ಬ್ರಾಡ್‌ಕಾಸ್ಟಿಂಗ್ ಸ್ಟುಡಿಯೋದಲ್ಲೇ ಡ್ಯಾನ್ಸ್ ಮಾಡಿ ಅಫ್ಘಾನಿಸ್ತಾನ ಗೆಲುವನ್ನು ಸಂಭ್ರಮಿಸಿದ ಇರ್ಫಾನ್ ಪಠಾಣ್
Irfan Pathan-Harbhajan Singh Dance: ಅಫ್ಘಾನಿಸ್ತಾನ ಜಯ ಸಾಧಿಸಿದ ಬಳಿಕ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ನೃತ್ಯವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿದೆ. ಇರ್ಫಾನ್ ಬ್ರಾಡ್‌ಕಾಸ್ಟಿಂಗ್ ಸ್ಟುಡಿಯೋದಲ್ಲಿ ಪಂದ್ಯದ ನಂತರ ನಡೆಯುವ ಕಾರ್ಯಕ್ರಮದ ವೇಳೆ ಹರ್ಭಜನ್ ಸಿಂಗ್ ಜೊತೆಗೆ ಸ್ಟೆಪ್ ಹಾಕಿದ್ದಾರೆ.

2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡ ಸೋಮವಾರ ಪುಣೆಯಲ್ಲಿ ನಡೆದ ಶ್ರೀಲಂಕಾ (Afghanistan vs Sri Lanka) ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ಗಳ ಅದ್ಭುತ ಜಯ ಸಾಧಿಸುವ ಮೂಲಕ ಸೆಮಿಫೈನಲ್ ರೇಸ್ನಲ್ಲಿ ಉಳಿದುಕೊಂಡಿದೆ. ಅಫ್ಘಾನ್ ಗೆಲುವವನ್ನು ಭಾರತೀಯ ಅಭಿಮಾನಿಗಳು ಕೂಡ ಸಂಭ್ರಮಿಸಿದರು. ಪಂದ್ಯ ಮುಗಿದ ಬಳಿಕ ಅಫ್ಘಾನಿಸ್ತಾನ ನಾಯಕ ಹಶ್ಮತುಲ್ಲಾ ಶಾಹಿದಿ, ಸ್ಟೇಡಿಯಂನಲ್ಲಿ ನಮಗೆ ಸಪೋರ್ಟ್ ಮಾಡಿದ ಎಲ್ಲ ಭಾರತೀಯ ಫ್ಯಾನ್ಸ್ಗೆ ಧನ್ಯವಾದ ಎಂದು ಹೇಳಿದರು. ಕೇವಲ ಭಾರತೀಯ ಅಭಿಮಾನಿಗಳು ಮಾತ್ರವಲ್ಲದೆ ಟೀಮ್ ಇಂಡಿಯಾದ ಮಾಜಿ ಆಟಗಾರರು ಕೂಡ ಅಫ್ಘಾನ್ ಗೆಲುವನ್ನು ಸಂಭ್ರಮಿಸಿದರು.
ಅಫ್ಘಾನಿಸ್ತಾನ ಜಯ ಸಾಧಿಸಿದ ಬಳಿಕ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ನೃತ್ಯವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿದೆ. ಇರ್ಫಾನ್ ಬ್ರಾಡ್‌ಕಾಸ್ಟಿಂಗ್ ಸ್ಟುಡಿಯೋದಲ್ಲಿ ಪಂದ್ಯದ ನಂತರ ನಡೆಯುವ ಕಾರ್ಯಕ್ರಮದ ವೇಳೆ ಹರ್ಭಜನ್ ಸಿಂಗ್ ಜೊತೆಗೆ ಸ್ಟೆಪ್ ಹಾಕಿದ್ದಾರೆ. ಹರ್ಭಜನ್ ತಮ್ಮ ಭಾಂಗ್ರಾ ಸ್ಟೆಪ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಗೆಲುವಿನ ನಂತರ ಅಫ್ಘಾನಿಸ್ತಾನ ಆಟಗಾರರು ಮೈದಾನಕ್ಕೆ ಸುತ್ತು ಹಾಕಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರೆ, ಪಠಾಣ್ ಮತ್ತು ಹರ್ಭಜನ್ ವಿಜಯದ ನೃತ್ಯ ಮಾಡಿದರು.
ಇಲ್ಲಿದೆ ನೋಡಿ ಇರ್ಫಾನ್ ಪಠಾಣ್-ಹರ್ಭಜನ್ ಡ್ಯಾನ್ಸ್ ವಿಡಿಯೋ:
Once again,@IrfanPathan dancing in celebration of Afghanistan’s 🇦🇫 victory! @harbhajan_singh Special thanks, once more, for the support! pic.twitter.com/XssVbpgfyv
— Muj R 88 (@Mujeeb_R88) October 30, 2023
ಇಬ್ಬರು ಮಾಜಿ ಭಾರತೀಯ ಕ್ರಿಕೆಟಿಗರ ಕೂಲ್ ಡ್ಯಾನ್ಸ್ ವಿಡಿಯೋಗಳು ಕೆಲವೇ ಸಮಯದಲ್ಲಿ ವೈರಲ್ ಆಗಿದ್ದು, ಅನೇಕ ಅಭಿಮಾನಿಗಳು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅಫ್ಘಾನಿಸ್ತಾನವು ಪಾಕಿಸ್ತಾನದ ವಿರುದ್ಧ ಗೆದ್ದಾಗ ಕೂಡ ಇರ್ಫಾನ್ ಪಠಾಣ್ ಅವರು ರಶೀದ್ ಖಾನ್ ಅವರೊಂದಿಗೆ ಮೈದಾನದಲ್ಲೇ ನೃತ್ಯ ಮಾಡಿದ್ದರು.
ಶ್ರೀಲಂಕಾ ವಿರುದ್ಧ ಜಯ: ಸೆಮಿಫೈನಲ್ ರೇಸ್ನಲ್ಲಿ ಅಫ್ಘಾನಿಸ್ತಾನ್
ಈಗಾಗಲೇ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನೆರೆಯ ಪಾಕಿಸ್ತಾನ ತಂಡವನ್ನು ಸೋಲಿಸಿದ್ದ ಅಫ್ಘಾನಿಸ್ತಾನ, ಇದೀಗ ಶ್ರೀಲಂಕಾ ವಿರುದ್ಧ 242 ರನ್‌ಗಳ ಗುರಿ ಬೆನ್ನತ್ತಿ ಜಯ ಸಾಧಿಸಿತು. ಆರು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ಆರು ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಫ್ಘಾನ್ ಐದನೇ ಸ್ಥಾನಕ್ಕೆ ಏರಿತು.
ವೇಗಿಗಳಾದ ಫಜಲ್ಹಕ್ ಫಾರೂಕಿ (4-34) ಮತ್ತು ಮುಜೀಬ್ ಉರ್ ರಹಮಾನ್ (2-38) ಅದ್ಭುತ ಬೌಲಿಂಗ್ ನೆರವಿನಿಂದ ಅಫ್ಘಾನ್ ತಂಡ ಶ್ರೀಲಂಕಾವನ್ನು 241 ಕ್ಕೆ ಕಟ್ಟಿಹಾಕಲು ಯಶಸ್ವಿಯಾಯಿತು. ಇತ್ತ ಹಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಅವರು ಅಜೇಯ 111 ರನ್ ಜೊತೆಯಾಟ ನಡೆಸಿ 242 ರನ್ ಗುರಿಯನ್ನು ನಾಲ್ಕು ಓವರ್‌ಗಳು ಬಾಕಿ ಇರುವಂತೆಯೇ ಬೆನ್ನಟ್ಟಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ