ಯೋ ಯೋ ಟೆಸ್ಟ್ನಲ್ಲಿ ಇಶಾನ್ ಕಿಶನ್ ಫೇಲ್: ಟೀಮ್ ಇಂಡಿಯಾ ಬಾಗಿಲು ಬಂದ್!
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ತೆರಳಲಿದೆ. ಜೂನ್ನಲ್ಲಿ ನಡೆಯಲಿರುವ ಈ ಸರಣಿಗೂ ಮುನ್ನ ಬಿಸಿಸಿಐ ಭಾರತೀಯ ಆಟಗಾರರ ಕೇಂದ್ರೀಯ ಒಪ್ಪಂದವನ್ನು ಪ್ರಕಟಿಸಲಿದೆ. ಇದಕ್ಕಾಗಿ ಪ್ಲೇಯರ್ಸ್ ಪಟ್ಟಿಯೊಂದನ್ನು ಸಿದ್ಧಪಡಿಸಲಾಗುತ್ತಿದೆ.

ಒಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನಡೆಯುತ್ತಿದ್ದರೆ, ಮತ್ತೊಂದೆಡೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೀಮ್ ಇಂಡಿಯಾ (Team India) ಆಟಗಾರರ ಪಟ್ಟಿಯೊಂದನ್ನು ಸಿದ್ಧಪಡಿಸುತ್ತಿದೆ. ಅದು ಕೂಡ ಕೇಂದ್ರ ಒಪ್ಪಂದಕ್ಕಾಗಿ ಎಂಬುದು ವಿಶೇಷ. ಅಂದರೆ ಭಾರತೀಯ ಪುರುಷ ಆಟಗಾರರ ಸೆಂಟ್ರಲ್ ಕಾಂಟ್ರಾಕ್ಟ್ಗಾಗಿ ಅಂತಿಮ ಪಟ್ಟಿಯ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ವಾರಗಳ ಹಿಂದೆಯೇ ಭಾರತೀಯ ಮಹಿಳಾ ಆಟಗಾರ್ತಿಯರ ಕೇಂದ್ರೀಯ ಒಪ್ಪಂದವನ್ನು ಬಿಸಿಸಿಐ ಪ್ರಕಟಿಸಿದರೂ, ಪುರುಷರ ಪಟ್ಟಿ ಪ್ರಕಟಣೆಯ ವಿಳಂಬವು ಹೆಚ್ಚಿನ ಗಮನ ಸೆಳೆದಿದೆ.
ಇದರ ಹಿಂದಿನ ನಿಜವಾದ ಕಾರಣವೇನೆಂದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದರೆ ಒಪ್ಪಂದವನ್ನು ಅಂತಿಮಗೊಳಿಸುವ ಮೊದಲು, ಅನೇಕ ಆಟಗಾರರ ಫಿಟ್ನೆಸ್ ಪರೀಕ್ಷಿಸಲು ಯೋ-ಯೋ ಟೆಸ್ಟ್ ನಡೆಸಲಾಗಿದೆ ಎಂದು ವರದಿಯಾಗಿದೆ. ಈ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ.
ಟೆಸ್ಟ್ನಲ್ಲಿ ಇಶಾನ್ ಕಿಶನ್ ಫೇಲ್:
ಕೇಂದ್ರ ಒಪ್ಪಂದಗಳನ್ನು ಘೋಷಿಸುವ ಮೊದಲು, ಬಿಸಿಸಿಐ ಹಲವಾರು ಆಟಗಾರರನ್ನು ಫಿಟ್ನೆಸ್ ಪರೀಕ್ಷೆಗಳಿಗಾಗಿ ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಕಳುಹಿಸಿತ್ತು ಎಂದು ರೆವ್‌ಸ್ಪೋರ್ಟ್ಸ್ ವರದಿ ಮಾಡಿದೆ. ಈ ಆಟಗಾರರಲ್ಲಿ ಇಶಾನ್ ಕಿಶನ್ ಕೂಡ ಇದ್ದರು. ಆದರೆ ಈ ಪರೀಕ್ಷೆಯಲ್ಲಿ ಪಾಸ್ ಆಗಲು ಇಶಾನ್ ವಿಫಲರಾಗಿದ್ದಾರೆ.
ಇಶಾನ್ ಅವರ ಯೋ-ಯೋ ಪರೀಕ್ಷಾ ಸ್ಕೋರ್ ಸುಮಾರು 15.2 ರಷ್ಟಿತ್ತು. ಇದು ಬಿಸಿಸಿಐ ನಿಗದಿಪಡಿಸಿದ 16 ಸ್ಕೋರ್‌ಗಿಂತ ಕಡಿಮೆಯಾಗಿದೆ ಎಂದು ವರದಿ ಹೇಳಿದೆ. ಈ ಅಂಕವನ್ನು ದಾಟಿದ ನಂತರವೇ ಆಟಗಾರನು ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆಂದು ಪರಿಗಣಿಸಲಾಗುತ್ತದೆ. ಆದರೆ ಇಶಾನ್ ಕಿಶನ್ ಅವರ ಸ್ಕೋರ್ ಇದಕ್ಕಿಂತ ತುಂಬಾ ಕಡಿಮೆಯಾಗಿದ್ದು, ಹೀಗಾಗಿ ಟೀಮ್ ಇಂಡಿಯಾಕ್ಕೆ ಕಂಬ್ಯಾಕ್ ಮಾಡುವ ಅವರ ಕನಸು ಸದ್ಯಕ್ಕೆ ಮಸುಕಾಗುವಂತಿದೆ.
ಚಾನ್ಸ್ ಸಿಗೋದು ಡೌಟ್:
ಇಶಾನ್ ಕಿಶನ್ ಫಿಟ್ನೆಸ್ ಟೆಸ್ಟ್ನಲ್ಲಿ ಫೇಲ್ ಆಗಿರುವ ಕಾರಣ ಅವರನ್ನು ಕೇಂದ್ರೀಯ ಒಪ್ಪಂದದಲ್ಲಿ ಒಳಪಡಿಸುವ ಸಾಧ್ಯತೆಯಿಲ್ಲ. ಹಾಗೆಯೇ ಮುಂಬರುವ ಸರಣಿಗೂ ಆಯ್ಕೆ ಮಾಡುವುದಿಲ್ಲ ಎಂದು ತಿಳಿದು ಬಂದಿದೆ. ಅತ್ತ ಅಕ್ಟೋಬರ್ 2024 ರಿಂದ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡದಿರುವ ಇಶಾನ್ ಕಿಶನ್ ಇದೀಗ ಯೋ ಯೋ ಟೆಸ್ಟ್ನಲ್ಲಿ ಫೇಲ್ ಆಗಿರುವುದರಿಂದ ಅವರ ಕಂಬ್ಯಾಕ್ ಮತ್ತಷ್ಟು ವಿಳಂಬವಾಗುವುದರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ: Tim David: ಟಿಮ್ ಡೇವಿಡ್ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
ಜೈಸ್ವಾಲ್ ಜಸ್ಟ್ ಪಾಸ್:
ಇನ್ನು ಯೋ ಯೋ ಟೆಸ್ಟ್ನಲ್ಲಿ ಪಾಲ್ಗೊಂಡಿದ್ದ ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಜಸ್ಟ್ ಪಾಸ್ ಆಗಿದ್ದಾರೆ ಎಂದು ವರದಿಯಾಗಿದೆ. ಈ ಪರೀಕ್ಷೆಯಲ್ಲಿ ಜೈಸ್ವಾಲ್ ಸುಮಾರು 16.1 ರಷ್ಟು ಅಂಕಗಳನ್ನು ಪಡೆದಿದ್ದಾರೆ. ಇದು ನಿಗದಿತ ಮಿತಿಗಿಂತ ಸ್ವಲ್ಪ ಹೆಚ್ಚಿದೆ. ಇಲ್ಲಿ ನಿಗದಿತ ಮಿತಿ ಹಾಗೂ ಜೈಸ್ವಾಲ್ ಅವರ ಅಂಕಗಳು ಅಸುಪಾಸಿನಲ್ಲಿರುವ ಕಾರಣ ಅವರ ಫಿಟ್ನೆಸ್ ಕೂಡ ಪ್ರಶ್ನಾರ್ಹವಾಗಿ ಮಾರ್ಪಟ್ಟಿದೆ. ಹೀಗಾಗಿ ಮುಂಬರುವ ಸರಣಿಗಳಲ್ಲಿ ಅವಕಾಶ ಸಿಗಬೇಕಿದ್ದರೆ, ಯಶಸ್ವಿ ಜೈಸ್ವಾಲ್ ತಮ್ಮ ಫಿಟ್ನೆಸ್ ಕಡೆ ಗಮನ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.