Paralympics 2024: ಪ್ಯಾರಾಲಿಂಪಿಕ್ಸ್‌ನಲ್ಲಿ ಏಕೈಕ ಕಂಚಿನ ಪದಕ ಗೆದ್ದ ಪಾಕಿಸ್ತಾನ

Paralympics 2024: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಪದಕಗಳ ಪಟ್ಟಿಯಲ್ಲಿ ಪಾಕಿಸ್ತಾನ ತಂಡ 75ನೇ ಸ್ಥಾನದಲ್ಲಿದ್ದು, ಇದುವರೆಗೆ ಕೇವಲ ಒಂದು ಕಂಚು ಮಾತ್ರ ಗೆದ್ದಿದೆ. ಮತ್ತೊಂದೆಡೆ, ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಇದುವರೆಗೆ 26 ಪದಕಗಳನ್ನು ಗೆದ್ದಿದ್ದು, ಇದರಲ್ಲಿ 6 ಚಿನ್ನ, 9 ಬೆಳ್ಳಿ ಮತ್ತು 11 ಕಂಚಿನ ಪದಕಗಳು ಸೇರಿವೆ.

Paralympics 2024: ಪ್ಯಾರಾಲಿಂಪಿಕ್ಸ್‌ನಲ್ಲಿ ಏಕೈಕ ಕಂಚಿನ ಪದಕ ಗೆದ್ದ ಪಾಕಿಸ್ತಾನ
ಹೈದರ್ ಅಲಿ
Follow us
|

Updated on:Sep 06, 2024 | 9:31 PM

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಇನ್ನೇನೂ ಮುಕ್ತಾಯದ ಹಂತಕ್ಕೆ ಬಂದಿದೆ. ಆಗಸ್ಟ್ 26 ರಂದು ಆರಂಭವಾಗಿದ್ದ ಈ ಕ್ರೀಡಾಕೂಟ ಇದೇ ಸೆಪ್ಟೆಂಬರ್ 8ಕ್ಕೆ ಅಂತ್ಯವಾಗಲಿದೆ. ಈ ನಡುವೆ ಪಾಕಿಸ್ತಾನಕ್ಕೆ ಸಮಾಧಾನಕರ ಸುದ್ದಿಯೊಂದು ಸಿಕ್ಕಿದ್ದು, ಇಡೀ ಕ್ರೀಡಾಕೂಟದಲ್ಲಿ ಪಾಕಿಸ್ತಾನಕ್ಕೆ ಏಕೈಕ ಪದಕ ಸಿಕ್ಕಿದೆ. ಪ್ಯಾರಾ ಅಥ್ಲೀಟ್, ಹೈದರ್ ಅಲಿ ಡಿಸ್ಕಸ್ ಎಸೆತದಲ್ಲಿ 52.54 ಮೀಟರ್ ದೂರ ಡಿಸ್ಕಸ್ ಎಸೆದು ಪದಕ ಗೆದ್ದರು. ಹೈದರ್ ಅಲಿ ಈ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದು, ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಮೊದಲ ಚಿನ್ನ, ಮೊದಲ ಬೆಳ್ಳಿ ಮತ್ತು ಮೊದಲ ಕಂಚಿನ ಪದಕ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೈದರ್ ಅಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಇದುವರೆಗೆ ಒಟ್ಟು 4 ಪದಕಗಳನ್ನು ಗೆದ್ದಿದ್ದಾರೆ, ಇದರಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಮತ್ತು 2 ಕಂಚಿನ ಪದಕಗಳು ಸೇರಿವೆ. ಕುತೂಹಲಕಾರಿಯಾಗಿ, ಡಿಸ್ಕಸ್ ಎಸೆತದಲ್ಲಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಗೆಲ್ಲುವ ಮೊದಲು, ಹೈದರ್ ಅಲಿ ಲಾಂಗ್ ಜಂಪ್ನಲ್ಲಿ ಎರಡು ಪ್ಯಾರಾಲಿಂಪಿಕ್ ಪದಕಗಳನ್ನು ಗೆದ್ದಿದ್ದಾರೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಹೈದರ್ ಅಲಿ ಸಾಧನೆ

ಹೈದರ್ ಅಲಿ ಪಾಕಿಸ್ತಾನದ ಸಾರ್ವಕಾಲಿಕ ಶ್ರೇಷ್ಠ ಪ್ಯಾರಾಲಿಂಪಿಯನ್. 2008 ರಲ್ಲಿ, ಹೈದರ್ ಅಲಿ ಬೀಜಿಂಗ್ ಪ್ಯಾರಾಲಿಂಪಿಕ್ಸ್‌ನಲ್ಲಿ ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಮೊದಲ ಪದಕವಾಗಿದೆ. ಇದಾದ ಬಳಿಕ ಹೈದರ್ ಅಲಿ 2016ರ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2020 ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ, ಹೈದರ್ ಅಲಿ ಲಾಂಗ್ ಜಂಪ್ ಬದಲಿಗೆ ಡಿಸ್ಕಸ್ ಥ್ರೋನಲ್ಲಿ ಭಾಗವಹಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದಲ್ಲದೆ, ಚಿನ್ನವನ್ನೂ ಗೆದ್ದರು. ಇದೀಗ ಹೈದರ್ ಅಲಿ ಡಿಸ್ಕಸ್ ಎಸೆತದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

11 ಪದಕ ಗೆದ್ದಿರುವ ಅಲಿ

ಹೈದರ್ ಅಲಿ ತಮ್ಮ ವೃತ್ತಿಜೀವನದಲ್ಲಿ ಪಾಕಿಸ್ತಾನಕ್ಕಾಗಿ ಒಟ್ಟು 11 ಪದಕಗಳನ್ನು ಗೆದ್ದಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ 4 ಪದಕಗಳನ್ನು ಗೆದ್ದಿದ್ದಲ್ಲದೆ, ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈ ಆಟಗಾರ ಬೆಳ್ಳಿ, ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 4 ಚಿನ್ನ ಮತ್ತು 2 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಹೈದರ್ ಅಲಿ ಪಾಕಿಸ್ತಾನದ ಸಾರ್ವಕಾಲಿಕ ಶ್ರೇಷ್ಠ ಪ್ಯಾರಾ ಅಥ್ಲೀಟ್ ಎಂದು ಪರಿಗಣಿಸಲ್ಪಟ್ಟಿದ್ದಾರೆ.

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಏಕೈಕ ಪದಕ

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಪದಕಗಳ ಪಟ್ಟಿಯಲ್ಲಿ ಪಾಕಿಸ್ತಾನ ತಂಡ 75ನೇ ಸ್ಥಾನದಲ್ಲಿದ್ದು, ಇದುವರೆಗೆ ಕೇವಲ ಒಂದು ಕಂಚು ಮಾತ್ರ ಗೆದ್ದಿದೆ. ಮತ್ತೊಂದೆಡೆ, ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಇದುವರೆಗೆ 26 ಪದಕಗಳನ್ನು ಗೆದ್ದಿದ್ದು, ಇದರಲ್ಲಿ 6 ಚಿನ್ನ, 9 ಬೆಳ್ಳಿ ಮತ್ತು 11 ಕಂಚಿನ ಪದಕಗಳು ಸೇರಿವೆ. ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ. ಭಾರತದ ಪರ ಅವನಿ ಲೆಖರಾ, ಹರ್ವಿಂದರ್ ಸಿಂಗ್, ಪ್ರವೀಣ್ ಕುಮಾರ್, ಸುಮಿತ್ ಅಂತಿಲ್, ಧರಂಬೀರ್ ನೈನ್ ಮತ್ತು ನಿತೇಶ್ ಕುಮಾರ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:28 pm, Fri, 6 September 24

ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಗದಗ: ಗಣೇಶ ವಿಸರ್ಜನೆ ವೇಳೆ ಗಲಾಟೆ, ಲಾಠಿಚಾರ್ಜ್​​
ಗದಗ: ಗಣೇಶ ವಿಸರ್ಜನೆ ವೇಳೆ ಗಲಾಟೆ, ಲಾಠಿಚಾರ್ಜ್​​
ಭದ್ರತಾ ಪಡೆಯಿಂದ ಉಗ್ರನ ಎನ್​ಕೌಂಟರ್​, ವಿಡಿಯೋ ಸೆರೆಹಿಡಿದ ಡ್ರೋನ್
ಭದ್ರತಾ ಪಡೆಯಿಂದ ಉಗ್ರನ ಎನ್​ಕೌಂಟರ್​, ವಿಡಿಯೋ ಸೆರೆಹಿಡಿದ ಡ್ರೋನ್
ಭಜರಂಗದಳ, VHPಯಿಂದ ಬಿಸಿ ರೋಡ್ ಚಲೋ ಕರೆ, ಪೊಲೀಸ್​​ ಬಿಗಿ ಬಂದೋಬಸ್ತ್​​
ಭಜರಂಗದಳ, VHPಯಿಂದ ಬಿಸಿ ರೋಡ್ ಚಲೋ ಕರೆ, ಪೊಲೀಸ್​​ ಬಿಗಿ ಬಂದೋಬಸ್ತ್​​
ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ಮಲಗಿದ್ದ ವ್ಯಕ್ತಿ
ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ಮಲಗಿದ್ದ ವ್ಯಕ್ತಿ
‘ಹಗ್ಗ’ ಟ್ರೇಲರ್​ ಬಿಡುಗಡೆ ವೇದಿಕೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಸೀಮಂತ
‘ಹಗ್ಗ’ ಟ್ರೇಲರ್​ ಬಿಡುಗಡೆ ವೇದಿಕೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಸೀಮಂತ
Daily Devotional: ಪತ್ನಿಯ ಪೂಜಾ ಫಲ ಪತಿಗೆ ಸಲ್ಲುತ್ತಾ? ವಿಡಿಯೋ ನೋಡಿ
Daily Devotional: ಪತ್ನಿಯ ಪೂಜಾ ಫಲ ಪತಿಗೆ ಸಲ್ಲುತ್ತಾ? ವಿಡಿಯೋ ನೋಡಿ
Nithya Bhavishya: ಅನಂತಪದ್ಮನಾಭ ವ್ರತ ಸೋಮವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಅನಂತಪದ್ಮನಾಭ ವ್ರತ ಸೋಮವಾರದ ದಿನ ಭವಿಷ್ಯ ತಿಳಿಯಿರಿ
ಆಟೋ ಡ್ರೈವರ್​ ಆದ ರಾಧಿಕಾ ಕುಮಾರಸ್ವಾಮಿ; ‘ಭೈರಾದೇವಿ’ ಪ್ರಚಾರಕ್ಕೆ ಚಾಲನೆ
ಆಟೋ ಡ್ರೈವರ್​ ಆದ ರಾಧಿಕಾ ಕುಮಾರಸ್ವಾಮಿ; ‘ಭೈರಾದೇವಿ’ ಪ್ರಚಾರಕ್ಕೆ ಚಾಲನೆ