AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MI vs RCB: ಒಂದೇ ಒಂದು ವಿಕೆಟ್ ಇಲ್ಲದೆ 5ನೇ ಪಂದ್ಯ ಮುಗಿಸಿದ ಜಸ್ಪ್ರೀತ್ ಬುಮ್ರಾ

Jasprit Bumrah's Shocking IPL 2026: ಸಾಮಾನ್ಯವಾಗಿ ಅತ್ಯಂತ ಅಪಾಯಕಾರಿ ಬೌಲರ್ ಎನಿಸಿರುವ ಜಸ್ಪ್ರೀತ್ ಬುಮ್ರಾಗೆ ಐಪಿಎಲ್ 2026 ರಲ್ಲಿ ವಿಕೆಟ್ ಬರ ಎದುರಾಗಿದೆ. ಈ ಆವೃತ್ತಿಯ 4 ಪಂದ್ಯಗಳಲ್ಲಿ ಒಂದೂ ವಿಕೆಟ್ ಪಡೆಯದ ಬುಮ್ರಾ, ಕಳೆದ ಆವೃತ್ತಿಯ ಸೇರಿ ಸತತ 5 ಪಂದ್ಯಗಳಿಂದ ವಿಕೆಟ್ ರಹಿತರಾಗಿದ್ದಾರೆ. ಮುಂಬೈ ಇಂಡಿಯನ್ಸ್‌ನ ಪ್ರಮುಖ ಬೌಲರ್ ಆಗಿರುವ ಬುಮ್ರಾ ರನ್ ನಿಯಂತ್ರಿಸಿದ್ದರೂ, ವಿಕೆಟ್ ಕೀಳುವಲ್ಲಿ ವಿಫಲರಾಗುತ್ತಿರುವುದು ತಂಡಕ್ಕೆ ಚಿಂತೆಯಾಗಿದೆ.

MI vs RCB: ಒಂದೇ ಒಂದು ವಿಕೆಟ್ ಇಲ್ಲದೆ 5ನೇ ಪಂದ್ಯ ಮುಗಿಸಿದ ಜಸ್ಪ್ರೀತ್ ಬುಮ್ರಾ
Jasprit Bumrah
ಪೃಥ್ವಿಶಂಕರ
|

Updated on:Apr 12, 2026 | 11:39 PM

Share

ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಅತ್ಯಂತ ಅಪಾಯಕಾರಿ ಬೌಲರ್ ಯಾರಾದರೂ ಇದ್ದರೆ, ಅದು ಭಾರತದ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah). ನಿರಂತರವಾಗಿ ಬ್ಯಾಟ್ಸ್‌ಮನ್‌ಗಳನ್ನು ತೊಂದರೆಗೊಳಿಸುವುದು ಮತ್ತು ವಿಕೆಟ್ ಪಡೆಯುವುದು ಬುಮ್ರಾಗೆ ಅಭ್ಯಾಸವಾಗಿದೆ. ಬ್ಯಾಟ್ಸ್‌ಮನ್‌ಗಳು ಅವರ ವಿರುದ್ಧ ರನ್ ಗಳಿಸಲು ಹೆಣಗಾಡುತ್ತಾರೆ. ಆದರೆ ಈ ಬಾರಿಯ ಐಪಿಎಲ್​ನಲ್ಲಿ (IPL 2026) ಮಾತ್ರ ಬುಮ್ರಾಗೆ ವಿಕೆಟ್ ಬರ ಎದುರಾಗಿದೆ. ಈ ಐಪಿಎಲ್‌ನಲ್ಲಿ ಇದುವರೆಗೆ 4 ಪಂದ್ಯಗಳನ್ನಾಡಿರುವ ಬುಮ್ರಾಗೆ ಖಾತೆಯಲ್ಲಿ ಒಂದೇ ಒಂದು ವಿಕೆಟ್ ಇಲ್ಲ. ಇದನ್ನು ಕೇಳಿದವರಿಗೆ ಅಚ್ಚರಿಯಾಗಬಹುದು. ಆದರೆ ಇದು ನಿಜ. ಮುಂಬೈ ಇಂಡಿಯನ್ಸ್‌ನ ಅನುಭವಿ ವೇಗಿ ಬುಮ್ರಾ ಸತತ ಐದು ಪಂದ್ಯಗಳಲ್ಲಿ ಬರಿಗೈಯಲ್ಲಿ ಮರಳಿದ್ದಾರೆ.

ಆರ್​ಸಿಬಿ ವಿರುದ್ಧವೂ ವಿಕೆಟ್ ಇಲ್ಲ

ಐಪಿಎಲ್ 2026 ರ 20ನೇ ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ಈ ಪಂದ್ಯದಲ್ಲಿ ಆರ್​​ಸಿಬಿ ತಂಡ ಮೊದಲು ಬ್ಯಾಟ್ ಮಾಡಿ 240 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಆರ್​ಸಿಬಿ ಬ್ಯಾಟ್ಸ್‌ಮನ್‌ಗಳು ಪಂದ್ಯದಲ್ಲಿ ಬಹುತೇಕ ಎಲ್ಲಾ ಮುಂಬೈ ಬೌಲರ್‌ಗಳ ವಿರುದ್ಧ ಸರಾಗವಾಗಿ ರನ್ ಕಲೆಹಾಕಿದರು. ಆದಾಗ್ಯೂ, ಎಂದಿನಂತೆ ರನ್​ಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದ ಬುಮ್ರಾ ತಮ್ಮ ನಾಲ್ಕು ಓವರ್‌ಗಳಲ್ಲಿ 35 ರನ್‌ಗಳನ್ನು ಬಿಟ್ಟುಕೊಟ್ಟರು.

ಅತ್ಯಂತ ಅಚ್ಚರಿಯ ಅಂಶವೆಂದರೆ ಈ ಪಂದ್ಯದಲ್ಲಿಯೂ ಬುಮ್ರಾ ವಿಕೆಟ್ ಪಡೆಯಲಿಲ್ಲ ಎಂಬುದು. ಮೇಲೆ ಹೇಳಿದಂತೆ ಬುಮ್ರಾ ಅವರು ಈ ಆವೃತ್ತಿಯಲ್ಲಿ ವಿಕೆಟ್ ಪಡೆಯದೆ ಇರುವುದು ಇದೇ ಮೊದಲಲ್ಲ. ಮುಂಬೈನ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾದ ಜಸ್ಪ್ರೀತ್ ಬುಮ್ರಾ, ಐಪಿಎಲ್ 2026 ರ ನಾಲ್ಕು ಪಂದ್ಯಗಳಲ್ಲಿಯೂ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ.

IND vs SA: ಟಿ20 ವಿಶ್ವಕಪ್​ನಲ್ಲಿ ಹೊಸ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ

ಸತತ 5 ಪಂದ್ಯಗಳಿಂದ ವಿಕೆಟ್ ಇಲ್ಲ

ಈ ನಾಲ್ಕು ಪಂದ್ಯಗಳ ಜೊತೆಗೆ ಕಳೆದ ಆವೃತ್ತಿಯ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿಯೂ ಬುಮ್ರಾಗೆ ಒಂದೇ ಒಂದು ವಿಕೆಟ್ ಸಿಕ್ಕಿರಲಿಲ್ಲ. ಪಂಜಾಬ್ ವಿರುದ್ಧದ ಆ ಪಂದ್ಯದಲ್ಲಿ ಬುಮ್ರಾ ನಾಲ್ಕು ಓವರ್‌ಗಳಲ್ಲಿ 40 ರನ್‌ಗಳನ್ನು ಬಿಟ್ಟುಕೊಟ್ಟರು ಆದರೆ ವಿಕೆಟ್ ಪಡೆಯಲಿಲ್ಲ. ಇನ್ನು ಈ ಆವೃತ್ತಿಯಲ್ಲಿ, ಬುಮ್ರಾ ಕೋಲ್ಕತ್ತಾ, ದೆಹಲಿ, ರಾಜಸ್ಥಾನ ಮತ್ತು ಬೆಂಗಳೂರು ವಿರುದ್ಧ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸತತ ಐದು ಪಂದ್ಯಗಳಲ್ಲಿ, ಅವರು ಒಟ್ಟು 19 ಓವರ್‌ಗಳನ್ನು ಬೌಲಿಂಗ್ ಮಾಡಿ 163 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅಂದರೆ ಬುಮ್ರಾ 8.5 ರ ಎಕಾನಮಿ ದರದಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟಿದ್ದು, ಇದರಲ್ಲಿ ಒಂದೇ ಒಂದು ವಿಕೆಟ್ ಪಡೆದಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:27 pm, Sun, 12 April 26

Follow Us