RCB vs RR: ಜೋಶ್ ಹೇಝಲ್​ವುಡ್ ಕಣಕ್ಕಿಳಿಯುತ್ತಾರಾ, ಇಲ್ವಾ? ಇಲ್ಲಿದೆ ಮಾಹಿತಿ

IPL 2026 RCB vs RR: ಇಂಡಿಯನ್ ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಏಪ್ರಿಲ್ 10 ರಂದು ನಡೆಯಲಿರುವ ಈ ಪಂದ್ಯದ ಮೂಲಕ ಆಸ್ಟ್ರೇಲಿಯನ್ ವೇಗಿ ಜೋಶ್ ಹೇಝಲ್​ವುಡ್ ಆರ್​ಸಿಬಿ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ.

RCB vs RR: ಜೋಶ್ ಹೇಝಲ್​ವುಡ್ ಕಣಕ್ಕಿಳಿಯುತ್ತಾರಾ, ಇಲ್ವಾ? ಇಲ್ಲಿದೆ ಮಾಹಿತಿ
Josh Hazelwood

Updated on: Apr 09, 2026 | 12:30 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​-19 ರಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಭರ್ಜರಿ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ (RCB) ತಂಡಕ್ಕೆ ಮೂರನೇ ಪಂದ್ಯಕ್ಕೂ ಮುನ್ನ ಆನೆಬಲ ಬಂದಂತಾಗಿದೆ. ಏಕೆಂದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ವೇಗಿ ಜೋಶ್ ಹೇಝಲ್​ವುಡ್ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

ಗಾಯದ ಸಮಸ್ಯೆ ಮತ್ತು ಪುನರಾಗಮನ:

ಹ್ಯಾಮ್‌ಸ್ಟ್ರಿಂಗ್ ಮತ್ತು ಅಕಿಲಿಸ್ ಸ್ನಾಯು ಸೆಳೆತದಿಂದಾಗಿ ಜೋಶ್ ಹೇಝಲ್‌ವುಡ್ ಈ ಸೀಸನ್‌ನ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದರು. ಇತ್ತೀಚಿನ ವರದಿಗಳ ಪ್ರಕಾರ, ಅವರು ನೆಟ್ಸ್‌ನಲ್ಲಿ ಪೂರ್ಣ ಪ್ರಮಾಣದ ಬೌಲಿಂಗ್ ಅಭ್ಯಾಸ ಆರಂಭಿಸಿದ್ದು, ಪೂರ್ಣ ಫಿಟ್ನೆಸ್ ಮರಳಿಸಿಕೊಂಡಿದ್ದಾರೆ. ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೇ ಅವರು ಲಭ್ಯರಿರಬೇಕಿತ್ತಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.

ಇದೀಗ ಸಂಪೂರ್ಣ ಫಿಟ್​ನೆಸ್ ಸಾಧಿಸಿರುವ ಜೋಶ್ ಹೇಝಲ್​ವುಡ್ ಅವರನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಅದರಂತೆ ಏಪ್ರಿಲ್ 10 ರಂದು ಗುವಾಹಟಿಯಲ್ಲಿ ನಡೆಯಲಿರುವ ಪಂದ್ಯದ ಮೂಲಕ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ.

ಹೇಝಲ್‌ವುಡ್ ಏಕೆ ಮುಖ್ಯ?

  • ಪವರ್‌ಪ್ಲೇ ನಿಯಂತ್ರಣ: ಈ ಬಾರಿ ಆರ್‌ಸಿಬಿ ಆರಂಭಿಕ ಓವರ್‌ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಡುತ್ತಿದೆ. ಹೇಝಲ್‌ವುಡ್ ಅವರ ನಿಖರ ಲೈನ್ ಮತ್ತು ಲೆಂತ್ ರನ್ ವೇಗಕ್ಕೆ ಬ್ರೇಕ್ ಹಾಕಬಲ್ಲದು.
  • ಡೆತ್ ಓವರ್‌ಗಳ ಪರಿಣಿತಿ: ಪಂದ್ಯದ ಅಂತಿಮ ಹಂತದಲ್ಲಿ ಯಾರ್ಕರ್ ಮತ್ತು ಬೌನ್ಸರ್‌ಗಳ ಮೂಲಕ ವಿಕೆಟ್ ಪಡೆಯುವ ಕಲೆ ಹೇಝಲ್​ವುಡ್​ಗೆ ಕರಗತವಾಗಿದೆ.

ಆಡುವ ಬಳಗದಿಂದ ಯಾರು ಔಟ್?

ಜೋಶ್ ಹೇಝಲ್‌ವುಡ್ ತಂಡಕ್ಕೆ ಮರಳಿದರೆ, ಕಳೆದ ಪಂದ್ಯಗಳಲ್ಲಿ ಆಡಿದ್ದ ನ್ಯೂಝಿಲೆಂಡ್‌ನ ವೇಗಿ ಜೇಕ್ಕಬ್ ಡಫಿ ಅವರು ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಡಫಿ ವಿಕೆಟ್ ಪಡೆದಿದ್ದರೂ, ಹೇಝಲ್‌ವುಡ್ ಅವರಷ್ಟು ಪ್ರಭಾವಶಾಲಿಯಾಗಿರಲಿಲ್ಲ. ಹೀಗಾಗಿ ಡಫಿ ಅವರನ್ನು ಹೊರಗಿಟ್ಟು ಹೇಝಲ್​ವುಡ್​ಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚು.

ರಾಜಸ್ಥಾನ್ ರಾಯಲ್ಸ್ ಸವಾಲು:

ರಾಜಸ್ಥಾನ್ ತಂಡದ ಅಗ್ರ ಕ್ರಮಾಂಕದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಬಲಿಷ್ಠ ಬ್ಯಾಟರ್‌ಗಳಿದ್ದಾರೆ. ಇವರನ್ನು ಕಟ್ಟಿಹಾಕಲು ಹೇಝಲ್‌ವುಡ್ ಅವರ ಎತ್ತರದ ಬೌನ್ಸ್ ಮತ್ತು ಸ್ವಿಂಗ್ ಆರ್‌ಸಿಬಿಗೆ ಅಸ್ತ್ರವಾಗಲಿದೆ. ಗುವಾಹಟಿಯ ಪಿಚ್ ವೇಗಿಗಳಿಗೆ ತುಸು ನೆರವು ನೀಡುವುದರಿಂದ ಹೇಝಲ್‌ವುಡ್ ಆಟ ಇಲ್ಲಿ ನಿರ್ಣಾಯಕವಾಗಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಜೋಶ್ ಹೇಝಲ್‌ವುಡ್ ಅವರ ಆಗಮನವು ಆರ್‌ಸಿಬಿ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸುವುದರಲ್ಲಿ ಅನುಮಾನವೇ ಇಲ್ಲ. ಈ ಮೂಲಕ ಆರ್​ಆರ್ ಪಡೆಯನ್ನು ಬಗ್ಗು ಬಡಿದು ಆರ್​ಸಿಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆಯಾ ಕಾದು ನೋಡಬೇಕಿದೆ.

ಇದನ್ನೂ ಓದಿ: IPL 2026: ಐಪಿಎಲ್​ ನಡುವೆ 5 ಹೊಸ ನಿಯಮಗಳು ಜಾರಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ಯಶ್ ದಯಾಳ್ (ಅಲಭ್ಯ).

 

Published On - 12:30 pm, Thu, 9 April 26

Follow Us