AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World cup 2022: ನಮೀಬಿಯಾ ಎದುರು ಸೋತ ಶ್ರೀಲಂಕಾ; ಏಷ್ಯನ್ ಚಾಂಪಿಯನ್​ಗಳಿಗೆ ತೀವ್ರ ಮುಖಭಂಗ!

T20 World cup 2022: ಇಂದು ನಡೆದ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿಯೇ ನಮೀಬಿಯಾ ತಂಡ ಏಷ್ಯನ್ ಚಾಂಪಿಯನ್ ಶ್ರೀಲಂಕಾ ತಂಡಕ್ಕೆ ಮುಜುಗರದ ಸೋಲಿನ ಶಾಕ್ ನೀಡಿದೆ.

T20 World cup 2022: ನಮೀಬಿಯಾ ಎದುರು ಸೋತ ಶ್ರೀಲಂಕಾ; ಏಷ್ಯನ್ ಚಾಂಪಿಯನ್​ಗಳಿಗೆ ತೀವ್ರ ಮುಖಭಂಗ!
srilanka vs namibia
TV9 Web
| Edited By: |

Updated on:Oct 16, 2022 | 1:54 PM

Share

ಆಸ್ಟ್ರೇಲಿಯಾದಲ್ಲಿ ಇಂದಿನಿಂದ ಆರಂಭವಾಗಿರುವ ಟಿ20 ವಿಶ್ವಕಪ್‌ನ (T20 World Cup 2022) ಮೊದಲ ಪಂದ್ಯದಲ್ಲಿ ಶಾಕಿಂಗ್ ರಿಸಲ್ಟ್ ಹೊರಬಿದ್ದಿದೆ. ಇಂದು ನಡೆದ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿಯೇ ನಮೀಬಿಯಾ (Namibia) ತಂಡ ಏಷ್ಯನ್ ಚಾಂಪಿಯನ್ ಶ್ರೀಲಂಕಾ (Sri Lanka) ತಂಡಕ್ಕೆ ಮುಜುಗರದ ಸೋಲಿನ ಶಾಕ್ ನೀಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಮೀಬಿಯಾ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 163 ರನ್ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ 108 ರನ್​ಗಳಿಗೆ ಸರ್ವಪತನಗೊಂಡು 55 ರನ್​ಗಳ ಹೀನಾಯ ಸೋಲು ಅನುಭವಿಸಿದೆ.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ, ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 163 ರನ್ ಗಳಿಸಿತು. ಆದರೆ ಗುರಿ ಬೆನ್ನಟ್ಟಿದ ಶ್ರೀಲಂಕಾ ಯಾರೂ ಊಹಿಸದ ಪ್ರದರ್ಶನ ನೀಡಿ 55 ರನ್‌ಗಳ ಬೃಹತ್ ಅಂತರದಿಂದ ಸೋಲೊಪ್ಪಿಕೊಂಡಿತು. 164 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಲಂಕಾ ತಂಡ 19 ಓವರ್​ ಮುಗಿಯುವುದರೊಳಗೆ ತನ್ನೇಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಮುಜುಗರಕ್ಕೊಳಗಾಯಿತು. ಏಷ್ಯನ್ ಚಾಂಪಿಯನ್ ಶ್ರೀಲಂಕಾಗೆ ಇದು ದೊಡ್ಡ ಹಿನ್ನಡೆಯಾಗಿದ್ದು, ಇದರೊಂದಿಗೆ 2022ರ ಟಿ-20 ವಿಶ್ವಕಪ್‌ನಲ್ಲಿ ಭಾರೀ ಮುಖಭಂಗಕ್ಕೆ ಈ ಪಂದ್ಯ ಸಾಕ್ಷಿಯಾಗಿದೆ.

ಇದನ್ನೂ ಓದಿ:T20 World cup: ಮಳೆ ಬಂದು ಪಂದ್ಯ ನಿಂತರೆ ಅಥವಾ ಟೈ ಆದರೆ; ಟಿ20 ವಿಶ್ವಕಪ್ ನಿಯಮಗಳು ಹೇಳುವುದೇನು?

ನಮೀಬಿಯಾ ಎದುರಿನ ಸೋಲಿನೊಂದಿಗೆ ಶ್ರೀಲಂಕಾ ತಂಡ ಟಿ20 ವಿಶ್ವಕಪ್​ಗೆ ಹೇಗಿ ತಯಾರಿ ನಡೆಸಿದೆ ಎಂಬುದು ಬಟಬಯಲಾಗಿದೆ. ಟಿ20 ಕ್ರಿಕೆಟ್​ನಲ್ಲಿ ನಮೀಬಿಯಾ ಶ್ರೀಲಂಕಾವನ್ನು ಸೋಲಿಸಿದ್ದು ಇದೇ ಮೊದಲು. ಅದೂ ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ಲಂಕಾ ತಂಡ ಈ ರೀತಿಯ ಸೋಲನ್ನು ಕಂಡಿರುವುದು ಉಳಿದ ಪಂದ್ಯಗಳ ಮೇಲೆ ಗಾಡ ಪರಿಣಾಮ ಬೀರಲಿದೆ. ಆದರೆ ಆರಂಭಿಕ ಪಂದ್ಯಗಳಲ್ಲಿ ಇಂತಹ ಮುಜುಗರದ ಸೋಲುಂಡು ಬಳಿಕ ಎಲ್ಲರನ್ನೂ ಅಚ್ಚರಿಗೊಳಿಸುವುದು ಲಂಕಾ ತಂಡಕ್ಕೆ ಹೊಸದೇನಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಏಷ್ಯಾಕಪ್ ಕ್ರೀಡಾಕೂಟವೇ ಸಾಕ್ಷಿಯಾಗಿದೆ. ಈ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಲಂಕಾ ತಂಡ ಅಫ್ಘಾನಿಸ್ತಾನದ ವಿರುದ್ಧ ಹೀನಾಯ ಸೋಲು ಕಂಡಿತ್ತು. ಆದರೆ ಆ ಬಳಿಕ ಏಷ್ಯಾಕಪ್​ ಗೆದ್ದು ಇತಿಹಾಸ ರಚಿಸಿತ್ತು.

ಹತ್ತರ ಗಡಿಯನ್ನೂ ದಾಟದ 7 ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು

ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಗೆಲುವಿನ ಹಾದಿಯಲ್ಲಿ ಕಾಣಲೇ ಇಲ್ಲ. ಪಂದ್ಯದುದ್ದಕ್ಕೂ ನಮೀಬಿಯಾ ತನ್ನ ಬಿಗಿಹಿಡಿತವನ್ನು ಸಡಿಸಲೇ ಇಲ್ಲ. ಇಂತಹ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾದ 7 ಬ್ಯಾಟ್ಸ್​ಮನ್​ಗಳಿಗೆ ಹತ್ತರ ಗಡಿ ಮುಟ್ಟುವುದು ಕಷ್ಟವಾಯಿತು. ತಂಡದ ಬಹುದೊಡ್ಡ ಸ್ಕೋರ್ ನಾಯಕ ದಾಸುನ್ ಶಂಕಾ ಅವರ ಬ್ಯಾಟ್‌ನಿಂದ 29 ರನ್​ಗಳ ರೂಪದಲ್ಲಿ ಬಂತು.

ಬೌಲಿಂಗ್‌ನಲ್ಲೂ ಮಿಂಚಿದ ನಮೀಬಿಯಾ

ಮತ್ತೊಂದೆಡೆ, ನಮೀಬಿಯಾದ ಬೌಲಿಂಗ್ ಬಗ್ಗೆ ಮಾತನಾಡುವುದಾದರೆ, ಶ್ರೀಲಂಕಾವನ್ನು 108 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಡೇವಿಡ್ ವೀಸಾ ಹೊರತಾಗಿ, ಫ್ರೈಲಿಂಕ್ ಮತ್ತು ಜೆಜೆ ಸ್ಮಿತ್ ಕೂಡ ದೊಡ್ಡ ಪಾತ್ರ ವಹಿಸಿದರು. ಫ್ರೈಲಿಂಕ್ 28 ಎಸೆತಗಳಲ್ಲಿ 44 ರನ್ ನೀಡಿ 2 ವಿಕೆಟ್ ಪಡೆದರೆ, ಅದೇ ವೇಳೆ 31 ರನ್ ನೀಡಿದ ಜೆಜೆ ಸ್ಮಿತ್ 1 ವಿಕೆಟ್ ಪಡೆದರು. ಡೇವಿಡ್ ವಿಸಾ ಕೂಡ 16 ರನ್ ನೀಡಿ 2 ವಿಕೆಟ್ ಪಡೆದರು. ನಮೀಬಿಯಾದ ಬೌಲರ್‌ಗಳು ಬಿಗಿಯಾದ ದಾಳಿ ನಡೆಸಿದರಿಂದ ಶ್ರೀಲಂಕಾ ಬ್ಯಾಟರ್​ಗಳು ರನ್​ಗಳಿಸಲು ಪರದಾಡಿದ್ದಲ್ಲದೆ, ಸರಾಗವಾಗಿ ವಿಕೆಟ್ ಒಪ್ಪಿಸುತ್ತಾ ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:29 pm, Sun, 16 October 22

Follow Us
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!