AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಸಿಸಿ ಮಾಸ್ಟರ್ ಪ್ಲ್ಯಾನ್: ಭಾರತ vs ಪಾಕಿಸ್ತಾನ್ 3 ಬಾರಿ ಮುಖಾಮುಖಿ!

ODI World Cup 2027: 2027ರ ಏಕದಿನ ವಿಶ್ವಕಪ್‌ಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಜಾರಿಗೆ ತಂದಿರುವ ಹೊಸ ಮೂರು ಹಂತಗಳ ಹೊಸ ಸ್ವರೂಪವು ಜಾಗತಿಕ ಕ್ರಿಕೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ. 12 ತಂಡಗಳ ಈ ಮೆಗಾ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಬರೋಬ್ಬರಿ 3 ಬಾರಿ ಮುಖಾಮುಖಿಯಾಗಲು ಈ ಹೊಸ ನಿಯಮ ನೇರ ಹಾದಿ ಮಾಡಿಕೊಡಲಿದೆ. ಅದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಐಸಿಸಿ ಮಾಸ್ಟರ್ ಪ್ಲ್ಯಾನ್: ಭಾರತ vs ಪಾಕಿಸ್ತಾನ್ 3 ಬಾರಿ ಮುಖಾಮುಖಿ!
India vs PakistanImage Credit source: x.com
ಝಾಹಿರ್ ಯೂಸುಫ್
|

Updated on: Jul 16, 2026 | 2:04 PM

Share

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತನ್ನ ಬಹುನಿರೀಕ್ಷಿತ 2027ರ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯ ಸ್ವರೂಪದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಯಿಂದಾಗಿ ಮುಂದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಬರೋಬ್ಬರಿ ಮೂರು ಬಾರಿ ಮುಖಾಮುಖಿಯಾಗಬಹುದು. ಅದರಲ್ಲೂ ಸಾಂಪ್ರದಾಯಿಕ ಎದುರಾಳಿಗಳ ನಡುವೆ ಕನಿಷ್ಠ ಎರಡು ಪಂದ್ಯಗಳು ನಡೆಯುವುದು ಬಹುತೇಕ ಖಚಿತವಾಗಿದೆ.

ಸಾಮಾನ್ಯವಾಗಿ ಹಿಂದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ಲೀಗ್ ಹಂತದಲ್ಲಿ ಕೇವಲ ಒಂದು ಬಾರಿ ಮಾತ್ರ ಮುಖಾಮುಖಿಯಾಗುತ್ತಿದ್ದವು. ಇನ್ನು ದ್ವಿತೀಯ ಬಾರಿ ಉಭಯ ತಂಡಗಳು ಸೆಣಸಾಡಬೇಕಿದ್ದರೆ ಅವು ನಾಕೌಟ್ (ಸೆಮಿಫೈನಲ್ ಅಥವಾ ಫೈನಲ್) ಹಂತಕ್ಕೇರಬೇಕಾದ ಅನಿವಾರ್ಯತೆ ಇರುತ್ತಿತ್ತು.

ಆದರೆ, 2027ರ ಟೂರ್ನಿಯಲ್ಲಿ ಜಾರಿಗೆ ಬರಲಿರುವ ಹೊಸ ‘ಸೂಪರ್ ಸೆವೆನ್’ ನಿಯಮದಿಂದಾಗಿ, ಲೀಗ್ ಹಂತ ಮುಗಿದ ತಕ್ಷಣವೇ ಇವೆರಡೂ ತಂಡಗಳು ಎರಡನೇ ಬಾರಿಗೆ ಪರಸ್ಪರ ಕಾದಾಡುವುದು ಖಾತರಿಯಾಗಲಿದೆ. ಆ ಬಳಿಕ ಪಾಯಿಂಟ್ಸ್ ಪಟ್ಟಿಯ ಆಧಾರದ ಮೇಲೆ ಸೆಮಿಫೈನಲ್ ಅಥವಾ ಫೈನಲ್ ತಲುಪಿದರೆ, ಅಭಿಮಾನಿಗಳು ಒಂದೇ ವಿಶ್ವಕಪ್‌ನಲ್ಲಿ ಮೂರನೇ ಬಾರಿಗೆ ಭಾರತ-ಪಾಕ್ ಮಹಾ ಸಮರವನ್ನು ಕಣ್ಣುಂಬಿಕೊಳ್ಳಬಹುದು.

ಇಂಡೊ-ಪಾಕ್ 3 ಬಾರಿ ಮುಖಾಮುಖಿ ಹೇಗೆ?

ಏಕದಿನ ವಿಶ್ವಕಪ್ ಟೂರ್ನಿಯ ಹೊಸ ಸ್ವರೂಪದ ಪ್ರಕಾರ ಪಂದ್ಯಾವಳಿಯು ಒಟ್ಟು ಮೂರು ಹಂತಗಳಲ್ಲಿ ನಡೆಯಲಿದೆ. ಈ ಮೂರು ಹಂತದಲ್ಲೂ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಬಹುದು.

  1. ಲೀಗ್ ಹಂತ: ಮುಂದಿನ ಏಕದಿನ ವಿಶ್ವಕಪ್​ನಲ್ಲಿ ಒಟ್ಟು 12 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ತಲಾ 6 ಟೀಮ್​ಗಳಂತೆ ಎರಡು ಗ್ರೂಪ್‌ಗಳಾಗಿ ವಿಂಗಡಿಸಲಾಗುತ್ತದೆ. ಐಸಿಸಿ ಇತಿಹಾಸವನ್ನು ಗಮನಿಸಿದರೆ ಭಾರತ ಮತ್ತು ಪಾಕಿಸ್ತಾನ್ ತಂಡಗಳನ್ನು ಯಾವಾಗಲೂ ಒಂದೇ ಗ್ರೂಪ್‌ನಲ್ಲಿ ಇರಿಸಲಾಗುತ್ತದೆ. ಹೀಗಾಗಿ ಲೀಗ್​ ಹಂತದಲ್ಲಿ ಬದ್ಧವೈರಿಗಳು ಮುಖಾಮುಖಿಯಾಗುವುದು ಖಚಿತ.
  2. ಸೂಪರ್ ಸೆವೆನ್: ಲೀಗ್​ ಹಂತದ ಎರಡೂ ಗ್ರೂಪ್‌ಗಳಿಂದ ತಲಾ 3 ಅತ್ಯುತ್ತಮ ತಂಡಗಳು ಹಾಗೂ ಒಟ್ಟಾರೆ ಪ್ರದರ್ಶನದ ಆಧಾರದ ಮೇಲೆ ಮತ್ತೊಂದು ತಂಡ ಸೇರಿ ಒಟ್ಟು 7 ತಂಡಗಳು ‘ಸೂಪರ್ ಸೆವೆನ್’ ಹಂತಕ್ಕೆ ಲಗ್ಗೆ ಇಡಲಿವೆ. ಅಂದರೆ ದ್ವಿತೀಯ ಸುತ್ತಿನಲ್ಲಿ 7 ತಂಡಗಳು ಒಂದೇ ಗ್ರೂಪ್​ನಲ್ಲೇ ಕಣಕ್ಕಿಳಿಯಲಿವೆ. ಇಲ್ಲಿ ಪ್ರತಿ ತಂಡವು ಉಳಿದ 6 ತಂಡಗಳೊಂದಿಗೆ ತಲಾ ಒಂದು ಪಂದ್ಯ ಆಡುವುದು ಕಡ್ಡಾಯ. ಅದರಂತೆ ಭಾರತ ಮತ್ತು ಪಾಕಿಸ್ತಾನ್ ಸೂಪರ್-7 ಹಂತಕ್ಕೇರಿದರೆ ಮತ್ತೊಮ್ಮೆ ಮುಖಾಮುಖಿಯಾಗಲಿದೆ.
  3. ನಾಕೌಟ್ ಹಂತ: ಈ ಬಾರಿ ಐಸಿಸಿ ಕ್ವಾರ್ಟರ್ ಫೈನಲ್ ಹಂತವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಸೂಪರ್ ಸೆವೆನ್ ಪಾಯಿಂಟ್ಸ್ ಟೇಬಲ್‌ನಲ್ಲಿ ಟಾಪ್ 4 ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿವೆ. ಅಂದರೆ ಇಲ್ಲಿ ಭಾರತ ಮತ್ತು ಪಾಕಿಸ್ತಾನ್ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಬಹುದು. ಅಥವಾ ಎರಡು ತಂಡಗಳು ಬೇರೆ ಬೇರೆ ಸೆಮಿಫೈನಲ್ ಪಂದ್ಯಗಳನ್ನು ಗೆದ್ದು, ಮಹಾ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಕಾದಾಡಬಹುದು!

ಐಸಿಸಿ ಮಾಸ್ಟರ್ ಪ್ಲ್ಯಾನ್:

ಜಾಗತಿಕ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವಿನ ಪಂದ್ಯಗಳು ಅತಿ ಹೆಚ್ಚು ಪ್ರಸಾರ ಹಕ್ಕು ಮತ್ತು ಜಾಹೀರಾತು ಲಾಭವನ್ನು ತಂದುಕೊಡುತ್ತವೆ.

ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿಗಳು ನಡೆಯದ ಕಾರಣ, ಐಸಿಸಿ ಟೂರ್ನಿಗಳಲ್ಲೇ ಗರಿಷ್ಠ ಬಾರಿ ಇವೆರಡನ್ನೂ ಮುಖಾಮುಖಿಯಾಗುವಂತೆ ಮಾಡಿದರೆ ಶತಕೋಟಿ ಡಾಲರ್ ಆದಾಯ ಗಳಿಸಬಹುದು ಎಂಬುದು ಐಸಿಸಿಯ ಮಾಸ್ಟರ್ ಪ್ಲಾನ್.

ಅದರಂತೆ ಮುಂದಿನ ಏಕದಿನ ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಮೂರು ಪಂದ್ಯಗಳನ್ನು ನಿರೀಕ್ಷಿಸಬಹುದು. ಹಾಗೆಯೇ ಇದೇ ಪ್ಲ್ಯಾನ್ ಅನ್ನು 2028ರ ಟಿ20 ವಿಶ್ವಕಪ್‌ನಲ್ಲೂ ಐಸಿಸಿ ಮುಂದುವರೆಸಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಐಪಿಎಲ್ ರೆಕಾರ್ಡ್​ ಉಡೀಸ್: ವಿಶ್ವ ದಾಖಲೆಯ ಚೇಸಿಂಗ್!

ಒಟ್ಟಾರೆಯಾಗಿ ಹೇಳುವುದಾದರೆ, 2027ರ ಏಕದಿನ ವಿಶ್ವಕಪ್‌ಗಾಗಿ ಐಸಿಸಿ ತಂದಿರುವ ಈ ಹೊಸ ‘ಸೂಪರ್ ಸೆವೆನ್’ ಸ್ವರೂಪವು ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದೆ. ಕೇವಲ ಆರ್ಥಿಕ ಲಾಭ ಮತ್ತು ಜಾಹೀರಾತು ಆದಾಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದಲೇ ಐಸಿಸಿ ಈ ಮಾಸ್ಟರ್ ಪ್ಲಾನ್ ರೂಪಿಸಿದ್ದರೂ, ಕ್ರಿಕೆಟ್ ಪ್ರೇಮಿಗಳು ಮಾತ್ರ ಒಂದೇ ವಿಶ್ವಕಪ್‌ನಲ್ಲಿ ಮೂರು ಬಾರಿ ಇಂಡೋ-ಪಾಕ್ ಮಹಾ ಕದನವನ್ನು ಕಣ್ಣುಂಬಿಕೊಳ್ಳಲು ಈಗಿನಿಂದಲೇ ತುದಿಗಾಲಲ್ಲಿ ನಿಂತಿದ್ದಾರೆ.

Follow Us
ಹಾವನೂರು ಬಡಾವಣೆ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆ!
ಹಾವನೂರು ಬಡಾವಣೆ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆ!
ಜೋರಾದ ಖಾತೆ ಹಂಚಿಕೆ ಕಸರತ್ತು: ಸಿದ್ದರಾಮಯ್ಯ ಜೊತೆ ಡಿಕೆಶಿ ಗಂಭೀರ ಚರ್ಚೆ
ಜೋರಾದ ಖಾತೆ ಹಂಚಿಕೆ ಕಸರತ್ತು: ಸಿದ್ದರಾಮಯ್ಯ ಜೊತೆ ಡಿಕೆಶಿ ಗಂಭೀರ ಚರ್ಚೆ
ಮೆಟ್ರೋ ಕಾಮಗಾರಿ ವೇಳೆ ನೆಲಕ್ಕೆ ಬಿದ್ದ ಬೃಹತ್ ಶೀಟ್: ತಪ್ಪಿದ ಭಾರಿ ದುರಂತ
ಮೆಟ್ರೋ ಕಾಮಗಾರಿ ವೇಳೆ ನೆಲಕ್ಕೆ ಬಿದ್ದ ಬೃಹತ್ ಶೀಟ್: ತಪ್ಪಿದ ಭಾರಿ ದುರಂತ
ಕರ್ನಾಟಕ ಎಸ್‌ಐಆರ್ ಅವಧಿ ಆಗಸ್ಟ್ 8ರ ಬದಲು ಆಗಸ್ಟ್ 17ರ ತನಕ ವಿಸ್ತರಣೆ
ಕರ್ನಾಟಕ ಎಸ್‌ಐಆರ್ ಅವಧಿ ಆಗಸ್ಟ್ 8ರ ಬದಲು ಆಗಸ್ಟ್ 17ರ ತನಕ ವಿಸ್ತರಣೆ
ವೃಷಭ ರಾಶಿ ರೋಹಿಣಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ವೃಷಭ ರಾಶಿ ರೋಹಿಣಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಬಿಗ್​​ಬಾಸ್​ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ: ಮಾಜಿ ​​ಸ್ಪರ್ಧಿಗಳ ಕೆಲಸವೇನು?
ಬಿಗ್​​ಬಾಸ್​ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ: ಮಾಜಿ ​​ಸ್ಪರ್ಧಿಗಳ ಕೆಲಸವೇನು?
ಒಡಿಶಾದಲ್ಲಿ ಕೈಮಗ್ಗದ ಬಟ್ಟೆ ಖರೀದಿಸಿದ ಪ್ರಲ್ಹಾದ್ ಜೋಶಿ
ಒಡಿಶಾದಲ್ಲಿ ಕೈಮಗ್ಗದ ಬಟ್ಟೆ ಖರೀದಿಸಿದ ಪ್ರಲ್ಹಾದ್ ಜೋಶಿ
‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ
‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು