Paralympics 2024: ಭಾರತಕ್ಕೆ 27ನೇ ಪದಕ ಗೆದ್ದು ಕೊಟ್ಟ ಹೊಕಾಟೊ ಹೊಟೊಝೆ

Paralympics 2024: ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತೀಯರು 19 ಪದಕಗಳನ್ನು ಗೆದ್ದಿದ್ದೇ ಶ್ರೇಷ್ಠ ಸಾಧನೆಯಾಗಿತ್ತು. ಆದರೆ ಈ ಬಾರಿ 26+ ಪದಕಗಳನ್ನು ಗೆಲ್ಲುವ ಮೂಲಕ ಭಾರತೀಯ ಕ್ರೀಡಾಪಟುಗಳು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಈ ಪದಕಗಳ ಸಂಖ್ಯೆ 30ರ ಗಡಿದಾಟುವ ನಿರೀಕ್ಷೆಯಿದೆ.

Paralympics 2024: ಭಾರತಕ್ಕೆ 27ನೇ ಪದಕ ಗೆದ್ದು ಕೊಟ್ಟ ಹೊಕಾಟೊ ಹೊಟೊಝೆ
Hokato Hotozhe
Follow us
|

Updated on:Sep 07, 2024 | 7:15 AM

ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2024 ರ ಪುರುಷರ ಶಾಟ್ ಪುಟ್ F57 ಸ್ಪರ್ಧೆಯಲ್ಲಿ ಭಾರತದ ಹೊಕಾಟೊ ಹೊಟೊಝೆ ಸೆಮಾ ಕಂಚಿನ ಪದಕವನ್ನು ಗೆದ್ದಿದ್ದಾರೆ. ಶುಕ್ರವಾರ ಸ್ಟೇಡ್ ಡಿ ಫ್ರಾನ್ಸ್‌ ಮೈದಾನದಲ್ಲಿ ನಡೆದ ಫೈನಲ್ ಸುತ್ತಿನಲ್ಲಿ 14.65 ಮೀಟರ್‌ ದೂರಕ್ಕೆ ಎಸೆಯುವ ಮೂಲಕ ಹೊಕಾಟೊ ಮೂರನೇ ಸ್ಥಾನ ಪಡೆದರು. ಈ ಮೂಲಕ ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ 27ನೇ ಪದಕ ಗೆದ್ದುಕೊಟ್ಟರು. ಇನ್ನು ಈ ಸ್ಪರ್ಧೆಯಲ್ಲಿ ಇರಾನ್‌ನ ಯಾಸಿನ್ ಖೋಸ್ರಾವಿ 15.96 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಚಿನ್ನದ ಪದಕ ಗೆದ್ದರೆ, ಬ್ರೆಝಿಲ್‌ನ ಥಿಯಾಗೊ ಪಾಲಿನೊ ಡಾಸ್ ಸ್ಯಾಂಟೋಸ್ 15.06 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.

27 ಪದಕಗಳು:

ಭಾರತವು 9 ದಿನಗಳ ಮುಕ್ತಾಯದ ವೇಳೆಗೆ ಒಟ್ಟು 27 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ 6 ಚಿನ್ನ, 9 ಬೆಳ್ಳಿ ಹಾಗೂ 12 ಕಂಚಿನ ಪದಕಗಳು ಒಳಗೊಂಡಿವೆ. ಇನ್ನು ಪವರ್​ ಲಿಫ್ಟಿಂಗ್ ಸೇರಿದಂತೆ ಒಂದಷ್ಟು ಸ್ಪರ್ಧೆಗಳಲ್ಲಿ ಭಾರತೀಯರು ಕಣಕ್ಕಿಳಿಯಲಿದ್ದು, ಹೀಗಾಗಿ ಈ ಪದಕಗಳ ಸಂಖ್ಯೆಯು 30ರ ಗಡಿದಾಟುವ ನಿರೀಕ್ಷೆಯಿದೆ.

ಪ್ಯಾರಿಸ್ 2024 ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಪದಕ ವಿಜೇತರು
ಸಂ. ಕ್ರೀಡಾಪಟು ಕ್ರೀಡೆ ಸ್ಪರ್ಧೆ ಪದಕ
1 ಅವನಿ ಲೇಖನಾ ಶೂಟಿಂಗ್ ಮಹಿಳೆಯರ 10ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಚಿನ್ನ
2 ಮೋನಾ ಅಗರ್ವಾಲ್ ಶೂಟಿಂಗ್ ಮಹಿಳೆಯರ 10ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಕಂಚು
3 ಪ್ರೀತಿ ಪಾಲ್ ಅಥ್ಲೆಟಿಕ್ಸ್ ಮಹಿಳೆಯರ 100ಮೀ ಟಿ35 ಕಂಚು
4 ಮನೀಶ್ ನರ್ವಾಲ್ ಶೂಟಿಂಗ್ ಪುರುಷರ 10 ಮೀ ಏರ್ ಪಿಸ್ತೂಲ್ SH1 ಬೆಳ್ಳಿ
5 ರುಬಿನಾ ಫ್ರಾನ್ಸಿಸ್ ಶೂಟಿಂಗ್ ಮಹಿಳೆಯರ 10ಮೀ ಏರ್ ಪಿಸ್ತೂಲ್ SH1 ಕಂಚು
6 ಪ್ರೀತಿ ಪಾಲ್ ಅಥ್ಲೆಟಿಕ್ಸ್ ಮಹಿಳೆಯರ 200ಮೀ ಟಿ35 ಕಂಚು
7 ನಿಶಾದ್ ಕುಮಾರ್ ಅಥ್ಲೆಟಿಕ್ಸ್ ಪುರುಷರ ಎತ್ತರ ಜಿಗಿತ T47 ಬೆಳ್ಳಿ
8 ಯೋಗೇಶ್ ಕಥುನಿಯಾ ಅಥ್ಲೆಟಿಕ್ಸ್ ಪುರುಷರ ಡಿಸ್ಕಸ್ ಥ್ರೋ F56 ಬೆಳ್ಳಿ
9 ನಿತೇಶ್ ಕುಮಾರ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL3 ಚಿನ್ನ
10 ತುಳಸಿಮತಿ ಮುರುಗೇಶನ್ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ SU5 ಬೆಳ್ಳಿ
11 ಮನಿಷಾ ರಾಮದಾಸ್ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ SU5 ಕಂಚು
12 ಸುಹಾಸ್ ಯತಿರಾಜ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL4 ಬೆಳ್ಳಿ
13 ರಾಕೇಶ್ ಕುಮಾರ್ / ಶೀತಲ್ ದೇವಿ ಬಿಲ್ಲುಗಾರಿಕೆ ಮಿಶ್ರ ತಂಡ ಕಂಚು
14 ಸುಮಿತ್ ಆಂಟಿಲ್ ಅಥ್ಲೆಟಿಕ್ಸ್ ಜಾವೆಲಿನ್ ಎಸೆತ F64 ಚಿನ್ನ
15 ನಿತ್ಯ ಶ್ರೀ ಶಿವನ್ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ SH6 ಕಂಚು
16 ದೀಪ್ತಿ ಜೀವನಜಿ ಅಥ್ಲೆಟಿಕ್ಸ್ ಮಹಿಳೆಯರ 400 ಮೀ ಟಿ20 ಕಂಚು
17 ಮರಿಯಪ್ಪನ್ ತಂಗವೇಲು ಅಥ್ಲೆಟಿಕ್ಸ್ ಪುರುಷರ ಎತ್ತರ ಜಿಗಿತ T63 ಕಂಚು
18 ಶರದ್ ಕುಮಾರ್ ಅಥ್ಲೆಟಿಕ್ಸ್ ಪುರುಷರ ಎತ್ತರ ಜಿಗಿತ T63 ಬೆಳ್ಳಿ
19 ಅಜೀತ್ ಸಿಂಗ್ ಅಥ್ಲೆಟಿಕ್ಸ್ ಪುರುಷರ ಜಾವೆಲಿನ್ ಎಸೆತ F46 ಬೆಳ್ಳಿ
20 ಸುಂದರ್ ಸಿಂಗ್ ಗುರ್ಜರ್ ಅಥ್ಲೆಟಿಕ್ಸ್ ಪುರುಷರ ಜಾವೆಲಿನ್ ಎಸೆತ F46 ಕಂಚು
21 ಸಚಿನ್ ಖಿಲಾರಿ ಅಥ್ಲೆಟಿಕ್ಸ್ ಪುರುಷರ ಶಾಟ್ ಪುಟ್ F46 ಬೆಳ್ಳಿ
22 ಹರ್ವಿಂದರ್ ಸಿಂಗ್ ಬಿಲ್ಲುಗಾರಿಕೆ ಪುರುಷರ ವೈಯಕ್ತಿಕ ರಿಕರ್ವ್ ತೆರೆದಿರುತ್ತದೆ ಚಿನ್ನ
23 ಧರಂಬೀರ್ ಅಥ್ಲೆಟಿಕ್ಸ್ ಪುರುಷರ ಕ್ಲಬ್ ಥ್ರೋ F51 ಚಿನ್ನ
24 ಪರ್ಣವ್ ಸೂರ್ಮಾ ಅಥ್ಲೆಟಿಕ್ಸ್ ಪುರುಷರ ಕ್ಲಬ್ ಥ್ರೋ F51 ಬೆಳ್ಳಿ
25 ಕಪಿಲ್ ಪರ್ಮಾರ್ ಜೂಡೋ ಪುರುಷರ -60 ಕೆಜಿ J1 ಕಂಚು
26 ಪ್ರವೀಣ್ ಕುಮಾರ್ ಅಥ್ಲೆಟಿಕ್ಸ್ ಪುರುಷರ ಎತ್ತರ ಜಿಗಿತ T64 ಚಿನ್ನ
27 ಹೊಕಾಟೊ ಹೊಟೊಝೆ ಸೆಮಾ ಅಥ್ಲೆಟಿಕ್ಸ್ ಪುರುಷರ ಶಾಟ್ ಪುಟ್ F57 ಕಂಚು

Published On - 7:13 am, Sat, 7 September 24

ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಗದಗ: ಗಣೇಶ ವಿಸರ್ಜನೆ ವೇಳೆ ಗಲಾಟೆ, ಲಾಠಿಚಾರ್ಜ್​​
ಗದಗ: ಗಣೇಶ ವಿಸರ್ಜನೆ ವೇಳೆ ಗಲಾಟೆ, ಲಾಠಿಚಾರ್ಜ್​​
ಭದ್ರತಾ ಪಡೆಯಿಂದ ಉಗ್ರನ ಎನ್​ಕೌಂಟರ್​, ವಿಡಿಯೋ ಸೆರೆಹಿಡಿದ ಡ್ರೋನ್
ಭದ್ರತಾ ಪಡೆಯಿಂದ ಉಗ್ರನ ಎನ್​ಕೌಂಟರ್​, ವಿಡಿಯೋ ಸೆರೆಹಿಡಿದ ಡ್ರೋನ್
ಭಜರಂಗದಳ, VHPಯಿಂದ ಬಿಸಿ ರೋಡ್ ಚಲೋ ಕರೆ, ಪೊಲೀಸ್​​ ಬಿಗಿ ಬಂದೋಬಸ್ತ್​​
ಭಜರಂಗದಳ, VHPಯಿಂದ ಬಿಸಿ ರೋಡ್ ಚಲೋ ಕರೆ, ಪೊಲೀಸ್​​ ಬಿಗಿ ಬಂದೋಬಸ್ತ್​​
ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ಮಲಗಿದ್ದ ವ್ಯಕ್ತಿ
ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ಮಲಗಿದ್ದ ವ್ಯಕ್ತಿ
‘ಹಗ್ಗ’ ಟ್ರೇಲರ್​ ಬಿಡುಗಡೆ ವೇದಿಕೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಸೀಮಂತ
‘ಹಗ್ಗ’ ಟ್ರೇಲರ್​ ಬಿಡುಗಡೆ ವೇದಿಕೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಸೀಮಂತ