AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2036ರ ಒಲಿಂಪಿಕ್ಸ್‌ಗೆ ಭಾರತದ ಆತಿಥ್ಯ; ಪೂರ್ವಭಾವಿ ಸಿದ್ಧತೆಗಳ ಪರಿಶೀಲನೆ ನಡೆಸಿದ ಗೃಹ ಸಚಿವ ಅಮಿತ್ ಶಾ

Olympics 2036: ಒಲಿಂಪಿಕ್ ಕ್ರೀಡಾಕೂಟಗಳ ಮಾನದಂಡಗಳ ಪ್ರಕಾರ ಕ್ರೀಡಾ ಮೂಲಸೌಕರ್ಯ, ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಸೌಲಭ್ಯಗಳು ಮತ್ತು ವಸತಿ ಸೌಕರ್ಯಗಳನ್ನು ಸ್ಥಾಪಿಸಲು ಷಾ ಮಾರ್ಗದರ್ಶನ ನೀಡಿದ್ದಾರೆ.

2036ರ ಒಲಿಂಪಿಕ್ಸ್‌ಗೆ ಭಾರತದ ಆತಿಥ್ಯ; ಪೂರ್ವಭಾವಿ ಸಿದ್ಧತೆಗಳ ಪರಿಶೀಲನೆ ನಡೆಸಿದ ಗೃಹ ಸಚಿವ ಅಮಿತ್ ಶಾ
ಅಮಿತ್ ಶಾ ಸಭೆ
TV9 Web
| Edited By: |

Updated on:Jan 16, 2023 | 11:24 AM

Share

2036ರ ಒಲಿಂಪಿಕ್ಸ್‌ (Olympics 2036) ಕ್ರೀಡಾಕೂಟಕ್ಕೆ ಭಾರತ ಆತಿಥ್ಯ ವಹಿಸುವ ನಿಟ್ಟಿನಲ್ಲಿ ಆರಂಭಿಕ ಸಿದ್ಧತೆಗಳು ಪ್ರಾರಂಭವಾಗಿವೆ. ಇದರ ಭಾಗವಾಗಿ ಅಹಮದಾಬಾದ್‌ನಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ (Amit Shah) ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಕ್ರೀಡಾ ಸಚಿವ ಹರ್ಷ ಸಾಂಘ್ವಿ ಕೂಡ ಪಾಲ್ಗೊಂಡಿದ್ದರು. ಈ ಪರಿಶೀಲನಾ ಸಭೆಯಲ್ಲಿ ಒಳಗೊಂಡಿರುವ ವಿಷಯಗಳ ಪೈಕಿ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ಬಳಿ ಅಭಿವೃದ್ಧಿಗೊಳ್ಳಲಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಎನ್‌ಕ್ಲೇವ್ ಕೂಡ ಸೇರಿದೆ. ಈ ಮೂಲಸೌಕರ್ಯವನ್ನು ಸಕಾಲದಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿರುವ ಅಮಿತ್ ಶಾ, ಹಿಂದಿನ ಸಭೆಯಲ್ಲಿ ಸೂಚಿಸಿದ ಕಾಮಗಾರಿಗಳ ಪ್ರಗತಿಯನ್ನು ಸಹ ಪರಿಶೀಲಿಸಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಈ ಕ್ರೀಡಾ ವಲಯದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಸೃಷ್ಟಿಸುವ ಕೆಲಸವನ್ನು ಕಾಲಮಿತಿಯಲ್ಲಿ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವರು ನಿರ್ದೇಶನ ನೀಡಿದ್ದಾರೆ. ಅಲ್ಲದೆ ಗುಜರಾತ್‌ನಲ್ಲಿ 2036 ರ ಒಲಿಂಪಿಕ್ಸ್‌ ಆಯೋಜಿಸಲು ಬೇಕಾದ ಸ್ಥಳಗಳನ್ನು ಸಹ ಗುರುತಿಸಿಲಾಗಿದೆ ಎಂಬುದು ತಿಳಿದುಬಂದಿದೆ.

Neeraj Chopra: ಬಾಳ ಸಂಗಾತಿಯ ಬಗ್ಗೆಗಿರುವ ಕನಸುಗಳನ್ನು ರಿವೀಲ್ ಮಾಡಿದ ಒಲಂಪಿಕ್ಸ್ ಹೀರೋ ನೀರಜ್ ಚೋಪ್ರಾ!

ಒಲಿಂಪಿಕ್ ಕ್ರೀಡಾಕೂಟಗಳ ಮಾನದಂಡಗಳ ಪ್ರಕಾರ ಕ್ರೀಡಾ ಮೂಲಸೌಕರ್ಯ, ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಸೌಲಭ್ಯಗಳು ಹಾಗೂ ವಸತಿ ಸೌಕರ್ಯಗಳನ್ನು ನಿರ್ಮಿಸಲು ಗೃಹ ಸಚಿವರು ಮಾರ್ಗದರ್ಶನ ನೀಡಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಕ್ರೀಡಾ ಸಚಿವ ಹರ್ಷ ಸಾಂಘ್ವಿ ಅವರು ಯೋಜಿತ ಕಾಮಗಾರಿಗಳ ಬಗ್ಗೆ ನಿಯಮಿತ ಮಧ್ಯಂತರದಲ್ಲಿ ಪರಿಶೀಲನೆ ನಡೆಸಬೇಕು ಎಂದು ಶಾ ಸೂಚಿಸಿದ್ದಾರೆ. ಜೊತೆಗೆ ಗುಜರಾತ್‌ನಲ್ಲಿ ಮುಂದಿನ ಒಲಿಂಪಿಕ್ಸ್‌ನ್ನು ಅದ್ಧೂರಿಯಾಗಿ ಆಯೋಜಿಸಲು ವಿಸ್ತೃತ ಕಾರ್ಯತಂತ್ರ ರೂಪಿಸುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಗಿದೆ.

ಈ ಸಭೆಗೂ ಮುನ್ನ ನಾರಣಪುರ ಕ್ರೀಡಾ ಸಂಕೀರ್ಣಕ್ಕೂ ಭೇಟಿ ನೀಡಿದ ಅಮಿತ್ ಶಾ ಅಗತ್ಯ ಸಲಹೆಗಳನ್ನು ನೀಡಿದ್ದಾರೆ. ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್, ನಗರಾಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಮುಖೇಶ್ ಕುಮಾರ್, ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ಆಶಿನಿ ಕುಮಾರ್ ಸಭೆಯಲ್ಲಿ ಭಾಗವಹಿಸಿ ಹೆಚ್ಚಿನ ವಿವರ ನೀಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:22 am, Mon, 16 January 23

Follow Us
TV9 Web
TV9 Web

TV9 Kannada

Read More