AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MI vs KKR Highlights, IPL 2024: ಕೆಕೆಆರ್​ಗೆ 24 ರನ್ ಜಯ

Mumbai Indians vs Kolkata Knight Riders Live Score in Kannada: ಐಪಿಎಲ್​ನ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ 24 ರನ್​ಗಳಿಂದ ಮಣಿಸಿದೆ. ಗೆಲುವಿಗೆ 170 ರನ್​ಗಳ ಗುರಿ ಪಡೆದ ಮುಂಬೈ ತಂಡ ನಿಗದಿತ 20 ಓವರ್​ಗಳಲ್ಲಿ 145 ರನ್ ಗಳಿಸಲಷ್ಟೇ ಶಕ್ತವಾಗಿ 24 ರನ್​ಗಳಿಂದ ಸೊಲೊಪ್ಪಿಕೊಂಡಿತು.

MI vs KKR Highlights, IPL 2024: ಕೆಕೆಆರ್​ಗೆ 24 ರನ್ ಜಯ
ಪೃಥ್ವಿಶಂಕರ
|

Updated on:May 04, 2024 | 12:56 AM

Share

ಐಪಿಎಲ್​ನ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ 24 ರನ್​ಗಳಿಂದ ಮಣಿಸಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 169 ರನ್ ಗಳಿಸಿತು. ತಂಡದ ಪರ ವೆಂಕಟೇಶ್ ಅಯ್ಯರ್ ಗರಿಷ್ಠ 70 ರನ್ ಹಾಗೂ ಮನೀಶ್ ಪಾಂಡೆ 42 ರನ್ ಗಳಿಸಿದರು. ಗೆಲುವಿಗೆ 170 ರನ್​ಗಳ ಗುರಿ ಪಡೆದ ಮುಂಬೈ ತಂಡ ನಿಗದಿತ 20 ಓವರ್​ಗಳಲ್ಲಿ 145 ರನ್ ಗಳಿಸಲಷ್ಟೇ ಶಕ್ತವಾಗಿ 24 ರನ್​ಗಳಿಂದ ಸೊಲೊಪ್ಪಿಕೊಂಡಿತು.

LIVE NEWS & UPDATES

The liveblog has ended.
  • 03 May 2024 09:55 PM (IST)

    ನಮನ್ ಧೀರ್ ಔಟ್

    ಮುಂಬೈ 2ನೇ ವಿಕೆಟ್ ಕಳೆದುಕೊಂಡಿದೆ. ಮೂರನೇ ಕ್ರಮಾಂಕದಲ್ಲಿ ಬಂದ ನಮನ್ ಧೀರ್, ವರುಣ್ ಚಕ್ರವರ್ತಿಗೆ ಬಲಿಯಾಗಿದ್ದಾರೆ.

  • 03 May 2024 09:55 PM (IST)

    4 ಓವರ್‌ ಪೂರ್ಣ

    ಮುಂಬೈ ಇಂಡಿಯನ್ಸ್ ತಂಡ 4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 38 ರನ್ ಗಳಿಸಿದೆ. ನಮನ್ ಧೀರ್ 11 ರನ್ ಮತ್ತು ರೋಹಿತ್ ಶರ್ಮಾ 10 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 03 May 2024 09:41 PM (IST)

    ಮುಂಬೈಗೆ ಆರಂಭಿಕ ಆಘಾತ

    ಆರಂಭಿಕ ಇಶಾನ್ ಕಿಶನ್ ಕೇವಲ 13 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ.

    ಮುಂಬೈ; 16/1

  • 03 May 2024 09:39 PM (IST)

    ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್ ಆರಂಭ

    ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್ ಆರಂಭವಾಗಿದೆ. ತಂಡದ ಪರ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಕ್ರೀಸ್‌ನಲ್ಲಿದ್ದಾರೆ.

  • 03 May 2024 09:38 PM (IST)

    170 ರನ್ ಟಾರ್ಗೆಟ್

    ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 169 ರನ್ ಕಲೆಹಾಕಿದೆ. ತಂಡದ ಪರ ವೆಂಕಟೇಶ್ ಅಯ್ಯರ್ 70 ರನ್ ಮತ್ತು ಮನೀಶ್ ಪಾಂಡೆ 42 ರನ್ ಗಳಿಸಿ ತಂಡವನ್ನು ಗೌರವಾನ್ವಿತ ಮೊತ್ತಕ್ಕೆ ಕೊಂಡೊಯ್ದರು. ಮುಂಬೈ ಇಂಡಿಯನ್ಸ್ ತಂಡದ ಗೆಲುವಿಗೆ 120 ಎಸೆತಗಳಲ್ಲಿ 170 ರನ್‌ಗಳ ಅಗತ್ಯವಿದೆ.

  • 03 May 2024 09:07 PM (IST)

    ರಸೆಲ್ ರನ್ ಔಟ್

    ರಸೆಲ್​ ಕೇವಲ 7 ರನ್​ಗಳಿಗೆ ರನೌಟ್​ಗೆ ಬಲಿಯಾದರು. ವೆಂಕಟೇಶ್ ಅಯ್ಯರ್ ಅವರೊಂದಿಗೆ ರಮಣದೀಪ್ ಸಿಂಗ್ ಕ್ರೀಸ್‌ನಲ್ಲಿದ್ದಾರೆ.

  • 03 May 2024 09:00 PM (IST)

    ಮನೀಶ್ ಪಾಂಡೆ ವಿಕೆಟ್

    ಕನ್ನಡಿಗ ಮನೀಶ್ ಪಾಂಡೆ ಇನ್ನಿಂಗ್ಸ್ 42 ರನ್​ಗಳಿಗೆ ಅಂತ್ಯಗೊಂಡಿದೆ. ತಂಡದ ಪರವಾಗಿ ಆಂಡ್ರೆ ರಸೆಲ್ ಕ್ರೀಸ್‌ಗೆ ಬಂದಿದ್ದಾರೆ. ತಂಡದ ಸ್ಕೋರ್ 6 ವಿಕೆಟ್ ನಷ್ಟಕ್ಕೆ 147 ರನ್ ಆಗಿದೆ.

  • 03 May 2024 08:56 PM (IST)

    ವೆಂಕಟೇಶ್ ಅಯ್ಯರ್ ಅರ್ಧಶತಕ

    ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ 16ನೇ ಓವರ್‌ನಲ್ಲಿ ತಮ್ಮ ಅರ್ಧಶತಕ ಪೂರ್ಣಗೊಳಿಸಿದ್ದಾರೆ. ಕನ್ನಡಿಗ ಮನೀಶ್ ಪಾಂಡೆ ಕೂಡ 36 ರನ್ ಗಳಿಸಿ ಆಡುತ್ತಿದ್ದಾರೆ. 16 ಓವರ್‌ಗಳಲ್ಲಿ ತಂಡ 5 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದೆ.

  • 03 May 2024 08:48 PM (IST)

    ಅಯ್ಯರ್- ಮನೀಶ್ ಜೊತೆಯಾಟ

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 14 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿದೆ. ತಂಡದ ಪರ ವೆಂಕಟೇಶ್ ಅಯ್ಯರ್ 47 ರನ್ ಹಾಗೂ ಮನೀಶ್ ಪಾಂಡೆ 31 ರನ್ ಗಳಿಸಿ ಆಡುತ್ತಿದ್ದಾರೆ.

  • 03 May 2024 08:40 PM (IST)

    12 ಓವರ್‌ ಪೂರ್ಣ

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 12 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 100 ರನ್​ಗಳ ಗಡಿ ದಾಟಿದೆ. ತಂಡದ ಪರ ವೆಂಕಟೇಶ್ ಅಯ್ಯರ್ 43 ರನ್ ಹಾಗೂ ಮನೀಶ್ ಪಾಂಡೆ 18 ರನ್ ಬಾರಿಸಿದ್ದಾರೆ.

  • 03 May 2024 08:24 PM (IST)

    ಅರ್ಧ ಇನಿಂಗ್ಸ್ ಅಂತ್ಯ

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 10 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು 26 ರನ್‌ಗಳ ಜೊತೆಯಾಟ ನಡೆಸಿದ್ದಾರೆ.

  • 03 May 2024 08:11 PM (IST)

    ರಿಂಕು ಸಿಂಗ್ ಔಟ್

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪವರ್‌ಪ್ಲೇ ಅಂತ್ಯಕ್ಕೆ ತನ್ನ 5ನೇ ವಿಕೆಟ್ ಕಳೆದುಕೊಂಡಿದೆ. ರಿಂಕು ಸಿಂಗ್ 9 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು.

    ಕೆಕೆಆರ್ 58/5

  • 03 May 2024 08:03 PM (IST)

    4ನೇ ವಿಕೆಟ್ ಪತನ

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 5ನೇ ಓವರ್‌ನಲ್ಲಿ 4 ವಿಕೆಟ್ ಕಳೆದುಕೊಂಡಿದೆ. 5 ಓವರ್‌ಗಳಲ್ಲಿ ತಂಡದ ಸ್ಕೋರ್ 51 ರನ್ ಆಗಿದೆ.

  • 03 May 2024 08:01 PM (IST)

    ಶ್ರೇಯಸ್ ಅಯ್ಯರ್ ಔಟ್

    ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಕೇವಲ 6 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದ್ದಾರೆ. ವೆಂಕಟೇಶ್ ಅಯ್ಯರ್ ಕ್ರೀಸ್‌ನಲ್ಲಿದ್ದಾರೆ. ತಂಡ 4 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 37 ರನ್‌ ಗಳಿಸಿದೆ.

  • 03 May 2024 07:56 PM (IST)

    ಆಂಗ್ಕ್ರಿಶ್ ರಘುವಂಶಿ ಔಟ್

    ಅಂಗ್‌ಕ್ರಿಶ್ ರಘುವಂಶಿ 13 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್ ಕ್ರೀಸ್‌ಗೆ ಬಂದಿದ್ದಾರೆ. ತಂಡದ ಸ್ಕೋರ್ 2 ವಿಕೆಟ್ ನಷ್ಟಕ್ಕೆ 28 ರನ್ ಆಗಿದೆ.

  • 03 May 2024 07:42 PM (IST)

    ಸಾಲ್ಟ್ ಔಟ್

    ಕೋಲ್ಕತ್ತಾಗೆ ಫಿಲ್ ಸಾಲ್ಟ್ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದೆ. ಆಂಗ್ಕ್ರಿಶ್ ರಘುವಂಶಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಒಂದು ಓವರ್ ನಂತರ ತಂಡದ ಸ್ಕೋರ್ 12/1.

  • 03 May 2024 07:35 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್

    ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ಆಂಗ್ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ.

  • 03 May 2024 07:34 PM (IST)

    ಮುಂಬೈ ಇಂಡಿಯನ್ಸ್

    ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಟಿಮ್ ಡೇವಿಡ್, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ.

  • 03 May 2024 07:10 PM (IST)

    ಟಾಸ್ ಗೆದ್ದ ಮುಂಬೈ

    ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

Published On - May 03,2024 7:09 PM