Sign In

By signing in or creating an account, you agree with Associated Broadcasting Company's Terms & Conditions and Privacy Policy.

MI vs RCB IPL 2025: ಆರಾಮವಾಗಿ ಗೆಲ್ಲುತ್ತಿದ್ದ ಮುಂಬೈಗೆ ಶಾಕ್ ಕೊಟ್ಟಿದ್ದು ಆರ್‌ಸಿಬಿಯ ಈ ಒಂದು ನಿರ್ಧಾರ

Jitesh Sharma DRS: ಆರ್‌ಸಿಬಿ ವಿಕೆಟ್‌ ಕೀಪರ್ ಜಿತೇಶ್ ಶರ್ಮಾ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಇದರ ಜೊತೆಗೆ ವಿಕೆಟ್ ಹಿಂಭಾಗದಲ್ಲಿ ಕೂಡ ತಂಡದ ಗೆಲುವಿಗೆ ಕಾರಣರಾದರು. ಮುಂಬೈ ಇಂಡಿಯನ್ಸ್ ಆರಂಭಿಕ ಆಟಗಾರ ರಯಾನ್ ರಿಕಲ್ಟನ್ ಅವರನ್ನು ತಮ್ಮ ಬುದ್ಧಿವಂತಿಕೆಯಿಂದ ಔಟ್ ಮಾಡುವಲ್ಲಿ ಯಶಸ್ವಿಯಾದರು.

MI vs RCB IPL 2025: ಆರಾಮವಾಗಿ ಗೆಲ್ಲುತ್ತಿದ್ದ ಮುಂಬೈಗೆ ಶಾಕ್ ಕೊಟ್ಟಿದ್ದು ಆರ್‌ಸಿಬಿಯ ಈ ಒಂದು ನಿರ್ಧಾರ
Jitesh Sharma Drs Mi Vs Rcb
Follow us
Vinay Bhat
|

Updated on:Apr 08, 2025 | 8:13 AM

ಬೆಂಗಳೂರು (ಏ. 08): ಐದು ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians vs Royal Challengers Bengaluru) ತಂಡಕ್ಕೆ ಈ ವರ್ಷದ ಋತುವು ದುಃಸ್ವಪ್ನಕ್ಕಿಂತ ಕಡಿಮೆಯಿಲ್ಲ. ಐಪಿಎಲ್ 2025 ರಲ್ಲಿ ತಂಡವು ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ ಮತ್ತು ಇಲ್ಲಿಯವರೆಗೆ 4 ಪಂದ್ಯಗಳಲ್ಲಿ ಸೋತಿದೆ. ಆರ್‌ಸಿಬಿ ತಂಡವು ಮುಂಬೈ ತಂಡವನ್ನು ಅವರ ತವರು ನೆಲದಲ್ಲಿ 12 ರನ್‌ಗಳಿಂದ ಸೋಲಿಸಿತು. ಈ ಪಂದ್ಯದ ಒಂದು ಹಂತದಲ್ಲಿ ಮುಂಬೈ ತಂಡ ಸುಲಭವಾಗಿ ಗೆಲುವಿನತ್ತ ಸಾಗುತ್ತಿತ್ತು. ಆದರೆ ಆರ್‌ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ (Jitesh Sharma) ಅವರ ನಿರ್ಧಾರ ತಂಡವನ್ನು ಮತ್ತೆ ಪಂದ್ಯಕ್ಕೆ ಕರೆತಂದಿತು.

ಜಿತೇಶ್ ಬುದ್ಧಿವಂತಿಕೆಯಿಂದ ಮುಂಬೈ ವಿಕೆಟ್ ಪತನ:

ಆರ್‌ಸಿಬಿ ವಿಕೆಟ್‌ ಕೀಪರ್ ಜಿತೇಶ್ ಶರ್ಮಾ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಕೇವಲ 19 ಎಸೆತಗಳಲ್ಲಿ 2 ಫೋರ್ ಹಾಗೂ 4 ಅಮೋಘ ಸಿಕ್ಸ್ ಸಿಡಿಸಿ ಅಜೇಯ 40 ರನ್ ಗಳಿಸಿ ತಂಡದ ಮೊತ್ತವನ್ನು 221ಕ್ಕೆ ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದರ ಜೊತೆಗೆ ವಿಕೆಟ್ ಹಿಂಭಾಗದಲ್ಲಿ ಕೂಡ ತಂಡದ ಗೆಲುವಿಗೆ ಕಾರಣರಾದರು. ಮುಂಬೈ ಇಂಡಿಯನ್ಸ್ ಆರಂಭಿಕ ಆಟಗಾರ ರಯಾನ್ ರಿಕಲ್ಟನ್ ಅವರನ್ನು ತಮ್ಮ ಬುದ್ಧಿವಂತಿಕೆಯಿಂದ ಔಟ್ ಮಾಡುವಲ್ಲಿ ಯಶಸ್ವಿಯಾದರು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 221 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಮುಂಬೈ ತಂಡ ಉತ್ತಮ ಆರಂಭ ಪಡೆಯಲಿಲ್ಲ. ರಿಕಲ್ಟನ್ ವಿಕೆಟ್ ಬೇಗನೆ ಪತನವಾಯಿತು, ಇವರನ್ನು ಔಟ್ ಮಾಡುವಲ್ಲಿ ಜಿತೇಶ್ ಅವರ ಡಿಆರ್​ಎಸ್ ನಿರ್ಣಾಯಕ ಪಾತ್ರ ವಹಿಸಿತು.

ಇದನ್ನೂ ಓದಿ
Image
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
Image
ಹಾರ್ದಿಕ್ ಹೋರಾಟ ವ್ಯರ್ಥ; ಆರ್​ಸಿಬಿಗೆ 12 ರನ್ ಜಯ
Image
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
Image
RCBಗೆ ಸಿಕ್ಕ ಮತ್ತೋರ್ವ ದಿನೇಶ್ ಕಾರ್ತಿಕ್: ಒಂದೊಂದು ಶಾಟ್ ಕೂಡ ವಾವ್...

ಮುಂಬೈ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿತು. ರಿಕಲ್ಟನ್ 10 ಎಸೆತಗಳಲ್ಲಿ 17 ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದರು ಮತ್ತು ನಾಲ್ಕು ಬೌಂಡರಿಗಳನ್ನು ಬಾರಿಸಿದ್ದರು. ನಂತರ ಜೋಶ್ ಹ್ಯಾಜಲ್‌ವುಡ್ ಎಸೆದ ಚೆಂಡು ಅವರ ಬ್ಯಾಟ್‌ನ ಅಂಚಿನಲ್ಲಿ ಸಾಗಿ ಪ್ಯಾಡ್​ಗೆ ತಗುಲಿತು. ಆರ್​ಸಿಬಿ ಆಟಗಾರರು ಔಟ್ ಎಂದು ಮನವಿ ಮಾಡಿದರು. ಆದರೆ, ಅಂಪೈರ್ ಔಟ್ ನೀಡಲಿಲ್ಲ. ಆದರೆ ಜಿತೇಶ್ ತಕ್ಷಣವೇ ನಾಯಕ ರಜತ್ ಪಟಿದಾರ್ ಅವರನ್ನು ರಿವ್ಯೂ ತೆಗೆದುಕೊಳ್ಳುವಂತೆ ಮನವೊಲಿಸಿದರು.

Jitesh Sharma: ಆರ್​ಸಿಬಿಗೆ ಸಿಕ್ಕ ಮತ್ತೋರ್ವ ದಿನೇಶ್ ಕಾರ್ತಿಕ್: ಜಿತೇಶ್ ಶರ್ಮಾರ ಒಂದೊಂದು ಶಾಟ್ ಕೂಡ ವಾವ್…

ಡಿಆರ್​ಎಸ್​ನಲ್ಲಿ ಚೆಂಡು ಬ್ಯಾಟ್‌ಗೆ ತಾಗಲಿಲ್ಲ ಎಂದು ತೋರಿಸಲಾಯಿತು. ಹಾಕ್-ಐ ತಂತ್ರಜ್ಞಾನವು ಚೆಂಡು ಮಧ್ಯ ಮತ್ತು ಲೆಗ್ ಸ್ಟಂಪ್‌ಗೆ ತಗುಲಿರಬಹುದು ಎಂದು ಸೂಚಿಸಿತು. ಹೀಗಾಗಿ, ಜಿತೇಶ್ ಅವರ ಬುದ್ಧಿವಂತಿಕೆಯಿಂದಾಗಿ, ಆರ್‌ಸಿಬಿ ದೊಡ್ಡ ವಿಕೆಟ್ ಪಡೆದು ಪಂದ್ಯದಲ್ಲಿ ಮತ್ತೆ ಕಮ್​ಬ್ಯಾಕ್ ಮಾಡಿತು. ಸ್ಫೋಟಕ ಆರಂಭ ಪಡೆದುಕೊಂಡಿದ್ದ ಮುಂಬೈ ಈ ವಿಕೆಟ್ ಪತನದ ಬಳಿಕ ಕೊಂಚ ಸೈಲೆಂಟ್ ಆಯಿತು.

ಆರ್‌ಸಿಬಿ ದೊಡ್ಡ ಸ್ಕೋರ್:

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ದೊಡ್ಡ ಸ್ಕೋರ್ ದಾಖಲಿಸಿತು. ಫಿಲ್ ಸಾಲ್ಟ್ ಬೇಗನೆ ಔಟಾದ ನಂತರ, ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು ಮತ್ತು 91 ರನ್‌ಗಳ ಜೊತೆಯಾಟ ಆಡಿದರು. ಕೊಹ್ಲಿ 42 ಎಸೆತಗಳಲ್ಲಿ 67 ರನ್ ಗಳಿಸಿದರೆ, ಪಡಿಕ್ಕಲ್ 37 ರನ್ ಗಳಿಸಿದರು. ಇದಾದ ನಂತರ, ನಾಯಕ ರಜತ್ ಪಟಿದಾರ್ 32 ಎಸೆತಗಳಲ್ಲಿ 64 ರನ್ ಗಳಿಸಿದರು. ಅಂತಿಮವಾಗಿ ಜಿತೇಶ್ 19 ಎಸೆತಗಳಲ್ಲಿ ಅಜೇಯ 40 ರನ್ ಗಳಿಸುವ ಮೂಲಕ ಆರ್‌ಸಿಬಿ 20 ಓವರ್‌ಗಳಲ್ಲಿ 221 ರನ್ ಗಳಿಸಿತು. ಮುಂಬೈ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಸೋಲು ಕಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:12 am, Tue, 8 April 25