AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ನೋಡಿದ ಬೆಸ್ಟ್ ಕ್ಯಾಚ್’; ಶ್ರೇಯಸ್ ಹಿಡಿದ ಕ್ಯಾಚ್​​ಗೆ ಸಲಾಂ ಹೊಡದ ಕ್ರಿಕೆಟ್ ದೇವರು

Shreyas Iyer's IPL 2026 Masterpiece Catch:ಐಪಿಎಲ್ 2026ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಶ್ರೇಯಸ್ ಅಯ್ಯರ್ ಅದ್ಭುತ ಕ್ಯಾಚ್ ಹಿಡಿದರು. ಬೌಂಡರಿ ಬಳಿ ಗಾಳಿಯಲ್ಲಿ ಚೆಂಡನ್ನು ಹಿಡಿದು, ಅದನ್ನು ಸಹ ಆಟಗಾರನ ಕಡೆಗೆ ಎಸೆದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅವರ ಈ ಸಮಯಪ್ರಜ್ಞೆ ಮತ್ತು ಫಿಟ್‌ನೆಸ್‌ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದನ್ನು ತಮ್ಮ ಜೀವನದಲ್ಲಿ ನೋಡಿದ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಒಂದೆಂದು ಬಣ್ಣಿಸಿದ್ದಾರೆ.

‘ನಾನು ನೋಡಿದ ಬೆಸ್ಟ್ ಕ್ಯಾಚ್’; ಶ್ರೇಯಸ್ ಹಿಡಿದ ಕ್ಯಾಚ್​​ಗೆ ಸಲಾಂ ಹೊಡದ ಕ್ರಿಕೆಟ್ ದೇವರು
Sachin Tendulkar
ಪೃಥ್ವಿಶಂಕರ
|

Updated on:Apr 17, 2026 | 4:00 PM

Share

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 2026 (IPL 2026) ರ 24ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಪಂಜಾಬ್ ಕಿಂಗ್ಸ್ (MI vs PBKS) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅಸಾಧಾರಣ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಶ್ರೇಯಸ್ ಅಯ್ಯರ್ ಹಿಡಿದ ಈ ಅದ್ಭುತ ಕ್ಯಾಚ್​ ಅನ್ನು ನೋಡಿದ ಮುಂಬೈ ತಂಡದ ಆಟಗಾರರು ಕೂಡ ದಿಗ್ಭ್ರಮೆಗೊಂಡಿದ್ದರು. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಅವರ ಸಮಯ ಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಕೂಡ ಶ್ರೇಯಸ್ ಅಯ್ಯರ್ ಅವರನ್ನು ಹಾಡಿ ಹೊಗಳಿದಿದ್ದಾರೆ.

ವಾಸ್ತವವಾಗಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಲಾಂಗ್ ಆನ್ ಕಡೆಗೆ ಬಿಗ್ ಶಾಟ್ ಆಡಿದರು. ಈ ವೇಳೆ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಶ್ರೇಯಸ್ ಅಯ್ಯರ್ ಗಾಳಿಯಲ್ಲಿ ಹಾರಿ ಮೊದಲು ಚೆಂಡನ್ನು ಹಿಡಿದರು. ಆ ನಂತರ, ತಾನು ಬೌಂಡರಿ ಲೈನ್‌ ಅನ್ನು ದಾಡುತ್ತಿರುವುದನ್ನು ಗಮನಿಸಿದ ಶ್ರೇಯಸ್ ಗಾಳಿಯಲ್ಲಿ ಇರುವಾಗಲೇ ಚೆಂಡನ್ನು ಮೇಲಕ್ಕೆ ಎಸೆದರು. ಈ ವೇಳೆ ಅಲ್ಲಿಯೇ ಇದ್ದ ಕ್ಸೇವಿಯರ್ ಬಾರ್ಟ್ಲೆಟ್ ಕ್ಯಾಚ್ ಪೂರ್ಣಗೊಳಿಸಿದ್ದರು.

IPL 2026: ಐಪಿಎಲ್‌ನಲ್ಲಿ ವಿಶೇಷ ತ್ರಿಶತಕ ಬಾರಿಸುವ ಹೊಸ್ತಿಲಿನಲ್ಲಿ ವಿರಾಟ್ ಕೊಹ್ಲಿ

ನಾನು ಲೈವ್ ಆಗಿ ನೋಡಿದ ಅತ್ಯುತ್ತಮ ಕ್ಯಾಚ್‌

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಚಿನ್ ತೆಂಡೂಲ್ಕರ್, ‘ಶ್ರೇಯಸ್ ಅಯ್ಯರ್ ಅವರ ಕ್ಯಾಚ್ ಕೇವಲ ಕ್ರೀಡಾಶೀಲತೆಯ ಬಗ್ಗೆ ಮಾತ್ರವಲ್ಲ, ಬದಲಿಗೆ ಆ ಕ್ಯಾಚ್ ಹಿಡಿಯುವಾಗ ಅವರು ಎಷ್ಟು ಜಾಗರೂಕರಾಗಿದ್ದರು ಎಂಬುದನ್ನು ತೋರಿಸುತ್ತದೆ. ಏಕೆಂದರೆ ಶ್ರೇಯಸ್ ಆ ಚೆಂಡಿನ ವೇಗ, ಎತ್ತರ, ಬೌಂಡರಿ ಲೈನ್ ಎಲ್ಲಿದೆ? ಎಂಬುದನ್ನೆಲ್ಲ ಗಮನದಲ್ಲಿಟ್ಟುಕೊಂಡಿರಬೇಕಿತ್ತು. ಇದರ ಜೊತೆಗೆ ಬೌಂಡರಿ ಲೈನ್​ಗೆ ತುಂಬಾ ಹತ್ತಿರದಲ್ಲೇ ಶ್ರೇಯಸ್ ಅವರ ಕಾಲಿತ್ತು. ಇದರಿಂದ ಅವರ ಕಾಲು ಬೌಂಡರಿ ಲೈನ್​ಗೆ ತಾಗುವುದಕ್ಕೂ ಮೊದಲು, ಗಾಳಿಯಲಿದ್ದಾಗಲೇ ಚೆಂಡನ್ನು ತಂಡದ ಸಹ ಆಟಗಾರನ ಕಡೆಗೆ ಎಸೆದರು. ಅಂದರೆ ಶ್ರೇಯಸ್ ಇದೆಲ್ಲದರ ನಡುವೆ ಸಹ ಆಟಗಾರ ಎಲ್ಲಿದ್ದಾನೆ ಎಂಬುದನ್ನು ಗಮನಿಸಿದ್ದರು. ಇದೆಲ್ಲವನ್ನು ಕ್ಷಣ ಮಾತ್ರದಲ್ಲಿ ಮಾಡಬೇಕಿತ್ತು. ಶ್ರೇಯಸ್ ಇದೆಲ್ಲವನ್ನು ಮಾಡಲು ಸಾಧ್ಯವಾಗಿದ್ದು, ಅವರ ಸಮಯಪ್ರಜ್ಞೆ, ಫಿಟ್‌ನೆಸ್​ನಿಂದ. ನಾನು ಲೈವ್ ಆಗಿ ನೋಡಿದ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಇದು ಒಂದು!’ ಎಂದು ಬರೆದುಕೊಂಡಿದ್ದಾರೆ.

Published On - 3:55 pm, Fri, 17 April 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ