ಕೊಹ್ಲಿಗೆ ಹೆದರೋಲ್ಲ, ಅವರಿಗೆ ಸವಾಲೆಸೆಯಲು ನಾನು ರೆಡಿ -ಪಾಕ್ ಯುವ ಬೌಲರ್

ವಿರಾಟ್ ಕೊಹ್ಲಿ ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್ ಅನ್ನೋದು ಕ್ರಿಕೆಟ್ ಜಗತ್ತಿಗೆ ಗೊತ್ತಿರೋ ಸಂಗತಿ. ಹಾಗಿದ್ರೂ ಕೆಲ ಯುವ ಬೌಲರ್​ಗಳು ಕೊಹ್ಲಿ ವಿಚಾರದಲ್ಲಿ ಇಲ್ಲ ಸಲ್ಲದ ಹೇಳಿಕೆ ನೀಡಿ ಮೈಲೇಜ್ ಗಿಟ್ಟಿಸಿಕೊಳ್ತಾರೆ. ಅದ್ರಲ್ಲೂ ಪಾಕಿಸ್ತಾನ ತಂಡದ ಯುವ ಬೌಲರ್​ಗಳು ಕೊಹ್ಲಿಯನ್ನ ಕೆಣಕಿ ಮಾಂಜಾ ತಿಂತಾನೇ ಇದ್ದಾರೆ. ಇದೀಗ ಪಾಕಿಸ್ತಾನ ತಂಡದ 17 ವರ್ಷದ ಯುವ ವೇಗಿ ನಸೀಮ್ ಶಾ, ಗೊತ್ತಿದ್ದು ಗೊತ್ತಿದ್ದೂ ಕ್ಯಾಪ್ಟನ್ ಕೊಹ್ಲಿ ವಿರುದ್ಧವೇ ತೊಡೆ ತಟ್ಟಿದ್ದಾನೆ. ಖಾಸಗಿ ಚಾನೆಲ್​​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಸೀಮ್ ಶಾ, ಇಂಡೋ-ಪಾಕ್ ಪಂದ್ಯವನ್ನ […]

ಕೊಹ್ಲಿಗೆ ಹೆದರೋಲ್ಲ, ಅವರಿಗೆ ಸವಾಲೆಸೆಯಲು ನಾನು ರೆಡಿ -ಪಾಕ್ ಯುವ ಬೌಲರ್
Follow us
ಆಯೇಷಾ ಬಾನು
|

Updated on:Jun 03, 2020 | 3:27 PM

ವಿರಾಟ್ ಕೊಹ್ಲಿ ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್ ಅನ್ನೋದು ಕ್ರಿಕೆಟ್ ಜಗತ್ತಿಗೆ ಗೊತ್ತಿರೋ ಸಂಗತಿ. ಹಾಗಿದ್ರೂ ಕೆಲ ಯುವ ಬೌಲರ್​ಗಳು ಕೊಹ್ಲಿ ವಿಚಾರದಲ್ಲಿ ಇಲ್ಲ ಸಲ್ಲದ ಹೇಳಿಕೆ ನೀಡಿ ಮೈಲೇಜ್ ಗಿಟ್ಟಿಸಿಕೊಳ್ತಾರೆ. ಅದ್ರಲ್ಲೂ ಪಾಕಿಸ್ತಾನ ತಂಡದ ಯುವ ಬೌಲರ್​ಗಳು ಕೊಹ್ಲಿಯನ್ನ ಕೆಣಕಿ ಮಾಂಜಾ ತಿಂತಾನೇ ಇದ್ದಾರೆ. ಇದೀಗ ಪಾಕಿಸ್ತಾನ ತಂಡದ 17 ವರ್ಷದ ಯುವ ವೇಗಿ ನಸೀಮ್ ಶಾ, ಗೊತ್ತಿದ್ದು ಗೊತ್ತಿದ್ದೂ ಕ್ಯಾಪ್ಟನ್ ಕೊಹ್ಲಿ ವಿರುದ್ಧವೇ ತೊಡೆ ತಟ್ಟಿದ್ದಾನೆ.

ಖಾಸಗಿ ಚಾನೆಲ್​​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಸೀಮ್ ಶಾ, ಇಂಡೋ-ಪಾಕ್ ಪಂದ್ಯವನ್ನ ಆಡಲು ಎದುರು ನೋಡುತ್ತಿದ್ದೇನೆ. ಟೀಮ್ ಇಂಡಿಯಾದಲ್ಲಿ ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್​ಗಳಿದ್ದಾರೆ. ಅವರ ವಿರುದ್ಧ ಬೌಲಿಂಗ್ ಮಾಡೋ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಅದರಲ್ಲೂ ಟೀಮ್ ಇಂಡಿಯಾ ನಾಯಕ ಸವಾಲೆಸೆಯಲು ರೆಡಿಯಾಗಿದ್ದೇನೆ ಅಂತಾ ನಸೀಮ್ ಶಾ ಹೇಳಿದ್ದಾನೆ.

ಕೊಹ್ಲಿಗೆ ಬೌಲಿಂಗ್​ ಮಾಡೋದೇ ಬಿಗ್ ಚಾಲೆಂಜ್ ವಿರಾಟ್ ಕೊಹ್ಲಿಯನ್ನ ನಾನು ಗೌರವಿಸುತ್ತೇನೆ. ಆದ್ರೆ ಕೊಹ್ಲಿಯನ್ನ ಕಂಡ್ರೆ ನನಗೆ ಭಯವಿಲ್ಲ. ಕೊಹ್ಲಿಗೆ ಬೌಲಿಂಗ್​ ಮಾಡೋದೇ ಬಿಗ್ ಚಾಲೆಂಜ್. ಬೆಸ್ಟ್ ಬ್ಯಾಟ್ಸ್​ಮನ್​ಗಳ ವಿರುದ್ಧ ಬೌಲಿಂಗ್ ಮಾಡಿದ್ರೆನೇ, ನಮ್ಮ ಸಾಮರ್ಥ್ಯ ಏನು ಅನ್ನೋದು ಗೊತ್ತಾಗುತ್ತೆ. ಇದರಿಂದ ನಮ್ಮ ಬೌಲಿಂಗ್ ಸಹ ಇಂಪ್ರೂವ್ ಆಗುತ್ತದೆ. ಹೀಗಾಗಿ ನಾನು ಕೊಹ್ಲಿ ವಿರುದ್ಧ ಬೌಲಿಂಗ್ ಮಾಡಲು ಎದುರು ನೋಡುತ್ತಿದ್ದೇನೆ. ಅಂತಾ ನಸೀಮ್ ಶಾ ಹೇಳಿಕೊಂಡಿದ್ದಾನೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ನಸೀಮ್ ಶಾ, ಇಂಪ್ರೆಸಿವ್ ಬೌಲಿಂಗ್ ಮಾಡಿ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದ. ನಂತರ ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಶಾ, ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ದಿಗ್ಗಜ ಬೌಲರ್​ಗಳಿಂದಲೇ ಶಹಬ್ಬಾಷ್​ಗಿರಿ ಗಿಟ್ಟಿಸಿಕೊಂಡಿದ್ದ.

ಆದ್ರೀಗ ಕ್ಯಾಪ್ಟನ್ ಕೊಹ್ಲಿಗೇ ಸವಾಲ್ ಹಾಕಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದಾನೆ. ಆದ್ರೆ ವಿರಾಟ್ ಮಾತಿಗೆ ಪ್ರತಿ ಮಾತು ಬೆಳೆಸೋ ಸ್ವಭಾವದವರಲ್ಲ. ಅಂಹಕಾರದ ಮಾತಿಗೆ ತಿರಗೇಟು ಕೊಡೋದು ಏನಿದ್ರೂ, ಮೈದಾನದಲ್ಲಿ ಬ್ಯಾಟ್​ನಿಂದಲೇ ಅನ್ನೋದನ್ನ ನಸೀಮ್ ಮರೆತಂತಿದೆ ಪಾಪ.

Published On - 2:42 pm, Wed, 3 June 20

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್