AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ವಿರುದ್ಧದ ಸರಣಿಗೆ ಝಿಂಬಾಬ್ವೆ ತಂಡ ಪ್ರಕಟ

India vs Zimbabwe: ಭಾರತ ಮತ್ತು ಝಿಂಬಾಬ್ವೆ ನಡುವಣ ಸರಣಿಯು ಗುರುವಾರದಿಂದ ಆರಂಭವಾಗಲಿದೆ. ಹರಾರೆಯಲ್ಲಿ ಜರುಗಲಿರುವ ಈ ಸರಣಿಯಲ್ಲಿ ಒಟ್ಟು ಮೂರು ಪಂದ್ಯಗಳನ್ನಾಡಲಾಗುತ್ತದೆ. ಈ ಸರಣಿಯ ಮೊದಲ ಮ್ಯಾಚ್ ಜುಲೈ 23 ರಂದು ನಡೆದರೆ, ದ್ವಿತೀಯ ಪಂದ್ಯ ಜುಲೈ 25 ರಂದು ಜರುಗಲಿದೆ. ಇನ್ನು ಜುಲೈ 26 ರಂದು ಮೂರನೇ ಪಂದ್ಯ ನಡೆಯಲಿದೆ.

ಭಾರತದ ವಿರುದ್ಧದ ಸರಣಿಗೆ ಝಿಂಬಾಬ್ವೆ ತಂಡ ಪ್ರಕಟ
ZimbabweImage Credit source: Getty Images
ಝಾಹಿರ್ ಯೂಸುಫ್
|

Updated on:Jul 22, 2026 | 12:37 PM

Share

ಭಾರತದ ವಿರುದ್ಧದ ಟಿ20 ಸರಣಿಗೆ ಝಿಂಬಾಬ್ವೆ ತಂಡವನ್ನು ಪ್ರಕಟಿಸಲಾಗಿದೆ. ಅನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡಿರುವ 15 ಸದಸ್ಯರುಗಳ ಈ ತಂಡವನ್ನು ಸಿಕಂದರ್ ರಾಝ ಮುನ್ನಡೆಸಲಿದ್ದಾರೆ. ಇನ್ನು ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಕೆಲ ಆಟಗಾರರನ್ನು ಈ ಬಾರಿ ಕೈ ಬಿಡಲಾಗಿದೆ.

ಮರಳಿದ ಸ್ಟಾರ್ಸ್, ಹೊಸ ಮುಖಕ್ಕೆ ಚಾನ್ಸ್!

  • ತಫಾಡ್ಜ್ವಾ ತ್ಸೀಗಾಗೆ ಚೊಚ್ಚಲ ಅವಕಾಶ: ವಿಕೆಟ್ ಕೀಪರ್ ಬ್ಯಾಟರ್ ತಫಾಡ್ಜ್ವಾ ತ್ಸೀಗಾ ಅವರು ಇದೇ ಮೊದಲ ಬಾರಿಗೆ ಝಿಂಬಾಬ್ವೆ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
  • ವೆಸ್ಲಿ ಮಾಧೆವೆರೆ ಕಂಬ್ಯಾಕ್: ಬಾಂಗ್ಲಾದೇಶ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಸ್ಟಾರ್ ಆಲ್‌ರೌಂಡರ್ ವೆಸ್ಲಿ ಮಾಧೆವೆರೆ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.
  • ನ್ಯೂಮನ್ ರಿಎಂಟ್ರಿ: ಗಾಯದಿಂದ ಚೇತರಿಸಿಕೊಂಡಿರುವ ಯುವ ವೇಗಿ ನ್ಯೂಮನ್ ನ್ಯಾಮೂರಿ ಕೂಡ ತಂಡಕ್ಕೆ ಮರಳಿದ್ದಾರೆ.

ತಂಡದಿಂದ ಹೊರಬಿದ್ದ ಪ್ರಮುಖರು:

ಬಾಂಗ್ಲಾದೇಶ್ ವಿರುದ್ಧದ ಕಳಪೆ ಪ್ರದರ್ಶನದಿಂದಾಗಿ ಕ್ಲೈವ್ ಮದಂಡೆ, ತಿನೊಟೆಂಡಾ ಮಾಪೋಸಾ ಮತ್ತು ತಾಶಿಂಗಾ ಮುಸೇಕಿವಾ ಅವರನ್ನು ಈ ಸರಣಿಯಿಂದ ಕೈಬಿಡಲಾಗಿದೆ. ಅದರಂತೆ ಝಿಂಬಾಬ್ವೆ ಟಿ20 ತಂಡ ಈ ಕೆಳಗಿನಂತಿದೆ…

ಝಿಂಬಾಬ್ವೆ ಟಿ20 ತಂಡ: ಸಿಕಂದರ್ ರಾಝ (ನಾಯಕ), ಬ್ರಿಯಾನ್ ಬೆನೆಟ್, ರಿಯಾನ್ ಬರ್ಲ್, ತನಕಾ ಚಿವಂಗಾ, ಬೆನ್ ಕರನ್, ಬ್ರಾಡ್ ಇವಾನ್ಸ್, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸ್ಸಿಂಗ್ ಮುಝರಬಾನಿ, ಡಿಯೋನ್ ಮೈಯರ್ಸ್, ರಿಚರ್ಡ್ ನ್ಗಾರವಾ, ನ್ಯೂಮನ್ ನ್ಯಾಮೂರಿ, ಮಿಲ್ಟನ್ ಶುಂಬಾ, ತಫಾಡ್ಜ್ವಾ ತ್ಸೀಗಾ.

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ , ಇಶಾನ್ ಕಿಶನ್ (ವಿಕೆಟ್ ಕೀಪರ್), ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ ಮತ್ತು ಮಯಾಂಕ್ ಯಾದವ್.

ಭಾರತ vs ಝಿಂಬಾಬ್ವೆ ಟಿ20 ಸರಣಿ ವೇಳಾಪಟ್ಟಿ:

  • ಜುಲೈ 23, 2026 (ಗುರುವಾರ): 1ನೇ ಟಿ20 ಪಂದ್ಯ – ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜುಲೈ 25, 2026 (ಶನಿವಾರ): 2ನೇ ಟಿ20 ಪಂದ್ಯ – ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜುಲೈ 26, 2026 (ಭಾನುವಾರ): 3ನೇ ಟಿ20 ಪಂದ್ಯ – ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ.

ಇದನ್ನೂ ಓದಿ: ‘ಸನ್​ರೈಸರ್ಸ್’ ಪರ ಕಣಕ್ಕಿಳಿದ ಪಾಕಿಸ್ತಾನ್ ಆಟಗಾರ..!

ಈ ಎಲ್ಲಾ ಮೂರು ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 4:30 ಕ್ಕೆ (ಸ್ಥಳೀಯ ಸಮಯ ಮಧ್ಯಾಹ್ನ 1:00 ಗಂಟೆಗೆ) ಆರಂಭವಾಗಲಿವೆ.

Published On - 12:18 pm, Wed, 22 July 26

Follow Us
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು