
ಶ್ರೀಲಂಕಾ ಪ್ರವಾಸವನ್ನು ಟೀಂ ಇಂಡಿಯಾ (India vs Sri Lanka) ಗೆಲುವಿನೊಂದಿಗೆ ಆರಂಭಿಸಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡವನ್ನು 165 ರನ್ಗಳಿಂದ ಮಣಿಸಿದ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಲಂಕಾ ತಂಡವನ್ನು ಅವರ ನೆಲದಲ್ಲಿ ಹೀನಾಯವಾಗಿ ಮಣಿಸುವಲ್ಲಿ ಟೀಂ ಇಂಡಿಯಾದ ಬೌಲರ್ಗಳ ಪಾತ್ರ ಅಪಾರವಾಗಿತ್ತು. ಅದರಲ್ಲೂ ಯುವ ಸ್ಪಿನ್ನರ್ ಮಾನವ್ ಸುತಾರ್ (Manav Suthar) ಒಬ್ಬರೇ ಎರಡು ಇನ್ನಿಂಗ್ಸ್ಗಳಲ್ಲಿ ಒಟ್ಟು 10 ವಿಕೆಟ್‌ಗಳನ್ನು ಪಡೆದು ತಂಡದ ಗೆಲುವಿನ ರೂವಾರಿ ಎನಿಸಿದರು. ಆದಾಗ್ಯೂ ಮಾನವ್ಗೆ ಈ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಲಿಲ್ಲ. ಅವರ ಬದಲಿಗೆ ಕನ್ನಡಿಗ ದೇವದತ್ ಪಡಿಕ್ಕಲ್‌ಗೆ ( Devdutt Padikkal) ಈ ಪ್ರಶಸ್ತಿ ನೀಡಲಾಯಿತು. ಅಷ್ಟಕ್ಕೂ ಪಡಿಕ್ಕಲ್‌ಗೆ ಈ ಪ್ರಶಸ್ತಿ ನೀಡಲು ಕಾರಣವೇನು? ಅದಕ್ಕೆ ಉತ್ತರ ಇಲ್ಲಿದೆ.
ಮೊದಲಿಗೆ ಇವರಿಬ್ಬರ ಪ್ರದರ್ಶನವನ್ನು ನೋಡುವುದಾದರೆ.. ಮಾನವ್ ಸುತಾರ್ ಎರಡು ಇನ್ನಿಂಗ್ಸ್‌ನಲ್ಲಿ 45.2 ಓವರ್‌ಗಳನ್ನು ಬೌಲ್ ಮಾಡಿ 131 ರನ್ಗಳಿಗೆ 10 ವಿಕೆಟ್ ಕಬಳಿಸಿದರು. ಇದರಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳು ಸೇರಿವೆ. ಇತ್ತ ದೇವದತ್ ಪಡಿಕ್ಕಲ್ ಮೊದಲ ಇನ್ನಿಂಗ್ಸ್‌ನಲ್ಲಿ 167 ರನ್ ಬಾರಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 44 ರನ್‌ಗಳ ಕಾಣಿಕೆ ನೀಡಿದರು. ಪ್ರದರ್ಶನದ ಮಟ್ಟಿಗೆ ಹೇಳುವುದಾದರೆ.. ಇಬ್ಬರದ್ದು ಸಮಬಲದ ಹೋರಾಟ ಎನ್ನಬಹುದು. ಆದರೆ ಬೌಲಿಂಗ್ ಸ್ನೇಹಿ ಪಿಚ್‌ನಲ್ಲಿ ದೇವದತ್ ಪಡಿಕ್ಕಲ್ ನೀಡಿದ ಪ್ರದರ್ಶನ ಅವರಿಗೆ ಪಂದ್ಯ ಶ್ರೇಷ್ಠ ನೀಡಲು ಕಾರಣವಾಯಿತು.
IND vs AUS: ಆಸ್ಟ್ರೇಲಿಯಾ ವಿರುದ್ಧ 150 ರನ್ ಚಚ್ಚಿದ ಕನ್ನಡಿಗ ದೇವದತ್ ಪಡಿಕ್ಕಲ್
ದೇವದತ್ ಪಡಿಕ್ಕಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಲು ಪ್ರಮುಖ ಕಾರಣವೆಂದರೆ ಗಾಲೆಯ ಕಷ್ಟಕರವಾದ ಪಿಚ್. ಮೇಲೆ ಹೇಳಿದಂತೆ ಗಾಲೆಯ ಪಿಚ್ ಬ್ಯಾಟಿಂಗ್ ಮಾಡಲು ಸುಲಭವಾಗಿರಲಿಲ್ಲ. ಸ್ಪಿನ್ನರ್‌ಗಳಿಗೆ ಉತ್ತಮ ಟರ್ನ್ ಸಿಗುತ್ತಿತ್ತು. ಆದರೆ ಇದರ ಹೊರತಾಗಿಯೂ, ಪಡಿಕ್ಕಲ್ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಬಾರಿಸಿ 167 ರನ್‌ಗಳ ಇನ್ನಿಂಗ್ಸ್ ಆಡಿದರು. ಎರಡನೇ ಇನ್ನಿಂಗ್ಸ್‌ನಲ್ಲೂ 44 ರನ್ ಕಲೆಹಾಕಿದರು. ಇದರ ಜೊತೆಗೆ ಮೊದಲ ಇನ್ನಿಂಗ್ಸ್‌ನಲ್ಲಿ ಪಡಿಕ್ಕಲ್, ಕೆಎಲ್ ರಾಹುಲ್ ಅವರೊಂದಿಗೆ 162 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರೆ, ಪಂತ್ ಅವರೊಂದಿಗೆ 71 ರನ್‌ಗಳ ಜೊತೆಯಾಟ ಕಟ್ಟಿದರು. ಪರಿಣಾಮವಾಗಿ, ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಒಟ್ಟು 462 ರನ್ ಕಲೆಹಾಕಿತು. ಅಂತಿಮವಾಗಿ ಶ್ರೀಲಂಕಾದ ಸೋಲಿಗೆ ಕಾರಣವಾಯಿತು.
Published On - 4:58 pm, Wed, 19 August 26