AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia Test Series | ಬ್ರಿಸ್ಬೇನ್​ ಟೆಸ್ಟ್​ನಲ್ಲಿ ಕುಲ್​ದೀಪ್​ ಯಾದವ್​ರನ್ನು ಅಡಿಸದಿರುವುದು ಆಶ್ಚರ್ಯ ಮೂಡಿಸಿದೆ: ಅಗರ್ಕರ್

ಐವರು ಬೌಲರ್​ಗಳೊಂದಿಗೆ ಕಣಕ್ಕಿಳಿಯುವ ನಿರ್ಧಾರ ಟೀಮ್ ಇಂಡಿಯಾ ಮಾಡಿಕೊಂಡಿದ್ದರೆ ಅವರಲ್ಲಿ ಒಬ್ಬ ಅನುಭವಿ ಬೌಲರ್​ನನ್ನು ಸೇರಿಸಿಕೊಳ್ಳಬೇಕಿತ್ತು. ಈ ಟೆಸ್ಟ್​ನಲ್ಲಿ ಆಡುತ್ತಿರುವವರೆಲ್ಲ ಅನನುಭವಿಗಳು. ಮತ್ತೊಬ್ಬ ಸ್ಪಿನ್ನರ್​ನನ್ನು ಆಡಿಸಿದ್ದರೆ ಪ್ರಮಾದವೇನೂ ಆಗುತ್ತಿರಲಿಲ್ಲ ಎಂದು ಅಗರ್ಕರ್ ಹೇಳಿದ್ದಾರೆ.

India vs Australia Test Series | ಬ್ರಿಸ್ಬೇನ್​ ಟೆಸ್ಟ್​ನಲ್ಲಿ ಕುಲ್​ದೀಪ್​ ಯಾದವ್​ರನ್ನು ಅಡಿಸದಿರುವುದು ಆಶ್ಚರ್ಯ ಮೂಡಿಸಿದೆ: ಅಗರ್ಕರ್
ಕುಲ್​ದೀಪ್ ಯಾದವ್
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Jan 15, 2021 | 10:21 PM

Share

ಆಸ್ಟ್ರೇಲಿಯಾ ಪ್ರವಾಸಕ್ಕೆ ಟೆಸ್ಟ್ ಟೀಮಿನಲ್ಲಿ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಆಯ್ಕೆಯಾಗಿರುವ ಚೈನಾಮನ್ ಬೌಲರ್ ಕುಲ್​ದೀಪ್ ಯಾದವ್​ ಅವರನ್ನು ಬ್ರಿಸ್ಬೇನ್​ ಟೆಸ್ಟ್​ನಲ್ಲಿ ಆಡಿಸದಿರುವುದು ಭಾರತದ ಮಾಜಿ ವೇಗ್ ಬೌಲರ್ ಮತ್ತು ಕಾಮೆಂಟೇಟರ್ ಅಜಿತ್ ಅಗರ್ಕರ್ ಅವರಲ್ಲಿ ಆಶ್ಚರ್ಯ ಮತ್ತು ನಿರಾಸೆ ಮೂಡಿಸಿದೆ.

‘ಕುಲ್​ದೀಪ್​ಗೆ ಭಾರಿ ನಿರಾಸೆಯಾಗಿರಬೇಕು. ಅದು ಸಹಜ ತಾನೆ? ಕಳೆದ ಸರಣಿಯ ಕೊನೆಯ ಟೆಸ್ಟ್ ಕೊನೆಗೊಂಡ ನಂತರ ಅವರು ಭಾರತದ ನಂಬರ್ ಒನ್ ಸ್ಪಿನ್ನರ್ ಆಗಿದ್ದರು. ಅದಾದ ಮೇಲೆ ಅವರು ಒಂದೇ ಒಂದು ಟೆಸ್ಟ್​ ಆಡಿಲ್ಲವೆಂದು ನಾನು ಭಾವಿಸುತ್ತೇನೆ. ಐದು ಬೌಲರ್​ಗಳೊಂದಿಗೆ ಕಣಕ್ಕಿಳಿಯುವ ನಿರ್ಧಾರ ಭಾರತ ಮಾಡಿದ್ದರೆ ಅವರಲ್ಲಿ ಒಬ್ಬ ಅನುಭವಿ ಬೌಲರ್​ನನ್ನು ಸೇರಿಸಿಕೊಳ್ಳಬೇಕಿತ್ತು. ಈ ಟೆಸ್ಟ್​ನಲ್ಲಿ ಆಡುತ್ತಿರುವವರೆಲ್ಲ ಅನನುಭವಿಗಳು. ಮತ್ತೊಬ್ಬ ಸ್ಪಿನ್ನರ್​ನನ್ನು ಆಡಿಸಿದ್ದರೆ ಪ್ರಮಾದವೇನೂ ಆಗುತ್ತಿರಲಿಲ್ಲ. ಯಾದವ್ ಬಾರತದ ಬೌಲಿಂಗ್ ದಾಳಿಗೆ ಮೊನಚು ಮತ್ತು ಸಮತೋಲನ ಒದಗಿಸುತ್ತಿದ್ದರು. ಪಿಚ್ ಫ್ಲ್ಯಾಟ್ ಆದರೆ, ವೇಗದ ಬೌಲರ್​ಗಳಿಗೆ ಯಾವ ಪ್ರಯೋಜನವೂ ಸಿಗದು. ಆಗ ದಾಳಿ ವೈವಿಧ್ಯಮಯ ಆಯಾಮ ತಳೆಯುವ ಬದಲು ಒಂದೇ ಡೈಮೆನ್ಷನಲ್ ಅನಿಸಲಿದೆ’ ಎಂದು ಸೋನಿ ಸ್ಪೋರ್ಟ್ಸ್ ನೆಟ್​ವರ್ಕ್ ನಡೆಸುವ ಎಕ್ಸ್​ಟ್ರಾ ಇನ್ನಿಂಗ್ಸ್ ಕಾರ್ಯಕ್ರಮದಲ್ಲಿ ಮೊದಲ ದಿನದಾಟದ ನಂತರ ಅಗರ್ಕರ್ ಹೇಳಿದರು.

ಅಜಿತ್ ಅಗರ್ಕರ್

‘ಭಾರತದ ಟೀಮಿನಲ್ಲಿ ಮಿಚೆಲ್ ಸ್ಟಾರ್ಕ್​ನಂಥ ಭಯಂಕರ ವೇಗದ ಬೌಲರ್ ಇಲ್ಲ. ಕುಲ್​ದೀಪ್​ರನ್ನು ಆಡಿಸಿದ್ದರೆ ಆಕ್ರಮಣದಲ್ಲಿ ವೈವಿಧ್ಯತೆ ಇರುತಿತ್ತು. ತಾನು ಆಸ್ಟ್ರೇಲಿಯಾದ ಪಿಚ್​ಗಳಲ್ಲಿ ವಿಕೆಟ್ ಕೀಳಬಲ್ಲೆ ಎನ್ನುವುದನ್ನು ಕುಲ್ದೀಪ್ ಈ ಹಿಂದೆ ಸಾಬೀತು ಮಾಡಿದ್ದಾರೆ. ಅವರು ಕೊಂಚ ನಿಧಾನಗತಿಯಲ್ಲಿ ಬೌಲ್ ಮಾಡುತ್ತಾರೆನ್ನುವ ಆಪಾದನೆಯಿದೆ. ಆದರೆ ಇಲ್ಲಿನ ಕಂಡೀಷನ್​ಗಳಿಗೆ ಅವರ ಬೌಲಿಂಗ್​ಗೆ ಅದ್ಭುತವಾಗಿ ಒಗ್ಗುತ್ತದೆ. ಹಾಗಾಗಿ ಅವರನ್ನು ಆಡಿಸದಿರುವುದು ನನ್ನಲ್ಲಿ ಆಶ್ವರ್ಯವನ್ನಷ್ಟೇ ಅಲ್ಲ ನಿರಾಸೆಯೂ ಮೂಡಿಸಿದೆ’ ಎಂದು ಅಗರ್ಕರ್ ಹೇಳಿದ್ದಾರೆ.

2019-19ರ ಬಾರ್ಡರ್-ಗಾವಸ್ಕರ್ ಟ್ರೋಫಿಗಾಗಿ ನಡೆದ ಸರಣಿಯಲ್ಲಿ ಕುಲ್​ದೀಪ್​ ಅತ್ಯತ್ತುಮವಾಗಿ ಬೌಲ್ ಮಾಡಿದ್ದರು ಮತ್ತ್ತು ಸಿಡ್ನಿಯಲ್ಲಿ ನಡೆದ ಟೆಸ್ಟ್​ನಲ್ಲಿ 5 ವಿಕೆಟ್ ಪಡೆಯುವ ಸಾಧನೆ ಕೂಡ ಮಾಡಿದ್ದರು.

India vs Australia Test Series | ಮತ್ತೊಮ್ಮೆ ಜನಾಂಗೀಯ ನಿಂದನೆಗೊಳಗಾದ ಮೊಹಮ್ಮದ್ ಸಿರಾಜ್

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ