Axar Patel: ಅಕ್ಷರ್ ಪಟೇಲ್ ಸ್ಫೋಟಕ ಸಿಕ್ಸ್ ಸಿಡಿಸಿದಾಗ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಏನು ಮಾಡಿದ್ರು ನೋಡಿ
Virat Kohli, IND vs AUS 4th Test: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ನಲ್ಲಿ ಆರನೇ ವಿಕೆಟ್ಗೆ ವಿರಾಟ್ ಕೊಹ್ಲಿ ಜೊತೆಯಾದ ಅಕ್ಷರ್ ಪಟೇಲ್ ಆಸೀಸ್ ಬೌಲರ್ಗಳನ್ನು ದಿಟ್ಟತನದಿಂದ ಎದುರಿಸಿದರು. ಪಟೇಲ್ 113 ಎಸೆತಗಳಲ್ಲಿ 5 ಫೋರ್ ಹಾಗೂ 4 ಸಿಕ್ಸರ್ನೊಂದಿಗೆ 79 ರನ್ ಸಿಡಿಸಿದರು.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾ ದತ್ತ ದಾಗುತ್ತಿದೆ. ಆಸ್ಟ್ರೇಲಿಯಾವನ್ನು 480 ರನ್ಗಳಿಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಮಾಡಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ (Virat Kohli), ಶುಭ್ಮನ್ ಗಿಲ್ ಶತಕ ಹಾಗೂ ಅಕ್ಷರ್ ಪಟೇಲ್ (Axar Patel) ಅರ್ಧಶತಕದ ನೆರವಿನಿಂದ 571 ರನ್ ಕಲೆಹಾಕಿತು. ಈ ಮೂಲಕ 91 ರನ್ಗಳ ಮುನ್ನಡೆ ಪಡೆಯಿತು. ಟೀಮ್ ಇಂಡಿಯಾ ಇಷ್ಟು ದೊಡ್ಡ ಕಲೆಹಾಕಲು ಪ್ರಮುಖ ಕಾರಣವಾಗಿದ್ದು ಕೊಹ್ಲಿ-ಅಕ್ಷರ್ ಜೊತೆಯಾಟ.
ಆರನೇ ವಿಕೆಟ್ಗೆ ವಿರಾಟ್ ಜೊತೆಯಾದ ಅಕ್ಷರ್ ಪಟೇಲ್ ಆಸೀಸ್ ಬೌಲರ್ಗಳನ್ನು ದಿಟ್ಟತನದಿಂದ ಎದುರಿಸಿದರು. ಬಿರುಸಿನ ಆಟವಾಡಿದ ಪಟೇಲ್ 113 ಎಸೆತಗಳಲ್ಲಿ 5 ಫೋರ್ ಹಾಗೂ 4 ಸಿಕ್ಸರ್ನೊಂದಿಗೆ 79 ರನ್ ಸಿಡಿಸಿದರು. ಕೊಹ್ಲಿ ಜೊತೆಗೂಡಿ 162 ರನ್ಗಳ ಕಾಣಿಕೆ ನೀಡಿದರು. ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಕೊಹ್ಲಿಗೆ ಅತ್ಯುತ್ತಮ ಸಾಥ್ ನೀಡಿದ ಸ್ಟಾರ್ ಆಲ್ರೌಂಡರ್ ಸಿಡಿಸಿದ ಒಂದು ಸಿಕ್ಸ್ ರೋಚಕವಾಗಿತ್ತು. ಮ್ಯಾಥ್ಯೂ ಕುಹ್ಮೆನಮ್ ಬೌಲಿಂಗ್ನಲ್ಲಿ ಪಟೇಲ್ ಮಿಡ್ ವಿಕೆಟ್ ಮೂಲಕ 88 ಮೀಟರ್ನ ಸಿಕ್ಸರ್ ಬಾರಿಸಿದರು. ಇದನ್ನು ಕಂಡು ಕೊಹ್ಲಿ ಹಾಗೂ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಒಂದು ಕ್ಷಣ ದಂಗಾಗಿ ಹೋದರು. ಇಲ್ಲಿದೆ ನೋಡಿ ವಿಡಿಯೋ.
— Anna 24GhanteChaukanna (@Anna24GhanteCh2) March 12, 2023
Virat Kohli: 40 ವರ್ಷಗಳ ಹಳೆಯ ಸಾಧನೆಯನ್ನು ಪುನರಾವರ್ತಿಸಿದ ವಿರಾಟ್ ಕೊಹ್ಲಿ
ಕೊಹ್ಲಿ ಶತಕ:
ನಾಲ್ಕನೇ ದಿನದಾಟದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮೂರು ವರ್ಷ, ಮೂರು ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. 241 ಎಸೆತಗಳಲ್ಲಿ ಶತಕ ಸಾಧನೆ ತೋರಿದ ಕೊಹ್ಲಿ ಇನ್ನಿಂಗ್ಸ್‌ನಲ್ಲಿ 5 ಬೌಂಡರಿಗಳಿದ್ದವು. ಇಷ್ಟು ಎಸೆತಗಳನ್ನು ಎದುರಿಸಿ ನಿಧಾನಗತಿಯಲ್ಲಿ ಶತಕ ಗಳಿಸಿರುವ ಅವರ ಎರಡನೇ ಇನ್ನಿಂಗ್ಸ್ ಇದಾಗಿದೆ. ಈ ಮೂಲಕ ಕೊಹ್ಲಿ ಅವರು ಟೆಸ್ಟ್ ಕರಿಯರ್ನಲ್ಲಿ 28ನೇ ಸೆಂಚುರಿ, ಹಾಗೆಯೇ ತಮ್ಮ ವೃತ್ತಿ ಜೀವನದ 75ನೇ ಶತಕವನ್ನೂ ಪೂರ್ಣಗೊಳಿಸಿದ್ದಾರೆ. 2019 ರಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಶತಕವನ್ನು ಬಾರಿಸಿದ್ದರು. ಕೊಹ್ಲಿ ಒಟ್ಟು 364 ಎಸೆತಗಳಲ್ಲಿ 15 ಫೋರ್ನೊಂದಿಗೆ 186 ರನ್ ಗಳಿಸಿ ಔಟಾದರು.
571 ರನ್ ಗಳಿಸಿದ ಭಾರತ:
ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿತ್ತು. 191 ರನ್ಗಳ ಹಿನ್ನಡೆಯೊಂದಿಗೆ ಕೊಹ್ಲಿ ಹಾಗೂ ಜಡೇಜಾ ಕ್ರೀಸ್ನಲ್ಲಿದ್ದರು. ನಾಲ್ಕನೇ ದಿನದಾಟ ಆರಂಭಿಸಿದ ಇವರಿಬ್ಬರ ಪೈಕಿ ಜಡೇಜ 28 ರನ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿಕೆಟ್ ಕೀಪರ್ ಶ್ರೀಕರ್ ಭರತ್ 44ಕ್ಕೆ ಔಟ್ ಆದರು. ವಿರಾಟ್ ಜೊತೆಗೂಡಿದ ಅಕ್ಷರ್ ಪಟೇಲ್ ಬಿರುಸಿನ ಬ್ಯಾಟಿಂಗ್ ಮಾಡಿದರು. ಅಶ್ವಿನ್ (7) ಮತ್ತು ಉಮೇಶ್ (0) ಬೇಗ ವಿಕೆಟ್ ಒಪ್ಪಿಸಿದರು. 186 ರನ್ ಗಳಿಸಿದ್ದ ವಿರಾಟ್ ಮಾರ್ಫಿ ಬೌಲಿಂಗ್ನಲ್ಲಿ ಔಟಾದರು. ಅಯ್ಯರ್ ಬೆನ್ನು ನೋವಿನ ಕಾರಣದಿಂದ ಬ್ಯಾಟಿಂಗ್ಗೆ ಬರಲಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:59 am, Mon, 13 March 23