TNPL 2023: ಶಾರುಖ್ ಖಾನ್ ಬಿರುಸಿನ ಬ್ಯಾಟಿಂಗ್: ಕೋವೈ ಕಿಂಗ್ಸ್ಗೆ ಭರ್ಜರಿ ಜಯ
TNPL 2023: 209 ರನ್ಗಳ ಗುರಿ ಬೆನ್ನತ್ತಿದ ಸೀಚೆಮ್ ಮಧುರೈ ಪ್ಯಾಂಥರ್ಸ್ ಪರ ಓಪನರ್ ಸುರೇಶ್ ಲೋಕೇಶ್ವರ್ 41 ರನ್ ಬಾರಿಸಿ ಮಿಂಚಿದರು.
TNPL 2023: ತಮಿಳುನಾಡು ಪ್ರೀಮಿಯರ್ ಲೀಗ್ನ 24ನೇ ಪಂದ್ಯದಲ್ಲಿ ಸೀಚೆಮ್ ಮಧುರೈ ಪ್ಯಾಂಥರ್ಸ್ ವಿರುದ್ಧ ಲೈಕಾ ಕೋವೈ ಕಿಂಗ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಧುರೈ ತಂಡದ ನಾಯಕ ಹರಿ ನಿಶಾಂತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಲೈಕಾ ಕೋವೈ ಕಿಂಗ್ಸ್ ಪರ ಆರಂಭಿಕ ಆಟಗಾರ ಸುರೇಶ್ ಕುಮಾರ್ (64) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಿ ಸಚಿನ್ (67) ಕೂಡ ಅರ್ಧಶತಕ ಬಾರಿಸಿ ತಂಡಕ್ಕೆ ಅಮೂಲ್ಯ ಕಾಣಿಕೆ ನೀಡಿದರು.
ಪರಿಣಾಮ 10.3 ಓವರ್ಗಳಲ್ಲಿ ಲೈಕಾ ಕೋವೈ ಕಿಂಗ್ಸ್ ತಂಡವು 3 ವಿಕೆಟ್ ನಷ್ಟಕ್ಕೆ 105 ರನ್ ಕಲೆಹಾಕಿತು. ಈ ಹಂತದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಂಡದ ನಾಯಕ ಶಾರುಖ್ ಖಾನ್ ಅಕ್ಷರಶಃ ಅಬ್ಬರಿಸಿದರು. ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಶಾರುಖ್ ಮಧುರೈ ಬೌಲರ್ಗಳ ಬೆಂಡೆತ್ತಿದರು.
ಪರಿಣಾಮ ಶಾರುಖ್ ಖಾನ್ ಬ್ಯಾಟ್ನಿಂದ 3 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳು ಮೂಡಿಬಂತು. ಅಲ್ಲದೆ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿ ಬಳಿಕ ರನ್ ಕದಿಯುವ ಯತ್ನದಲ್ಲಿ ಶಾರುಖ್ ಖಾನ್ (53) ರನೌಟ್ ಆದರು. ಇದಾಗ್ಯೂ ಕೋವೈ ಕಿಂಗ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.
209 ರನ್ಗಳ ಗುರಿ ಬೆನ್ನತ್ತಿದ ಸೀಚೆಮ್ ಮಧುರೈ ಪ್ಯಾಂಥರ್ಸ್ ಪರ ಓಪನರ್ ಸುರೇಶ್ ಲೋಕೇಶ್ವರ್ 41 ರನ್ ಬಾರಿಸಿ ಮಿಂಚಿದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಸೀಚೆಮ್ ಮಧುರೈ ಪ್ಯಾಂಥರ್ಸ್ ತಂಡವು 18 ಓವರ್ಗಳಲ್ಲಿ 164 ರನ್ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಲೈಕಾ ಕೋವೈ ಕಿಂಗ್ಸ್ ತಂಡವು 44 ರನ್ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು.
ಇನ್ನು ಸ್ಪೋಟಕ ಅರ್ಧಶತಕ ಬಾರಿಸಿ ಮಿಂಚಿದ್ದ ಶಾರುಖ್ ಖಾನ್ ಬೌಲಿಂಗ್ನಲ್ಲೂ 2 ವಿಕೆಟ್ ಕಬಳಿಸಿದರು. ಈ ಆಲ್ರೌಂಡರ್ ಪ್ರದರ್ಶನದ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಸೀಚೆಮ್ ಮಧುರೈ ಪ್ಯಾಂಥರ್ಸ್ ಪ್ಲೇಯಿಂಗ್ 11: ಸುರೇಶ್ ಲೋಕೇಶ್ವರ್ (ವಿಕೆಟ್ ಕೀಪರ್) , ಹರಿ ನಿಶಾಂತ್ (ನಾಯಕ) , ಜಗತೀಸನ್ ಕೌಸಿಕ್ , ಸ್ವಪ್ನಿಲ್ ಸಿಂಗ್ , ವಾಷಿಂಗ್ಟನ್ ಸುಂದರ್ , ಎಸ್ ಶ್ರೀ ಅಬಿಸೆಕ್ , ಮುರುಗನ್ ಅಶ್ವಿನ್ , ಕೆ ದೀಬನ್ ಲಿಂಗೇಶ್, ಪಿ ಸರವಣನ್ , ಗುರ್ಜಪ್ನೀತ್ ಸಿಂಗ್ , ಅಜಯ್ ಕೃಷ್ಣ.
ಇದನ್ನೂ ಓದಿ: Ben Stokes: 4,6,6,6: ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ದಾಖಲೆ ಬರೆದ ಬೆನ್ ಸ್ಟೋಕ್ಸ್
ಲೈಕಾ ಕೋವೈ ಕಿಂಗ್ಸ್ ಪ್ಲೇಯಿಂಗ್ 11: ಎಸ್ ಸುಜಯ್ , ಜೆ ಸುರೇಶ್ ಕುಮಾರ್ (ವಿಕೆಟ್ ಕೀಪರ್) , ಬಿ ಸಚಿನ್ , ರಾಮ್ ಅರವಿಂದ್, ಅತೀಕ್ ಉರ್ ರೆಹಮಾನ್ , ಯು ಮುಕಿಲೇಶ್ , ಶಾರುಖ್ ಖಾನ್ (ನಾಯಕ) , ಎಂ ಮೊಹಮ್ಮದ್ , ಮಣಿಮಾರನ್ ಸಿದ್ಧಾರ್ಥ್ , ಜಾತವೇಧ್ ಸುಬ್ರಮಣ್ಯನ್ , ವಲ್ಲಿಯಪ್ಪನ್ ಯುಧೀಶ್ವರನ್.