IPL 2026 Eliminator SRH vs RR Highlights: ರಾಜಸ್ಥಾನ್ ವಿರುದ್ಧ ಸೋತ ಸನ್‌ರೈಸರ್ಸ್ ಫೈನಲ್ ಕನಸು ಭಗ್ನ
IPL 2026 Eliminator SRH vs RR Highlights: ಐಪಿಎಲ್ 2026 ರಲ್ಲಿ ಇಂದು ಎಲಿಮಿನೇಟರ್ ಪಂದ್ಯವು ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ರಾಜಸ್ಥಾನ್ 47 ರನ್‌ಗಳಿಂದ ಪಂದ್ಯವನ್ನು ಗೆದ್ದು ಕ್ವಾಲಿಫೈಯರ್ 2 ರಲ್ಲಿ ಸ್ಥಾನ ಪಡೆದುಕೊಂಡಿತು.

ಐಪಿಎಲ್ 2026 ರಲ್ಲಿ ಇಂದು ಎಲಿಮಿನೇಟರ್ ಪಂದ್ಯವು ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ರಾಜಸ್ಥಾನ್ 47 ರನ್‌ಗಳಿಂದ ಪಂದ್ಯವನ್ನು ಗೆದ್ದು ಕ್ವಾಲಿಫೈಯರ್ 2 ರಲ್ಲಿ ಸ್ಥಾನ ಪಡೆದುಕೊಂಡಿತು. ಇತ್ತ ಹೈದರಾಬಾದ್‌ನ ಪ್ರಯಾಣ ಅಲ್ಲಿಗೆ ಕೊನೆಗೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 243 ರನ್ ಗಳಿಸಿತು. ವೈಭವ್ ಸೂರ್ಯವಂಶಿ 97 ರನ್ ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಧ್ರುವ್ ಜುರೆಲ್ 50 ರನ್ ಗಳಿಸಿದರು. ಯಶಸ್ವಿ ಜೈಸ್ವಾಲ್ ಕೂಡ 29 ರನ್‌ಗಳ ಕೊಡುಗೆ ನೀಡಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಹೈದರಾಬಾದ್ 196 ರನ್‌ಗಳಿಗೆ ಆಲೌಟ್ ಆಯಿತು.
LIVE NEWS & UPDATES
-
IPL 2026 Eliminator Live: ಹೈದರಾಬಾದ್ ತಂಡಕ್ಕೆ 47 ರನ್‌ಗಳ ಸೋಲು
ಸನ್‌ರೈಸರ್ಸ್ ಹೈದರಾಬಾದ್ ತಂಡವು 196 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ, ರಾಜಸ್ಥಾನ ರಾಯಲ್ಸ್ ತಂಡವು ಪಂದ್ಯವನ್ನು 47 ರನ್‌ಗಳಿಂದ ಗೆದ್ದು ಕ್ವಾಲಿಫೈಯರ್ 2 ರಲ್ಲಿ ಸ್ಥಾನ ಪಡೆದುಕೊಂಡಿತು.
-
IPL 2026 Eliminator Live: 8ನೇ ವಿಕೆಟ್ ಪತನ
ಸನ್‌ರೈಸರ್ಸ್ ಹೈದರಾಬಾದ್ ತಂಡವು 163 ರನ್‌ಗಳಿಗೆ ಎಂಟನೇ ವಿಕೆಟ್ ಕಳೆದುಕೊಂಡಿತು. ಸಲೀಲ್ ಅರೋರಾ 21 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರು.
-
-
IPL 2026 Eliminator Live: ಕಮ್ಮಿನ್ಸ್ ಕೂಡ ಔಟ್
ಸನ್‌ರೈಸರ್ಸ್ ಹೈದರಾಬಾದ್ ತಂಡವು 139 ರನ್‌ಗಳಿಗೆ ಏಳನೇ ವಿಕೆಟ್ ಕಳೆದುಕೊಂಡಿತು. ಪ್ಯಾಟ್ ಕಮ್ಮಿನ್ಸ್ 2 ಎಸೆತಗಳಲ್ಲಿ 1 ರನ್ ಗಳಿಸಿ ಔಟಾದರು.
-
IPL 2026 Eliminator Live: ಟ್ರಾವಿಸ್ ಹೆಡ್ ಔಟ್
ಸನ್‌ರೈಸರ್ಸ್ ಹೈದರಾಬಾದ್ ತಂಡದ ಇನ್ನಿಂಗ್ಸ್ ಕುಸಿತ ಕಂಡಿದೆ. ತಂಡದ ನಾಲ್ಕನೇ ವಿಕೆಟ್ 57 ರನ್‌ಗಳಿಗೆ ಪತನವಾಯಿತು. ಟ್ರಾವಿಸ್ ಹೆಡ್ 8 ಎಸೆತಗಳಲ್ಲಿ 17 ರನ್ ಗಳಿಸಿ ಔಟ್ ಆದರು.
-
IPL 2026 Eliminator Live: ಅಭಿಷೇಕ್ ಶೂನ್ಯಕ್ಕೆ ಔಟ್
ಸನ್‌ರೈಸರ್ಸ್ ಹೈದರಾಬಾದ್ ತಂಡ ಕಳಪೆ ಆರಂಭ ಪಡೆಯಿತು. ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ಅಭಿಷೇಕ್ ಶರ್ಮಾ ಒಂದೇ ಒಂದು ರನ್ ಗಳಿಸದೆ ಔಟಾದರು.
-
-
IPL 2026 Eliminator Live: 244 ರನ್‌ಗಳ ಗುರಿ
ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 243 ರನ್ ಗಳಿಸಿತು. ವೈಭವ್ ಸೂರ್ಯವಂಶಿ 97 ರನ್ ಬಾರಿಸಿದರೆ, ಧ್ರುವ್ ಜುರೆಲ್ 50 ರನ್ ಗಳಿಸಿದರು. ಯಶಸ್ವಿ ಜೈಸ್ವಾಲ್ ಕೂಡ 29 ರನ್‌ಗಳ ಕೊಡುಗೆ ನೀಡಿದರು.
-
IPL 2026 Eliminator Live: 200 ರನ್ ಪೂರ್ಣ
ರಾಜಸ್ಥಾನ್ ರಾಯಲ್ಸ್ 15 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 207 ರನ್ ಗಳಿಸಿದೆ. ತಂಡವು ದೊಡ್ಡ ಮೊತ್ತದತ್ತ ಸಾಗುತ್ತಿದೆ.
-
IPL 2026 Eliminator Live: 12 ಓವರ್‌ಗಳು ಪೂರ್ಣ
ರಾಜಸ್ಥಾನ್ ರಾಯಲ್ಸ್ 12 ಓವರ್‌ಗಳಲ್ಲಿ 2 ವಿಕೆಟ್‌ಗೆ 168 ರನ್ ಗಳಿಸಿದೆ. ಧ್ರುವ್ ಜುರೆಲ್ 32 ಮತ್ತು ರಿಯಾನ್ ಪರಾಗ್ 7 ರನ್ ಗಳಿಸಿದ್ದಾರೆ.
-
IPL 2026 Eliminator Live: ಶತಕ ವಂಚಿತ ವೈಭವ್
ವೈಭವ್ ಸೂರ್ಯವಂಶಿ 29 ಎಸೆತಗಳಲ್ಲಿ 97 ರನ್ ಗಳಿಸಿ ಔಟಾದರು. ಪ್ರಫುಲ್ ಹಿಂಗೆ ವಿಕೆಟ್ ಪಡೆದರು. ರಾಜಸ್ಥಾನ 125 ರನ್ ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡಿತು.
-
IPL 2026 Eliminator Live: 100 ರನ್ ದಾಟಿದ ರಾಜಸ್ಥಾನ
ರಾಜಸ್ಥಾನ್ ರಾಯಲ್ಸ್ ತಂಡವು 7.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 100 ರನ್‌ಗಳ ಗಡಿ ದಾಟಿತು. ವೈಭವ್ ಸೂರ್ಯವಂಶಿ 77 ರನ್ ಗಳಿಸಿ ಶತಕದ ಸಮೀಪದಲ್ಲಿದ್ದಾರೆ.
-
IPL 2026 Eliminator Live: ಸೂರ್ಯವಂಶಿ ಅರ್ಧಶತಕ
ವೈಭವ್ ಸೂರ್ಯವಂಶಿ ಕೇವಲ 16 ಎಸೆತಗಳಲ್ಲಿ ಎಂಟು ಸಿಕ್ಸರ್‌ಗಳನ್ನು ಬಾರಿಸಿ ಅರ್ಧಶತಕ ಪೂರೈಸಿದರು. ಇದರೊಂದಿಗೆ, ರಾಜಸ್ಥಾನ ನಾಲ್ಕು ಓವರ್‌ಗಳಲ್ಲಿ 63 ರನ್ ಗಳಿಸಿದೆ.
-
IPL 2026 Eliminator Live:ಸೂರ್ಯವಂಶಿಯ ಬಿರುಗಾಳಿ
ವೈಭವ್ ಸೂರ್ಯವಂಶಿ ಕೇವಲ 10 ಎಸೆತಗಳಲ್ಲಿ 36 ರನ್ ಗಳಿಸಿದ್ದಾರೆ. ಇದರೊಂದಿಗೆ, ರಾಜಸ್ಥಾನದ ಸ್ಕೋರ್ ಮೂರು ಓವರ್‌ಗಳ ನಂತರ ವಿಕೆಟ್ ನಷ್ಟವಿಲ್ಲದೆ 45 ರನ್ ಗಳಿಸಿದೆ.
-
IPL 2026 Eliminator Live: ರಾಜಸ್ಥಾನಕ್ಕೆ ಉತ್ತಮ ಆರಂಭ
ರಾಜಸ್ಥಾನ್ ರಾಯಲ್ಸ್ ತಂಡ ಉತ್ತಮ ಆರಂಭ ಪಡೆದುಕೊಂಡಿದೆ. ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಮೊದಲ ಎರಡು ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 20 ರನ್ ಗಳಿಸಿದರು.
-
IPL 2026 Eliminator Live: ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಸ್ಮರಣ್ ರವಿಚಂದ್ರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಇಶಾನ್ ಮಾಲಿಂಗ, ಶಾಕಿಬ್ ಹುಸೇನ್, ಪ್ರಫುಲ್ ಹಿಂಗೆ.
-
IPL 2026 Eliminator Live: ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI
ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ದಸುನ್ ಶನಕ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪುಂಜಾ.
-
IPL 2026 Eliminator Live: ಟಾಸ್ ಗೆದ್ದ ಸನ್‌ರೈಸರ್ಸ್
ಟಾಸ್ ಗೆದ್ದ ಸನ್‌ರೈಸರ್ಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
Published On - May 27,2026 7:02 PM




