PAK vs BAN: ಗೆದ್ದ ಪಾಕಿಸ್ತಾನ್: ಸೆಮಿಫೈನಲ್ ರೇಸ್ನಿಂದ ಬಾಂಗ್ಲಾದೇಶ್ ಔಟ್
Pakistan vs Bangladesh, ICC world Cup 2023: ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ತಂಡಗಳು ಇದುವರೆಗೆ 39 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ 34 ಪಂದ್ಯಗಳಲ್ಲಿ ಪಾಕ್ ತಂಡ ಗೆದ್ದರೆ, ಕೇವಲ 5 ಮ್ಯಾಚ್ಗಳಲ್ಲಿ ಬಾಂಗ್ಲಾದೇಶ್ ಜಯ ಸಾಧಿಸಿದೆ.

ಏಕದಿನ ವಿಶ್ವಕಪ್ನ 31ನೇ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಪಾಕಿಸ್ತಾನ್ ತಂಡ ಭರ್ಜರಿ ಜಯ ಸಾಧಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 45.1 ಓವರ್ಗಳಲ್ಲಿ ಆಲೌಟ್ ಆಯಿತು. 205 ರನ್ಗಳ ಸುಲಭ ಗುರಿ ಪಡೆದ ಪಾಕಿಸ್ತಾನ್ ಪರ ಆರಂಭಿಕರಾದ ಅಬ್ದುಲ್ ಶಫೀಕ್ (68) ಹಾಗೂ ಫಖರ್ ಝಮಾನ್ (81) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 32.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಪಾಕಿಸ್ತಾನ್ ತಂಡವು ಗೆಲುವಿನ ದಡ ಸೇರಿತು. ಈ ಮೂಲಕ ಪಾಕಿಸ್ತಾನ್ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಸೆಮಿಫೈನಲ್ ರೇಸ್ನಿಂದ ಬಾಂಗ್ಲಾ ಔಟ್:
ಬಾಂಗ್ಲಾದೇಶ್ ಆಡಿರುವ 7 ಪಂದ್ಯಗಳಲ್ಲಿ 6 ರಲ್ಲಿ ಸೋಲನುಭವಿಸಿದೆ. ಇದರೊಂದಿಗೆ ಬಾಂಗ್ಲಾದೇಶ್ ತಂಡವು ವಿಶ್ವಕಪ್ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಂತಾಗಿದೆ. ಇದಾಗ್ಯೂ ಬಾಂಗ್ಲಾ ತಂಡಕ್ಕೆ ಇನ್ನೆರಡು ಪಂದ್ಯಗಳಿದ್ದು, ಈ ಪಂದ್ಯಗಳ ಮೂಲಕ ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಲಿದೆ.
ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ತಂಡಗಳು ಇದುವರೆಗೆ 39 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ 34 ಪಂದ್ಯಗಳಲ್ಲಿ ಪಾಕ್ ತಂಡ ಗೆದ್ದರೆ, ಕೇವಲ 5 ಮ್ಯಾಚ್ಗಳಲ್ಲಿ ಬಾಂಗ್ಲಾದೇಶ್ ಜಯ ಸಾಧಿಸಿದೆ.
ಬಾಂಗ್ಲಾದೇಶ್ (ಪ್ಲೇಯಿಂಗ್ XI): ಲಿಟ್ಟನ್ ದಾಸ್, ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ತೌಹಿದ್ ಹೃದೋಯ್, ಮೆಹಿದಿ ಹಸನ್ ಮಿರಾಝ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರಹಮಾನ್, ಶೋರಿಫುಲ್ ಇಸ್ಲಾಂ.
ಪಾಕಿಸ್ತಾನ್ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಫಖರ್ ಝಮಾನ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಅಘಾ ಸಲ್ಮಾನ್, ಶಾಹೀನ್ ಅಫ್ರಿದಿ, ಉಸಾಮಾ ಮಿರ್, ಮೊಹಮ್ಮದ್ ವಾಸಿಂ ಜೂನಿಯರ್, ಹ್ಯಾರಿಸ್ ರೌಫ್.
LIVE Cricket Score & Updates
-
PAK vs BAN ICC World Cup 2023 Live Score: ಪಾಕಿಸ್ತಾನ್ ತಂಡಕ್ಕೆ ಭರ್ಜರಿ ಜಯ
ಬಾಂಗ್ಲಾದೇಶ್ ನೀಡಿದ 205 ರನ್ಗಳ ಗುರಿಯನ್ನು 32.3 ಓವರ್ಗಳಲ್ಲಿ ಚೇಸ್ ಮಾಡಿದ ಪಾಕಿಸ್ತಾನ್.
ಬಾಂಗ್ಲಾದೇಶ್– 204 (45.1)
ಪಾಕಿಸ್ತಾನ್– 205/3 (32.3)
ಪಾಕಿಸ್ತಾನ್ ತಂಡಕ್ಕೆ 7 ವಿಕೆಟ್ಗಳ ಭರ್ಜರಿ ಜಯ.
-
PAK vs BAN ICC World Cup 2023 Live Score: ಪಾಕಿಸ್ತಾನ್ 3ನೇ ವಿಕೆಟ್ ಪತನ
ಮೆಹದಿ ಹಸನ್ ಮಿರಾಝ್ ಎಸೆದ 28ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಫಖರ್ ಝಮಾನ್.
74 ಎಸೆತಗಳಲ್ಲಿ 81 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಫಖರ್ ಝಮಾನ್.
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಇಫ್ತಿಕರ್ ಅಹ್ಮದ್ ಬ್ಯಾಟಿಂಗ್
PAK 171/3 (28)
-
-
PAK vs BAN ICC World Cup 2023 Live Score: 2ನೇ ವಿಕೆಟ್ ಪತನ
ಮೆಹದಿ ಹಸನ್ ಮಿರಾಝ್ ಎಸೆದ 26ನೇ ಓವರ್ನ 4ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಬಾಬರ್ ಆಝಂ.
16 ಎಸೆತಗಳಲ್ಲಿ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಪಾಕಿಸ್ತಾನ್ ತಂಡದ ನಾಯಕ.
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಫಖರ್ ಝಮಾನ್ ಬ್ಯಾಟಿಂಗ್.
PAK 165/2 (26)
-
PAK vs BAN ICC World Cup 2023 Live Score: 25 ಓವರ್ಗಳು ಮುಕ್ತಾಯ
25 ಓವರ್ಗಳಲ್ಲಿ 153 ರನ್ ಕಲೆಹಾಕಿರುವ ಪಾಕಿಸ್ತಾನ್ ತಂಡ.
ಅಬ್ದುಲ್ಲ ಶಫೀಕ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಬಾಂಗ್ಲಾದೇಶ್.
ಕ್ರೀಸ್ನಲ್ಲಿ ಬಾಬರ್ ಆಝಂ (9) ಹಾಗೂ ಫಖರ್ ಝಮಾನ್ (79) ಬ್ಯಾಟಿಂಗ್.
PAK 153/1 (25)
-
PAK vs BAN ICC World Cup 2023 Live Score: ಪಾಕಿಸ್ತಾನ್ ಮೊದಲ ವಿಕೆಟ್ ಪತನ
ಮೆಹದಿ ಹಸನ್ ಮಿರಾಝ್ ಎಸೆದ 22ನೇ ಓವರ್ನ ಮೊದಲ ಎಸೆತದಲ್ಲಿ ಅಬ್ದುಲ್ ಶಫೀಕ್ ಎಲ್ಬಿಡಬ್ಲ್ಯೂ.
69 ಎಸೆತಗಳಲ್ಲಿ 68 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಬ್ದುಲ್ಲ ಶಫೀಕ್.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಫಖರ್ ಝಮಾನ್ ಬ್ಯಾಟಿಂಗ್
PAK 137/1 (22.2)
-
-
PAK vs BAN ICC World Cup 2023 Live Score: 15 ಓವರ್ಗಳು ಮುಕ್ತಾಯ
15 ಓವರ್ಗಳ ಮುಕ್ತಾಯದ ವೇಳೆಗೆ 86 ರನ್ ಕಲೆಹಾಕಿದ ಪಾಕಿಸ್ತಾನ್.
ಒಂದೇ ಒಂದು ವಿಕೆಟ್ ಕಬಳಿಸಲು ಯಶಸ್ವಿಯಾಗದ ಬಾಂಗ್ಲಾದೇಶ್ ಬೌಲರ್ಗಳು.
ಕ್ರೀಸ್ನಲ್ಲಿ ಅಬ್ದುಲ್ಲ ಶಫೀಕ್ ಹಾಗೂ ಫಖರ್ ಝಮಾನ್ ಬ್ಯಾಟಿಂಗ್
PAK 86/0 (15)
-
PAK vs BAN ICC World Cup 2023 Live Score: ಪಾಕಿಸ್ತಾನ್ ಭರ್ಜರಿ ಬ್ಯಾಟಿಂಗ್
ಶೊರಿಫುಲ್ ಇಸ್ಲಾಂ ಎಸೆದ 12ನೇ ಓವರ್ನ 5ನೇ ಎಸೆತದಲ್ಲಿ ಆಫ್ ಸೈಡ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಫಖರ್ ಝಮಾನ್.
12 ಓವರ್ಗಳಲ್ಲಿ 65 ರನ್ ಕಲೆಹಾಕಿದ ಪಾಕಿಸ್ತಾನ್.
ಕ್ರೀಸ್ನಲ್ಲಿ ಅಬ್ದುಲ್ಲ ಶಫೀಕ್ ಹಾಗೂ ಫಖರ್ ಝಮಾನ್ ಬ್ಯಾಟಿಂಗ್.
PAK 65/0 (12)
-
PAK vs BAN ICC World Cup 2023 Live Score: ಅರ್ಧಶತಕ ಪೂರೈಸಿದ ಪಾಕ್
ಶೊರಿಫುಲ್ ಇಸ್ಲಾಂ ಎಸೆದ 10ನೇ ಓವರ್ನ ಮೊದಲ ಎಸೆತದಲ್ಲೇ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಫಖರ್ ಝಮಾನ್.
ಈ ಫೋರ್ನೊಂದಿಗೆ ಅರ್ಧಶತಕ ಪೂರೈಸಿದ ಪಾಕಿಸ್ತಾನ್.
10 ಓವರ್ಗಳ ಮುಕ್ತಾಯದ ವೇಳೆಗೆ ಪಾಕಿಸ್ತಾನ್ ತಂಡದ ಸ್ಕೋರ್ 52 ರನ್ಗಳು.
ಕ್ರೀಸ್ನಲ್ಲಿ ಅಬ್ದುಲ್ಲ ಶಫೀಕ್ ಹಾಗೂ ಫಖರ್ ಝಮಾನ್ ಬ್ಯಾಟಿಂಗ್.
PAK 52/0 (10)
-
PAK vs BAN ICC World Cup 2023 Live Score: ಆಕರ್ಷಕ ಬೌಂಡರಿ
ತಸ್ಕಿನ್ ಅಹ್ಮದ್ ಎಸೆದ 7ನೇ ಓವರ್ನ ಮೂರನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಅಬ್ದುಲ್ಲ ಶಫೀಕ್.
ಕ್ರೀಸ್ನಲ್ಲಿ ಅಬ್ದುಲ್ಲ ಶಫೀಕ್ ಹಾಗೂ ಫಖರ್ ಝಮಾನ್ ಬ್ಯಾಟಿಂಗ್
PAK 33/0 (7)
ಪಾಕ್ ತಂಡಕ್ಕೆ ಕೇವಲ 205 ರನ್ಗಳ ಗುರಿ ನೀಡಿರುವ ಬಾಂಗ್ಲಾದೇಶ್.
-
PAK vs BAN ICC World Cup 2023 Live Score: ಫಖರ್ ಭರ್ಜರಿ ಸಿಕ್ಸ್
ತಸ್ಕಿನ್ ಅಹ್ಮದ್ ಎಸೆದ 5ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿದ ಫಖರ್ ಝಮಾನ್.
5 ಓವರ್ಗಳ ಮುಕ್ತಾಯದ ವೇಳೆಗೆ ಪಾಕಿಸ್ತಾನ್ ತಂಡದ ಸ್ಕೋರ್ 23 ರನ್ಗಳು.
ಕ್ರೀಸ್ನಲ್ಲಿ ಅಬ್ದುಲ್ಲ ಶಫೀಕ್ ಹಾಗೂ ಫಖರ್ ಝಮಾನ್ ಬ್ಯಾಟಿಂಗ್
PAK 23/0 (5)
-
PAK vs BAN ICC World Cup 2023 Live Score: ಪಾಕಿಸ್ತಾನ್ ಇನಿಂಗ್ಸ್ ಆರಂಭ
ತಸ್ಕಿನ್ ಅಹ್ಮದ್ ಎಸೆದ ಮೊದಲ ಓವರ್ನ 5ನೇ ಎಸೆತದಲ್ಲಿ ಮೊದಲ ಫೋರ್ ಬಾರಿಸಿದ ಅಬ್ದುಲ್ಲ ಶಫೀಕ್.
ಕ್ರೀಸ್ನಲ್ಲಿ ಅಬ್ದುಲ್ಲ ಶಫೀಕ್ ಹಾಗೂ ಫಖರ್ ಝಮಾನ್ ಬ್ಯಾಟಿಂಗ್
PAK 6/0 (1)
ಪಾಕಿಸ್ತಾನ್ ತಂಡಕ್ಕೆ 205 ರನ್ಗಳ ಗುರಿ ನೀಡಿದ ಪಾಕಿಸ್ತಾನ್.
-
PAK vs BAN ICC World Cup 2023 Live Score: ಬಾಂಗ್ಲಾದೇಶ್ ಆಲೌಟ್
46ನೇ ಓವರ್ನ ಮೊದಲ ಎಸೆತದಲ್ಲಿ ಮುಸ್ತಫಿಜುರ್ ರಹಮಾನ್ ಕ್ಲೀನ್ ಬೌಲ್ಡ್.
45.1 ಓವರ್ಗಳಲ್ಲಿ 204 ರನ್ ಬಾರಿಸಿ ಆಲೌಟ್ ಆದ ಬಾಂಗ್ಲಾದೇಶ್ ತಂಡ.
ಬಾಂಗ್ಲಾದೇಶ್– 204 (45.1)
ಪಾಕಿಸ್ತಾನ್ ತಂಡಕ್ಕೆ 205 ರನ್ಗಳ ಸುಲಭ ಗುರಿ ನೀಡಿದ ಬಾಂಗ್ಲಾದೇಶ್.
-
PAK vs BAN ICC World Cup 2023 Live Score: ಬ್ಯಾಕ್ ಟು ಬ್ಯಾಕ್ ವಿಕೆಟ್
ಮೊಹಮ್ಮದ್ ವಾಸಿಂ ಎಸೆದ 44ನೇ ಓವರ್ ಮೊದಲ ಎಸೆತದಲ್ಲಿ ಮೆಹದಿ ಹಸನ್ ಮಿರಾಝ್ (25) ಬೌಲ್ಡ್.
3ನೇ ಎಸೆತದಲ್ಲಿ ತಸ್ಕಿನ್ ಅಹ್ಮದ್ (6) ಕೂಡ ಬೌಲ್ಡ್.
ಕ್ರೀಸ್ನಲ್ಲಿ ಶೊರಿಫುಲ್ ಇಸ್ಲಾಂ ಹಾಗೂ ಮುಸ್ತಫಿಜುರ್ ರಹಮಾನ್ ಬ್ಯಾಟಿಂಗ್.
BAN 201/9 (44)
-
PAK vs BAN ICC World Cup 2023 Live Score: ಬಾಂಗ್ಲಾದೇಶ್ 7ನೇ ವಿಕೆಟ್ ಪತನ
ಹ್ಯಾರಿಸ್ ರೌಫ್ ಎಸೆದ 40ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಶಕೀಬ್ ಅಲ್ ಹಸನ್.
64 ಎಸೆತಗಳಲ್ಲಿ 43 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಬಾಂಗ್ಲಾದೇಶ್ ತಂಡದ ನಾಯಕ.
ಕ್ರೀಸ್ನಲ್ಲಿ ತಸ್ಕಿನ್ ಅಹ್ಮದ್ ಹಾಗೂ ಮೆಹದಿ ಹಸನ್ ಮಿರಾಝ್ ಬ್ಯಾಟಿಂಗ್.
BAN 188/7 (40)
-
PAK vs BAN ICC World Cup 2023 Live Score: ಹ್ಯಾಟ್ರಿಕ್ ಫೋರ್
ಇಫ್ತಿಕರ್ ಅಹ್ಮದ್ ಎಸೆದ 36ನೇ ಓವರ್ನಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ ಶಕೀಬ್ ಅಲ್ ಹಸನ್.
ಬಿರುಸಿನ ಆಟಕ್ಕೆ ಮುಂದಾದ ಬಾಂಗ್ಲಾದೇಶ್ ಬ್ಯಾಟರ್ಗಳು.
ಕ್ರೀಸ್ನಲ್ಲಿ ಶಕೀಬ್ ಅಲ್ ಹಸನ್ ಹಾಗೂ ಮೆಹದಿ ಹಸನ್ ಮಿರಾಝ್ ಬ್ಯಾಟಿಂಗ್.
BAN 172/6 (37)
-
PAK vs BAN ICC World Cup 2023 Live Score: 35 ಓವರ್ಗಳು ಮುಕ್ತಾಯ
35 ಓವರ್ಗಳ ಮುಕ್ತಾಯದ ವೇಳೆಗೆ 153 ರನ್ ಕಲೆಹಾಕಿರುವ ಬಾಂಗ್ಲಾದೇಶ್.
6 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಪಾಕಿಸ್ತಾನ್ ಬೌಲರ್ಗಳು.
ಸ್ಕೋರ್ 200 ರನ್ಗಳ ಗಡಿದಾಟುವ ವಿಶ್ವಾಸದಲ್ಲಿ ಬಾಂಗ್ಲಾದೇಶ್.
ಕ್ರೀಸ್ನಲ್ಲಿ ಶಕೀಬ್ ಅಲ್ ಹಸನ್ ಹಾಗೂ ಮೆಹದಿ ಹಸನ್ ಮಿರಾಝ್ ಬ್ಯಾಟಿಂಗ್.
BAN 153/6 (35)
-
PAK vs BAN ICC World Cup 2023 Live Score: ಬಾಂಗ್ಲಾದೇಶ್ 6ನೇ ವಿಕೆಟ್ ಪತನ
ಉಸಾಮ ಮಿರ್ ಎಸೆದ 32ನೇ ಓವರ್ನ 2ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ತೌಹಿದ್ ಹೃದೋಯ್.
3ನೇ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ತೌಹಿದ್ ಹೃದೋಯ್ (7).
ಬಾಂಗ್ಲಾದೇಶ್ ತಂಡದ 6ನೇ ವಿಕೆಟ್ ಪತನ
BAN 141/6 (32)
-
PAK vs BAN ICC World Cup 2023 Live Score: ಬಾಂಗ್ಲಾದೇಶ್ 5ನೇ ವಿಕೆಟ್ ಪತನ
ಶಾಹೀನ್ ಶಾ ಅಫ್ರಿದಿ ಎಸೆದ 31ನೇ ಓವರ್ನ 4ನೇ ಎಸೆತದಲ್ಲಿ ಮಹಮದುಲ್ಲಾ ಕ್ಲೀನ್ ಬೌಲ್ಡ್.
70 ಎಸೆತಗಳಲ್ಲಿ 56 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅನುಭವಿ ಬ್ಯಾಟರ್ ಮಹಮದುಲ್ಲಾ.
ಕ್ರೀಸ್ನಲ್ಲಿ ಶಕೀಬ್ ಅಲ್ ಹಸನ್ ಹಾಗೂ ತೌಹಿದ್ ಹೃದೋಯ್ ಬ್ಯಾಟಿಂಗ್.
BAN 130/5 (30.4)
-
PAK vs BAN ICC World Cup 2023 Live Score: 30 ಓವರ್ಗಳು ಮುಕ್ತಾಯ
30 ಓವರ್ಗಳಲ್ಲಿ 128 ರನ್ ಕಲೆಹಾಕಿರುವ ಬಾಂಗ್ಲಾದೇಶ್ ತಂಡ.
ಕೇವಲ 4 ವಿಕೆಟ್ಗಳನ್ನು ಕಬಳಿಸಲಷ್ಟೇ ಶಕ್ತರಾಗಿರುವ ಪಾಕ್ ಬೌಲಿಂಗ್ ಪಡೆ.
ಕೊನೆಯ 20 ಓವರ್ಗಳಲ್ಲಿ ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿ ಬಾಂಗ್ಲಾದೇಶ್.
ಕ್ರೀಸ್ನಲ್ಲಿ ಶಕೀಬ್ ಅಲ್ ಹಸನ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.
BAN 128/4 (30)
-
PAK vs BAN ICC World Cup 2023 Live Score: ಅರ್ಧಶತಕ ಪೂರೈಸಿದ ಮಹಮದುಲ್ಲಾ
58 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬಾಂಗ್ಲಾದೇಶ್ ತಂಡದ ಅನುಭವಿ ಬ್ಯಾಟರ್ ಮಹಮದುಲ್ಲಾ.
26 ಓವರ್ಗಳಲ್ಲಿ 113 ರನ್ ಕಲೆಹಾಕಿರುವ ಬಾಂಗ್ಲಾದೇಶ್.
ಕ್ರೀಸ್ನಲ್ಲಿ ಶಕೀಬ್ ಅಲ್ ಹಸನ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.
BAN 113/4 (26)
-
PAK vs BAN ICC World Cup 2023 Live Score: 25 ಓವರ್ಗಳು ಮುಕ್ತಾಯ
25 ಓವರ್ಗಳ ಮುಕ್ತಾಯದ ವೇಳೆಗೆ 109 ರನ್ ಕಲೆಹಾಕಿದ ಬಾಂಗ್ಲಾದೇಶ್ ಬ್ಯಾಟರ್ಗಳು.
4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಪಾಕಿಸ್ತಾನ್ ಬೌಲರ್ಗಳು.
ಕ್ರೀಸ್ನಲ್ಲಿ ಶಕೀಬ್ ಅಲ್ ಹಸನ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.
BAN 109/4 (25)
ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್ ಹಾಗೂ ಮುಶ್ಫಿಕುರ್ ರಹೀಮ್ ಔಟ್.
-
PAK vs BAN ICC World Cup 2023 Live Score: ಬಾಂಗ್ಲಾದೇಶ್ 4ನೇ ವಿಕೆಟ್ ಪತನ
ಇಫ್ತಿಕರ್ ಅಹ್ಮದ್ ಎಸೆದ 21ನೇ ಓವರ್ನ 5ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಲಿಟ್ಟನ್ ದಾಸ್.
64 ಎಸೆತಗಳಲ್ಲಿ 45 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಲಿಟ್ಟನ್ ದಾಸ್.
ಕ್ರೀಸ್ನಲ್ಲಿ ಶಕೀಬ್ ಅಲ್ ಹಸನ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.
BAN 102/4 (21)
-
PAK vs BAN ICC World Cup 2023 Live Score: ಎಂಡಿ ಹಿಟ್-ಭರ್ಜರಿ ಸಿಕ್ಸ್
ಉಸಾಮ ಮಿರ್ ಎಸೆದ 20ನೇ ಓವರ್ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಮಹಮದುಲ್ಲಾ.
20 ಓವರ್ಗಳ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 96 ರನ್ ಕಲೆಹಾಕಿದ ಬಾಂಗ್ಲಾದೇಶ್.
ಕ್ರೀಸ್ನಲ್ಲಿ ಲಿಟ್ಟನ್ ದಾಸ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.
BAN 96/3 (20)
-
PAK vs BAN ICC World Cup 2023 Live Score: 15 ಓವರ್ಗಳು ಮುಕ್ತಾಯ
15 ಓವರ್ಗಳ ಮುಕ್ತಾಯದ ವೇಳೆಗೆ 66 ರನ್ ಕಲೆಹಾಕಿದ ಬಾಂಗ್ಲಾದೇಶ್ ತಂಡ.
ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ ಹಾಗೂ ಮುಶ್ಫಿಕುರ್ ರಹೀಮ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಪಾಕಿಸ್ತಾನ್ ಬೌಲರ್ಗಳು.
ಕ್ರೀಸ್ನಲ್ಲಿ ಲಿಟ್ಟನ್ ದಾಸ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.
BAN 66/3 (15)
-
PAK vs BAN ICC World Cup 2023 Live Score: ಅರ್ಧಶತಕ ಪೂರೈಸಿದ ಬಾಂಗ್ಲಾದೇಶ್
13 ಓವರ್ಗಳಲ್ಲಿ 61 ರನ್ ಕಲೆಹಾಕಿರುವ ಬಾಂಗ್ಲಾದೇಶ್ ಬ್ಯಾಟರ್ಗಳು.
ಕ್ರೀಸ್ನಲ್ಲಿ ಲಿಟ್ಟನ್ ದಾಸ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.
ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ ಹಾಗೂ ಮುಶ್ಫಿಕುರ್ ರಹೀಮ್ ಔಟ್.
BAN 61/3 (13)
-
PAK vs BAN ICC World Cup 2023 Live Score: 10 ಓವರ್ಗಳು ಮುಕ್ತಾಯ
10 ಓವರ್ಗಳ ಮುಕ್ತಾಯದ ವೇಳೆಗೆ 37 ರನ್ ಕಲೆಹಾಕಿದ ಬಾಂಗ್ಲಾದೇಶ್.
ಪವರ್ಪ್ಲೇನಲ್ಲಿ 3 ವಿಕೆಟ್ ಕಬಳಿಸಿ ಮಿಂಚಿರುವ ಪಾಕಿಸ್ತಾನ್ ಬೌಲರ್ಗಳು.
ಕ್ರೀಸ್ನಲ್ಲಿ ಲಿಟ್ಟನ್ ದಾಸ್ (25) ಹಾಗೂ ಮಹಮದುಲ್ಲಾ (9) ಬ್ಯಾಟಿಂಗ್.
BAN 37/3 (10)
-
PAK vs BAN ICC World Cup 2023 Live Score: ಬಾಂಗ್ಲಾದೇಶ್ 3ನೇ ವಿಕೆಟ್ ಪತನ
ಹ್ಯಾರಿಸ್ ರೌಫ್ ಎಸೆದ 6ನೇ ಓವರ್ನ ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಮುಶ್ಫಿಕುರ್ ರಹೀಮ್.
8 ಎಸೆತಗಳಲ್ಲಿ ಕೇವಲ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಬಾಂಗ್ಲಾ ತಂಡದ ವಿಕೆಟ್ ಕೀಪರ್ ಬ್ಯಾಟರ್.
ಕ್ರೀಸ್ನಲ್ಲಿ ಲಿಟ್ಟನ್ ದಾಸ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.
BAN 23/3 (6)
-
PAK vs BAN ICC World Cup 2023 Live Score: ಬಾಂಗ್ಲಾದೇಶ್ 2ನೇ ವಿಕೆಟ್ ಪತನ
ಶಾಹೀನ್ ಶಾ ಅಫ್ರಿದಿ ಎಸೆದ 3ನೇ ಓವರ್ನ 4ನೇ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಕ್ಯಾಚ್ ನೀಡಿದ ನಜ್ಮುಲ್ ಹೊಸೈನ್ ಶಾಂಟೊ.
ಪಾಕಿಸ್ತಾನ್ ತಂಡಕ್ಕೆ 2ನೇ ಯಶಸ್ಸು ತಂದುಕೊಟ್ಟ ಶಾಹೀನ್ ಶಾ ಅಫ್ರಿದಿ.
ಕ್ರೀಸ್ನಲ್ಲಿ ಲಿಟ್ಟನ್ ದಾಸ್ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್.
BAN 6/2 (2.4)
-
PAK vs BAN ICC World Cup 2023 Live Score: ಬಾಂಗ್ಲಾದೇಶ್ ಮೊದಲ ವಿಕೆಟ್ ಪತನ
ಶಾಹೀನ್ ಶಾ ಅಫ್ರಿದಿ ಎಸೆದ ಮೊದಲ ಓವರ್ನ 5ನೇ ಎಸೆತದಲ್ಲಿ ತಂಝಿದ್ ಹಸನ್ ಎಲ್ಬಿಡಬ್ಲ್ಯೂ..ಅಂಪೈರ್ ತೀರ್ಪು ಔಟ್.
ಮೊದಲ ಓವರ್ನಲ್ಲೇ ಮೊದಲ ಯಶಸ್ಸು ಪಡೆದ ಪಾಕಿಸ್ತಾನ್ ತಂಡ.
ಕ್ರೀಸ್ನಲ್ಲಿ ಲಿಟ್ಟನ್ ದಾಸ್ ಹಾಗೂ ನಜ್ಮುಲ್ ಹೊಸೈನ್ ಶಾಂಟೊ ಬ್ಯಾಟಿಂಗ್.
BAN 0/1 (1)
-
PAK vs BAN ICC World Cup 2023 Live Score: ಪಾಕಿಸ್ತಾನ್ ಪ್ಲೇಯಿಂಗ್ ಇಲೆವೆನ್ ಹೀಗಿದೆ
ಪಾಕಿಸ್ತಾನ್ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಫಖರ್ ಝಮಾನ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಅಘಾ ಸಲ್ಮಾನ್, ಶಾಹೀನ್ ಅಫ್ರಿದಿ, ಉಸಾಮಾ ಮಿರ್, ಮೊಹಮ್ಮದ್ ವಾಸಿಂ ಜೂನಿಯರ್, ಹ್ಯಾರಿಸ್ ರೌಫ್.
-
PAK vs BAN ICC World Cup 2023 Live Score: ಬಾಂಗ್ಲಾದೇಶ್ ಪ್ಲೇಯಿಂಗ್ ಇಲೆವೆನ್ ಹೀಗಿದೆ
ಬಾಂಗ್ಲಾದೇಶ್ (ಪ್ಲೇಯಿಂಗ್ XI): ಲಿಟ್ಟನ್ ದಾಸ್, ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ತೌಹಿದ್ ಹೃದೋಯ್, ಮೆಹಿದಿ ಹಸನ್ ಮಿರಾಝ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರಹಮಾನ್, ಶೋರಿಫುಲ್ ಇಸ್ಲಾಂ.
-
PAK vs BAN ICC World Cup 2023 Live Score: ಟಾಸ್ ಗೆದ್ದ ಬಾಂಗ್ಲಾದೇಶ್
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Published On - Oct 31,2023 1:33 PM