಿಂಗ್ಸ್ ತಂಡ ತಮ್ಮ ಗರಿಷ್ಠ 25 ಆಟಗಾರರನ್ನು ಹೊಂದುವ ಮೂಲಕ ತಮ್ಮ ಕೋಟಾವನ್ನು ಪೂರ್ಣಗೊಳಿಸಿದೆ.
-
IPL Mega Auction 2025 Live: ಪ್ರವೀಣ್ ದುಬೆ 30 ಲಕ್ಷಕ್ಕೆ ಬಿಕರಿ
ದೆಹಲಿ ಕ್ಯಾಪಿಟಲ್ಸ್ ಅಜಯ್ ಮಂಡಲ್ರನ್ನು 30 ಲಕ್ಷಕ್ಕೆ ಖರೀದಿಸಿದ್ದು, ಅನ್‌ಕ್ಯಾಪ್ಡ್ ಆಟಗಾರ ಪ್ರವೀಣ್ ದುಬೆ ಕೂಡ 30 ಲಕ್ಷಕ್ಕೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ.
-
IPL Mega Auction 2025 Live: ಅರ್ಜುನ್ ತೆಂಡೂಲ್ಕರ್ ಅನ್‌ಸೋಲ್ಡ್
2025ರ ಐಪಿಎಲ್ನ ಕೊನೆಯ ಸುತ್ತಿನ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ರನ್ನು ಯಾರು ಖರೀದಿಸಿಲ್ಲ.
-
-
IPL Mega Auction 2025 Live: ಕೋಲ್ಕತ್ತಾ ಪಾಲಾದ ಮೊಯಿನ್ ಅಲಿ
2 ಕೋಟಿಗೆ ಮೊಯಿನ್ ಅಲಿ ಕೋಲ್ಕತ್ತಾ ತಂಡದ ಪಾಲಾಗಿದ್ದಾರೆ.
-
IPL Mega Auction 2025 Live: ಆರ್‌ಸಿಬಿ ಪಾಲಾದ ದೇವದತ್ ಪಡಿಕ್ಕಲ್
ಅನ್‌ಸೋಲ್ಡ್ ಆಗಿದ್ದ ದೇವದತ್ ಪಡಿಕ್ಕಲ್ ಅನ್ನು 2 ಕೋಟಿ ರೂಪಾಯಿಗೆ ಆರ್‌ಸಿಬಿ ತಂಡ ಖರೀದಿಸಿದೆ.
-
IPL Mega Auction 2025 Live: ಯಾರೀತ ವೈಭವ್ ಸೂರ್ಯವಂಶಿ?
1.1 ಕೋಟಿ ರೂ.ಗೆ ವೈಭವ್ ಸೂರ್ಯವಂಶಿ ರಾಜಸ್ಥಾನ ತಂಡದ ಪಾಲಾಗಿದ್ದಾರೆ. ಆ ಮೂಲಕ ಐಪಿಎಲ್‌ನಲ್ಲಿ ಅತಿ ಕಿರಿಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಹಾಗಾದರೆ ಈ ವೈಭವ್ ಸೂರ್ಯವಂಶಿ ಯಾರು ಎಂದು ತಿಳಿಯಲು ಈ ಕೆಳಗಿನ ಸ್ಟೋರಿ ಓದಿ.
Vaibhav Suryavanshi IPL Auction 2025: 13 ವರ್ಷದ ಬಾಲಕನಿಗೆ 1.10 ಕೋಟಿ ರೂ. ನೀಡಿದ ರಾಜಸ್ಥಾನ
-
IPL Mega Auction 2025 Live: ಐಪಿಎಲ್ ಅತಿ ಕಿರಿಯ ಆಟಗಾರ
1.1 ಕೊಟಿಗೆ ಬಿಹಾರ ಮೂಲದ 13 ವರ್ಷದ ವೈಭವ್ ಸೂರ್ಯವಂಶಿ ರಾಜಸ್ಥಾನ ಪಾಲಾಗಿದ್ದಾರೆ. ಆ ಮೂಲಕ ಐಪಿಎಲ್ ಆಟಗಾರರ ಪೈಕಿ ಅತಿ ಕಿರಿಯ ಆಟಗಾರರಾಗಿದ್ದಾರೆ.
𝙏𝙖𝙡𝙚𝙣𝙩 𝙢𝙚𝙚𝙩𝙨 𝙤𝙥𝙥𝙤𝙧𝙩𝙪𝙣𝙞𝙩𝙮 𝙞𝙣𝙙𝙚𝙚𝙙 🤗
13-year old Vaibhav Suryavanshi becomes the youngest player ever to be sold at the #TATAIPLAuction 👏 🔝
Congratulations to the young𝙨𝙩𝙖𝙧, now joins Rajasthan Royals 🥳#TATAIPL | @rajasthanroyals | #RR pic.twitter.com/DT4v8AHWJT
— IndianPremierLeague (@IPL) November 25, 2024
-
IPL Mega Auction 2025 Live: ತಂಡಗಳ ಬಳಿ ಉಳಿದುಕೊಂಡಿರುವ ಮೊತ್ತ
ಸದ್ಯ ತಂಡಗಳು ತಮ್ಮ ಬಳಿ ಹೊಂದಿರುವ ಮೊತ್ತ ಹೀಗಿದೆ.
- CSK - ರೂ. 3.30 ಕೋಟಿ
- MI - ರೂ. 2.15 ಕೋಟಿ
- RCB - ರೂ. 4.65 ಕೋಟಿ
- ಕೆಕೆಆರ್ - ರೂ. 5.00 ಕೋಟಿ
- SRH - ರೂ. 1.70 ಕೋಟಿ
- ಆರ್ಆರ್ - ರೂ. 3.50 ಕೋಟಿ
- PBKS - ರೂ. 1.75 ಕೋಟಿ
- ಡಿಸಿ - ರೂ. 2.25 ಕೋಟಿ
- ಜಿಟಿ - ರೂ. 3.95 ಕೋಟಿ
- LSG - ರೂ. 1.75 ಕೋಟಿ
-
IPL Mega Auction 2025 Live: ಪ್ರಿಯಾಂಶ್ ಆರ್ಯ ರೂ 3.80 ಕೋಟಿಗೆ ಖರೀದಿ
ಪ್ರಿಯಾಂಶ್ ಆರ್ಯಗಾಗಿ ಎಲ್ಲಾ ತಂಡಗಳು ಪೈಪೋಟಿ ನಡೆಸಿದವು. ಅಂತಿಮವಾಗಿ ಪಂಜಾಬ್ ಕಿಂಗ್ಸ್ 3.80 ಕೋಟಿ ರೂ. ಗೆ ಖರೀದಿಸಿದೆ.
-
IPL Mega Auction 2025 Live: ಸ್ಟಿವ್ ಸ್ಮಿತ್ ಅನ್‌ಸೋಲ್ಡ್
ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟಿವ್ ಸ್ಮಿತ್ ಅನ್‌ಸೋಲ್ಡ್ ಆಗಿದ್ದಾರೆ. ಮಿಚೆಲ್ ಸ್ಯಾಂಟ್ನರ್ 2 ಕೋಟಿಗೆ ಮುಂಬೈ ಪಾಲಾಗಿದ್ದಾರೆ.
-
IPL Mega Auction 2025 Live: ಆರ್‌ಸಿಬಿ ಸೇರಿದ ನುವಾನ್ ತುಷಾರ
1 ಕೋಟಿ ರೂ.ಗೆ ಹೈದರಾಬಾದ್ ತಂಡ ಜಯದೇವ್ ಉನದ್ಕತ್ ಖರೀದಿಸಿದೆ. 1.6 ಕೋಟಿ ರೂ.ಗೆ ನುವಾನ್ ತುಷಾರ ಆರ್‌ಸಿಬಿ ತಂಡದ ಪಾಲಾಗಿದ್ದಾರೆ.
-
IPL Mega Auction 2025 Live: ಆರ್‌ಸಿಬಿಗೆ ಮತ್ತೊಬ್ಬ ವೇಗಿ
ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಮತ್ತೊಬ್ಬ ವೇಗಿ ನುವಾನ್ ತುಷಾರಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. 1.60 ಕೋಟಿಗೆ ಆರ್‌ಸಿಬಿ ಪಾಲಾಗಿದ್ದಾರೆ.
-
IPL Mega Auction 2025 Live: ವಿಲ್ ಜ್ಯಾಕ್ಸ್ ಮುಂಬೈ ತಂಡಕ್ಕೆ
5.25 ಕೋಟಿ ರೂಪಾಯಿಗೆ ವಿಲ್ ಜ್ಯಾಕ್ಸ್ ಮುಂಬೈ ತಂಡದ ಪಾಲಾಗಿದ್ದಾರೆ. ರೊಮಾರಿಯೋ ಶೆಫರ್ಡ್ 1.5 ಕೋಟಿ ರೂ.ಗೆ ಆರ್‌ಸಿಬಿ ತಂಡದ ಪಾಲಾಗಿದ್ದಾರೆ.
-
IPL Mega Auction 2025 Live: ಆರ್‌ಸಿಬಿಗೆ ಬಂದ ಟಿಮ್ ಡೇವಿಡ್
3 ಕೋಟಿ ರೂಪಾಯಿಗೆ ಟಿಮ್ ಡೇವಿಡ್ರನ್ನು ಆರ್‌ಸಿಬಿ ತಂಡ ಖರೀದಿಸಿದೆ. ಮೊಯಿನ್ ಅಲಿ ಅನ್‌ಸೋಲ್ಡ್ ಆಗಿದ್ದಾರೆ.
Tim David 🤝 @RCBTweets ⚡️⚡️
He's SOLD for INR 3 Crore 🙌🙌
Huge cheer goes out in the auction arena! 🥳#TATAIPLAuction | #TATAIPL
— IndianPremierLeague (@IPL) November 25, 2024
-
IPL Mega Auction 2025 Live: ಎಂ.ಸಿದ್ಧಾರ್ಥ್ ಖರೀದಿಸಿದ ಲಖನೌ
30 ಲಕ್ಷ ರೂಪಾಯಿಗೆ ಖರೀದಿಯಾಗಿರುವ ದಿಗ್ವೇಶ್ ಸಿಂಗ್ ಲಖನೌ ತಂಡ ಪರ ಬ್ಯಾಟ್ ಬೀಸಲಿದ್ದಾರೆ. ಇನ್ನು 75 ಲಕ್ಷ ರೂಪಾಯಿಗೆ ಎಂ.ಸಿದ್ಧಾರ್ಥ್ ಲಖನೌ ತಂಡ ಸೇರಿದ್ದು, 40 ಲಕ್ಷ ರೂಪಾಯಿಗೆ ಜಿಶಾನ್ ಅನ್ಸಾರಿ ಹೈದರಾಬಾದ್ ತಂಡದ ಪಾಲಾಗಿದ್ದಾರೆ.
-
IPL Mega Auction 2025 Live: ಚೆನ್ನೈ ಸೇರಿದ ಮುಕೇಶ್ ಚೌಧರಿ
ಮುಕೇಶ್ ಚೌಧರಿ 30 ಲಕ್ಷ ರೂಪಾಯಿಗೆ ಚೆನ್ನೈ ತಂಡದ ಪಾಲಾಗಿದ್ದು, ಮಯಾಂಕ್ ದಾಗರ್ ಮತ್ತು ವನ್ಷ್ ಬೇಡಿ ಅನ್‌ಸೋಲ್ಡ್ ಆಗಿದ್ದಾರೆ.
Mukesh Choudhary goes to @ChennaiIPL for INR 30 Lakh 🙌🙌#TATAIPLAuction | #TATAIPL
— IndianPremierLeague (@IPL) November 25, 2024
-
IPL Mega Auction 2025 Live: ಆರ್‌ಸಿಬಿ ಪಾಲಾದ ಸ್ವಪ್ನಿಲ್ ಸಿಂಗ್
50 ಲಕ್ಷ ರೂಪಾಯಿಗೆ ಸ್ವಪ್ನಿಲ್ ಸಿಂಗ್ ಆರ್‌ಸಿಬಿ ತಂಡದ ಪಾಲಾಗಿದ್ದು, 30 ಲಕ್ಷ ರೂಪಾಯಿಗೆ ಶೇಖ್ ರಶೀದ್ರನ್ನು ಚೆನ್ನೈ ತಂಡ ಖರೀದಿಸಿದೆ.
-
IPL Mega Auction 2025 Live: ಚೆನ್ನೈ ಪಾಲಾದ ಅಂಶುಲ್ ಕಾಂಬೋಜ್
ಅಂಶುಲ್ ಕಾಂಬೋಜ್ ಅನ್ನು ತಮ್ಮ ತಂಡಕ್ಕೆ ಸೇರಿಕೊಳ್ಳಲು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಜಿದ್ದಾಜಿದ್ದಿಗೆ ಬಿದಿದ್ದವು. ಕೊನೆಗೆ 3.4 ಕೋಟಿ ರೂ.ಗೆ ಚೆನ್ನೈ ತಂಡದ ಪಾಲಾಗಿದ್ದಾರೆ.
-
IPL Mega Auction 2025 Live: ಹೆಚ್ಚು ಮೊತ್ತಕ್ಕೆ ಖರೀದಿಯಾದ ಆಟಗಾರರು
ಎರಡನೇ ದಿನದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಖರೀದಿಯಾಗಿರುವ ಆಟಗಾರರು.
- ಭುವನೇಶ್ವರ್ ಕುಮಾರ್ - 10.75 ಕೋಟಿ - ಆರ್‌ಸಿಬಿ
- ದೀಪಕ್ ಚಹಾರ್ - ರೂ 9.25 ಕೋಟಿ - ಎಂಐ
- ಆಕಾಶ್ ದೀಪ್ - ರೂ 8 ಕೋಟಿ - ಎಲ್ ಎಸ್ ಜಿ
- ಮುಖೇಶ್ ಕುಮಾರ್ - ರೂ 8 ಕೋಟಿ - ಡಿಸಿ (ಆರ್ಟಿಎಂ)
- ಮಾರ್ಕೊ ಜಾನ್ಸೆನ್ - ರೂ 7 ಕೋಟಿ - ಪಿಬಿಕೆಎಸ್
-
IPL Mega Auction 2025 Live: 10 ಐಪಿಎಲ್ ತಂಡಗಳಲ್ಲಿ ಉಳಿದಿರುವ ಬಾಕಿ ಮೊತ್ತ
ಸದ್ಯ ಎಲ್ಲಾ 10 ಐಪಿಎಲ್ ತಂಡಗಳಲ್ಲಿ ಉಳಿದಿರುವ ಬಾಕಿ ಮೊತ್ತ
- ಆರ್‌ಸಿಬಿ: 14.15 ಕೋಟಿ ರೂ
- CSK: RS 13.20 ಕೋಟಿ
- ಜಿಟಿ: 11.90 ಕೋಟಿ ರೂ
- ಎಂಐ: ರೂ 11.05 ಕೋಟಿ
- PBKS: ರೂ 10.90 ಕೋಟಿ
- ಕೆಕೆಆರ್: 8.55 ಕೋಟಿ ರೂ
- LSG: ರೂ 6.85 ಕೋಟಿ
- ಆರ್ಆರ್: 6.65 ಕೋಟಿ ರೂ
- SRH: ರೂ 5.15 ಕೋಟಿ
- ಡಿಸಿ: 3.80 ಕೋಟಿ ರೂ
-
IPL Mega Auction 2025 Live: ಅನ್‌ಸೋಲ್ಡ್ ಆದ ಆಟಗಾರರು
ಕ್ಯಾಪ್ಡ್ ಸ್ಪಿನ್ನರ್‌ಗಳಲ್ಲಿ ಸದ್ಯಕ್ಕೆ ಅಲ್ಲಾ ಗಜನ್‌ಫರ್ ಮಾತ್ರ ಮುಂಬೈ ತಂಡದ ಪಾಲಾಗಿದ್ದು, ಅಕೇಲ್ ಹೊಸೈನ್, ಕೇಶವ ಮಹಾರಾಜ್, ಮುಜೀಬ್ ಉರ್ ರೆಹಮಾನ್, ಆದಿಲ್ ರಶೀದ್ ಮತ್ತು ವಿಜಯಕಾಂತ್ ವ್ಯಾಸಕಾಂತ್ ಅನ್‌ಸೋಲ್ಡ್ ಆಗಿದ್ದಾರೆ.
-
IPL Mega Auction 2025 Live: 9.25 ಕೋಟಿಗೆ ದೀಪಕ್ ಚಹಾರ್ ಮುಂಬೈ ಪಾಲು
9.25 ಕೋಟಿ ರೂ.ಗೆ ದೀಪಕ್ ಚಹಾರ್ ಮುಂಬೈ ತಂಡದ ಪಾಲಾಗಿದ್ದು, ಮುಕೇಶ್ ಕುಮಾರ್ 8 ಕೋಟಿ ರೂ.ಗೆ ದೆಹಲಿ ತಂಡ ಸೇರಿದ್ದಾರೆ.
-
IPL Mega Auction 2025 Live: 10.75 ಕೋಟಿಗೆ ಭುವನೇಶ್ವರ್ ಕುಮಾರ್ ಬಿಕರಿ
ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ತಂಡಗಳ ಹರಾಜು ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶಿಸಿದ ಆರ್‌ಸಿಬಿ ಭುವನೇಶ್ವರ್ ಕುಮಾರ್ರನ್ನು 10.75 ಕೋಟಿ ರೂ. ಖರೀದಿಸಿದೆ. ಆ ಮೂಲಕ ಇದು ಎರಡನೇ ದಿನದ ಹರಾಜು ಪ್ರಕ್ರಿಯೆಯ ದೊಡ್ಡ ಮೊತ್ತವಾಗಿದೆ.
-
IPL Mega Auction 2025 Live: ತುಷಾರ್ ದೇಶಪಾಂಡೆ ರಾಜಸ್ಥಾನ ತಂಡಕ್ಕೆ
ಮೆಗಾ ಹರಾಜಿನ ಜಿದ್ದಾಜಿದ್ದಿಯಲ್ಲಿ 2.6 ಕೋಟಿ ರೂ.ಗೆ ಜೋಶ್ ಇಂಗ್ಲಿಸ್ ಪಂಜಾಬ್ ತಂಡದ ಪಾಲಾಗಿದ್ದಾರೆ. 6.5 ಕೋಟಿ ರೂ.ಗೆ ತುಷಾರ್ ದೇಶಪಾಂಡೆ ರಾಜಸ್ಥಾನ ತಂಡದ ಪಾಲಾಗಿದ್ದಾರೆ.
Tushar Deshpande SOLD to @rajasthanroyals 🙌🙌
He's acquired for INR 6.5 Crore ⚡️⚡️#TATAIPLAuction | #TATAIPL
— IndianPremierLeague (@IPL) November 25, 2024
-
IPL Mega Auction 2025 Live: ರಾಜಸ್ಥಾನ ಪಾಲಾದ ನಿತೀಶ್ ರಾಣಾ
ನಿತೀಶ್ ರಾಣಾ 4.2 ಕೋಟಿ ರೂ.ಗೆ ಬಿಕರಿಯಾಗಿದ್ದು, ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಟವಾಡಲಿದ್ದಾರೆ. ಶಾಯ್ ಹೋಪ್ ಮತ್ತು ಕೆ.ಎಸ್.ಭರತ್ ಅವರನ್ನು ಸದ್ಯ ಯಾವ ತಂಡ ಖರೀದಿಸಿಲ್ಲ.
-
IPL Mega Auction 2025 Live: ಕೃನಾಲ್ ಪಾಂಡ್ಯ ಆರ್‌ಸಿಬಿ ಪಾಲು
5.75 ಕೋಟಿ ರೂ.ಗೆ ಆರ್‌ಸಿಬಿ ತಂಡ ಕೃನಾಲ್ ಪಾಂಡ್ಯರನ್ನು ಖರೀದಿಸಿದೆ. ಪಂಜಾಬ್ ತಂಡ 7 ಕೋಟಿ ರೂ.ಗೆ ಮಾರ್ಕೊ ಜಾನ್ಸೆನ್ ಖರೀದಿಸಿದೆ.
-
IPL Mega Auction 2025 Live: ಅಜಿಂಕ್ಯಾ ರಹಾನೆ, ಪೃಥ್ವಿ ಶಾ ಅನ್‌ಸೋಲ್ಡ್
ಡುಪ್ಲೆಸಿಸ್ 2 ಕೋಟಿ ರೂಪಾಯಿಗೆ ದೆಹಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದು, ತಂಡದ ಪರ ಬ್ಯಾಟ್ ಬೀಸಲಿದ್ದಾರೆ. ಇನ್ನು ಅಜಿಂಕ್ಯಾ ರಹಾನೆ, ಮಯಾಂಕ್ ಅಗರ್ವಾಲ್, ಪೃಥ್ವಿ ಶಾ ಅನ್‌ಸೋಲ್ಡ್ ಆಗಿದ್ದಾರೆ.
-
IPL Mega Auction 2025 Live: ಎರಡನೇ ದಿನದ ಹರಾಜು ಪ್ರಕ್ರಿಯೆ ಆರಂಭ
ಐಪಿಎಲ್ ಆಟಗಾರರ ಎರಡನೇ ದಿನದ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, 2.4 ಕೋಟಿ ರೂ.ಗೆ ಸ್ಯಾಮ್ ಕರ್ರಾನ್ ಚೆನ್ನೈ ತಂಡದ ಪಾಲಾಗಿದ್ದಾರೆ. ವಾಷಿಂಗ್ಟನ್ ಸುಂದರ್ 3.2 ಕೋಟಿ ರೂ.ಗೆ ಗುಜರಾತ್ ತಂಡವನ್ನು ಸೇರಿದ್ದಾರೆ. ಶಾರ್ದುಲ್ ಠಾಕೂರ್ ಅನ್ ಸೋಲ್ಡ್ ಆಗಿದ್ದಾರೆ.
-
IPL Mega Auction 2025 Live: ಫ್ರಾಂಚೈಸಿಗಳ ಬಳಿ ಉಳಿದುಕೊಂಡಿರುವ ಮೊತ್ತ
ಒಂದನೇ ದಿನದ ಹರಾಜು ಪ್ರಕ್ರಿಯೆ ಬಳಿಕ ಇದೀಗ ಆಯಾ ಫ್ರಾಂಚೈಸಿಗಳ ಬಳಿ ಉಳಿದುಕೊಂಡಿರುವ ಮೊತ್ತ ಹೀಗಿದೆ.
We have got an action-packed Day 2 ahead at the #TATAIPLAuction in Jeddah!
Time to look at the remaining purse 💰 of the 🔟 franchises 🔽 #TATAIPL pic.twitter.com/Okw3mXDY1s
— IndianPremierLeague (@IPL) November 25, 2024
-
IPL Mega Auction 2025 Live: ಅಭಿಮಾನಿಗಳಲ್ಲಿ ಕುತೂಹಲ
2025ರ ಐಪಿಎಲ್ ಕ್ರಿಕೆಟ್ ಹಬ್ಬಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಹರಾಜು ಪ್ರಕ್ರಿಯೆಯ ಎರಡನೇ ದಿನವಾದ ಇಂದು ಫ್ರಾಂಚೈಸಿಗಳು ತಮ್ಮ ಉತ್ತಮ ಆಟಗಾರರ ಮೇಲೆ ಕೊಟ್ಯಾಂತರ ರೂ. ಹಣ ಸುರಿಯಲು ಮುಂದಾಗಿದ್ದಾರೆ.
Published On - Nov 25,2024 2:59 PM
