AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PBKS vs GT IPL 2026 Live Score: ಪಂಜಾಬ್ ಕಿಂಗ್ಸ್​ಗೆ ರೋಚಕ ಜಯ

Punjab Kings vs Gujarat Titans, IPL 2026 Live Score Updates: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಈವರೆಗೆ 7 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಪಂಜಾಬ್ ಕಿಂಗ್ಸ್ ತಂಡ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಗುಜರಾತ್ ಟೈಟಾನ್ಸ್ 3 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದೆ.

PBKS vs GT IPL 2026 Live Score: ಪಂಜಾಬ್ ಕಿಂಗ್ಸ್​ಗೆ ರೋಚಕ ಜಯ
PBKS vs GT
ಝಾಹಿರ್ ಯೂಸುಫ್
|

Updated on:Mar 31, 2026 | 11:49 PM

Share

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 4ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಮುಲ್ಲನ್​ಪುರ್​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್​ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್​​ಗಳಲ್ಲಿ 162 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 19.1 ಓವರ್​​ಗಳಲ್ಲಿ 165 ರನ್​ ಬಾರಿಸಿ 3 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ.

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಸಾಯಿ ಸುದರ್ಶನ್, ಶುಭ್​ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಅಶೋಕ್ ಶರ್ಮಾ, ಮೊಹಮ್ಮದ್ ಸಿರಾಜ್.

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವೈಶಾಕ್ ವಿಜಯಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.

ಗುಜರಾತ್ ಟೈಟಾನ್ಸ್ ತಂಡ: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಕುಮಾರ್ ಕುಶಾಗ್ರಾ, ಅನುಜ್ ರಾವತ್, ಜೋಸ್ ಬಟ್ಲರ್, ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಅರ್ಷದ್ ಖಾನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ, ಗುರ್ನೂರ್ ಸಿಂಗ್ ಬ್ರಾರ್, ರಶೀದ್ ಖಾನ್, ಮಾನವ್ ಸುತಾರ್, ಸಾಯಿ ಕಿಶೋರ್, ಜಯಂತ್ ಯಾದವ್, ಅಶೋಕ್ ಶರ್ಮಾ, ಜೇಸನ್ ಹೋಲ್ಡರ್, ಟಾಮ್ ಬ್ಯಾಂಟನ್, ಪೃಥ್ವಿ ರಾಜ್ ಯಾರ್ರಾ, ಲ್ಯೂಕ್ ವುಡ್.

ಪಂಜಾಬ್ ಕಿಂಗ್ಸ್ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಪ್ರಭ್​ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಅಝ್ಮತುಲ್ಲಾ ಒಮರ್​ಝಾಹಿ, ಮಾರ್ಕೊ ಯಾನ್ಸೆನ್, ಹರ್ಪ್ರೀತ್ ಬ್ರಾರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮುಶೀರ್ ಖಾನ್, ಪ್ಯಾಲಾ ಅವಿನಾಶ್, ಹರ್ನೂರ್ ಪನ್ನು, ಸೂರ್ಯಾಂಶ್ ಶೆಡ್ಗೆ, ಮಿಚೆಲ್ ಓವನ್, ಕ್ಸೇವಿಯರ್ ಬಾರ್ಟ್ಲೆಟ್, ಲಾಕಿ ಫರ್ಗುಸನ್, ವೈಶಾಕ್ ವಿಜಯ್‌ಕುಮಾರ್, ಯಶ್ ಠಾಕೂರ್, ವಿಷ್ಣು ವಿನೋದ್, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ಪ್ರವೀಣ್ ದುಬೆ, ವಿಶಾಲ್ ನಿಶಾದ್.

LIVE NEWS & UPDATES

The liveblog has ended.
  • 31 Mar 2026 11:29 PM (IST)

    PBKS vs GT IPL 2026 Live Score: ಸೂಪರ್ ಕೊನೊಲಿ

    • 44 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 72 ರನ್ ಬಾರಿಸಿದ ಕೂಪರ್ ಕೊನೊಲಿ
    • ಪಂಜಾಬ್ ಕಿಂಗ್ಸ್ ತಂಡವನ್ನು 19.1 ಓವರ್​​ಗಳಲ್ಲಿ ಗುರಿ ಮುಟ್ಟಿಸಿದ ಕೊನೊಲಿ.
    • ಪಂಜಾಬ್ ಪಡೆಗೆ 3 ವಿಕೆಟ್​ಗಳ ರೋಚಕ ಜಯ

    ಗುಜರಾತ್ ಟೈಟಾನ್ಸ್​- 161/6 (20)

    ಪಂಜಾಬ್ ಕಿಂಗ್ಸ್– 165/7 (19.1)

  • 31 Mar 2026 11:25 PM (IST)

    PBKS vs GT IPL 2026 Live Score: ಪಂಜಾಬ್ ಕಿಂಗ್ಸ್​ಗೆ ರೋಚಕ ಜಯ

    ಪ್ರಸಿದ್ಧ್ ಕೃಷ್ಣ ಎಸೆದ 19ನೇ ಓವರ್​ನ ಮೊದಲ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕ್ಸೇವಿಯರ್ ಬಾರ್ಟ್ಲೆಟ್.

    ಮೂರನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಕೂಪರ್ ಕೊನೊಲಿ.

    ಕೊನೆಯ ಓವರ್​ನಲ್ಲಿ ಕೇವಲ 2 ರನ್​ಗಳ ಅವಶ್ಯಕತೆ.

    ವಾಷಿಂಗ್ಟನ್ ಸುಂದರ್ ಎಸೆತದ 20ನೇ ಓವರ್​ನ ಮೊದಲ ಎಸೆತದಲ್ಲಿ ಫೋರ್ ಬಾರಿಸಿದ ಕೂಪರ್ ಕೊನೊಲಿ.

    19.1 ಓವರ್​​ಗಳಲ್ಲಿ 165 ರನ್​ ಬಾರಿಸಿ ಗೆಲುವಿನ ನಗೆ ಬೀರಿದ ಪಂಜಾಬ್ ಪಡೆ.

    ಪಂಜಾಬ್ ಕಿಂಗ್ಸ್ ತಂಡಕ್ಕೆ 3 ವಿಕೆಟ್​ಗಳ ರೋಚಕ ಜಯ

  • 31 Mar 2026 11:13 PM (IST)

    PBKS vs GT IPL 2026 Live Score: ಪಂಜಾಬ್ ಕಿಂಗ್ಸ್​ 7ನೇ ವಿಕೆಟ್ ಪತನ

    ಅಶೋಕ್ ಶರ್ಮಾ ಎಸೆದ 18ನೇ ಓವರ್​ನ 4ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಮಾರ್ಕೊ ಯಾನ್ಸೆನ್ (9).

    ಕೊನೆಯ 12 ಎಸೆತಗಳಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ 16 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ಕೂಪರ್ ಕೊನೊಲಿ ಹಾಗೂ ಕ್ಸೇವಿಯರ್ ಬಾರ್ಟ್ಲೆಟ್ ಬ್ಯಾಟಿಂಗ್.

  • 31 Mar 2026 11:09 PM (IST)

    PBKS vs GT IPL 2026 Live Score: 21 ರನ್​ಗಳ ಅವಶ್ಯಕತೆ

    ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 18 ಎಸೆತಗಳಲ್ಲಿ 21 ರನ್​​ಗಳ ಅವಶ್ಯಕತೆ.

    ಕುತೂಹಲಘಟ್ಟದತ್ತ ಸಾಗುತ್ತಿರುವ ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಪಂದ್ಯ.

    ಕ್ರೀಸ್​ನಲ್ಲಿ ಎಡಗೈ ದಾಂಡಿಗ ಕೂಪರ್ ಕೊನೊಲಿ ಹಾಗೂ ಬಲಗೈ ಬ್ಯಾಟರ್ ಮಾರ್ಕೊ ಯಾನ್ಸೆನ್  ಬ್ಯಾಟಿಂಗ್.

    ಪಂಜಾಬ್ ಕಿಂಗ್ಸ್- 142/6 (17)

  • 31 Mar 2026 10:59 PM (IST)

    PBKS vs GT IPL 2026 Live Score: ವೆಲ್ಕಂ ಬೌಂಡರಿ

    ಕಗಿಸೊ ರಬಾಡ ಎಸೆದ 16ನೇ ಓವರ್​ನ ಮೊದಲ ಎಸೆತದಲ್ಲೇ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಕೂಪರ್ ಕೊನೊಲಿ.

    ಕೇವಲ 34 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ಕೂಪರ್ ಕೊನೊಲಿ.

    ಕೊನೆಯ ಎಸೆತದಲ್ಲಿ ಸಿಕ್ಸ್​ ಸಿಡಿಸಿದ ಕೊನೊಲಿ.

    ಪಂಜಾಬ್ ಕಿಂಗ್ಸ್ ತಂಡಕ್ಕೆ 24 ಎಸೆತಗಳಲ್ಲಿ 30 ರನ್​ಗಳ ಗುರಿ.

  • 31 Mar 2026 10:51 PM (IST)

    PBKS vs GT IPL 2026 Live Score: ಗುಜರಾತ್ ಟೈಟಾನ್ಸ್ ಉತ್ತಮ ಬೌಲಿಂಗ್

    ಪ್ರಸಿದ್ಧ್ ಕೃಷ್ಣ ಎಸೆದ 15ನೇ ಓವರ್​ನ 2ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಶಶಾಂಕ್ ಸಿಂಗ್ (4).

    4ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರ ನಡೆದ ಮಾರ್ಕಸ್ ಸ್ಟೊಯಿನಿಸ್ (0)

    ಕ್ರೀಸ್​ನಲ್ಲಿ ಕೂಪರ್ ಕೊನೊಲಿ ಹಾಗೂ ಮಾರ್ಕೊ ಯಾನ್ಸೆನ್  ಬ್ಯಾಟಿಂಗ್.

    ಪಂಜಾಬ್ ಕಿಂಗ್ಸ್ ತಂಡಕ್ಕೆ 30 ಎಸೆತಗಳಲ್ಲಿ 42 ರನ್​​ಗಳ ಅವಶ್ಯಕತೆ

  • 31 Mar 2026 10:45 PM (IST)

    PBKS vs GT IPL 2026 Live Score: ಗುಜರಾತ್ ತಂಡಕ್ಕೆ 4ನೇ ಯಶಸ್ಸು

    ವಾಷಿಂಗ್ಟನ್ ಸುಂದರ್ ಎಸೆದ 14ನೇ ಓವರ್​ನ ಮೊದಲ ಎಸೆತದಲ್ಲೇ ಸುಲಭ ಕ್ಯಾಚ್ ನೀಡಿದ ನೇಹಾಲ್ ವಧೇರಾ (3).

    ಪಂಜಾಬ್ ಕಿಂಗ್ಸ್ ತಂಡಕ್ಕೆ 36 ಎಸೆತಗಳಲ್ಲಿ 45 ರನ್​​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ಶಶಾಂಕ್ ಸಿಂಗ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.

  • 31 Mar 2026 10:40 PM (IST)

    PBKS vs GT IPL 2026 Live Score: ಪಂಜಾಬ್ ಕಿಂಗ್ಸ್ 3ನೇ ವಿಕೆಟ್ ಪತನ

    ಪ್ರಸಿದ್ಧ್ ಕೃಷ್ಣ ಎಸೆದ 13ನೇ ಓವರ್​ನ ಮೊದಲ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಹೊಡೆತ ಬಾರಿಸಲು ಹೋಗಿ ಕ್ಯಾಚ್ ನೀಡಿದ ಶ್ರೇಯಸ್ ಅಯ್ಯರ್ (18).

    ಕ್ರೀಸ್​ನಲ್ಲಿ ಎಡಗೈ ದಾಂಡಿಗರಾದ ಕೂಪರ್ ಕೊನೊಲಿ ಹಾಗೂ ನೆಹಾಲ್ ವಧೇರಾ ಬ್ಯಾಟಿಂಗ್.

  • 31 Mar 2026 10:38 PM (IST)

    PBKS vs GT IPL 2026 Live Score: ಸೂಪರ್ ಕೊನೊಲಿ

    ರಶೀದ್ ಖಾನ್ ಎಸೆದ 12ನೇ ಓವರ್​ನ 3ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಆಕರ್ಷಕ ಸಿಕ್ಸ್ ಸಿಡಿಸಿದ ಕೂಪರ್ ಕೊನೊಲಿ.

    ಈ ಸಿಕ್ಸರ್​ನೊಂದಿಗೆ 100 ರನ್​​ಗಳನ್ನು ಪೂರೈಸಿದ ಪಂಜಾಬ್ ಕಿಂಗ್ಸ್.

    12 ಓವರ್​​ಗಳ ಮೂಲಕ ಮುಕ್ತಾಯದ ವೇಳೆಗೆ ಪಂಜಾಬ್ ಕಿಂಗ್ಸ್ ತಂಡದ ಮೊತ್ತ 110 ರನ್​​ಗಳು.

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.

  • 31 Mar 2026 10:31 PM (IST)

    PBKS vs GT IPL 2026 Live Score: ಬ್ಯಾಕ್ ಟು ಬ್ಯಾಕ್ ಸಿಕ್ಸ್​

    ಅಶೋಕ್ ಶರ್ಮಾ ಎಸೆದ 11ನೇ ಓವರ್​ನ 2ನೇ ಮತ್ತು 3ನೇ ಎಸೆತಗಳಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶ್ರೇಯಸ್ ಅಯ್ಯರ್.

    11 ಓವರ್​​ಗಳಲ್ಲಿ 2 ವಿಕೆಟ್ ಕಳೆದುಕೊಂಡು 99 ರನ್ ಕಲೆಹಾಕಿದ ಪಂಜಾಬ್ ಕಿಂಗ್ಸ್.

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.

  • 31 Mar 2026 10:25 PM (IST)

    PBKS vs GT IPL 2026 Live Score: ಪಂಜಾಬ್ ಕಿಂಗ್ಸ್ 2ನೇ ವಿಕೆಟ್ ಪತನ

    ರಶೀದ್ ಖಾನ್ ಎಸೆದ 10ನೇ ಓವರ್​ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಪ್ರಭ್​ಸಿಮ್ರಾನ್ ಸಿಂಗ್.

    24 ಎಸೆತಗಳಲ್ಲಿ 37 ರನ್ ಬಾರಿಸಿ ಪ್ರಭ್​ಸಿಮ್ರಾನ್ ಸಿಂಗ್ ಔಟ್.

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.

  • 31 Mar 2026 10:23 PM (IST)

    PBKS vs GT IPL 2026 Live Score: ಸಿಕ್ಸರ್ ಸ್ವಾಗತ

    ವಾಷಿಂಗ್ಟನ್ ಸುಂದರ್ ಎಸೆದ 9ನೇ ಓವರ್​ನ ಮೊದಲ ಎಸೆತದಲ್ಲೇ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಪ್ರಭ್​ಸಿಮ್ರಾನ್ ಸಿಂಗ್.

    22 ಎಸೆತಗಳಲ್ಲಿ 36 ರನ್ ಬಾರಿಸಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಪ್ರಭ್​ಸಿಮ್ರಾನ್ ಸಿಂಗ್.

    9 ಓವರ್​ಗಳ ಮುಕ್ತಾಯದ ವೇಳೆ ಪಂಜಾಬ್ ಕಿಂಗ್ಸ್ ಸ್ಕೋರ್ 81 ರನ್​​ಗಳು.

    ಕ್ರೀಸ್​ನಲ್ಲಿ ಪ್ರಭ್​ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.

  • 31 Mar 2026 10:17 PM (IST)

    PBKS vs GT IPL 2026 Live Score: ಭರ್ಜರಿ ಸಿಕ್ಸ್

    ವಾಷಿಂಗ್ಟನ್ ಸುಂದರ್ ಎಸೆದ 7ನೇ ಓವರ್​ನ 5ನೇ ಎಸೆತದಲ್ಲಿ ಡೀಪ್ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಪ್ರಭ್​ಸಿಮ್ರಾನ್ ಸಿಂಗ್.

    ಈ ಸಿಕ್ಸರ್​ನೊಂದಿಗೆ ಪಂಜಾಬ್ ಕಿಂಗ್ಸ್ ತಂಡದ ಸ್ಕೋರ್ 64 ಕ್ಕೆ ಏರಿಕೆ.

    ಕ್ರೀಸ್​ನಲ್ಲಿ ಪ್ರಭ್​ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.

  • 31 Mar 2026 10:11 PM (IST)

    PBKS vs GT IPL 2026 Live Score: ಪವರ್​ಪ್ಲೇ ಮುಕ್ತಾಯ

    • ಮೊದಲ 6 ಓವರ್​​ಗಳಲ್ಲಿ 55 ರನ್​ ಚಚ್ಚಿದ ಪಂಜಾಬ್ ಕಿಂಗ್ಸ್
    • ಪ್ರಿಯಾಂಶ್ ಆರ್ಯ (7) ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ ಗುಜರಾತ್ ಟೈಟಾನ್ಸ್
    • ಕ್ರೀಸ್​ನಲ್ಲಿ ಪ್ರಭ್​ಸಿಮ್ರಾನ್ ಸಿಂಗ್ (20) ಹಾಗೂ ಕೂಪರ್ ಕೊನೊಲಿ (27) ಬ್ಯಾಟಿಂಗ್.
    • ಪಂಜಾಬ್ ಕಿಂಗ್ಸ್ ಮುಂದಿದೆ 84 ಎಸೆತಗಳಲ್ಲಿ 108 ರನ್​​ಗಳ ಗುರಿ.
  • 31 Mar 2026 10:07 PM (IST)

    PBKS vs GT IPL 2026 Live Score: ಪಂಜಾಬ್ ಕಿಂಗ್ಸ್ ಭರ್ಜರಿ ಬ್ಯಾಟಿಂಗ್

    ಅಶೋಕ್ ಶರ್ಮಾ ಎಸೆದ 5ನೇ ಓವರ್​ನ 4ನೇ ಎಸೆತದಲ್ಲಿ ಆಫ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಎಡಗೈ ದಾಂಡಿಗ ಕೂಪರ್ ಕೊನೊಲಿ.

    5 ಓವರ್​ಗಳಲ್ಲಿ ಅರ್ಧಶತಕ ಪೂರೈಸಿದ ಪಂಜಾಬ್ ಕಿಂಗ್ಸ್.

    ಕ್ರೀಸ್​ನಲ್ಲಿ ಪ್ರಭ್​ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.

  • 31 Mar 2026 10:00 PM (IST)

    PBKS vs GT IPL 2026 Live Score: ಸಿಕ್ಸರ್ ಸಿಮ್ರಾನ್

    ಕಗಿಸೊ ರಬಾಡ ಎಸೆದ 4 ಓವರ್​ನ ಮೊದಲೆರಡು ಎಸೆತಗಳಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಪ್ರಭ್​ಸಿಮ್ರಾನ್ ಸಿಂಗ್.

    ಕೊನೆಯ ಎಸೆತದಲ್ಲಿ ಡೀಪ್ ಕವರ್​ನತ್ತ ಸಿಕ್ಸ್ ಬಾರಿಸಿದ ಕೂಪರ್ ಕೊನೊಲಿ.

    ರಬಾಡರ ಒಂದೇ ಓವರ್​ನಲ್ಲಿ 19 ರನ್ ಚಚ್ಚಿದ ಪಂಜಾಬ್ ಕಿಂಗ್ಸ್ ದಾಂಡಿಗರು.

  • 31 Mar 2026 09:56 PM (IST)

    PBKS vs GT IPL 2026 Live Score: ಕೊನೊಲಿ ಮಾರ್ಕ್​

    ಮೊಹಮ್ಮದ್ ಸಿರಾಜ್ ಎಸೆದ 3ನೇ ಓವರ್​ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ಕೂಪರ್ ಕೊನೊಲಿ.

    3 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 18 ರನ್ ಕಲೆಹಾಕಿರುವ ಪಂಜಾಬ್ ಕಿಂಗ್ಸ್.

    ಕ್ರೀಸ್​ನಲ್ಲಿ ಪ್ರಭ್​ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.

  • 31 Mar 2026 09:48 PM (IST)

    PBKS vs GT IPL 2026 Live Score: ಪಂಜಾಬ್ ಕಿಂಗ್ಸ್ ಮೊದಲ ವಿಕೆಟ್ ಪತನ

    ಕಗಿಸೊ ರಬಾಡ ಎಸೆದ 2ನೇ ಓವರ್​ನ 2ನೇ ಎಸೆತದಲ್ಲಿ ಫ್ರಂಟ್ ಫೀಲ್ಡರ್​ಗೆ ಕ್ಯಾಚ್ ನೀಡಿ ಹೊರ ನಡೆದ ಪ್ರಿಯಾಂಶ್ ಆರ್ಯಾ (7).

    ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದ ರಬಾಡ.

    ಕ್ರೀಸ್​ನಲ್ಲಿ ಪ್ರಭ್​ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.

    ಮೊದಲ 2 ಓವರ್​​ಗಳಲ್ಲಿ 10 ರನ್ ಕಲೆಹಾಕಿರುವ ಪಂಜಾಬ್ ಕಿಂಗ್ಸ್.

  • 31 Mar 2026 09:45 PM (IST)

    PBKS vs GT IPL 2026 Live Score: ಪಂಜಾಬ್ ಕಿಂಗ್ಸ್ ಇನಿಂಗ್ಸ್​ ಶುರು

    • ಪಂಜಾಬ್ ಕಿಂಗ್ಸ್​ ಆರಂಭಿಕರು: ಪ್ರಭ್​ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ
    • ಮೊದಲ ಓವರ್​: ಮೊಹಮ್ಮದ್ ಸಿರಾಜ್
    • ಮೊದಲ ಓವರ್​ನಲ್ಲಿ 7 ರನ್​ ಕಲೆಹಾಕಿದ ಪಂಜಾಬ್ ಕಿಂಗ್ಸ್
  • 31 Mar 2026 09:26 PM (IST)

    PBKS vs GT IPL 2026 Live Score: ಗುಜರಾತ್ ಟೈಟಾನ್ಸ್ ಇನಿಂಗ್ಸ್​ ಅಂತ್ಯ

    • 20 ಓವರ್​​ಗಳಲ್ಲಿ 6 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿದ ಗುಜರಾತ್ ಟೈಟಾನ್ಸ್​.
    • ಪಂಜಾಬ್ ಕಿಂಗ್ಸ್ ತಂಡಕ್ಕೆ 163 ರನ್​ಗಳ ಗುರಿ.
    • ಪಂಜಾಬ್ ಪರ 4 ಓವರ್​ಗಳಲ್ಲಿ 34 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದ ಕನ್ನಡಿಗ ವೈಶಾಕ್ ವಿಜಯಕುಮಾರ್.
  • 31 Mar 2026 09:06 PM (IST)

    PBKS vs GT IPL 2026 Live Score: ಗುಜರಾತ್ ಟೈಟಾನ್ಸ್​ 6ನೇ ವಿಕೆಟ್ ಪತನ

    ವೈಶಾಕ್ ವಿಜಯಕುಮಾರ್ ಎಸೆದ 19ನೇ ಓವರ್​ನ ಮೊದಲ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ವಾಷಿಂಗ್ಟನ್ ಸುಂದರ್ (18).

    19ನೇ ಓವರ್​ನ ಕೊನೆಯ ಎಸೆತದಲ್ಲಿ ಶಾರೂಖ್ ಖಾನ್ (4) ಔಟ್.

    4 ಓವರ್​ಗಳಲ್ಲಿ 34 ರನ್ ನೀಡಿ 3 ವಿಕೆಟ್ ಕಬಳಿಸಿದ ಕನ್ನಡಿಗ ವೈಶಾಕ್ ವಿಜಯಕುಮಾರ್.

    ಕ್ರೀಸ್​ನಲ್ಲಿ ರಾಹುಲ್ ತೆವಾಟಿಯಾ ಹಾಗೂ ಶಾರೂಖ್ ಖಾನ್ ಬ್ಯಾಟಿಂಗ್.

    ಗುಜರಾತ್ ಟೈಟಾನ್ಸ್: 150/6 (19)

  • 31 Mar 2026 09:05 PM (IST)

    PBKS vs GT IPL 2026 Live Score: 12 ಎಸೆತಗಳು ಬಾಕಿ

    18 ಓವರ್​​ಗಳಲ್ಲಿ 4 ವಿಕೆಟ್ ಕಳೆದುಕೊಂಡು 144 ರನ್ ಕಲೆಹಾಕಿರುವ ಗುಜರಾತ್ ಟೈಟಾನ್ಸ್.

    ಕೊನೆಯ ಎರಡು ಓವರ್​​ಗಳು ಮಾತ್ರ ಬಾಕಿ.

    ಪಂಜಾಬ್ ಕಿಂಗ್ಸ್ ಉತ್ತಮ ಬೌಲಿಂಗ್.

    ಕ್ರೀಸ್​ನಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಶಾರೂಖ್ ಖಾನ್ ಬ್ಯಾಟಿಂಗ್

  • 31 Mar 2026 09:00 PM (IST)

    PBKS vs GT IPL 2026 Live Score: ಕೇವಲ 6 ರನ್ ನೀಡಿದ ಯಾನ್ಸೆನ್

    17ನೇ ಓವರ್​ನಲ್ಲಿ ಕೇವಲ 6 ರನ್ ಮಾತ್ರ ನೀಡಿದ ಎಡಗೈ ವೇಗಿ ಮಾರ್ಕೊ ಯಾನ್ಸೆನ್.

    ಕ್ರೀಸ್​ನಲ್ಲಿ ಶಾರೂಖ್ ಖಾನ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್.

    ಕೊನೆಯ ಮೂರು ಓವರ್​ಗಳು ಮಾತ್ರ ಬಾಕಿ.

  • 31 Mar 2026 08:53 PM (IST)

    PBKS vs GT IPL 2026 Live Score: ಜೋಸ್ ಬಟ್ಲರ್ ಔಟ್

    ಯುಜ್ವೇಂದ್ರ ಚಹಲ್ ಎಸೆದ 16ನೇ ಓವರ್​ನ 4ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಜೋಸ್ ಬಟ್ಲರ್.

    ಬೌಂಡರಿ ಲೈನ್​ನಲ್ಲಿ ಕ್ಸೇವಿಯರ್ ಬಾರ್ಟ್ಲೆಟ್ ಅತ್ಯುತ್ತಮ ಕ್ಯಾಚ್.

    33 ಎಸೆತಗಳಲ್ಲಿ 38 ರನ್ ಬಾರಿಸಿ ಜೋಸ್ ಬಟ್ಲರ್ ಔಟ್.

    ಪಂಜಾಬ್ ಕಿಂಗ್ಸ್ ತಂಡಕ್ಕೆ 4ನೇ ಯಶಸ್ಸು.

    ಗುಜರಾತ್ ಟೈಟಾನ್ಸ್: 131/4 (16)

  • 31 Mar 2026 08:47 PM (IST)

    PBKS vs GT IPL 2026 Live Score: 5 ಓವರ್​ಗಳು ಬಾಕಿ

    ಅರ್ಷದೀಪ್ ಇಸಂಗ್ ಎಸೆದ 15ನೇ ಓವರ್​ನ 3ನೇ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಫೋರ್ ಬಾರಿಸಿದ ವಾಷಿಂಗ್ಟನ್ ಸುಂದರ್.

    15 ಓವರ್​​ಗಳ ಮುಕ್ತಾಯದ ವೇಳೆಗೆ ಗುಜರಾತ್ ಟೈಟಾನ್ಸ್ ಸ್ಕೋರ್ 128 ರನ್​​ಗಳು.

    ಕ್ರೀಸ್​ನಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್.

  • 31 Mar 2026 08:41 PM (IST)

    PBKS vs GT IPL 2026 Live Score: ಗುಜರಾತ್ ಟೈಟಾನ್ಸ್ 3ನೇ ವಿಕೆಟ್ ಪತನ

    ವೈಶಾಕ್ ವಿಜಯಕುಮಾರ್ ಯಾದವ್ ಎಸೆದ 14ನೇ ಓವರ್​ನ ಕೊನೆಯ ಎಸೆತದಲ್ಲಿ ಡೀಪ್ ಮಿಡ್ ಆಫ್​ನಲ್ಲಿ ಕ್ಯಾಚ್ ನೀಡಿದ ಗ್ಲೆನ್ ಫಿಲಿಪ್ಸ್​ (25).

    ಗುಜರಾತ್ ಟೈಟಾನ್ಸ್ ತಂಡದ ಮೂರನೇ ವಿಕೆಟ್ ಪತನ.

    14 ಓವರ್​ಗಳಲ್ಲಿ 119 ರನ್ ನೀಡಿರುವ ಪಂಜಾಬ್ ಕಿಂಗ್ಸ್.

  • 31 Mar 2026 08:29 PM (IST)

    PBKS vs GT IPL 2026 Live Score: ಭರ್ಜರಿ ಸಿಕ್ಸರ್

    ಯುಜ್ವೇಂದ್ರ ಚಹಲ್ ಎಸೆದ 12ನೇ ಓವರ್​ನ ಮೊದಲ ಎಸೆತದಲ್ಲೇ ಭರ್ಜರಿ ಸಿಕ್ಸ್ ಸಿಡಿಸಿದ ಗ್ಲೆನ್ ಫಿಲಿಪ್ಸ್​.

    ಇದೇ ಓವರ್​ನ 5ನೇ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಫೋರ್ ಬಾರಿಸಿದ ಫಿಲಿಪ್ಸ್.

    ಈ ಫೋರ್​ನೊಂದಿಗೆ ಶತಕ ಪೂರೈಸಿದ ಗುಜರಾತ್ ಟೈಟಾನ್ಸ್.

    ಗುಜರಾತ್ ಟೈಟಾನ್ಸ್: 102/2 (12)

  • 31 Mar 2026 08:27 PM (IST)

    PBKS vs GT IPL 2026 Live Score: 11 ಓವರ್​ಗಳು ಮುಕ್ತಾಯ

    • 11 ಓವರ್​ಗಳ ಮುಕ್ತಾಯದ ವೇಳೆಗೆ 89 ರನ್ ಕಲೆಹಾಕಿರುವ ಗುಜರಾತ್ ಟೈಟಾನ್ಸ್​
    • ಸಾಯಿ ಸುದರ್ಶನ್ ಹಾಗೂ ಶುಭ್​ಮನ್ ಗಿಲ್ ವಿಕೆಟ್ ಪಡೆದಿರುವ ಪಂಜಾಬ್ ಕಿಂಗ್ಸ್
    • ಕ್ರೀಸ್​ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್
  • 31 Mar 2026 08:19 PM (IST)

    PBKS vs GT IPL 2026 Live Score: ಗುಜರಾತ್ ಟೈಟಾನ್ಸ್ 2ನೇ ವಿಕೆಟ್ ಪತನ

    ಯುಜ್ವೇಂದ್ರ ಚಹಲ್ ಎಸೆದ 10ನೇ ಓವರ್​ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಡೀಪ್ ಮಿಡ್ ವಿಕೆಟ್ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಶುಭ್​ಮನ್ ಗಿಲ್.

    27 ಎಸೆತಗಳಲ್ಲಿ 39 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಶುಭ್​ಮನ್​ ಗಿಲ್.

    ಕ್ರೀಸ್​ನಲ್ಲಿ ಜೋಸ್ ಬಟ್ಲರ್ ಹಾಗೂ ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್.

  • 31 Mar 2026 08:06 PM (IST)

    PBKS vs GT IPL 2026 Live Score: ಮೊದಲ ಸಿಕ್ಸ್​

    ವೈಶಾಕ್ ವಿಜಯಕುಮಾರ್ ಎಸೆದ 7ನೇ ಓವರ್​ನ 3ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಜೋಸ್ ಬಟ್ಲರ್.

    ಇದು ಗುಜರಾತ್ ಟೈಟಾನ್ಸ್ ಇನಿಂಗ್ಸ್​ನ ಮೊದಲ ಸಿಕ್ಸ್.

    ಕ್ರೀಸ್​ನಲ್ಲಿ ಶುಭ್​​ಮನ್ ಗಿಲ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್.

  • 31 Mar 2026 08:01 PM (IST)

    PBKS vs GT IPL 2026 Live Score: ಪವರ್​ಪ್ಲೇ ಮುಕ್ತಾಯ

    • ಮೊದಲ 6 ಓವರ್​​ಗಳಲ್ಲಿ 54 ರನ್ ಕಲೆಹಾಕಿದ ಗುಜರಾತ್ ಟೈಟಾನ್ಸ್​
    • ಸಾಯಿ ಸುದರ್ಶನ್ (13) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಪಂಜಾಬ್ ಕಿಂಗ್ಸ್​
    • ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ (28) ಹಾಗೂ ಜೋಸ್ ಬಟ್ಲರ್ (11) ಬ್ಯಾಟಿಂಗ್

    ಗುಜರಾತ್ ಟೈಟಾನ್ಸ್​:  54/1 (6)

  • 31 Mar 2026 07:55 PM (IST)

    PBKS vs GT IPL 2026 Live Score: ಬಟ್ಲರ್ ಬ್ಯೂಟಿ

    ವೈಶಾಕ್ ವಿಜಯಕುಮಾರ್ ಎಸೆದ 5ನೇ ಓವರ್​ನ 3ನೇ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಆಕರ್ಷಕ ಫೋರ್ ಬಾರಿಸಿದ ಜೋಸ್ ಬಟ್ಲರ್.

    5 ಓವರ್​ಗಳ ಮುಕ್ತಾಯದ ವೇಳೆಗೆ ಗುಜರಾತ್ ಟೈಟಾನ್ಸ್ ಸ್ಕೋರ್ 47 ರನ್​ಗಳು.

    ಕ್ರೀಸ್​ನಲ್ಲಿ ಶುಭ್​​ಮನ್ ಗಿಲ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್.

  • 31 Mar 2026 07:49 PM (IST)

    PBKS vs GT IPL 2026 Live Score: ಗುಜರಾತ್ ಟೈಟಾನ್ಸ್ ಮೊದಲ ವಿಕೆಟ್ ಪತನ

    ಮಾರ್ಕೊ ಯಾನ್ಸೆನ್ ಎಸೆದ 4ನೇ ಓವರ್​ನ 4ನೇ ಎಸೆತದಲ್ಲಿ ಶ್ರೇಯಸ್ ಅಯ್ಯರ್​ಗೆ ಸುಲಭ ಕ್ಯಾಚ್ ನೀಡಿ ಹೊರ ನಡೆದ ಸಾಯಿ ಸುದರ್ಶನ್ (13).

    ಪಂಜಾಬ್ ಕಿಂಗ್ಸ್ ತಂಡಕ್ಕೆ ಮೊದಲ ಯಶಸ್ಸು.

    ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋಸ್ ಬಟ್ಲರ್.

  • 31 Mar 2026 07:44 PM (IST)

    PBKS vs GT IPL 2026 Live Score: ಫೋರ್​ಗಳ ಸುರಿಮಳೆ

    ಮೊದಲ ಮೂರು ಓವರ್​ಗಳಲ್ಲಿ 6 ಫೋರ್​ಗಳನ್ನು ಬಾರಿಸಿದ ಗುಜರಾತ್ ಟೈಟಾನ್ಸ್ ಆರಂಭಿಕರು.

    ಮೂರು ಓವರ್​ಗಳ ಮುಕ್ತಾಯದ ವೇಳೆಗೆ ಗುಜರಾತ್ ಟೈಟಾನ್ಸ್ ಸ್ಕೋರ್ 35 ರನ್​ಗಳು.

    ಕ್ರೀಸ್​ನಲ್ಲಿ ಶುಭ್​​ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಬ್ಯಾಟಿಂಗ್.

    ಗುಜರಾತ್ ಟೈಟಾನ್ಸ್​:  350(3)

  • 31 Mar 2026 07:39 PM (IST)

    PBKS vs GT IPL 2026 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ

    ಕ್ಸೇವಿಯರ್ ಬಾರ್ಟ್ಲೆಟ್ ಎಸೆದ 2ನೇ ಓವರ್​ನ 2ನೇ, 3ನೇ ಮತ್ತು 6ನೇ ಎಸೆತಗಳಲ್ಲಿ ಆಕರ್ಷಕ ಫೋರ್ ಬಾರಿಸಿದ ಶುಭ್​​ಮನ್ ಗಿಲ್.

    ದ್ವಿತೀಯ ಓವರ್​ನಲ್ಲಿ 14 ರನ್ ಕಲೆಹಾಕಿದ ಗುಜರಾತ್ ಟೈಟಾನ್ಸ್.

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಬ್ಯಾಟಿಂಗ್.

  • 31 Mar 2026 07:35 PM (IST)

    PBKS vs GT IPL 2026 Live Score: ಮೊದಲ ಬೌಂಡರಿ

    ಎಡಗೈ ವೇಗಿ ಅರ್ಷದೀಪ್ ಸಿಂಗ್ ಎಸೆದ ಮೊದಲ ಓವರ್​ನ 3ನೇ ಎಸೆತದಲ್ಲಿ ಸಾಯಿ ಸುದರ್ಶನ್ ಲೆಗ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ್ದಾರೆ.

    ಮೊದಲ ಓವರ್ ಮುಕ್ತಾಯದ ವೇಳೆಗೆ ಗುಜರಾತ್ ತಂಡದ ಸ್ಕೋರ್ 9 ರನ್​ಗಳು.

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಬ್ಯಾಟಿಂಗ್

    ಗುಜರಾತ್ ಟೈಟಾನ್ಸ್-  90(1)

  • 31 Mar 2026 07:33 PM (IST)

    PBKS vs GT IPL 2026 Live Score: ಗುಜರಾತ್ ಟೈಟಾನ್ಸ್ ಇನಿಂಗ್ಸ್ ಆರಂಭ

    •  ಗುಜರಾತ್ ಟೈಟಾನ್ಸ್ ಆರಂಭಿಕರು: ಸಾಯಿ ಸುದರ್ಶನ್, ಶುಭ್​​ಮನ್ ಗಿಲ್
    • ಪಂಜಾಬ್ ಕಿಂಗ್ಸ್ ಮೊದಲ ಓವರ್: ಅರ್ಷದೀಪ್ ಸಿಂಗ್
  • 31 Mar 2026 07:23 PM (IST)

    PBKS vs GT IPL 2026 Live Score: ಟಾಸ್ ಗೆದ್ದ ಶ್ರೇಯಸ್ ಅಯ್ಯರ್

    ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಗುಜರಾತ್ ಟೈಟಾನ್ಸ್ ಮೊದಲು ಬ್ಯಾಟಿಂಗ್ ಮಾಡಲಿದೆ.

  • 31 Mar 2026 07:13 PM (IST)

    PBKS vs GT IPL 2026 Live Score: ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11

    ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಸಾಯಿ ಸುದರ್ಶನ್, ಶುಭ್​ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಅಶೋಕ್ ಶರ್ಮಾ, ಮೊಹಮ್ಮದ್ ಸಿರಾಜ್.

  • 31 Mar 2026 07:13 PM (IST)

    PBKS vs GT IPL 2026 Live Score: ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11

    ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವೈಶಾಕ್ ವಿಜಯಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.

  • 31 Mar 2026 07:02 PM (IST)

    PBKS vs GT IPL 2026 Live Score: ಟಾಸ್ ಗೆದ್ದ ಪಂಜಾಬ್ ಕಿಂಗ್ಸ್

    ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 31 Mar 2026 06:49 PM (IST)

    PBKS vs GT IPL 2026 Live Score: ಹೆಡ್ ಟು ಹೆಡ್

    ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಈವರೆಗೆ 6 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಪಂಜಾಬ್ ಕಿಂಗ್ಸ್ ತಂಡ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಗುಜರಾತ್ ಟೈಟಾನ್ಸ್ 3 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

  • 31 Mar 2026 06:19 PM (IST)

    PBKS vs GT IPL 2026 Live Score: ಪಂಜಾಬ್ ಕಿಂಗ್ಸ್ ತಂಡ

    ಪಂಜಾಬ್ ಕಿಂಗ್ಸ್ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಪ್ರಭ್​ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಅಝ್ಮತುಲ್ಲಾ ಒಮರ್​ಝಾಹಿ, ಮಾರ್ಕೊ ಯಾನ್ಸೆನ್, ಹರ್ಪ್ರೀತ್ ಬ್ರಾರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮುಶೀರ್ ಖಾನ್, ಪ್ಯಾಲಾ ಅವಿನಾಶ್, ಹರ್ನೂರ್ ಪನ್ನು, ಸೂರ್ಯಾಂಶ್ ಶೆಡ್ಗೆ, ಮಿಚೆಲ್ ಓವನ್, ಕ್ಸೇವಿಯರ್ ಬಾರ್ಟ್ಲೆಟ್, ಲಾಕಿ ಫರ್ಗುಸನ್, ವೈಶಾಕ್ ವಿಜಯ್‌ಕುಮಾರ್, ಯಶ್ ಠಾಕೂರ್, ವಿಷ್ಣು ವಿನೋದ್, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ಪ್ರವೀಣ್ ದುಬೆ, ವಿಶಾಲ್ ನಿಶಾದ್.

  • 31 Mar 2026 06:18 PM (IST)

    PBKS vs GT IPL 2026 Live Score: ಗುಜರಾತ್ ಟೈಟಾನ್ಸ್ ತಂಡ

    ಗುಜರಾತ್ ಟೈಟಾನ್ಸ್ ತಂಡ: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಕುಮಾರ್ ಕುಶಾಗ್ರಾ, ಅನುಜ್ ರಾವತ್, ಜೋಸ್ ಬಟ್ಲರ್, ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಅರ್ಷದ್ ಖಾನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ, ಗುರ್ನೂರ್ ಸಿಂಗ್ ಬ್ರಾರ್, ರಶೀದ್ ಖಾನ್, ಮಾನವ್ ಸುತಾರ್, ಸಾಯಿ ಕಿಶೋರ್, ಜಯಂತ್ ಯಾದವ್, ಅಶೋಕ್ ಶರ್ಮಾ, ಜೇಸನ್ ಹೋಲ್ಡರ್, ಟಾಮ್ ಬ್ಯಾಂಟನ್, ಪೃಥ್ವಿ ರಾಜ್ ಯಾರ್ರಾ, ಲ್ಯೂಕ್ ವುಡ್.

  • 31 Mar 2026 06:15 PM (IST)

    PBKS vs GT IPL 2026 Live Score: ಮುಲ್ಲನ್​ಪುರ್ ಪಿಚ್ ರೆಡಿ

    ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಣ ಪಂದ್ಯಕ್ಕೆ ಮುಲ್ಲನ್​ಪುರ್​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿನ ಪಿಚ್ ರೆಡಿ.

  • 31 Mar 2026 06:05 PM (IST)

    PBKS vs GT IPL 2026 Live Score: ಪಂಜಾಬ್ ಕಿಂಗ್ಸ್ vs ಗುಜರಾತ್ ಗುಜರಾತ್ ಟೈಟಾನ್ಸ್

    • ಐಪಿಎಲ್​ನ 4ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ ಮುಖಾಮುಖಿ
    • ಚಂಡೀಗಢ್​ನ ಮುಲ್ಲನ್​ಪುರ್​ನ ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂನಲ್ಲಿ ಪಂದ್ಯ
    • ಐಪಿಎಲ್ 2026ರಲ್ಲಿ ಉಭಯ ತಂಡಗಳ ಮೊದಲ ಮ್ಯಾಚ್
    • ಗೆಲುವಿನೊಂದಿಗೆ ಶುಭಾರಂಭ ಮಾಡುವ ಇರಾದೆಯಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್.

Published On - Mar 31,2026 6:03 PM

Follow Us
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಇಡಿ ದಾಳಿ ನಂತರ ನಲಪಾಡ್ ಸ್ಫೋಟಕ ಹೇಳಿಕೆ
ಇಡಿ ದಾಳಿ ನಂತರ ನಲಪಾಡ್ ಸ್ಫೋಟಕ ಹೇಳಿಕೆ