Vijay Hazare Trophy 2021: ತಮಿಳುನಾಡು ವಿರುದ್ದ ಕರ್ನಾಟಕಕ್ಕೆ ಹೀನಾಯ ಸೋಲು
Vijay Hazare Trophy 2021-22: ರೋಹನ್-ಮನೀಷ್ ಜೋಡಿ 3ನೇ ವಿಕೆಟ್ಗೆ 67 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ 37 ರನ್ಗಳಿಸಿದ್ದ ಕದಮ್ ವಾಷಿಂಗ್ಟನ್ ಸುಂದರ್ಗೆ ವಿಕೆಟ್ ಒಪ್ಪಿಸಿದರು.

ವಿಜಯ್ ಹಜಾರೆ ಟೂರ್ನಿಯಲ್ಲಿನ (Vijay Hazare Trophy 2021) 2ನೇ ಪಂದ್ಯದಲ್ಲಿ ಕರ್ನಾಟಕ ತಂಡವು ತಮಿಳುನಾಡುವ ವಿರುದ್ದ ಹೀನಾಯ ಸೋಲನುಭವಿಸಿದೆ. ಮೊದಲ ಪಂದ್ಯದಲ್ಲಿ ಪುದುಚೇರಿ ವಿರುದ್ದ 236 ರನ್ಗಳ ಭರ್ಜರಿ ಜಯ ಸಾಧಿಸಿದ್ದ ಕರ್ನಾಟಕ ತಂಡವು ತಮಿಳುನಾಡುವ ವಿರುದ್ದ ಮುಗ್ಗರಿಸಿತು. ಟಾಸ್ ಗೆದ್ದ ನಾಯಕ ಮನೀಷ್ ಪಾಂಡೆ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಆರಂಭಿಕ ಆಘಾತಕ್ಕೆ ಒಳಗಾಯಿತು. ಮೊದಲ ಓವರ್ನಲ್ಲೇ ರವಿಕುಮಾರ್ ಸಮರ್ಥ್ ಶೂನ್ಯಕ್ಕೆ ಔಟಾದರು. ಆ ಬಳಿಕ ಬಂದ ಸಿದ್ಧಾರ್ಥ್ (7) ಕೂಡ ಬೇಗನೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಆರಂಭಿಕ ರೋಹನ್ ಕದಮ್ ಜೊತೆಗೂಡಿದ ನಾಯಕ ಮನೀಷ್ ಪಾಂಡೆ ತಂಡಕ್ಕೆ ಆಸರೆಯಾದರು.
ಅದರಂತೆ ರೋಹನ್-ಮನೀಷ್ ಜೋಡಿ 3ನೇ ವಿಕೆಟ್ಗೆ 67 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ 37 ರನ್ಗಳಿಸಿದ್ದ ಕದಮ್ ವಾಷಿಂಗ್ಟನ್ ಸುಂದರ್ಗೆ ವಿಕೆಟ್ ಒಪ್ಪಿಸಿದರು. ಇನ್ನು ತಂಡದ ಮೊತ್ತ 103 ರನ್ ಆಗಿದ್ದ ವೇಳೆ 40 ರನ್ಗಳಿಸಿದ್ದ ಮನೀಷ್ ಪಾಂಡೆ ಕೂಡ ಔಟಾದರು. ನಾಲ್ಕು ವಿಕೆಟ್ ನಷ್ಟಕ್ಕೆ 103 ರನ್ಗಳಿಸಿದ್ದ ಕರ್ನಾಟಕ ಆ ಬಳಿಕ ದಿಢೀರ್ ಕುಸಿತಕ್ಕೊಳಗಾಯಿತು.
ಕರುಣ್ ನಾಯರ್ (9), ಶರತ್ (3), ಸುಚಿತ್ (0) ಹಾಗೂ ವೆಂಟಕೇಶ್ (2) ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು. ಇನ್ನು ಅಂತಿಮವಾಗಿ ಬೌಲರುಗಳನ್ನು ಕ್ಷಣಾರ್ಧದಲ್ಲೇ ತಮಿಳುನಾಡು ತಂಡ ಔಟ್ ಮಾಡಿದರು. ಪರಿಣಾಮ ಕೇವಲ 19 ರನ್ಗಳಿಸುವಷ್ಟರಲ್ಲಿ ಕರ್ನಾಟಕ ತಂಡವು 6 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ 36.3 ಓವರ್ನಲ್ಲಿ ಕರ್ನಾಟಕ ತಂಡವು 122 ರನ್ಗಳಿಗೆ ಸರ್ವಪತನ ಕಂಡಿತು. ತಮಿಳುನಾಡು ಪರ ಸಿದ್ದಾರ್ಥ್ 4 ವಿಕೆಟ್ ಕಬಳಿಸಿದರೆ, ಸಾಯಿ ಕಿಶೋರ್ 3 ವಿಕೆಟ್ ಪಡೆದರು.
123 ರನ್ಗಳ ಸಾಧಾರಣ ಗುರಿ ಪಡೆದ ತಮಿಳುನಾಡು ತಂಡವು ಎಚ್ಚರಿಕೆಯ ಆಟ ಪ್ರದರ್ಶಿಸಿದರು. ತಂಡದ ಮೊತ್ತ 58 ರನ್ ವೇಳೆಗೆ ಇಬ್ಬರು ಆರಂಭಿಕರನ್ನು ಕರ್ನಾಟಕ ತಂಡವು ಔಟ್ ಮಾಡಿದರೂ, ಆ ಬಳಿಕ ಬಂದ ಬಾಬಾ ಇಂದ್ರಜಿತ್ ಅಜೇಯ ಅರ್ಧಶತಕ ಬಾರಿಸಿದರು. ಇನ್ನು ವಾಷಿಂಗ್ಟನ್ ಸುಂದರ್ 31 ರನ್ಗಳ ಕಾಣಿಕೆ ನೀಡಿದರು. ಅದರಂತೆ ತಮಿಳುನಾಡು ತಂಡವು 28 ಓವರ್ನಲ್ಲಿ 2 ವಿಕೆಟ್ ಕಳೆದುಕೊಂಡು 123 ರನ್ಗಳ ಗುರಿ ಮುಟ್ಟಿತು. ಈ ಮೂಲಕ 8 ವಿಕೆಟ್ ಭರ್ಜರಿ ಜಯ ಸಾಧಿಸಿತು.
ಇದನ್ನೂ ಓದಿ: World Record: ಬರೋಬ್ಬರಿ 15 ಸಿಕ್ಸ್: ಕ್ರಿಕೆಟ್ ಇತಿಹಾಸದ ಅತೀ ವೇಗದ ಶತಕ
ಇದನ್ನೂ ಓದಿ: IPL 20222: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
ಇದನ್ನೂ ಓದಿ: Virat Kohli: ಭಾರತ ತಂಡ ಕಂಡ ಅತ್ಯಂತ ಯಶಸ್ವಿ ನಾಯಕ ವಿರಾಟ್ ಕೊಹ್ಲಿ…ಆದರೂ
(Vijay Hazare Trophy 2021: Tamil Nadu Beat Karnataka)
