AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಮತ್ತೆ ಹೀನಾಯವಾಗಿ ಔಟಾದ ವಿರಾಟ್ ಕೊಹ್ಲಿ: ವೈರಲ್ ಆಗುತ್ತಿದೆ ವಿಡಿಯೋ

ENG vs IND ODI: ಆರಂಭಿಕರು ಔಟಾದ ಬಳಿಕ ಎಚ್ಚರಿಕೆಯಿಂದ ಆಡಬೇಕಾದ ಕೊಹ್ಲಿ ಡೇವಿಡ್ ವಿಲ್ಲೆ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಕೊಹ್ಲಿ ಲೆಂತ್ ಬಾಲ್ ಅನ್ನು ಸರಿಯಾಗಿ ಅರಿಯುವಲ್ಲಿ ಮತ್ತೊಮ್ಮೆ ಎಡವಿದರು.

Virat Kohli: ಮತ್ತೆ ಹೀನಾಯವಾಗಿ ಔಟಾದ ವಿರಾಟ್ ಕೊಹ್ಲಿ: ವೈರಲ್ ಆಗುತ್ತಿದೆ ವಿಡಿಯೋ
Virat Kohli Out
TV9 Web
| Updated By: Vinay Bhat|

Updated on:Jul 15, 2022 | 11:07 AM

Share

ಇಂಗ್ಲೆಂಡ್ (England) ವಿರುದ್ಧದ ಟಿ20 ಸರಣಿ ಬಳಿಕ ಇದೀಗ ಏಕದಿನ ಸರಣಿಯಲ್ಲೂ ವಿರಾಟ್ ಕೊಹ್ಲಿ (Virat Kohli) ವೈಫಲ್ಯದಾಟ ಮುಂದುವರೆದಿದೆ. ಟೆಸ್ಟ್​ನ ಎರಡು ಇನ್ನಿಂಗ್ಸ್​ನಲ್ಲಿ 11 ಮತ್ತು 10 ರನ್ ಗಳಿಸಿ ಔಟಾಗಿದ್ದ ಕೊಹ್ಲಿ ಆಡಿದ ಎರಡು ಟಿ20 ಪಂದ್ಯಗಳಲ್ಲೂ 1 ಮತ್ತು 11 ರನ್​ಗೆ ನಿರ್ಗಮಿಸಿದ್ದರು. ಇದೀಗ ಎರಡನೇ ಏಕದಿನ ಪಂದ್ಯದಲ್ಲೂ ಕೊಹ್ಲಿಯದ್ದು ಅದೇ ಆಟ ಮುಂದುವರೆದಿದೆ. ಗುರುವಾರ ನಡೆದ ಪಂದ್ಯದಲ್ಲಿ ಸಾಧಾರಣ ಮೊತ್ತವನ್ನು ಚೇಸ್ ಮಾಡಲಾಗದೆ ಭಾರತ (India) ಹೀನಾಯ ಸೋಲು ಕಂಡಿತು. ಒಂದು ಕಾಲದಲ್ಲಿ ಚೇಸಿಂಗ್​ನಲ್ಲಿ ಮಾಸ್ಟರ್ ಆಗಿದ್ದ ಕೊಹ್ಲಿ ಆಡಲೇ ಬೇಕಾದ ಪಂದ್ಯದಲ್ಲಿ ಮತ್ತೆ ವಿಫಲರಾದರು. ಕೇವಲ  25 ಎಸೆತಗಳಲ್ಲಿ ಎದುರಿಸಿದ ಕೊಹ್ಲಿ ಗಳಿಸಿದ್ದು 16 ರನ್. ಕೊಹ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದ ನಂತರ ಅವರ ಮೇಲೆ ಟೀಕೆ ಮಾಡುವವರ ಸಂಖ್ಯೆ ಕೂಡ ಅಧಿಕವಾಗಿದೆ.

ವಿರಾಟ್ ಕೊಹ್ಲಿ ಕ್ರೀಸ್​ಗೆ ಬಂದಾಗ ಭಾರತ 16 ರನ್​ಗೆ 1 ವಿಕೆಟ್ ಕಳೆದುಕೊಂಡಿತ್ತು. ಆದರೆ, 11ನೇ ಓವರ್ ಆಗುವ ಹೊತ್ತಿಗೆ 29 ರನ್​ಗೆ 3 ವಿಕೆಟ್ ಪತನಗೊಂಡವು. ಆರಂಭಿಕರು ಔಟಾದ ಬಳಿಕ ಎಚ್ಚರಿಕೆಯಿಂದ ಆಡಬೇಕಾದ ಕೊಹ್ಲಿ ಡೇವಿಡ್ ವಿಲ್ಲೆ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಕೊಹ್ಲಿ ಲೆಂತ್ ಬಾಲ್ ಅನ್ನು ಸರಿಯಾಗಿ ಅರಿಯುವಲ್ಲಿ ಮತ್ತೊಮ್ಮೆ ಎಡವಿದರು. ಕೊಹ್ಲಿ ಔಟಾದ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
Robin Uthappa: ರಾಬಿನ್ ಉತ್ತಪ್ಪ-ಶೀತಲ್ ದಂಪತಿಗೆ ಮುದ್ದಾದ ಹೆಣ್ಣು ಮಗು ಜನನ: ಹೆಸರು ಟ್ರಿನಿಟಿ ಥಿಯಾ
Image
Rohit Sharma: ತಂಡದ ಹೀನಾಯ ಸೋಲಿಗೆ ನಾಯಕ ರೋಹಿತ್ ಶರ್ಮಾ ದೂರಿದ್ದು ಯಾರನ್ನ ಗೊತ್ತೇ?
Image
Rohit Sharma: ಹೀನಾಯ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಕ್ಕೆ ಮತ್ತೊಂದು ದೊಡ್ಡ ಶಾಕ್: ಏನದು?
Image
IND vs ENG: ರೀಸ್ ಟೋಪ್ಲೆ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಭಾರತ: ಇಂಗ್ಲೆಂಡ್​​ಗೆ 100 ರನ್​ಗಳ ಜಯ

ಕೊಹ್ಲಿ ಬೆನ್ನಿಗೆ ನಿಂತ ರೋಹಿತ್:

ವಿರಾಟ್ ಕೊಹ್ಲಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೋಹಿತ್, “ಕೊಹ್ಲಿ ಅನೇಕ ಪಂದ್ಯಗಳನ್ನು ಆಡಿದ್ದಾರೆ. ಅನೇಕ ವರ್ಷಗಳಿಂದ ತಂಡಕ್ಕೆ ಕೊಡುಗೆ ನೀಡಿದ್ದಾರೆ. ಅಂಥಹ ಅದ್ಭುತ ಬ್ಯಾಟರ್​​ಗೆ ಯಾವುದೇ ಆಶ್ವಾಸನೆಯ ಅಗತ್ಯವಿಲ್ಲ. ಇದೇ ವಿಚಾರವನ್ನು ನಾನು ಕಳೆದ ಸುದ್ದಿಗೋಷ್ಠಿಯಲ್ಲೂ ಹೇಳಿದ್ದೆ. ಆಟಗಾರನ ಕ್ರಿಕೆಟ್ ಜೀವನದಲ್ಲಿ ಏಳು-ಬೀಳು ಇರುವುದು ಸಾಮಾನ್ಯ. ಅದು ಆಟದ ಒಂದು ಭಾಗ. ಕೊಹ್ಲಿಗೆ ಕಮ್​ಬ್ಯಾಕ್ ಮಾಡಲು ಒಂದು ಅಥವಾ ಎರಡು ಪಂದ್ಯಗಳು ಬೇಕಷ್ಟೆ,” ಎಂದು ಹೇಳಿದರು.

ಭಾರತ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಇಂಗ್ಲೆಂಡ್ ಊಹಿಸಲಾಗದ ರೀತಿಯಲ್ಲಿ ಕಮ್​ಬ್ಯಾಕ್ ಮಾಡಿದೆ. ದ್ವಿತೀಯ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಮಿಂಚಿದ ಆಂಗ್ಲರು ಬರೋಬ್ಬರಿ 100 ರನ್​ಗಳ ಜಯ ತನ್ನದಾಗಿಸಿತು. ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್ ಪರ ಜೇಸನ್‌ ರಾಯ್‌(23) ಹಾಗೂ ಜಾನಿ ಬೈರ್ಸ್ಟೋವ್‌(38) ಉಪಯುಕ್ತ ರನ್‌ಗಳಿಸಿದರು. ನಂತರ ದಿಢೀರ್ ಕುಸಿತ ಕಂಡರೂ ಲಿವಿಂಗ್‌ಸ್ಟೋನ್‌(33), ಮೊಯಿನ್‌ ಅಲಿ(47) ಹಾಗೂ ಡೇವಿಡ್‌ ವಿಲ್ಲಿ(41) ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಇಂಗ್ಲೆಂಡ್‌ 246 ರನ್‌ ಗಳಿಸಿತು.

ಟಾರ್ಗೆಟ್‌ ಬೆನ್ನತ್ತಿದ ಭಾರತ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿತು. ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ 27 ರನ್, ಹಾರ್ದಿಕ್‌ ಪಾಂಡ್ಯ 29 ರನ್, ರವೀಂದ್ರ ಜಡೇಜಾ 29 ರನ್ ಹಾಗೂ ಮೊಹಮ್ಮದ್ ಶಮಿ 23 ರನ್ ಗಳಿಸಿದ್ದೇ ಹೆಚ್ಚು. ಭಾರತ 38.5 ಓವರ್​ನಲ್ಲಿ 146 ರನ್​ಗೆ ಆಲೌಟ್ ಆಯಿತು. ಇಂಗ್ಲೆಂಡ್‌ ಪರ ರೀಸ್ ಟೋಪ್ಲೆ 9.5 ಓವರ್ ಬೌಲಿಂಗ್ ಮಾಡಿ 24 ರನ್ ನೀಡಿ 6 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಬಾಜಿಕೊಂಡರು.

Published On - 11:07 am, Fri, 15 July 22