IND-W vs SL-W: ವರ್ಷದ ಕೊನೆಯ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್
India Women vs Sri Lanka T20 Final: ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ T20 ಸರಣಿಯ ಅಂತಿಮ ಪಂದ್ಯ ತಿರುವನಂತಪುರದಲ್ಲಿ ನಡೆಯುತ್ತಿದೆ. ಸರಣಿಯಲ್ಲಿ 4-0 ಅಂತರದಲ್ಲಿ ಮುಂದಿರುವ ಭಾರತಕ್ಕೆ ಇದು ಔಪಚಾರಿಕ ಪಂದ್ಯವಾದರೂ, ವರ್ಷಾಂತ್ಯದ ಗೆಲುವಿಗೆ ಪ್ರಯತ್ನಿಸಲಿದೆ. ಶ್ರೀಲಂಕಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದು, ಭಾರತದ ಪರ ಜಿ ಕಮಲಿನಿ T20 ಪದಾರ್ಪಣೆ ಮಾಡಿದ್ದಾರೆ. ಮಂಧನಾ ಮತ್ತು ರೇಣುಕಾ ಸಿಂಗ್‌ಗೆ ವಿಶ್ರಾಂತಿ ನೀಡಲಾಗಿದೆ.

ಭಾರತ ಮತ್ತು ಶ್ರೀಲಂಕಾ (India vs Sri Lanka) ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ಇಂದು ತಿರುವನಂತಪುರದಲ್ಲಿ (Thiruvananthapuram) ನಡೆಯುತ್ತಿದೆ. ಭಾರತ ಇದುವರೆಗೆ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಆಡಿರುವ ನಾಲ್ಕು ಪಂದ್ಯಗಳಲ್ಲಿ ಶ್ರೀಲಂಕಾವನ್ನು ಸೋಲಿಸಿದೆ. ಹೀಗಾಗಿ ಈ ಪಂದ್ಯ ಟೀಂ ಇಂಡಿಯಾಕ್ಕೆ ಕೇವಲ ಔಪಚಾರಿಕ ಪಂದ್ಯವಾಗಿದೆ. ಇತ್ತ ಶ್ರೀಲಂಕಾ ಕೊನೆಯ ಪಂದ್ಯವನ್ನಾದರೂ ಗೆದ್ದು ಸರಣಿಯನ್ನು ಗೆಲುವಿನೊಂದಿಗೆ ಅಂತ್ಯಗೊಳಿಸಲು ನೋಡುತ್ತಿದೆ. ಹಾಗೆಯೇ ಟೀಂ ಇಂಡಿಯಾಗೆ ಇದು ವರ್ಷದ ಕೊನೆಯ ಪಂದ್ಯವಾಗಿದ್ದು, ಗೆಲುವಿನೊಂದಿಗೆ ವರ್ಷವನ್ನು ಅಂತ್ಯಗೊಳಿಸಲು ಪ್ರಯತ್ನಿಸಲಿದೆ.
ಟಾಸ್ ಗೆದ್ದ ಶ್ರೀಲಂಕಾ
ಇನ್ನು ಈ ಪಂದ್ಯದಲ್ಲಿ ಶ್ರೀಲಂಕಾ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ. ಟೀಂ ಇಂಡಿಯಾ ಪರ ಜಿ ಕಮಲಿನಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಸ್ಮೃತಿ ಮಂಧಾನ ಮತ್ತು ರೇಣುಕಾ ಸಿಂಗ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕಮಲಿನಿ ಜೊತೆಗೆ, ಸ್ನೇಹ್ ರಾಣಾ ಅವರಿಗೆ ಕೂಡ ಆಡುವ ಅವಕಾಶ ನೀಡಲಾಗಿದೆ. ಏತನ್ಮಧ್ಯೆ, ಶ್ರೀಲಂಕಾ ತಂಡವು ಆಡುವ ಹನ್ನೊಂದರಲ್ಲಿ ಎರಡು ಬದಲಾವಣೆಗಳನ್ನು ಮಾಡಿದೆ.
🚨 Toss 🚨#TeamIndia have been asked to bat first.
Updates ▶️ https://t.co/E8eUdWSQXs#INDvSL | @IDFCFIRSTBank pic.twitter.com/3QAdpQSqDV
— BCCI Women (@BCCIWomen) December 30, 2025
ಉಭಯ ತಂಡಗಳು
ಭಾರತ ತಂಡ: ಶಫಾಲಿ ವರ್ಮಾ, ಜಿ ಕಮಲಿನಿ, ರಿಚಾ ಘೋಷ್ (ವಿಕೆಟ್ ಕೀಪರ್), ಹರ್ಮನ್‌ಪ್ರೀತ್ ಕೌರ್ (ನಾಯಕಿ), ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಅಮಂಜೋತ್ ಕೌರ್, ಸ್ನೇಹ ರಾಣಾ, ಅರುಂಧತಿ ರೆಡ್ಡಿ, ವೈಷ್ಣವಿ ಶರ್ಮಾ, ಶ್ರೀ ಚರಣಿ.
ಶ್ರೀಲಂಕಾ ತಂಡ: ಹಾಸಿನಿ ಪೆರೇರಾ, ಚಮರಿ ಅಟಾಪಟ್ಟು (ನಾಯಕ), ಇಮಿಶಾ ದುಲಾನಿ, ಹರ್ಷಿತಾ ಸಮರವಿಕ್ರಮ, ಕವಿಶಾ ದಿಲ್ಹಾರಿ, ನೀಲಾಕ್ಷಿಕಾ ಸಿಲ್ವಾ, ರಶ್ಮಿಕಾ ಸೇವಂಡಿ, ಕೌಶಾನಿ ನುತ್ಯಂಗನಾ (ವಿಕೆಟ್‌ಕೀಪರ್), ನಿಮಾಶಾ ಮದುಶಾನಿ, ಇನೋಕಾ ರಣವೀರ, ಮಾಲ್ಕಿ ಮಾದರ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:49 pm, Tue, 30 December 25
