IND vs SL: 4ನೇ ದಿನದಾಟ ಅಂತ್ಯ; ಶ್ರೀಲಂಕಾಕ್ಕೆ 16 ರನ್‌ಗಳ ಮುನ್ನಡೆ
Colombo Test Day 4 highlights: ಕೊಲಂಬೊದಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ 2ನೇ ಟೆಸ್ಟ್‌ನ 4ನೇ ದಿನದಾಟ ಮಳೆಯಿಂದಾಗಿ ಬೇಗ ಅಂತ್ಯಗೊಂಡಿತು. ಶ್ರೀಲಂಕಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 229 ರನ್ ಗಳಿಸಿ, ಭಾರತದ ವಿರುದ್ಧ 16 ರನ್‌ಗಳ ಮುನ್ನಡೆ ಸಾಧಿಸಿದೆ. ಕೇಶರ ನುವಂಥ ಮತ್ತು ಸೋನಾಲ್ ದಿನುಷಾ ಅಜೇಯರಾಗಿ ಉಳಿದಿದ್ದು, ಐದನೇ ದಿನದಾಟದ ಮೇಲೆ ಎಲ್ಲರ ಚಿತ್ತವಿದೆ. ಭಾರತದ ಪರ ಮಾನವ್ ಸುತಾರ್ 2 ವಿಕೆಟ್ ಪಡೆದರು.

Ind Vs Sl
ಕೊಲಂಬೊದಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟವನ್ನು ಸಹ ಬೇಗನೇ ಅಂತ್ಯಗೊಳಿಸಲಾಗಿದೆ. ಕೊನೆಯ ಸೆಷನ್ ವೇಳೆ ಆಟಕ್ಕೆ ಮಳೆ ಅಡ್ಡಿಪಡಿಸಿತು. ಹೀಗಾಗಿ ಆಟವನ್ನು ಅಂತ್ಯಗೊಳಿಸಲಾಯಿತು. ನಾಲ್ಕನೇ ದಿನದ ಆಟದ ಅಂತ್ಯಕ್ಕೆ, ಆತಿಥೇಯ ಶ್ರೀಲಂಕಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 229 ರನ್ ಕಲೆಹಾಕಿದೆ. ಇದರೊಂದಿಗೆ 16 ರನ್‌ಗಳ ಮುನ್ನಡೆ ಸಾಧಿಸಿದೆ. ಪ್ರಸ್ತುತ ಕೇಶರ ನುವಂಥ ಮೂರು ರನ್ ಮತ್ತು ಸೋನಾಲ್ ಸೋನಾಲ್ ದಿನುಷಾ ಏಳು ರನ್ ಬಾರಿಸಿ ಅಜೇಯರಾಗಿ ಉಳಿದಿದ್ದು, ಐದನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಮಾನವ್ ಸುತಾರ್ 2 ವಿಕೆಟ್ ಪಡೆದರೆ, ಉಳಿದವರು ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
Follow Us




