SRH vs CSK IPL 2026 Highlights: ಸಿಎಸ್‌ಕೆ ವಿರುದ್ಧ ಗೆದ್ದ ಹೈದರಾಬಾದ್
Sunrisers Hyderabad vs Chennai Super Kings, IPL 2026 Highlights:ಇಂದು ಐಪಿಎಲ್ 2026 ರ 27 ನೇ ಪಂದ್ಯದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯುತ್ತಿದೆ. ಪಂದ್ಯಕ್ಕೂ ಮೊದಲು, ಎರಡೂ ತಂಡಗಳ ನಾಯಕರ ನಡುವೆ ಟಾಸ್ ನಡೆಯಿತು, ಇದರಲ್ಲಿ ಸಿಎಸ್‌ಕೆ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಐಪಿಎಲ್ 2026 ರ 27 ನೇ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಮಣಿಸಿದ ಸನ್‌ರೈಸರ್ಸ್ ಹೈದರಾಬಾದ್ ಹ್ಯಾಟ್ರಿಕ್ ಸೋಲಿನ ನಂತರ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ರುತುರಾಜ್ ಗಾಯಕ್ವಾಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 194 ರನ್ ಗಳಿಸಿತು ಮತ್ತು ಗೆಲುವಿಗೆ 195 ರನ್‌ಗಳ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 184 ರನ್ ಗಳಿಸಲು ಸಾಧ್ಯವಾಗಿ ಈ ಪಂದ್ಯವನ್ನು 10 ರನ್‌ಗಳಿಂದ ಸೋತಿತು.
LIVE NEWS & UPDATES
-
SRH vs CSK IPL 2026: ಮತ್ತೆ ಸೋತ ಸಿಎಸ್‌ಕೆ
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 27 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 10 ರನ್‌ಗಳಿಂದ ಸೋಲಿಸಿತು. ರೋಮಾಂಚಕ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ SRH 194 ರನ್ ಗಳಿಸಿ 195 ರನ್‌ಗಳ ಗುರಿಯನ್ನು ನೀಡಿತು, ಆದರೆ CSK ಅದನ್ನು ಸಾಧಿಸಲು ವಿಫಲವಾಯಿತು.
-
SRH vs CSK IPL 2026: ಶಿವಂ ದುಬೆ ಔಟ್
ಸಿಎಸ್‌ಕೆ ಗೆಲ್ಲಲು 18 ಎಸೆತಗಳಲ್ಲಿ 40 ರನ್‌ಗಳ ಅವಶ್ಯಕತೆಯಿದೆ. ಶಿವಂ ದುಬೆ ಅವರನ್ನು ಶಕೀಬ್ ಹುಸೇನ್ ಅದ್ಭುತ ಎಸೆತದಲ್ಲಿ ಕ್ಲೀನ್ ಬೌಲ್ಡ್ ಮಾಡಿದರು. 17 ಓವರ್‌ಗಳ ನಂತರ ತಂಡದ ಸ್ಕೋರ್ 155 ರನ್‌ಗಳಾಗಿವೆ.
-
-
SRH vs CSK IPL 2026: ಮ್ಯಾಥ್ಯೂ ಶಾರ್ಟ್ಸ್ ಔಟ್
15.5 ಓವರ್‌ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್‌ಗಳಿಗೆ 149 ರನ್ ಗಳಿಸಿದೆ. ಇಶಾನ್ ಮಾಲಿಂಗ ಫಾರ್ಮ್‌ನಲ್ಲಿರುವ ಮ್ಯಾಥ್ಯೂ ಶಾರ್ಟ್ಸ್ ಅವರನ್ನು ಔಟ್ ಮಾಡಿದ್ದಾರೆ. ಪಂದ್ಯವು ಈಗ ರೋಮಾಂಚಕ ಹಂತವನ್ನು ತಲುಪಿದೆ.
-
SRH vs CSK IPL 2026: 14 ಓವರ್ ಪೂರ್ಣ
14ನೇ ಓವರ್ ನ ನಾಲ್ಕನೇ ಎಸೆತದಲ್ಲಿ ಶಿವಂ ದುಬೆ ಸಿಕ್ಸರ್ ಬಾರಿಸಿದರು. 28 ಎಸೆತಗಳ ನಂತರ ಚೆನ್ನೈ ಗಳಿಸಿದ ಮೊದಲ ಬೌಂಡರಿ ಇದು. ಹಿಂದಿನ ಬೌಂಡರಿ ಒಂಬತ್ತನೇ ಓವರ್ ನ ಕೊನೆಯ ಎಸೆತದಲ್ಲಿ ಬಂದಿತು. ಪ್ರಫುಲ್ ಹಿಂಗೆ ಅವರ ಓವರ್‌ನಲ್ಲಿ 15 ರನ್ ಬಂತ್ತು.
-
SRH vs CSK IPL 2026: 5 ನೇ ವಿಕೆಟ್ ಪತನ
ಚೆನ್ನೈ 11.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 113 ರನ್ ಗಳಿಸಿದೆ. 12 ನೇ ಓವರ್‌ನಲ್ಲಿ, ಶಿವಾಂಗ್ ಕುಮಾರ್ ಬೌಲಿಂಗ್‌ನಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಅವರಿಗೆ ಡೆವಾಲ್ಡ್ ಬ್ರೇವಿಸ್ (0) ಕ್ಯಾಚ್ ನೀಡಿದರು.
-
-
SRH vs CSK IPL 2026: 10 ಓವರ್ ಪೂರ್ಣ
ಚೆನ್ನೈ ತಂಡ 10 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿದೆ. ಮ್ಯಾಥ್ಯೂ ಶಾರ್ಟ್ ಮತ್ತು ಸರ್ಫರಾಜ್ ಖಾನ್ ಕ್ರೀಸ್ ನಲ್ಲಿದ್ದಾರೆ.
-
SRH vs CSK IPL 2026: ಐವತ್ತು ರನ್ ಜೊತೆಯಾಟ
ಐದನೇ ಓವರ್‌ನಲ್ಲಿ, ರುತುರಾಜ್ ಗಾಯಕ್ವಾಡ್ ಮತ್ತು ಆಯುಷ್ ಮ್ಹಾತ್ರೆ ಎರಡನೇ ವಿಕೆಟ್‌ಗೆ ಐವತ್ತು ರನ್‌ಗಳ ಪಾಲುದಾರಿಕೆಯನ್ನು ಪೂರ್ಣಗೊಳಿಸಿದರು. ನಿತೀಶ್ ರೆಡ್ಡಿ ಅವರ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ಗಾಯಕ್ವಾಡ್ ಎರಡು ರನ್ ಗಳಿಸಿದರು. ಈ ಎರಡು ರನ್‌ಗಳೊಂದಿಗೆ, ಅವರು ಮ್ಹಾತ್ರೆ ಅವರೊಂದಿಗೆ 50 ರನ್ ಪಾಲುದಾರಿಕೆಯನ್ನು ಪೂರ್ಣಗೊಳಿಸಿದರು.
-
SRH vs CSK IPL 2026: 2 ಓವರ್ ಪೂರ್ಣ
2 ಓವರ್‌ಗಳ ನಂತರ ಚೆನ್ನೈ 1 ವಿಕೆಟ್ ನಷ್ಟಕ್ಕೆ 23 ರನ್ ಗಳಿಸಿದೆ. ರುತುರಾಜ್ ಗಾಯಕ್ವಾಡ್ ಮತ್ತು ಆಯುಷ್ ಮಹಾತ್ರೆ ಕ್ರೀಸ್‌ನಲ್ಲಿದ್ದಾರೆ.
-
SRH vs CSK IPL 2026: ಸಂಜು ಸ್ಯಾಮ್ಸನ್ ಔಟ್
ಸಂಜು ಸ್ಯಾಮ್ಸನ್ ಅವರನ್ನು ನಿತೀಶ್ ಕುಮಾರ್ ರೆಡ್ಡಿ 7 ರನ್‌ಗಳಿಗೆ ಔಟ್ ಮಾಡಿದರು. ಆದಾಗ್ಯೂ, ಯುವ ಬೌಲರ್ ಹಿಂಗೆ ತಮ್ಮ ಮೊದಲ ಓವರ್‌ನಲ್ಲಿ 15 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿ ಎನಿಸಿದರು.
-
SRH vs CSK IPL 2026: ಚೆನ್ನೈಗೆ 195 ರನ್ ಟಾರ್ಗೆಟ್
ಸನ್‌ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್‌ಗೆ 195 ರನ್‌ಗಳ ಗುರಿಯನ್ನು ನೀಡಿತು. ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಸಿಎಸ್‌ಕೆ ಆಯ್ಕೆ ಮಾಡಿಕೊಂಡಿತು. ಅಭಿಷೇಕ್ ಶರ್ಮಾ ಮತ್ತು ಹೆನ್ರಿಕ್ ಕ್ಲಾಸೆನ್ ತಲಾ 59 ರನ್‌ಗಳ ಅರ್ಧಶತಕಗಳ ನೆರವಿನಿಂದ ಎಸ್‌ಆರ್‌ಎಚ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 194 ರನ್ ಗಳಿಸಿತು.
ಸಿಎಸ್‌ಕೆ ಪರ ಜೇಮೀ ಓವರ್ಟನ್ ಮತ್ತು ಅನ್ಶುಲ್ ಕಾಂಬೋಜ್ ತಲಾ ಮೂರು ವಿಕೆಟ್ ಪಡೆದರೆ, ಮುಖೇಶ್ ಚೌಧರಿ ಎರಡು ವಿಕೆಟ್ ಪಡೆದರು.
-
SRH vs CSK IPL 2026: ಕ್ಲಾಸೆನ್ 59 ರನ್ ಗಳಿಸಿ ಔಟ್
18ನೇ ಓವರ್‌ನ ಎರಡನೇ ಎಸೆತದಲ್ಲಿ ಹೈದರಾಬಾದ್ ಆರನೇ ವಿಕೆಟ್ ಕಳೆದುಕೊಂಡಿತು. ಅನ್ಶುಲ್ ಕಾಂಬೋಜ್ ಬೌಲಿಂಗ್‌ನಲ್ಲಿ ಹೆನ್ರಿಕ್ ಕ್ಲಾಸೆನ್ 39 ಎಸೆತಗಳಲ್ಲಿ 59 ರನ್ ಗಳಿಸಿ ಔಟಾದರು.
-
SRH vs CSK IPL 2026: 12 ಓವರ್ ಪೂರ್ಣ
12ನೇ ಓವರ್‌ನಲ್ಲಿ ಗುರ್ಜಪ್ನೀತ್ ಸಿಂಗ್ 13 ರನ್ ಬಿಟ್ಟುಕೊಟ್ಟರು. ನಾಲ್ಕನೇ ಎಸೆತದಲ್ಲಿ ಹೆನ್ರಿಕ್ ಕ್ಲಾಸೆನ್ ಬೌಂಡರಿ ಬಾರಿಸಿದರು. ನಂತರ ನಿತೀಶ್ ಕುಮಾರ್ ರೆಡ್ಡಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.
-
SRH vs CSK IPL 2026: 4ನೇ ವಿಕೆಟ್
ಅನಿಕೇತ್ ವರ್ಮಾ ಅವರನ್ನು ಓವರ್ಟನ್ ಔಟ್ ಮಾಡಿದರು. ನಿತೀಶ್ ರೆಡ್ಡಿ ಈಗ ಕ್ಲಾಸೆನ್ ಜೊತೆ ಸೇರಿಕೊಂಡಿದ್ದಾರೆ.
-
SRH vs CSK IPL 2026: 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್
ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಐಪಿಎಲ್ ಇತಿಹಾಸದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ವೇಗವಾಗಿ ಅರ್ಧಶತಕ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದೆ.
-
SRH vs CSK IPL 2026: ಹೆಡ್ ಔಟ್
ಮುಖೇಶ್ ಚೌಧರಿ ಬೌಲಿಂಗ್‌ನಲ್ಲಿ ಟ್ರಾವಿಸ್ ಹೆಡ್ ಕ್ಯಾಚ್ ನೀಡಿ ಔಟ್ ಆದರು. ಹೆಡ್ 20 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು. ಈಗ ಅಭಿಷೇಕ್ ಜೊತೆ ಇಶಾನ್ ಕಿಶನ್ ಸೇರಿಕೊಂಡಿದ್ದಾರೆ.
-
SRH vs CSK IPL 2026: ಸನ್ ರೈಸರ್ಸ್ ಹೈದರಾಬಾದ್
ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ನಾಯಕ), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ (ವಿಕೆಟ್ ಕೀಪರ್), ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂಗ್ ಕುಮಾರ್, ಪ್ರಫುಲ್ ಹಿಂಗೆ, ಸಾಕಿಬ್ ಹುಸೇನ್, ಇಶಾನ್ ಮಾಲಿಂಗ.
-
SRH vs CSK IPL 2026: ಚೆನ್ನೈ ಸೂಪರ್ ಕಿಂಗ್ಸ್
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಸರ್ಫರಾಜ್ ಖಾನ್, ಶಿವಂ ದುಬೆ, ಡೆವಾಲ್ಡ್ ಬ್ರೂವಿಸ್, ಜೇಮಿ ಓವರ್ಟನ್, ಮ್ಯಾಥ್ಯೂ ಶಾರ್ಟ್, ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಮುಖೇಶ್ ಚೌಧರಿ, ಗುರ್ಜಪ್ನೀತ್ ಸಿಂಗ್.
-
SRH vs CSK IPL 2026: ಟಾಸ್ ಗೆದ್ದ ಸಿಎಸ್‌ಕೆ
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರಿತುರಾಜ್ ಗಾಯಕ್ವಾಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
Published On - Apr 18,2026 7:32 PM




