AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವಿಶ್ವ ದಾಖಲೆ: ಟಿ20 ಕ್ರಿಕೆಟ್​ನಲ್ಲಿ ಇತಿಹಾಸ ಬರೆದ ಸ್ಮೃತಿ-ಶಫಾಲಿ

ಮಹಿಳಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅದ್ಭುತ ಮತ್ತು ಅಪರೂಪದ ಮಹಾ ದಾಖಲೆಯೊಂದಕ್ಕೆ ಭಾರತ ಸಾಕ್ಷಿಯಾಗಿದೆ. ಟೀಮ್ ಇಂಡಿಯಾದ 'ಡೈನಮಿಕ್ ಓಪನರ್ಸ್' ಎಂದೇ ಖ್ಯಾತರಾಗಿರುವ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಜೋಡಿ ಸಾವಿರ ರನ್​ಗಳೊಂದಿಗೆ ಜಾಗತಿಕ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಹೊಸ ವಿಶ್ವ ದಾಖಲೆ: ಟಿ20 ಕ್ರಿಕೆಟ್​ನಲ್ಲಿ ಇತಿಹಾಸ ಬರೆದ ಸ್ಮೃತಿ-ಶಫಾಲಿ
Smriti Mandhana - Shafali VermaImage Credit source: BCCI
ಝಾಹಿರ್ ಯೂಸುಫ್
|

Updated on: Oct 19, 2026 | 8:00 AM

Share

ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಮಹಿಳಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ. ಅದು ಸಹ ಸಾವಿರ ರನ್​ಗಳ ಸಾಧನೆಯೊಂದಿಗೆ ಎಂಬುದು ವಿಶೇಷ.

ಝಿಂಬಾಬ್ವೆ ವಿರುದ್ಧ ರಾಯ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಮೊದಲ ವಿಕೆಟ್​ಗೆ 96 ರನ್ ಪೇರಿಸಿದ್ದರು. ಈ ಭರ್ಜರಿ ಜೊತೆಯಾಟದೊಂದಿಗೆ ಈ ಜೋಡಿಯು 2026 ರಲ್ಲಿ ಟಿ20 ಕ್ರಿಕೆಟ್​ನಲ್ಲಿ 1000 ರನ್​ಗಳನ್ನು ಪೂರೈಸಿದ್ದಾರೆ. ಈ ಸಾವಿರ ರನ್​ಗಳೇ ಇಬ್ಬರನ್ನು ವಿಶ್ವ ದಾಖಲೆಯತ್ತ ಕೊಂಡೊಯ್ದಿದೆ.

ಹೊಸ ವಿಶ್ವ ದಾಖಲೆ:

ದಾಖಲೆಯ ಜೊತೆಯಾಟ: ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸ್ಮೃತಿ-ಶಫಾಲಿ ನೀಡಿದ 96 ರನ್‌ಗಳ ಕೊಡುಗೆಯು, 2026ರ ಕ್ಯಾಲೆಂಡರ್ ವರ್ಷದಲ್ಲಿ ಈ ಜೋಡಿಯ 9ನೇ 50+ ರನ್‌ಗಳ ಜೊತೆಯಾಟವಾಗಿದೆ. ಈ ಮೂಲಕ ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದೇ ವರ್ಷದಲ್ಲಿ ಅತಿ ಹೆಚ್ಚು ಬಾರಿ 50 ಪ್ಲಸ್ ರನ್‌ಗಳ ಜೊತೆಯಾಟವಾಡಿದ ಜಗತ್ತಿನ ಏಕೈಕ ಜೋಡಿ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

1000 ರನ್​ಗಳ ವಿಶ್ವ ದಾಖಲೆ: ಮಹಿಳಾ ಟಿ20 ಕ್ರಿಕೆಟ್​ನಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಕಲೆಹಾಕಿದ ವಿಶ್ವದ ಮೊದಲ ಜೋಡಿ ಎಂಬ ಹೆಗ್ಗಳಿಕೆಯನ್ನು ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ತಮ್ಮದಾಗಿಸಿಕೊಂಡಿದ್ದಾರೆ.

ಶಫಾಲಿ ವರ್ಮಾ ಅಬ್ಬರ: ಈ ವರ್ಷ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರ ಬ್ಯಾಟಿಂಗ್ ಅಬ್ಬರ ಜೋರಾಗಿದ್ದು, ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಅವರು ಈ ವರ್ಷ ಒಟ್ಟು 922 ರನ್‌ಗಳನ್ನು ಬಾರಿಸಿ ಅಪ್ರತಿಮ ಫಾರ್ಮ್‌ನಲ್ಲಿದ್ದಾರೆ.

4,000 ರನ್‌ಗಳ ಮೈಲಿಗಲ್ಲು: ಕೇವಲ ಒಂದೇ ವರ್ಷದ ಸಾಧನೆ ಮಾತ್ರವಲ್ಲದೆ, ಒಟ್ಟಾರೆ ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ 4,000 ಕ್ಕೂ ಹೆಚ್ಚು ಜೊತೆಯಾಟದ ರನ್ ಕಲೆಹಾಕಿದ ಜಗತ್ತಿನ ಮೊದಲ ಜೋಡಿ ಎಂಬ ಸಾರ್ವಕಾಲಿಕ ದಾಖಲೆಯನ್ನೂ ಸ್ಮೃತಿ ಮತ್ತು ಶಫಾಲಿ ಜೋಡಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: WCL 2026: ವೆಸ್ಟ್ ಇಂಡೀಸ್ ‘ಚಾಂಪಿಯನ್ಸ್​’

ಒಟ್ಟಾರೆಯಾಗಿ, ಸ್ಮೃತಿ ಮಂಧಾನ ಅವರ ಅಪಾರ ಅನುಭವ ಮತ್ತು ಶಫಾಲಿ ವರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಶೈಲಿ ಭಾರತೀಯ ಮಹಿಳಾ ಕ್ರಿಕೆಟ್‌ಗೆ ದಶಕಗಳ ಕಾಲ ನೆನೆಯುವಂತಹ ಹೆಮ್ಮೆಯ ಕ್ಷಣವನ್ನು ತಂದುಕೊಟ್ಟಿದೆ. ಒಂದೇ ವರ್ಷದಲ್ಲಿ 1,000 ರನ್‌ಗಳ ಜೊತೆಯಾಟದ ಮೈಲಿಗಲ್ಲು ದಾಟಿದ ಈ ಜೋಡಿ, ಕೇವಲ ರನ್ ಗಳಿಕೆಯನ್ನಷ್ಟೇ ಮಾಡದೇ ಜಾಗತಿಕ ಕ್ರಿಕೆಟ್‌ನಲ್ಲಿ ಭಾರತದ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More