AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಜಾ ಕಿಕ್… ಪಾಕಿಸ್ತಾನ್ ಆಟಗಾರನಿಗೆ ಐಸಿಸಿ ನಿಷೇಧ!

Mohammad Nawaz: ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ಆ್ಯಂಟಿ-ಡೋಪಿಂಗ್ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ ಆಲ್‌ರೌಂಡರ್ ಮೊಹಮ್ಮದ್ ನವಾಝ್ ಅವರ ಮೇಲೆ ಮೂರು ತಿಂಗಳ ಕಾಲ ನಿಷೇಧ ಹೇರಲಾಗಿದೆ. ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ಪಂದ್ಯದ ವೇಳೆ ನಡೆದ ಡೋಪ್ ಟೆಸ್ಟ್‌ನಲ್ಲಿ ನವಾಝ್ ಗಾಂಜಾ ಸೇವಿಸಿರುವುದು ದೃಢಪಟ್ಟಿತ್ತು.

ಗಾಂಜಾ ಕಿಕ್... ಪಾಕಿಸ್ತಾನ್ ಆಟಗಾರನಿಗೆ ಐಸಿಸಿ ನಿಷೇಧ!
Mohammad NawazImage Credit source: PCB
ಝಾಹಿರ್ ಯೂಸುಫ್
|

Updated on: Jul 18, 2026 | 8:10 AM

Share

ಪಾಕಿಸ್ತಾನ್ ಕ್ರಿಕೆಟ್ ತಂಡದ ಅನುಭವಿ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಮೊಹಮ್ಮದ್ ನವಾಝ್ ಅವರು ಐಸಿಸಿ (ICC) ಆ್ಯಂಟಿ-ಡೋಪಿಂಗ್ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮೂರು ತಿಂಗಳ ಅವಧಿಗೆ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದಾರೆ. ಆದರೆ, ಅವರು ಈಗಾಗಲೇ ಸ್ವಯಂಪ್ರೇರಿತ ಅಮಾನತು ಅವಧಿಯನ್ನು ಪೂರೈಸಿರುವುದರಿಂದ ತಕ್ಷಣವೇ ಕ್ರಿಕೆಟ್ ಮೈದಾನಕ್ಕೆ ಮರಳಲು ಅರ್ಹರಾಗಿದ್ದಾರೆ.

ನಿಷೇಧಕ್ಕೆ ಕಾರಣವೇನು?

ಇತ್ತೀಚೆಗೆ ನಡೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ಬಳಿಕ ಮೊಹಮ್ಮದ್ ನವಾಝ್ ಅವರ ಮೂತ್ರದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರ ದೇಹದಲ್ಲಿ ‘ಕಾರ್ಬಾಕ್ಸಿ-ಟಿಎಚ್‌ಸಿ’ ಎಂಬ ಅಂಶ ಪತ್ತೆಯಾಗಿದೆ. ಇದು ಗಾಂಜಾ ಬಳಕೆಯಿಂದ ಉತ್ಪತ್ತಿಯಾಗುವ ರಾಸಾಯನಿಕವಾಗಿದೆ.

ಐಸಿಸಿ ನಿಯಮಗಳ ಪ್ರಕಾರ, ಇದನ್ನು ಕ್ರೀಡಾ ಪ್ರದರ್ಶನವನ್ನು ಹೆಚ್ಚಿಸುವ ಉದ್ದೇಶದ ಔಷಧಿಯ ಬದಲಿಗೆ, ‘ದುರ್ಬಳಕೆಯ ವಸ್ತು’ ಎಂದು ವರ್ಗೀಕರಿಸಲಾಗಿದೆ. ನವಾಝ್ ಇದನ್ನು ಪಂದ್ಯಾವಳಿಯ ಹೊರಗೆ ಮನರಂಜನೆಗಾಗಿ ಬಳಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ತಪ್ಪು ಒಪ್ಪಿಕೊಂಡ ನವಾಝ್:

ನವಾಝ್ ಅವರ ಮೂತ್ರದ ಮಾದರಿಯಲ್ಲಿ ಪತ್ತೆಯಾಗಿರುವ ‘ಕಾರ್ಬಾಕ್ಸಿ-ಟಿಎಚ್‌ಸಿ’ ಎಂಬ ರಾಸಾಯನಿಕವು ದೇಹದಲ್ಲಿ ಗಾಂಜಾ ಅಂಶವಿದ್ದರೆ ಮಾತ್ರ ಉತ್ಪತ್ತಿಯಾಗುತ್ತದೆ. ಈ ಬಗ್ಗೆ ಐಸಿಸಿ ವಿಚಾರಣೆ ನಡೆಸಿದಾಗ, ತಾವು ಪಂದ್ಯಾವಳಿ ಇಲ್ಲದ ಸಮಯದಲ್ಲಿ ಕೇವಲ ಮನರಂಜನೆಗಾಗಿ ಗಾಂಜಾ ಬಳಸಿದ್ದಾಗಿ ಅವರು ಸ್ವತಃ ಒಪ್ಪಿಕೊಂಡಿದ್ದಾರೆ. ಹೀಗಾಗಿ ನವಾಝ್​ಗೆ ಕೇವಲ 3 ತಿಂಗಳ ಅಮಾನತು ಶಿಕ್ಷೆ ವಿಧಿಸಲಾಗಿದೆ.

ಶಿಕ್ಷೆಯ ಅವಧಿ ಕಡಿತಗೊಂಡಿದ್ದು ಹೇಗೆ?

ನವಾಝ್ ಅವರ ಮೂರು ತಿಂಗಳ ನಿಷೇಧದ ಅವಧಿಯನ್ನು ಮೇ 1, 2026 ರಿಂದಲೇ ಜಾರಿಗೆ ಬರುವಂತೆ ಪರಿಗಣಿಸಲಾಗಿತ್ತು. ಏಕೆಂದರೆ ಅಂದಿನಿಂದಲೇ ಅವರು ಸ್ವಯಂಪ್ರೇರಿತವಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.

ಅಲ್ಲದೆ ಐಸಿಸಿ ಸೂಚಿಸಿದ ಮಾದಕ ದ್ರವ್ಯ ದುರ್ಬಳಕೆ ತಡೆ ಪುನರ್ವಸತಿ ಕಾರ್ಯಕ್ರಮದಲ್ಲಿ  ಭಾಗವಹಿಸಲು ನವಾಝ್ ಒಪ್ಪಿಕೊಂಡ ಕಾರಣ, ಅವರ ಪ್ರಮುಖ ಶಿಕ್ಷೆಯ ಅವಧಿಯನ್ನು ಕೇವಲ ಒಂದು ತಿಂಗಳಿಗೆ ಕಡಿತಗೊಳಿಸಲಾಯಿತು.

ತಕ್ಷಣವೇ ಮೈದಾನಕ್ಕೆ ವಾಪಸ್:

ನವಾಝ್ ಈಗಾಗಲೇ ಮೇ ತಿಂಗಳಿನಿಂದ ಜುಲೈ ಮಧ್ಯದವರೆಗೆ ಸುಮಾರು ಎರಡುವರೆ ತಿಂಗಳಿಗೂ ಹೆಚ್ಚು ಕಾಲ ಕ್ರಿಕೆಟ್‌ನಿಂದ ಹೊರಗುಳಿದಿರುವುದರಿಂದ, ಅವರ ಅಮಾನತನ್ನು ಐಸಿಸಿ ಅಧಿಕೃತವಾಗಿ ತೆರವುಗೊಳಿಸಿದೆ. ಅವರು ಇಂದಿನಿಂದಲೇ ಯಾವುದೇ ರೀತಿಯ ಕ್ರಿಕೆಟ್ ಆಡಲು ಮುಕ್ತರಾಗಿದ್ದಾರೆ.

ಇದನ್ನೂ ಓದಿ: ರೋಹಿತ್ ಶರ್ಮಾ ನಿವೃತ್ತಿ ವದಂತಿಗಳಿಗೆ ಬಿಸಿಸಿಐ ಬ್ರೇಕ್!

ದಾಖಲೆಗಳು ರದ್ದು:

ಫೆಬ್ರವರಿ 7, 2026 ರಿಂದ ಮೇ 1, 2026 ರ ನಡುವಿನ ಅವಧಿಯಲ್ಲಿ ಮೊಹಮ್ಮದ್ ನವಾಝ್ ಆಡಿರುವ ಎಲ್ಲಾ ಪಂದ್ಯಗಳ ವೈಯಕ್ತಿಕ ಪ್ರದರ್ಶನ ಮತ್ತು ದಾಖಲೆಗಳನ್ನು ಐಸಿಸಿ ಅಮಾನ್ಯಗೊಳಿಸಿದೆ. ಟಿ20 ವಿಶ್ವಕಪ್‌ನಲ್ಲಿ ಅವರು ಆಡಿದ 7 ಪಂದ್ಯಗಳ ದಾಖಲೆಗಳೂ ಇದರಲ್ಲಿ ಸೇರಿವೆ. ಈ ಡೋಪಿಂಗ್ ತನಿಖೆಯ ಕಾರಣದಿಂದಾಗಿ ಅವರು ಇಂಗ್ಲೆಂಡ್‌ನ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ‘ಸರ್ರೆ’ ತಂಡದ ಪರವಾಗಿ ಆಡಬೇಕಿದ್ದ ಪ್ರಮುಖ ಒಪ್ಪಂದವನ್ನು ಕೂಡ ಕಳೆದುಕೊಂಡಿದ್ದಾರೆ.

Follow Us
ಬಂಟ್ವಾಳ ಕೊಲೆ ಆರೋಪಿ ಬಗ್ಗೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇಸ್
ಬಂಟ್ವಾಳ ಕೊಲೆ ಆರೋಪಿ ಬಗ್ಗೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇಸ್
ಮೆಕ್ಸಿಕೋದಲ್ಲಿ 7.4 ತೀವ್ರತೆಯ ಭೂಕಂಪ; ಸುನಾಮಿಯ ಮುನ್ನೆಚ್ಚರಿಕೆ
ಮೆಕ್ಸಿಕೋದಲ್ಲಿ 7.4 ತೀವ್ರತೆಯ ಭೂಕಂಪ; ಸುನಾಮಿಯ ಮುನ್ನೆಚ್ಚರಿಕೆ
ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ವಿಚಾರಿಸಿದ ಆರ್. ಅಶೋಕ್
ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ವಿಚಾರಿಸಿದ ಆರ್. ಅಶೋಕ್
ನೀರಾವರಿ ಪೈಪ್‌ಲೈನ್ ಒಡೆದು ಆಕಾಶದೆತ್ತರಕ್ಕೆ ಚಿಮ್ಮಿದ ನೀರು
ನೀರಾವರಿ ಪೈಪ್‌ಲೈನ್ ಒಡೆದು ಆಕಾಶದೆತ್ತರಕ್ಕೆ ಚಿಮ್ಮಿದ ನೀರು
ಅಲೆಗಳ ಮಧ್ಯೆ ಮುಳುಗುತ್ತಿದ್ದ ಮಾನಸಿಕ ಅಸ್ವಸ್ಥನ ಪ್ರಾಣ ಉಳಿಸಿದ ಖಾಕಿ ಪಡೆ
ಅಲೆಗಳ ಮಧ್ಯೆ ಮುಳುಗುತ್ತಿದ್ದ ಮಾನಸಿಕ ಅಸ್ವಸ್ಥನ ಪ್ರಾಣ ಉಳಿಸಿದ ಖಾಕಿ ಪಡೆ
ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ
ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ HDK
ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ HDK
SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ
SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ