LSG vs DC IPL 2026 Highlights: ಲಕ್ನೋ ವಿರುದ್ಧ ಡೆಲ್ಲಿಗೆ 6 ವಿಕೆಟ್ ಜಯ
Lucknow Super Giants vs Delhi Capitals, IPL 2026 Highlights: ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಲಕ್ನೋ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಟಾಸ್ ಜೊತೆಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಪ್ರಕಟವಾಗಿದೆ.

ಲುಂಗಿ ಎನ್‌ಗಿಡಿ ಮತ್ತು ಟಿ ನಟರಾಜನ್ ಅವರ ಮಾರಕ ಬೌಲಿಂಗ್ ನಂತರ, ಸಮೀರ್ ರಿಜ್ವಿ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರ ಬಿರುಗಾಳಿಯ ಬ್ಯಾಟಿಂಗ್ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಐಪಿಎಲ್ 2026 ರಲ್ಲಿ ತಮ್ಮ ಮೊದಲ ಗೆಲುವು ದಾಖಲಿಸಿದೆ. ಬುಧವಾರ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 18.4 ಓವರ್‌ಗಳಲ್ಲಿ 10 ವಿಕೆಟ್‌ಗಳಿಗೆ 141 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಡೆಲ್ಲಿ 17.1 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 145 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ತಂಡದ ಪರ ಸಮೀರ್ ರಿಜ್ವಿ ಅಜೇಯ ಅರ್ಧಶತಕ (70 ರನ್) ಬಾರಿಸಿದರೆ, ಟ್ರಿಸ್ಟಾನ್ ಸ್ಟಬ್ಸ್ ಕೂಡ ಅಜೇಯ 39 ರನ್ ಬಾರಿಸಿದರು.
LIVE NEWS & UPDATES
-
LSG vs DC IPL 2026: ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು
ಕಳಪೆ ಆರಂಭದ ಹೊರತಾಗಿಯೂ, ದೆಹಲಿ ತಂಡವು ಕೇವಲ 17.1 ಓವರ್‌ಗಳಲ್ಲಿ ಲಕ್ನೋವನ್ನು ಸೋಲಿಸಿತು. ಅದ್ಭುತ ಅರ್ಧಶತಕದೊಂದಿಗೆ ತಂಡವನ್ನು ಗುರಿಯತ್ತ ಮುನ್ನಡೆಸಿದ ರಿಜ್ವಿ, ಸಿಕ್ಸರ್ ಬಾರಿಸಿ ದೆಹಲಿಗೆ 6 ವಿಕೆಟ್‌ಗಳ ಜಯ ತಂದುಕೊಟ್ಟರು. ರಿಜ್ವಿ 70 ರನ್ ಗಳಿಸಿ ಅಜೇಯರಾಗಿ ಉಳಿದರೆ, ಸ್ಟಬ್ಸ್ ಕೂಡ 39 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು.
-
LSG vs DC IPL 2026: ರಿಜ್ವಿ ಅರ್ಧಶತಕ
ಸಮೀರ್ ರಿಜ್ವಿ ಇನ್ನಿಂಗ್ಸ್ ಜವಾಬ್ದಾರಿಯನ್ನು ವಹಿಸಿಕೊಂಡು ಅರ್ಧಶತಕ ಬಾರಿಸಿದರು. ರಿಜ್ವಿ ಕಠಿಣ ಪರಿಸ್ಥಿತಿಯಲ್ಲಿ 37 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದು ಐಪಿಎಲ್‌ನಲ್ಲಿ ರಿಜ್ವಿ ಅವರ ಎರಡನೇ ಅರ್ಧಶತಕವಾಗಿತ್ತು.
-
-
LSG vs DC IPL 2026: ಸ್ಟಬ್ಸ್-ರಿಜ್ವಿ ಜೊತೆಯಾಟ
ಟ್ರಿಸ್ಟಾನ್ ಸ್ಟಬ್ಸ್ ಮತ್ತು ಸಮೀರ್ ರಿಜ್ವಿ ನಡುವಿನ ಅತ್ಯುತ್ತಮ ಪಾಲುದಾರಿಕೆ ಮುಂದುವರೆದಿದ್ದು, ಇಬ್ಬರೂ ತಂಡವನ್ನು 100 ರನ್‌ಗಳ ಗಡಿ ದಾಟಿಸಿದ್ದಾರೆ.
-
LSG vs DC IPL 2026: ಅಕ್ಷರ್ ಪಟೇಲ್ ಕೂಡ ಔಟ್
ಪ್ರಿನ್ಸ್ ಯಾದವ್ ಅವರ ಬೌಲಿಂಗ್‌ನಲ್ಲಿ ದೆಹಲಿ ನಾಯಕ ಅಕ್ಷರ್ ಪಟೇಲ್ ಗೋಲ್ಡನ್ ಡಕ್‌ಗೆ ಔಟಾದರು.
-
LSG vs DC IPL 2026: ಮೊದಲ ಎಸೆತದಲ್ಲೇ ರಾಹುಲ್ ಔಟ್
ಪಂದ್ಯದ ಮೊದಲ ಎಸೆತದಲ್ಲೇ ಕೆ.ಎಲ್. ರಾಹುಲ್ ವಿಕೆಟ್ ಕಳೆದುಕೊಂಡು ಡೆಲ್ಲಿ ತಂಡ ಕಳಪೆ ಆರಂಭ ಪಡೆಯಿತು. ಮೊಹಮ್ಮದ್ ಶಮಿ ಈ ವಿಕೆಟ್ ಪಡೆದರು.
-
-
LSG vs DC IPL 2026: ಒಂಬತ್ತನೇ ವಿಕೆಟ್
19 ನೇ ಓವರ್‌ನಲ್ಲಿ ಬಂದ ಲುಂಗಿ ಎನ್‌ಗಿಡಿ, ಅನ್ರಿಚ್ ನೋಕಿಯಾ ಅವರನ್ನು ಔಟ್ ಮಾಡಿದರು. ಲಕ್ನೋ ಕೇವಲ 141 ರನ್‌ಗಳಿಗೆ 9ನೇ ವಿಕೆಟ್ ಕಳೆದುಕೊಂಡಿದೆ.
-
LSG vs DC IPL 2026: ನಟರಾಜನ್ಗೆ ಮೂರನೇ ವಿಕೆಟ್
ನಟರಾಜನ್ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದರು. ಸಮದ್ ಅವರನ್ನು ಔಟ್ ಮಾಡಿದ ನಂತರ, ಅದೇ ಓವರ್‌ನಲ್ಲಿ ಶಮಿಯನ್ನೂ ಔಟ್ ಮಾಡಿದರು. ಇದು ಅವರ ಮೂರನೇ ವಿಕೆಟ್ ಆಗಿತ್ತು.
-
LSG vs DC IPL 2026: ಆರನೇ ವಿಕೆಟ್ ಪತನ
ಕುಲ್ದೀಪ್ ಯಾದವ್ ಮತ್ತೊಮ್ಮೆ ಹೊಡೆತ ನೀಡಿ ಲಕ್ನೋ ತಂಡಕ್ಕೆ ಆರನೇ ಆಘಾತ ನೀಡಿದರು. ಈ ಬಾರಿ, ಅವರು ತಮ್ಮದೇ ಬೌಲಿಂಗ್‌ನಲ್ಲಿ ಮುಕುಲ್ ಚೌಧರಿ (14) ಅವರ ಕ್ಯಾಚ್ ಪಡೆದರು.
-
LSG vs DC IPL 2026: ಲಕ್ನೋ 100 ರನ್ ಪೂರ್ಣ
ಲಕ್ನೋ ತಂಡವು ಕೊನೆಗೂ 100 ರನ್‌ಗಳ ಗಡಿ ದಾಟಿತು. ತಂಡವು 13 ನೇ ಓವರ್‌ನಲ್ಲಿ ಈ ಗಡಿಯನ್ನು ತಲುಪಿತು. ಅಬ್ದುಲ್ ಸಮದ್ ಮತ್ತು ಮುಕುಲ್ ಚೌಧರಿ ಉತ್ತಮ ಜೊತೆಯಾಟವನ್ನು ನಿರ್ಮಿಸುತ್ತಿದ್ದಾರೆ.
-
LSG vs DC IPL 2026:ಮೂರನೇ ವಿಕೆಟ್
ಲಕ್ನೋ ತಂಡ ಕೇವಲ 49 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಮಾರ್ಕ್ರಾಮ್ ಬದಲಿಗೆ ಬಂದ ಹೊಸ ಬ್ಯಾಟ್ಸ್‌ಮನ್ ಆಯುಷ್ ಬದೋನಿ ಖಾತೆ ತೆರೆಯದೆಯೇ ಔಟಾದರು. ಟಿ ನಟರಾಜನ್ ವಿಕೆಟ್ ಪಡೆದರು.
-
LSG vs DC IPL 2026: ಮಾರ್ಕ್ರಾಮ್ ಕೂಡ ಔಟ್
ದೆಹಲಿ ನಾಯಕ ಅಕ್ಷರ್ ಪಟೇಲ್ ತಮ್ಮ ಮೊದಲ ಓವರ್‌ನಲ್ಲೇ ಐಡೆನ್ ಮಾರ್ಕ್ರಾಮ್ (11) ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಲಕ್ನೋ ತಂಡಕ್ಕೆ ಎರಡನೇ ಆಘಾತ ನೀಡಿದರು.
-
LSG vs DC IPL 2026: ರಿಷಭ್ ಪಂತ್ ಔಟ್
ಮೂರನೇ ಓವರ್ನ ಕೊನೆಯ ಎಸೆತದಲ್ಲಿ ರಿಷಭ್ ಪಂತ್ ರನೌಟ್ಗೆ ಬಲಿಯಾದರು. ಬೌಲರ್ ಮುಖೇಶ್ ಕುಮಾರ್ ಈ ವಿಕೆಟ್ ಪಡೆದರು.
ಡೆಲ್ಲಿ 19/1
-
LSG vs DC IPL 2026: ಲಕ್ನೋ ಸೂಪರ್ ಜೈಂಟ್ಸ್
ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ರಿಷಭ್ ಪಂತ್(ನಾಯಕ ಮತ್ತು ವಿಕೆಟ್ ಕೀಪರ್), ಆಯುಷ್ ಬಡೋನಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮೊಹ್ಸಿನ್ ಖಾನ್, ಮೊಹಮ್ಮದ್ ಶಮಿ, ಅನ್ರಿಚ್ ನೋಕಿಯಾ ಮತ್ತು ಪ್ರಿನ್ಸ್ ಯಾದವ್.
-
LSG vs DC IPL 2026: ಡೆಲ್ಲಿ ಕ್ಯಾಪಿಟಲ್ಸ್
ಕೆಎಲ್ ರಾಹುಲ್ (ವಿಕೆಟ್ ಕೀಪರ್), ಪಾತುಮ್ ನಿಸ್ಸಾಂಕ, ನಿತೀಶ್ ರಾಣಾ, ವಿಪ್ರಜ್ ನಿಗಮ್, ಅಕ್ಸರ್ ಪಟೇಲ್ (ನಾಯಕ), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಲುಂಗಿ ಎನ್‌ಗಿಡಿ, ಕುಲ್ದೀಪ್ ಯಾದವ್, ಟಿ.ನಟರಾಜನ್ ಮತ್ತು ಮುಖೇಶ್ ಕುಮಾರ್.
-
LSG vs DC IPL 2026: ಟಾಸ್ ಗೆದ್ದ ಡೆಲ್ಲಿ
ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
-
LSG vs DC IPL 2026: ಐಪಿಎಲ್ 5ನೇ ಪಂದ್ಯ
ಲಕ್ನೋ ಸೂಪರ್ ಜೈಂಟ್ಸ್ ತಂಡವು ಐಪಿಎಲ್ 2026 ರ ಐದನೇ ಪಂದ್ಯದಲ್ಲಿ ತಮ್ಮ ತವರು ಪಂದ್ಯವನ್ನು ಆಡಲಿದೆ. ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದ್ದಾರೆ.
Published On - Apr 01,2026 6:31 PM




