AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2023: ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್..RCB ಪಂದ್ಯಕ್ಕೆ ಉಚಿತ ಟಿಕೆಟ್..ಯಾವಾಗ ಮತ್ತು ಎಲ್ಲಿ?

WPL 2023: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 143 ರನ್​ಗಳಿಂದ ಹೀನಾಯವಾಗಿ ಸೋತಿದ್ದ ಸ್ಮೃತಿ ಮಂಧಾನ ಪಡೆ, 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್​ಗಳಿಂದ ಸೋಲನುಭವಿಸಿತ್ತು.

WPL 2023: ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್..RCB ಪಂದ್ಯಕ್ಕೆ ಉಚಿತ ಟಿಕೆಟ್..ಯಾವಾಗ ಮತ್ತು ಎಲ್ಲಿ?
GG vs RCB
TV9 Web
| Updated By: ಝಾಹಿರ್ ಯೂಸುಫ್|

Updated on:Mar 07, 2023 | 5:20 PM

Share

WPL 2023: ಅಂತಾರಾಷ್ಟ್ರೀಯ ಮಹಿಳಾ ದಿನವನ್ನು (Womens Day) ವಿಶೇಷವಾಗಿ ಆಚರಿಸಲು ವುಮೆನ್ಸ್ ಪ್ರೀಮಿಯರ್ ಲೀಗ್​ (WPL 2023) ನಿರ್ಧರಿಸಿದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಮಹಿಳಾ ದಿನದಂದು, ಅಂದರೆ ಮಾರ್ಚ್ 8, 2023 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್ ಪಂದ್ಯಕ್ಕೆ ಉಚಿತ ಟಿಕೆಟ್ ಘೋಷಿಸಲಾಗಿದೆ. ಮಹಿಳಾ ದಿನಾಚರಣೆಯ ಗೌರವಾರ್ಥವಾಗಿ GG vs RCB ಪಂದ್ಯಕ್ಕೆ ಎಂಟ್ರಿ ಫ್ರೀ ಇರಲಿದೆ ಎಂದು ಬಿಸಿಸಿಐ ತಿಳಿಸಿದೆ.

ವುಮೆನ್ಸ್​ ಪ್ರೀಮಿಯರ್ ಲೀಗ್​ನಲ್ಲಿ ಈಗಾಗಲೇ ಮಹಿಳೆಯರಿಗೆ ಉಚಿತ ಟಿಕೆಟ್‌ಗಳನ್ನು ನೀಡುತ್ತಿದೆ. ಇದಾಗ್ಯೂ ಪುರುಷ ಪ್ರೇಕ್ಷಕರು ಮಾತ್ರ ರೂ. 100 ರಿಂದ 400 ರೂ. ಒಳಗಿನ ಟಿಕೆಟ್ ತೆಗೆದುಕೊಳ್ಳಬೇಕಿತ್ತು. ಆದರೆ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪುರುಷರು ಮತ್ತು ಮಹಿಳೆಯರಿಗೆ ಟಿಕೆಟ್‌ಗಳನ್ನು ಉಚಿತವಾಗಿ ನೀಡಲಾಗುತ್ತಿರುವುದು ವಿಶೇಷ.

ಅದರಂತೆ ಮಾರ್ಚ್ 8 ರಂದು ಮುಂಬೈನ ಬ್ರಬೋರ್ನ್​ ಸ್ಟೇಡಿಯಂನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಜೈಂಟ್ಸ್ ನಡುವಣ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದು. ಇಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ಎಂದು ತಿಳಿಸಲಾಗಿದೆ. ಹೀಗಾಗಿ ಸ್ಟೇಡಿಯಂ ತುಂಬಿದ ಬಳಿಕ ಬಂದವರಿಗೆ ಗ್ಯಾಲರಿಯಲ್ಲಿ ಕೂತು ಪಂದ್ಯವನ್ನು ವೀಕ್ಷಿಸಲು ಅವಕಾಶ ಇರುವುದಿಲ್ಲ.

ಇದನ್ನೂ ಓದಿ
Image
Ravindra Jadeja: 500 ವಿಕೆಟ್ ಕಬಳಿಸಿ ಮತ್ತೊಂದು ದಾಖಲೆ ಬರೆದ ರವೀಂದ್ರ ಜಡೇಜಾ
Image
Rishabh Pant: ಅಪಘಾತದ ಬಳಿಕ ಜೀವನ ಹೇಗಿದೆ? ಮುಕ್ತವಾಗಿ ಮಾತನಾಡಿದ ರಿಷಭ್ ಪಂತ್
Image
IPL 2023: ಐಪಿಎಲ್​ ವೇಳೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ RCB ತ್ರಿಮೂರ್ತಿಗಳು
Image
IPL 2023: ಐಪಿಎಲ್​ನಿಂದ ಬುಮ್ರಾ ಔಟ್: ಮುಂಬೈ ಇಂಡಿಯನ್ಸ್​ ಮುಂದಿದೆ 3 ಆಯ್ಕೆಗಳು

ಈಗಾಗಲೇ ಎರಡು ಪಂದ್ಯಗಳನ್ನಾಡಿರುವ ಆರ್​ಸಿಬಿ 2 ಮ್ಯಾಚ್​ನಲ್ಲೂ ಸೋತಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 143 ರನ್​ಗಳಿಂದ ಹೀನಾಯವಾಗಿ ಸೋತಿದ್ದ ಸ್ಮೃತಿ ಮಂಧಾನ ಪಡೆ, 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್​ಗಳಿಂದ ಸೋಲನುಭವಿಸಿತ್ತು. ಇದೀಗ ಮಹಿಳಾ ದಿನಾಚರಣೆಯ ದಿನದಂದು ಆರ್​ಸಿಬಿ ಗುಜರಾತ್ ಜೈಂಟ್ಸ್ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್​ಸಿಬಿ ಜಯದ ಖಾತೆ ತೆರೆಯಲಿದೆಯಾ ಕಾದು ನೋಡಬೇಕಿದೆ.

ಇದನ್ನೂ ಓದಿ: WTC Final: ಹೀಗಾದ್ರೆ ಮಾತ್ರ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ​ ಫೈನಲ್​ಗೇರಬಹುದು..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ(ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ದಿಶಾ ಕಸತ್, ರಿಚಾ ಘೋಷ್(ವಿಕೆಟ್ ಕೀಪರ್), ಹೀದರ್ ನೈಟ್, ಕನಿಕಾ ಅಹುಜಾ, ಆಶಾ ಶೋಬನಾ, ಮೇಗನ್ ಸ್ಚುಟ್, ಪ್ರೀತಿ ಬೋಸ್, ರೇಣುಕಾ ಠಾಕೂರ್ ಸಿಂಗ್, ಡೇನ್ ವ್ಯಾನ್ ನೀಕರ್ಕ್, ಇಂದ್ರಾಣಿ ರಾಯ್, ಎರಿನ್ ಬರ್ನ್ಸ್, ಪೂನಂ ಖೇಮ್ನಾರ್, ಸಹನಾ ಪವಾರ್, ಶ್ರೇಯಾಂಕ ಪಾಟೀಲ್, ಕೋಮಲ್ ಝಂಝಾದ್.

Published On - 3:35 pm, Tue, 7 March 23

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್