Sign In

By signing in or creating an account, you agree with Associated Broadcasting Company's Terms & Conditions and Privacy Policy.

News9 Corporate Badminton Championship 2025 : ಟಿವಿ 9 ನೆಟ್ವರ್ಕ್ ವತಿಯಿಂದ  ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸದ್ಯದಲ್ಲೇ ಆರಂಭ, ಏನಿದರ ವಿಶೇಷತೆ?

ಟಿವಿ9 ನೆಟ್‌ವರ್ಕ್ ಹಾಗೂ ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯ ಸಹಯೋಗದೊಂದಿಗೆ ನ್ಯೂಸ್9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸದ್ಯದಲ್ಲೇ ಆರಂಭವಾಗಲಿದೆ. ಮುಂದಿನ ತಿಂಗಳ ಮೇ 9 ರಿಂದ ಮೇ 11 ರವರೆಗೆ ನ್ಯೂಸ್9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪಂದ್ಯಾವಳಿ ನಡೆಯಲಿದೆ. ಹಾಗಾದ್ರೆ ಈ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ನಲ್ಲಿ ಏನೇನು ವಿಶೇಷತೆ ಇರಲಿದೆ? ನೋಂದಣಿ ಶುಲ್ಕ ಸೇರಿದಂತೆ ಇನ್ನಿತ್ತರ ಸಂಪೂರ್ಣ ಮಾಹಿತಿ ಇಲ್ಲಿದೆ

News9 Corporate Badminton Championship 2025 : ಟಿವಿ 9 ನೆಟ್ವರ್ಕ್ ವತಿಯಿಂದ  ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸದ್ಯದಲ್ಲೇ ಆರಂಭ, ಏನಿದರ ವಿಶೇಷತೆ?
ನ್ಯೂಸ್9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 11, 2025 | 1:55 PM

ಹೈದರಾಬಾದ್ ಏಪ್ರಿಲ್ 11: ಬ್ಯಾಡ್ಮಿಂಟನ್ ನಲ್ಲಿ ಆಸಕ್ತಯಿರುವ ಕಾರ್ಪೊರೇಟ್ ಉದ್ಯೋಗಗಳಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಭಾರತ (india) ಕ್ರೀಡಾ ರಾಷ್ಟ್ರವಾಗಿ ಹೊರಹೊಮ್ಮುವ ಸಲುವಾಗಿ ಟಿವಿ9 ನೆಟ್‌ವರ್ಕ್ ದೇಶದಲ್ಲಿ ಕ್ರೀಡಾ ಸಂಸ್ಕೃತಿ (sports culture) ಯನ್ನು ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇದೆ. ಹೌದು, ಇದೀಗ ಟಿವಿ 9 ಕಾರ್ಪೊರೇಟ್ ಫುಟ್ಬಾಲ್‌ ಕಪ್ (TV9 Corporate Football Cup) ಯಶಸ್ಸಿನ ಬಳಿಕ ಟಿವಿ9 ನೆಟ್ ವರ್ಕ್ (Tv 9 Network) ನ್ಯೂಸ್9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ನೊಂದಿಗೆ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ. ಟಿವಿ 9 ನೆಟ್ವರ್ಕ್ ಹಾಗೂ ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ (Pullela Gopichand Badminton) ಯ ಸಹಯೋಗದೊಂದಿಗೆ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪಂದ್ಯಾವಳಿಯೂ ನಡೆಯಲಿದ್ದು, ಕ್ರೀಡಾ ಸಂಸ್ಕೃತಿ, ಕಾರ್ಪೊರೇಟ್ ನೆಟ್‌ವರ್ಕಿಂಗ್, ಸಹಯೋಗ, ಫಿಟ್‌ನೆಸ್ ಹಾಗೂ ಆರೋಗ್ಯಕರ ಕೆಲಸ ಜೀವನವನ್ನು ಉತ್ತೇಜಿಸಲು ಅನನ್ಯ ವೇದಿಕೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹೌದು, ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ, ಹೈದರಾಬಾದ್ ನಲ್ಲಿ ಮೇ 9 ರಿಂದ ಮೇ 11 ರವರೆಗೆ ನ್ಯೂಸ್9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪಂದ್ಯಾವಳಿ ನಡೆಯಲಿದ್ದು, ಕಾರ್ಪೊರೇಟ್ ಉದ್ಯೋಗಿಗಳ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಈ ಇವೆಂಟ್ ನನ್ನು ಆಯೋಜಿಸಲಾಗಿದೆ.

ತಂಡದಲ್ಲಿ ಎಷ್ಟು ಆಟಗಾರರಿಗೆ ಅವಕಾಶ

ನ್ಯೂಸ್9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ನ ಪುರುಷರ ವಿಭಾಗದಲ್ಲಿ, 3 ರಿಂದ 5 ಆಟಗಾರರನ್ನು ಒಳಗೊಂಡ ಪ್ರತಿ ತಂಡವು 2 ಪುರುಷರ ಸಿಂಗಲ್ಸ್ ಪಂದ್ಯಗಳು ಮತ್ತು 1 ಪುರುಷರ ಡಬಲ್ಸ್ ಪಂದ್ಯವನ್ನು ಆಡುವ ಅವಕಾಶವಿದೆ. ಇದರಲ್ಲಿ ಓಪನ್ ಕೆಟಗರಿಯೂ ಇದ್ದು, ಒಬ್ಬ ಮಹಿಳಾ ಆಟಗಾರ್ತಿ ಸೇರಿದಂತೆ 3 ರಿಂದ 5 ಆಟಗಾರರನ್ನು ಒಳಗೊಂಡಿರುವ ಪ್ರತಿ ತಂಡವು 2 ಪುರುಷರ ಸಿಂಗಲ್ಸ್ ಪಂದ್ಯಗಳು ಮತ್ತು 1 ಮಿಶ್ರ ಡಬಲ್ಸ್ ಪಂದ್ಯವನ್ನು ಆಡುವ ಅವಕಾಶವನ್ನು ಹೊಂದಿದೆ. ಇದರಲ್ಲಿ ಪ್ರತಿಯೊಂದು ಕಂಪನಿಯು ಬಹು ತಂಡಗಳನ್ನು ಕಳುಹಿಸಬಹುದು.

ನಗದು ಬಹುಮಾನದೊಂದಿಗೆ ಪ್ರಯೋಜನಗಳು ಹಲವು

ಗೆಲುವು ಸಾಧಿಸುವ ತಂಡಕ್ಕೆ ಟ್ರೋಫಿಯೊಂದಿಗೆ ಆರು ಲಕ್ಷದವರೆಗೆ ನಗದು ಬಹುಮಾನ ನೀಡಲಾಗುತ್ತದೆ. ಅದಲ್ಲದೇ, ವಿಜೇತರಿಗೆ ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಎರಡು ದಿನಗಳ ತರಬೇತಿ ನೀಡಲಾಗುವುದು. ಹೌದು, ನಗದು ಬಹುಮಾನಗಳು, ತರಬೇತಿ ಅವಕಾಶಗಳು ಮತ್ತು ವಿಶೇಷ ಪ್ರಯೋಜನಗಳನ್ನು ಈ ಪಂಡ್ಯಾಟಕ್ಕೆ ಸೇರುವ ಉದ್ಯೋಗಿಗಳು ಪಡೆಯಲಿದ್ದಾರೆ.

ಇದನ್ನೂ ಓದಿ: ಭಾರತೀಯ ಯುವ ಫುಟ್​ಬಾಲ್ ಆಟಗಾರರಿಗೆ ಆಸ್ಟ್ರಿಯಾ ರಾಯಭಾರಿ ಕ್ಯಾಥರಿನಾ ವೈಸರ್ ಸ್ವಾಗತ, ಟಿವಿ9 ನೆಟ್​ವರ್ಕ್ ಅಭಿಯಾನಕ್ಕೆ ಮೆಚ್ಚುಗೆ

* ಪ್ರತಿ ತಂಡದ ಸದಸ್ಯರಿಗೆ ನೋಂದಣಿ ಶುಲ್ಕ ಎಷ್ಟು?*

ಹೈದರಾಬಾದ್ ಮತ್ತು ಹೈದರಾಬಾದ್‌ನ ಹೊರಗಿನ ಕಾರ್ಪೊರೇಟ್ ಉದ್ಯೋಗಿಗಳು ಚಾಂಪಿಯನ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಭಾಗವಹಿಸುವ ಪ್ರತಿಯೊಂದು ಕಾರ್ಪೊರೇಟ್‌ ಉದ್ಯೋಗಿಗಳಿಗೆ ನೋಂದಣಿ ಶುಲ್ಕಗಳಿದ್ದು, ಹೊರರಾಜ್ಯ ತಂಡಗಳಿಗೆ ವಸತಿ ಸಹಿತವಾಗಿ ಪ್ರತಿ ತಂಡದ ಸದಸ್ಯರಿಗೆ ನೋಂದಣಿ ಶುಲ್ಕವಾಗಿ 7,500 ರೂ ಪಾವತಿಸಬೇಕಾಗುತ್ತದೆ. ಇನ್ನು ಉಳಿದಂತೆ ವಸತಿ ರಹಿತವಾಗಿ ಪ್ರತಿ ತಂಡದ ಸದಸ್ಯರಿಗೆ ನೋಂದಣಿ ಶುಲ್ಕ 2,500 ರೂ ಇರಲಿದೆ. ಅದಲ್ಲದೇ, ವಸತಿ ರಹಿತವಾಗಿ ಸ್ಥಳೀಯ ತಂಡಗಳ ಪ್ರತಿಯೊಬ್ಬ ಸದಸ್ಯರು 2,500 ರೂ ನೋಂದಣಿ ಶುಲ್ಕವಾಗಿ ಪಾವತಿಸಬೇಕು. ನ್ಯೂಸ್9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಇವೆಂಟ್ ನ ಸಂಪೂರ್ಣ ವಿವರಕ್ಕಾಗಿ ಹಾಗೂ ಈ ಪಂದ್ಯಾಟದಲ್ಲಿ ಭಾಗವಹಿಸಲು www.news9corporatecup.com ಈ ವೆಬ್ ಸೈಟ್ ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಕುಟುಂಬದ ಜೊತೆ ಉಡುಪಿಗೆ ಬಂದ ಸುನೀಲ್ ಶೆಟ್ಟಿ; ಮಾರಿಗುಡಿಗೆ ಭೇಟಿ
ಕುಟುಂಬದ ಜೊತೆ ಉಡುಪಿಗೆ ಬಂದ ಸುನೀಲ್ ಶೆಟ್ಟಿ; ಮಾರಿಗುಡಿಗೆ ಭೇಟಿ
ಜೀಪ್​ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು!
ಜೀಪ್​ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು!
ಕಾರಿನ ಮೇಲೆ ಕಾಡಾನೆ ದಾಳಿ ಯತ್ನ, ಎದೆ ಝಲ್​ ಎನ್ನಿಸುವ ವಿಡಿಯೋ ವೈರಲ್
ಕಾರಿನ ಮೇಲೆ ಕಾಡಾನೆ ದಾಳಿ ಯತ್ನ, ಎದೆ ಝಲ್​ ಎನ್ನಿಸುವ ವಿಡಿಯೋ ವೈರಲ್
ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ
ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಎರಡೆರೆಡು ಅಪಘಾತ: ವಿಡಿಯೋ ನೋಡಿ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಎರಡೆರೆಡು ಅಪಘಾತ: ವಿಡಿಯೋ ನೋಡಿ