Virat Kohli Run Out: ಫಿಲ್ ಸ್ಟಾಲ್ಟ್ರನ್ನು ಬೇಕಂತಲೇ ರನೌಟ್ ಮಾಡಿದ್ರ ವಿರಾಟ್ ಕೊಹ್ಲಿ?: ವೈರಲ್ ಆಗುತ್ತಿದೆ ವಿಡಿಯೋ
RCB vs DC IPL 2025: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಫಿಲ್ ಸಾಲ್ಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸ್ಫೋಟಕ ಆರಂಭವನ್ನು ನೀಡಿದ್ದರು. ಆದರೆ ವಿರಾಟ್ ಕೊಹ್ಲಿ ಮಾಡಿದ ಒಂದು ತಪ್ಪಿನಿಂದಾಗಿ ಅವರು ಔಟ್ ಆಗಬೇಕಾಯಿತು. ನಾಲ್ಕನೇ ಓವರ್‌ನ ಐದನೇ ಎಸೆತದಲ್ಲಿ ಈ ಘಟನೆ ಸಂಭವಿಸಿತು. ಫಿಲ್ ಸಾಲ್ಟ್ ಅವರ ವಿಕೆಟ್ ಡೆಲ್ಲಿ ಉಡುಗೊರೆಯಾಗಿ ಸಿಕ್ಕಿತು.

ಬೆಂಗಳೂರು (ಏ. 11): ಐಪಿಎಲ್ 2025 ರ ಹೈ-ವೋಲ್ಟೇಜ್ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಆರ್‌ಸಿಬಿಗೆ (Royal Challengers Bengaluru vs Delhi Capitals) ದೊಡ್ಡ ಆಘಾತ ನೀಡಿ ತವರಿನಲ್ಲೇ ಹೀನಾಯ ಸೋಲು ಕಾಣುವಂತೆ ಮಾಡಿತು.. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡವು ಕೇವಲ 163 ರನ್‌ಗಳನ್ನು ಮಾತ್ರ ಗಳಿಸಿತು. ಆದರೆ, ಟಾಸ್ ಸೋತು ಬ್ಯಾಟಿಂಗ್ ಶುರುಮಾಡಿದ ಆರ್‌ಸಿಬಿ ಸ್ಫೋಟಕ ಆರಂಭವನ್ನೇ ಪಡೆಯಿತು. ಪಂದ್ಯದ ಮೂರನೇ ಓವರ್ ವೇಳೆಗೆ ಆರ್‌ಸಿಬಿ ಸ್ಕೋರ್ 50 ತಲುಪಿತು. ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಜೋಡಿ ಮಬಂದಂತೆ ಬ್ಯಾಟ್ ಬೀಸಿದರು. ಆದರೆ ನಂತರ ಒಂದು ಘಟನೆ ಇಡೀ ಸ್ಟೇಡಿಯಂ ಅನ್ನು ಸ್ತಬ್ಧವಾಗಿಸಿತು. ವಿರಾಟ್ ಕೊಹ್ಲಿ ಮಾಡಿದ ಎಡವಟ್ಟಿನಿಂದ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡರು.
ಪಂದ್ಯದ ಗತಿ ಬದಲಾಯಿಸಿದ ಸಾಲ್ಟ್ ವಿಕೆಟ್:
ಫಿಲ್ ಸಾಲ್ಟ್ ಆರ್‌ಸಿಬಿಗೆ ಸ್ಫೋಟಕ ಆರಂಭವನ್ನು ನೀಡಿದ್ದರು. ಆದರೆ ಒಂದು ತಪ್ಪಿನಿಂದಾಗಿ ಅವರು ಔಟ್ ಆಗಬೇಕಾಯಿತು. ನಾಲ್ಕನೇ ಓವರ್‌ನ ಐದನೇ ಎಸೆತದಲ್ಲಿ ಈ ಘಟನೆ ಸಂಭವಿಸಿತು. ಫಿಲ್ ಸಾಲ್ಟ್ ಅವರ ವಿಕೆಟ್ ಡೆಲ್ಲಿ ಉಡುಗೊರೆಯಾಗಿ ಸಿಕ್ಕಿತು. ಅಕ್ಷರ್ ಪಟೇಲ್ ಅವರ ಚೆಂಡನ್ನು ಡೀಪ್ ಕವರ್ ಕಡೆಗೆ ಹೊಡೆದ ಸಾಲ್ಟ್ ಒಂದು ರನ್ ಗಳಿಸಲು ಓಡುತ್ತಾರೆ. ಕೊಹ್ಲಿ ಕೂಡ ಆರಂಭದಲ್ಲಿ ರನ್ ಓಡುವ ಎಂದು ಸನ್ನೆ ಮಾಡಿದರು, ಆದರೆ ಓಡಿಕೊಂಡು ಬಹುತೇಕ ಪಿಚ್ ಮಧ್ಯದವರೆಗೆ ಬಂದಾಗ ಕೊಹ್ಲಿ ರನ್ ಬೇಡ ಎಂದು ನಿರಾಕರಿಸಿದರು.
Man of the Match was deserved by Virat Kohli
He helped DC to win the match, by making Salt Run Out pic.twitter.com/MKBWgluBcS
— Mustafa Moudi (@Mustafamoudi) April 10, 2025
ಸಾಲ್ಟ್ ಕೂಡ ಹಿಂದೆ ಸರಿಯಬೇಕಾಯಿತು. ಆದರೆ ಅವರು ಹಿಂದೆ ತಿರುಗಿಕೊಂಡು ಹೋಗುವಾಗ ಸ್ಲಿಪ್ ಆದರು. ಸರಿಯಾದ ಸಮಯಕ್ಕೆ ಕ್ರೀಸ್ ತಲುಪಲು ಸಾಧ್ಯವಾಗಲಿಲ್ಲ, ಪರಿಣಾಮ ರನೌಟ್ ಆದರು. ಈ ರೀತಿಯಾಗಿ ದೆಹಲಿ ತನ್ನ ಮೊದಲ ಯಶಸ್ಸನ್ನು ಗಳಿಸಿತು. ಆ ಸಮಯದಲ್ಲಿ, ಕೊಹ್ಲಿ ವೇಗವಾಗಿ ಓಡುವ ಬದಲು ಚೆಂಡನ್ನು ನೋಡುತ್ತಿದ್ದರು, ಇದರಿಂದಾಗಿ ಸಾಲ್ಟ್ ವಿಕೆಟ್ ಕಳೆದುಕೊಳ್ಳಬೇಕಾಯಿತು. 5 ಓವರ್‌ಗಳಲ್ಲಿ ಆರ್‌ಸಿಬಿ ಸ್ಕೋರ್ 1 ವಿಕೆಟ್ ನಷ್ಟಕ್ಕೆ 64 ರನ್ ಆಗಿತ್ತು. ಆದರೆ ಇದಾದ ನಂತರ ತಂಡ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು.
Virat Kohli: ರಜತ್ ನಾಯಕತ್ವದಿಂದ ಕೋಪಗೊಂಡ ಕೊಹ್ಲಿ: ಪಂದ್ಯದ ಮಧ್ಯೆಯೇ ಕಾರ್ತಿಕ್ ಜೊತೆ ಜಗಳ?
ಫಿಲ್ ಸಾಲ್ಟ್ ರನೌಟ್ ಕಂಡು ಸಾಮಾಜಿಕ ಮಾಧ್ಯಮದಲ್ಲಿ ಕೆಲ ಬಳಕೆದಾರರು ವಿರಾಟ್ ಕೊಹ್ಲಿಯ ಬೇಕಂತ ರನೌಟ್ ಮಾಡಿದರು ಎಂದು ದೂರಿದ್ದಾರೆ. ಓರ್ವ ಬಳಕೆದಾರ, ‘‘ಏಕದಿನ ವಿಶ್ವಕಪ್ನಲ್ಲಿ ಸೂರ್ಯಕುಮಾರ್ ಅವರನ್ನು ರನೌಟ್ ಮಾಡಿದರು, ಭಾರತ-ನ್ಯೂಝಿಲೆಂಡ್ ದ್ವಿತೀಯ ಟೆಸ್ಟ್ನಲ್ಲಿ ರಿಷಭ್ ಪಂತ್, ಮೂರನೇ ಟೆಸ್ಟ್ನಲ್ಲಿ ಶುಭ್ಮನ್ ಗಿಲ್, ಬಿಜಿಟಿಯಲ್ಲಿ ಜೈಸ್ವಾಲ್ ಈಗ ಫಿಲ್ ಸಾಲ್ಟ್ರನ್ನು ಕೊಹ್ಲಿ ರನೌಟ್ ಮಾಡಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ.
Virat Kohli :-
– Ran out SKY in ODI WC – Ran out Pant in IND vs NZ 2nd test – Got run out himself in IND vs NZ 3rd test while almost running out Gill – Ran out Jaiswal in BGT
Now ran out Phil Salt when he was all guns blazing 👏#ViratKohli #RCBvDCpic.twitter.com/xbyI0muvYw
— Prateek (@prateek_295) April 10, 2025
ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ರನ್ ಗಳಿಸುವಾಗ ತಪ್ಪು ತಿಳುವಳಿಕೆಯಿಂದ ರನೌಟ್ ಆಗುವುದು ಆಗಾಗ್ಗೆ ಸಂಭವಿಸುತ್ತದೆ. ಹಲವು ಬಾರಿ ಈ ತಪ್ಪು ತಿಳುವಳಿಕೆ ದುಬಾರಿಯಾಗುತ್ತದೆ. ಸಾಲ್ಟ್ ವಿಷಯದಲ್ಲೂ ಇದೇ ರೀತಿಯ ಘಟನೆ ಸಂಭವಿಸಿದೆ. ಫಿಲ್ ಸ್ಫೋಟಕ ಆರಂಭ ಪಡೆದು ಉತ್ತಮ ಲಯದಲ್ಲಿ ಕಾಣುತ್ತಿದ್ದರು ಆದರೆ ಒಂದು ಸಣ್ಣ ತಪ್ಪಿನಿಂದಾಗಿ ಅವರು ಪೆವಿಲಿಯನ್‌ಗೆ ಮರಳಬೇಕಾಯಿತು. ದುರದೃಷ್ಟವಶಾತ್, ಉತ್ತಮ ಫಾರ್ಮ್‌ನಲ್ಲಿದ್ದ ಫಿಲ್ ಸಾಲ್ಟ್ 17 ಎಸೆತಗಳಲ್ಲಿ 37 ರನ್ ಗಳಿಸಿ ರನ್ ಔಟ್ ಆಗಿ ಹೊರನಡೆಯಬೇಕಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ