T20 World Cup 2022: ಫಿಲಿಪ್ಸ್ ಶತಕ, ಬೌಲ್ಟ್- ಸೌಥಿ ಮಾರಕ ದಾಳಿ; 65 ರನ್​ಗಳಿಂದ ಸೋತ ಲಂಕಾ

T20 World Cup 2022: ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ ಗ್ಲೆನ್ ಫಿಲಿಪ್ಸ್ ಅವರ ಅಬ್ಬರದ ಶತಕ ಆದಾರದ ಮೇಲೆ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಟ್ರೆಂಟ್ ಬೌಲ್ಟ್ ಮಾರಕ ಬೌಲಿಂಗ್ ಮುಂದೆ ಮಕಾಡೆ ಮಲಗುವುದರೊಂದಿಗೆ ಕೇವಲ 102 ರನ್​ಗಳಿಗೆ ಅಲೌಟ್​ ಆಯಿತು.

T20 World Cup 2022: ಫಿಲಿಪ್ಸ್ ಶತಕ, ಬೌಲ್ಟ್- ಸೌಥಿ ಮಾರಕ ದಾಳಿ; 65 ರನ್​ಗಳಿಂದ ಸೋತ ಲಂಕಾ
NZ vs SL
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 29, 2022 | 8:12 PM

ಟಿ20 ವಿಶ್ವಕಪ್ 2022 (T20 World Cup 2022)ರಲ್ಲಿ ನ್ಯೂಜಿಲೆಂಡ್ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಿದೆ. ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಹೀನಾಯವಾಗಿ ಸೋಲಿಸಿದ್ದ ನ್ಯೂಜಿಲೆಂಡ್ ತಂಡ ಇದೀಗ ಶ್ರೀಲಂಕಾವನ್ನು 65 ರನ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ ಗ್ಲೆನ್ ಫಿಲಿಪ್ಸ್ (Glenn Phillips) ಅವರ ಅಬ್ಬರದ ಶತಕ ಆದಾರದ ಮೇಲೆ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಟ್ರೆಂಟ್ ಬೌಲ್ಟ್ ಮಾರಕ ಬೌಲಿಂಗ್ ಮುಂದೆ ಮಕಾಡೆ ಮಲಗುವುದರೊಂದಿಗೆ ಕೇವಲ 102 ರನ್​ಗಳಿಗೆ ಅಲೌಟ್​ ಆಯಿತು.

ಸಿಡ್ನಿಯಲ್ಲಿ ನಡೆದ ಈ ಪಂದ್ಯವು ಸೂಪರ್ -12 ಸುತ್ತಿನಲ್ಲಿ ಒಂದನೇ ಗುಂಪಿಗೆ ಬಹಳ ಮಹತ್ವದ್ದಾಗಿತ್ತು. ಈ ಗುಂಪಿನ ಕೊನೆಯ ಕೆಲವು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಹೀಗಾಗಿ ಈ ಪಂದ್ಯದ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಆರಂಭಿಕ 3 ವಿಕೆಟ್​ಗಳು ಕೇವಲ 15 ರನ್​ಗಳಿಗೆ ಉರುಳಿದವು. ಆದರೆ ಆ ಬಳಿಕ ತಂಡದ ಇನ್ನಿಂಗ್ಸ್ ಕಟ್ಟಿದ ಗ್ಲೆನ್ ಫಿಲಿಪ್ಸ್ ಅಬ್ಬರದ ಶತಕ ಸಿಡಿಸುವುದರೊಂದಿಗೆ ತಂಡವನ್ನು ಈ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.

ವಿಲಿಯಮ್ಸನ್ ಸೇರಿದಂತೆ ಟಾಪ್ ಆರ್ಡರ್ ಫ್ಲಾಪ್

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಿವೀಸ್ ತಂಡ ಆರಂಭದಲ್ಲೇ ಶ್ರೀಲಂಕಾ ಸ್ಪಿನ್ನರ್​ಗಳ ಬಲೆಗೆ ಬಿತ್ತು. ನಾಲ್ಕನೇ ಓವರ್‌ಗೆ ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ ಮೊದಲ ಮೂರು ಬ್ಯಾಟ್ಸ್‌ಮನ್‌ಗಳು ಕೇವಲ 15 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು. ಮಹಿಶ್ ಟೀಕ್ಷಣ ಮೊದಲ ಓವರ್‌ನಲ್ಲಿ ಫಿನ್ ಅಲೆನ್ ಅವರನ್ನು ಬೌಲ್ಡ್ ಮಾಡಿದರೆ, ಧನಂಜಯ ಡಿ ಸಿಲ್ವಾ ಅವರ ಸ್ಪಿನ್‌ನಲ್ಲಿ ಡೆವೊನ್ ಕಾನ್ವೇ ಬೌಲ್ಡ್ ಆದರು. ನಾಯಕ ವಿಲಿಯಮ್ಸನ್ ವೇಗಿ ಕಸುನ್ ರಜಿತಾಗೆ ಬಲಿಯಾದರು.

ಇದನ್ನೂ ಓದಿ: Qatar World Cup 2022: ಇಂಜುರಿಯಿಂದಾಗಿ ಕತಾರ್ ವಿಶ್ವಕಪ್‌ನಿಂದ ಹೊರಗುಳಿದಿರುವ ಸ್ಟಾರ್ ಫುಟ್ಬಾಲ್ ಆಟಗಾರರಿವರು

ಫಿಲಿಪ್ಸ್ ಶತಕ

ಇಲ್ಲಿಂದ, ನ್ಯೂಜಿಲೆಂಡ್ ತಂಡ ಅಲ್ಪ ಮೊತ್ತಕ್ಕೆ ಕುಸಿಯುತ್ತದೆ ಎಂದು ಅಲ್ಲರೂ ಅಂದುಕೊಂಡಿದ್ದರು. ಆದರೆ ಫಿಲಿಪ್ಸ್ ಎಲ್ಲರ ಲೆಕ್ಕಾಚಾರವನ್ನು ಉಲ್ಟಾಪಲ್ಟಾ ಮಾಡಿದರು. ಈ ಸ್ಫೋಟಕ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ ಜೊತೆಗೂಡಿ ತಂಡದ ಸ್ಕೋರ್ ಬೋರ್ಡ್​ ಹೆಚ್ಚಿಸದರು. 10ನೇ ಓವರ್ ತನಕ ಸ್ಕೋರ್ ಕೇವಲ 54 ರನ್ ಆಗಿತ್ತು. ಆದರೆ ನಂತರ ಫಿಲಿಪ್ಸ್ ಗೇರ್ ಬದಲಾಯಿಸಿ, ಶ್ರೀಲಂಕಾ ಬೌಲರ್‌ಗಳ ಮೇಲೆ ರನ್​ಗಳ ಸುರಿಮಳೆಗೈದರು.

ಆರಂಭಿಕ ಓವರ್‌ಗಳಲ್ಲಿ ಸಿಕ್ಕ ಜೀವದಾನದ ಲಾಭವನ್ನು ಸದುಪಯೋಗ ಪಡಿಸಿಕೊಂಡ ಫಿಲಿಪ್ಸ್ ಕೇವಲ 61 ಎಸೆತಗಳಲ್ಲಿ ತಮ್ಮ ವೃತ್ತಿಜೀವನದ ಎರಡನೇ ಟಿ20 ಶತಕವನ್ನು ಗಳಿಸಿದರು. ಕೊನೆಯ 10 ಓವರ್‌ಗಳಲ್ಲಿ 113 ರನ್ ಸೇರಿಸಿದ ನ್ಯೂಜಿಲೆಂಡ್ ಒಟ್ಟು 167 ರನ್ ಗಳಿಸಿ ಶ್ರೀಲಂಕಾ ಎದುರು ಸವಾಲಿನ ಗುರಿ ನೀಡಿತು.

ಬೋಲ್ಟ್ ದಾಳಿಗೆ ತತ್ತರಿಸಿದ ಲಂಕಾ

ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡದ ಬ್ಯಾಟರ್​ಗಳು ಬೌಲ್ಟ್ ದಾಳಿಗೆ ತತ್ತರಿಸಿ ಕೇವಲ 15 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆ ಬಳಿಕ ತಂಡದ 8 ರನ್‌ಗಳಿದ್ದಾಗ 4 ವಿಕೆಟ್ ಪತನವಾಯಿತು. ಅನಂತರ 24 ರನ್​ಗಳಿಗೆ 5 ವಿಕೆಟ್ ಉರುಳಿತು. ಟಿಮ್ ಸೌಥಿ (4/13) ಮೊದಲ ಓವರ್‌ನಲ್ಲಿಯೇ ಪಾಥುಮ್ ನಿಸಂಕಾ ಅವರನ್ನು ಬೌಲ್ಡ್ ಮಾಡಿದರು, ನಂತರ ಟ್ರೆಂಟ್ ಬೌಲ್ಟ್ ಮೂರು ವಿಕೆಟ್ ಪಡೆದರು.

ಆದರೆ ಕೊಂಚ ಹೊತ್ತು ಪ್ರತಿರೋಧ ತೋರಿದ ಭಾನುಕಾ ರಾಜಪಕ್ಸೆ 34 ರನ್ ಗಳಿಸುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಶತಪ್ರಯತ್ನ ಮಾಡಿದರು. ಈ ಯತ್ನದಲ್ಲಿ ರಾಜಪಕ್ಸೆ ಸ್ವಲ್ಪ ಮಟ್ಟಿಗೆ ಯಶಸ್ಸು ಕಂಡರೂ ಅವರ ಇನ್ನಿಂಗ್ಸ್ ಹೆಚ್ಚು ಹೊತ್ತು ನಿಲ್ಲದೆ ಲಾಕಿ ಫರ್ಗುಸನ್‌ಗೆ ಬಲಿಯಾದರು. ಹೀಗಾಗಿ ಕೇವಲ 65 ರನ್ ಗಳಿಸುವಷ್ಟರಲ್ಲಿ ತಂಡ 8 ವಿಕೆಟ್ ಕಳೆದುಕೊಂಡಿತ್ತು, ಬಳಿಕ ನಾಯಕ ದಾಸುನ್ ಶಂಕಾ (35 ರನ್) ಕೂಡ ಕೆಲವು ಹೊಡೆತಗಳನ್ನು ಆಡುವ ಮೂಲಕ ಸೋಲಿನ ಅಂತರ ತಗ್ಗಿಸಿದರು. ಕೊನೆಯ ಓವರ್‌ನಲ್ಲಿ ಲಹಿರು ಕುಮಾರ ರೂಪದಲ್ಲಿ ಕೊನೆಯ ವಿಕೆಟ್ ಪತನಗೊಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Sat, 29 October 22

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ