Legend90: ಕ್ರಿಕೆಟ್ ಅಂಗಳಕ್ಕೆ 90 ಎಸೆತಗಳ ಹೊಸ ಟೂರ್ನಿ ಎಂಟ್ರಿ
Legend 90 League: ಲೆಜೆಂಡ್ 90 ಲೀಗ್ ಫೆಬ್ರವರಿ 6 ರಿಂದ ಶುರುವಾಗಲಿದೆ. ರಾಯ್‌ಪುರದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 7 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಭಾರತದ ಮಾಜಿ ಆಟಗಾರರಾದ ಹರ್ಭಜನ್ ಸಿಂಗ್, ಶಿಖರ್ ಧವನ್, ಸುರೇಶ್ ರೈನಾ ಮುಂತಾದ ಸ್ಟಾರ್ ಪ್ಲೇಯರ್ಸ್ ಕಾಣಿಸಿಕೊಳ್ಳಲಿರುವುದು ವಿಶೇಷ.
![Legend90: ಕ್ರಿಕೆಟ್ ಅಂಗಳಕ್ಕೆ 90 ಎಸೆತಗಳ ಹೊಸ ಟೂರ್ನಿ ಎಂಟ್ರಿ](https://images.tv9kannada.com/wp-content/uploads/2025/01/legend90.jpg?w=1280)
ಟ್ವೆಂಟಿ 20 ಕ್ರಿಕೆಟ್ ಆಯ್ತು, ಟಿ10 ಕ್ರಿಕೆಟ್ ಕೂಡ ಬಂದಾಯ್ತು. ಇನ್ನು 100 ಎಸೆತಗಳ ಹಂಡ್ರೆಡ್ ಲೀಗ್ ಸಹ ಪರಿಚಯವಾಯಿತು. ಇದೀಗ 90 ಎಸೆತಗಳ ಹೊಸ ಲೀಗ್ವೊಂದು ಶುರುವಾಗುತ್ತಿದೆ. ಅದುವೇ ಲೆಜೆಂಡ್90 ಲೀಗ್. ಮಾಜಿ ಆಟಗಾರರನ್ನು ಒಳಗೊಂಡಿರುವ ಈ ಟೂರ್ನಿಯಲ್ಲಿ ತಲಾ 90 ಎಸೆತಗಳ ಪಂದ್ಯಾವಳಿ ನಡೆಯಲಿದೆ. ಹೀಗಾಗಿಯೇ ಈ ಟೂರ್ನಿಗೆ ಲೆಜೆಂಡ್ 90 ಲೀಗ್ ಎಂದು ಹೆಸರಿಡಲಾಗಿದೆ.
7 ತಂಡಗಳು 180 ಎಸೆತಗಳು:
ಈ ಟೂರ್ನಿಯಲ್ಲಿ ಒಟ್ಟು 7 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೆ ಒಂದು ಪಂದ್ಯದಲ್ಲಿ ಒಟ್ಟು 180 ಎಸೆತಗಳನ್ನು ಎಸೆಯಲಾಗುತ್ತದೆ. ಅಂದರೆ ಒಂದು ತಂಡಕ್ಕೆ 90 ಎಸೆತಗಳು ನಿಗದಿ ಮಾಡಲಾಗಿದೆ.
ಇನ್ನು ಈ ಲೀಗ್ನಲ್ಲಿ ಭಾರತದ ಮಾಜಿ ಕ್ರಿಕೆಟರುಗಳಾದ ಹರ್ಭಜನ್ ಸಿಂಗ್, ಶಿಖರ್ ಧವನ್, ಸುರೇಶ್ ರೈನಾ, ನ್ಯೂಝಿಲೆಂಡ್ ಬ್ಯಾಟ್ಸ್‌ಮನ್ ರಾಸ್ ಟೇಲರ್, ಆಸ್ಟ್ರೇಲಿಯಾದ ಮಾಜಿ ನಾಯಕ ಆರೋನ್ ಫಿಂಚ್ ಅವರಂತಹ ಅನೇಕ ಶ್ರೇಷ್ಠ ಆಟಗಾರರು ಈ ಕಾಣಿಸಿಕೊಳ್ಳುತ್ತಿದ್ದಾರೆ.
ಲೆಜೆಂಡ್90 ಲೀಗ್ನ ತಂಡಗಳು:
ದುಬೈ ಜೈಂಟ್ಸ್: ಶಕೀಬ್ ಅಲ್ ಹಸನ್, ತಿಸಾರ ಪೆರೆರಾ, ಕೆನ್ನಾರ್ ಲೂಯಿಸ್, ಕೆವಿನ್ ಒ’ಬ್ರಿಯಾನ್, ಬ್ರೆಂಡನ್ ಟೇಲರ್, ಲಿಯಾಮ್ ಪ್ಲಂಕೆಟ್, ಡ್ವೇನ್ ಸ್ಮಿತ್, ಎಚ್. ಮಸಕಡ್ಜ, ರಿಚರ್ಡ್ ಲೆವಿ, ಲ್ಯೂಕ್ ಫ್ಲೆಚರ್, ರಾಹುಲ್ ಯಾದವ್, ಕ್ರಿಸ್ಟೋಫರ್ ಎಂ, ಸಿದ್ ತ್ರಿವೇದಿ, ಎಸ್. ಪ್ರಸನ್ನ.
ಛತ್ತೀಸ್‌ಗಢ್ ವಾರಿಯರ್ಸ್: ಸಿದ್ಧಾರ್ಥ್ ಕೌಲ್, ಶೆಲ್ಡನ್ ಜಾಕ್ಸನ್, ಪವನ್ ನೇಗಿ, ಕೆವೊನ್ ಕೂಪರ್, ಸುರೇಶ್ ರೈನಾ, ವಿಶಾಲ್ ಕುಶ್ವಾಹ, ಮಾರ್ಟಿನ್ ಗಪ್ಟಿಲ್, ಅಭಿಷೇಕ್ ಸಕುಜಾ, ಅಂಬಾಟಿ ರಾಯುಡು, ಅಮಿತ್ ವರ್ಮಾ, ಗುರುಕೀರತ್ ಸಿಂಗ್ ಮನ್, ಅಮಿತ್ ಮಿಶ್ರಾ, ರಿಷಿ ಧವನ್, ಉನ್ಮುಕ್ತ್ ಚಂದ್, ಅಭಿಮನ್ಯು ಮಿಥುನ್, ಕಾಲಿನ್ ಡಿ ಗ್ರಾಂಡ್ಹೋಮ್.
ಹರಿಯಾಣ ಗ್ಲಾಡಿಯೇಟರ್ಸ್: ಪವನ್ ಸುಯಲ್, ಪ್ರವೀಣ್ ಗುಪ್ತಾ, ಅಬು ನಿಚಿಮ್, ಅನುರೀತ್ ಸಿಂಗ್, ಇಮ್ರಾನ್ ಖಾನ್, ಅಸೆಲಾ ಗುಣರತ್ನೆ, ಇಶಾಂಕ್ ಜಗ್ಗಿ, ಹರ್ಭಜನ್ ಸಿಂಗ್, ನಾಗೇಂದ್ರ ಚೌಧರಿ, ರಿಕಿ ಕ್ಲಾರ್ಕ್, ಪೀಟರ್ ಟ್ರೆಗೊ, ಚಾಡ್ವಿಕ್ ವಾಲ್ಟನ್, ಮನನ್ ಶರ್ಮಾ.
ಗುಜರಾತ್ ಸ್ಯಾಂಪ್ ಆರ್ಮಿ: ಯೂಸುಫ್ ಪಠಾಣ್, ಮೊಯಿನ್ ಅಲಿ, ಒಬಾಸ್ ಪಿನಾರ್, ಸೌರಭ್ ತಿವಾರಿ, ಕೆಸ್ರಿಕ್ ವಿಲಿಯಮ್ಸ್, ಜೆಸೆಲ್ ಕರಿಯಾ, ಮಿಗುಯೆಲ್ ಕಮಿನ್ಸ್, ಚಂದ್ರಪಾಲ್ ಹೇಮರಾಜ್, ಶಪೂರ್ ಜದ್ರಾನ್, ಮುಹಮ್ಮದ್ ಅಶ್ರಫುಲ್, ವಿಲಿಯಂ ಪರ್ಕಿನ್ಸ್, ನವೀನ್ ಸ್ಟೀವರ್ಟ್, ಚತುರಂಗ ಡಿ ಸಿಲ್ವಾ, ಮೌಸಿಫ್ ಡಿಸಿಲ್ವಾ.
ಬಿಗ್ ಬಾಯ್ಸ್: ಮ್ಯಾಟ್ ಪ್ರಯರ್, ಇಶಾನ್ ಮಲ್ಹೋತ್ರಾ, ಮೋನು ಕುಮಾರ್, ಚಿರಾಗ್ ಗಾಂಧಿ, ತಮೀಮ್ ಇಕ್ಬಾಲ್, ತಿಲಕರತ್ನೆ ದಿಲ್ಶನ್, ಹರ್ಷಲ್ ಗಿಬ್ಸ್, ಉಪುಲ್ ತರಂಗ, ಅಬ್ದುರ್ ರಜಾಕ್, ಶಾನನ್ ಗೇಬ್ರಿಯಲ್, ವರುಣ್ ಆರೋನ್, ನೀಲ್ ಬ್ರೂಮ್, ಕರಮ್‌ವೀರ್ ಸಿಂಗ್, ರಾಬಿನ್ ಬಿಸ್ತ್, ನಮನ್ ಶರ್ಮಾ, ಕಪಿಲ್ ಶರ್ಮಾ, , ವಿನೋದ್ ಚನ್ವಾರಿಯಾ.
ಡೆಲ್ಲಿ ರಾಯಲ್ಸ್: ಶಿಖರ್ ಧವನ್, ಲೆಂಡ್ಲ್ ಸಿಮನ್ಸ್, ದನುಷ್ಕಾ ಗುಂತಿಲಕ, ಏಂಜೆಲೊ ಪೆರೆರಾ, ಸಹರ್ದ ಲುಂಬಾ, ಬಿಪುಲ್ ಶರ್ಮಾ, ಲಖ್ವಿಂದರ್ ಸಿಂಗ್, ರಾಜ್ವಿಂದರ್ ಸಿಂಗ್, ರಾಯದ್ ಇಮ್ರಿತ್, ರಾಸ್ ಟೇಲರ್, ಜೆರೋಮ್ ಟೇಲರ್, ಸುಮಿತ್ ನರ್ವಾಲ್, ಪರ್ವಿಂದರ್ ಅವಾನಾ.
ಇದನ್ನೂ ಓದಿ: RCB ಸೇರಿದ ಬಳಿಕ ಸಪ್ಪೆಯಾದ ಸಾಲ್ಟ್
ರಾಜಸ್ಥಾನ್ ಕಿಂಗ್ಸ್: ಡ್ವೇನ್ ಬ್ರಾವೋ, ಅಂಕಿ ರಜಪೂತ್, ಫಿಲ್ ಮಸ್ಟರ್ಡ್, ಶಹಬಾಜ್ ನದೀಮ್, ಫೈಝ್ ಫಜಲ್, ಶದಾಬ್ ಜಕಾತಿ, ಜಸ್ಕರನ್ ಮಲ್ಹೋತ್ರಾ, ಇಮ್ರಾನ್ ತಾಹಿರ್, ಜೈಕಿಶನ್ ಕೋಲ್ಸವಾಲಾ, ರಾಜೇಶ್ ಬಿಷ್ಣೋಯ್, ಕೋರಿ ಆಂಡರ್ಸನ್, ಪಂಕಜ್ ರಾವ್, ಸ್ಯಾಮ್ಯುಯೆಲ್ ಶಿನ್ವಾರಿ, ರಜತ್ ಸಿಂಗ್, ಎನ್ ರಜತ್ ಸಿಂಗ್ , ಮನ್‌ಪ್ರೀತ್ ಗೋಣಿ.