Pro Kabaddi 2023: ಬೆಂಗಳೂರು ಬುಲ್ಸ್ ವಿರುದ್ಧ ಗುಜರಾತ್ ಜೈಂಟ್ಸ್ಗೆ ರೋಚಕ ಜಯ
Gujarat Giants vs Bengaluru Bulls: ಮೊದಲಾರ್ಧದಲ್ಲಿ ಅದ್ಭುತ ರೇಡ್ ನಡೆಸಿದ ಬೆಂಗಳೂರು ಬುಲ್ಸ್ ತಂಡದ ನೀರಜ್ ಹಾಗೂ ಭರತ್ ಸತತ ಅಂಕಗಳನ್ನು ಕಲೆಹಾಕುವತ್ತಾ ಸಾಗಿತು. ಪರಿಣಾಮ ಮೊದಲಾರ್ಧದ ಮುಕ್ತಾಯದ ವೇಳೆಗೆ ಬೆಂಗಳೂರು ಬುಲ್ಸ್ ತಂಡವು 20 ಪಾಯಿಂಟ್ಸ್ ಕಲೆಹಾಕಿದರೆ, ಗುಜರಾತ್ ಜೈಂಟ್ಸ್ ತಂಡ 14 ಅಂಕಗಳಿಸಿತು.
ಅಹಮದಾಬಾದ್ನ EKA ಅರೇನಾ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ನ 4ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ರೋಚಕ ಜಯ ಸಾಧಿಸಿದೆ. ಆರಂಭದಲ್ಲೇ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಮೊದಲ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿತ್ತು.
ಗುಜರಾತ್ ಜೈಂಟ್ಸ್ ತಂಡದ ಮೊದಲ ರೇಡರ್ ಅನ್ನು ಟ್ಯಾಕ್ಲ್ ಮಾಡುವಲ್ಲಿ ಯಶಸ್ವಿಯಾದ ಅಮನ್ ಬೆಂಗಳೂರು ಬುಲ್ಸ್ ತಂಡಕ್ಕೆ ಮೊದಲ ಪಾಯಿಂಟ್ ತಂದುಕೊಟ್ಟರು. ಇದರ ಬೆನ್ನಲ್ಲೇ ಬೆಂಗಳೂರು ಬುಲ್ಸ್ ಪರ ಮೊದಲ ರೇಡ್ ನಡೆಸಿದ ನೀರಜ್ ನರ್ವಾಲ್ ಇಬ್ಬರನ್ನು ಔಟ್ ಮಾಡಿ 2 ಪಾಯಿಂಟ್ಸ್ ಕಲೆಹಾಕಿದರು.
ಅತ್ತ 5-0 ಅಂತರದಿಂದ ಆರಂಭಿಕ ಹಿನ್ನಡೆ ಅನುಭವಿಸಿದ್ದ ಗುಜರಾತ್ ಜೈಂಟ್ಸ್ ತಂಡವು ಟ್ಯಾಕ್ಲ್ನಲ್ಲಿ ಸಾಂಘಿಕ ಪ್ರದರ್ಶನ ನೀಡಿದರು. ಪರಿಣಾಮ ಬ್ಯಾಕ್ ಟು ಬ್ಯಾಕ್ ಅಂಕಗಳಿಸಿ ಮೊದಲ ಟೈಮ್ ಔಟ್ ವೇಳೆ 9-9 ಅಂತರದಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು.
ಇದಾಗ್ಯೂ ಮೊದಲಾರ್ಧದಲ್ಲಿ ಅದ್ಭುತ ರೇಡ್ ನಡೆಸಿದ ಬೆಂಗಳೂರು ಬುಲ್ಸ್ ತಂಡದ ನೀರಜ್ ಹಾಗೂ ಭರತ್ ಸತತ ಅಂಕಗಳನ್ನು ಕಲೆಹಾಕುವತ್ತಾ ಸಾಗಿತು. ಪರಿಣಾಮ ಮೊದಲಾರ್ಧದ ಮುಕ್ತಾಯದ ವೇಳೆಗೆ ಬೆಂಗಳೂರು ಬುಲ್ಸ್ ತಂಡವು 20 ಪಾಯಿಂಟ್ಸ್ ಕಲೆಹಾಕಿದರೆ, ಗುಜರಾತ್ ಜೈಂಟ್ಸ್ ತಂಡ 14 ಅಂಕಗಳಿಸಿತು.
ಆದರೆ ದ್ವಿತೀಯಾರ್ಧದ ಆರಂಭದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಗುಜರಾತ್ ಜೈಂಟ್ಸ್ ತಂಡದ ಸೋನು ಸೂಪರ್ ರೇಡ್ ಮೂಲಕ 3 ಪಾಯಿಂಟ್ಸ್ ಕಲೆಹಾಕಿದರು. ಇತ್ತ ಹೊಂದಾಣಿಕೆಯ ಕೊರತೆಯಿಂದಾಗಿ ಬೆಂಗಳೂರು ಬುಲ್ಸ್ ತಂಡ ಟ್ಯಾಕ್ಲ್ನಲ್ಲಿ ಎಡವಿದರು. ಪರಿಣಾಮ ದ್ವಿತಿಯಾರ್ಧದ ಅಂತಿಮ ಹಂತದಲ್ಲಿ ಗುಜರಾತ್ ಜೈಂಟ್ಸ್ 26 ಅಂಕ ಸಂಪಾದಿಸಿತು. ಆದರೆ ಬೆಂಗಳೂರು ಬುಲ್ಸ್ ತಂಡವು 23 ಪಾಯಿಂಟ್ಸ್ನಲ್ಲೇ ಉಳಿಯಿತು.
ಇದಾಗ್ಯೂ ಅಂತಿಮ ಹಂತದಲ್ಲಿ ಉಭಯ ತಂಡಗಳ ಆಟಗಾರರಿಂದ ಜಿದ್ದಾಜಿದ್ದಿನ ಹೋರಾಟ ಕಂಡು ಬಂತು. ಇದರಿಂದಾಗಿ ಕೊನೆಯ 2 ನಿಮಿಷಗಳಿರುವಾಗ ಉಭಯ ತಂಡಗಳ ಅಂಕಗಳು 30-30 ಅಂತರದಿಂದ ಸಮಬಲಗೊಂಡಿತು.
ಈ ಹಂತದಲ್ಲಿ ಬೆಂಗಳೂರು ಬುಲ್ಸ್ ತಂಡದ ಭರತ್ ಹಾಗೂ ನೀರಜ್ ನರ್ವಾಲ್ ಅವರನ್ನು ಟ್ಯಾಕ್ಲ್ ಮಾಡುವ ಮೂಲಕ ಗುಜರಾತ್ ಜೈಂಟ್ಸ್ ತಂಡವು 4 ಸೂಪರ್ ಟ್ಯಾಕ್ಲ್ ಪಾಯಿಂಟ್ಸ್ ಕಲೆಹಾಕಿತು. ಈ ಅಂಕಗಳೊಂದಿಗೆ ಗುಜರಾತ್ ಜೈಂಟ್ಸ್ ತಂಡವು 34-31 ಅಂತರದಿಂದ ಬೆಂಗಳೂರು ಬುಲ್ಸ್ ತಂಡಕ್ಕೆ ಸೋಲುಣಿಸುವಲ್ಲಿ ಯಶಸ್ವಿಯಾದರು.
The tackle that sealed the Giants’ fate 👊#ProKabaddi #PKLSeason10 #GGvBLR #GujaratGiants #BengaluruBulls #HarSaansMeinKabaddi pic.twitter.com/kbxLi69V6E
— ProKabaddi (@ProKabaddi) December 3, 2023
ಬೆಂಗಳೂರು ಬುಲ್ಸ್ ತಂಡ: ನೀರಜ್ ನರ್ವಾಲ್, ಭರತ್, ಸೌರಭ್ ನಂದಲ್, ಯಶ್ ಹೂಡಾ, ವಿಶಾಲ್, ವಿಕಾಶ್ ಖಂಡೋಲಾ, ರಾನ್ ಸಿಂಗ್, ಎಂಡಿ. ಲಿಟನ್ ಅಲಿ, ಪಿಯೋಟರ್ ಪಮುಲಕ್, ಪೊನ್‌ಪರ್ತಿಬನ್ ಸುಬ್ರಮಣಿಯನ್, ಸುಂದರ್, ಸುರ್ಜೀತ್ ಸಿಂಗ್, ಅಭಿಷೇಕ್ ಸಿಂಗ್, ಬಂಟಿ, ಮೋನು, ಅಂಕಿತ್, ಸುಶೀಲ್, ರಕ್ಷಿತ್, ರೋಹಿತ್ ಕುಮಾರ್.
ಇದನ್ನೂ ಓದಿ: ನೋ…ಬಾಲ್: ಮತ್ತೆ ಸ್ಪಾಟ್ ಫಿಕ್ಸಿಂಗ್ ಚರ್ಚೆ..!
ಗುಜರಾತ್ ಜೈಂಟ್ಸ್ ತಂಡ: ಮನುಜ್, ಸೋನು, ರಾಕೇಶ್, ರೋಹನ್ ಸಿಂಗ್, ಪರ್ತೀಕ್ ದಹಿಯಾ, ಫಝೆಲ್ ಅತ್ರಾಚಲಿ, ರೋಹಿತ್ ಗುಲಿಯಾ, ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್, ಅರ್ಕಮ್ ಶೇಖ್, ಸೋಂಬಿರ್, ವಿಕಾಸ್ ಜಗ್ಲಾನ್, ಸೌರವ್ ಗುಲಿಯಾ, ದೀಪಕ್ ರಾಜೇಂದರ್ ಸಿಂಗ್, ರವಿ ಕುಮಾರ್, ಮೋರ್ ಜಿಬಿ, ಜಿತೇಂದರ್ ಯಾದವ್, ನಿತೇಶ್, ನಿತೇಶ್ ಬಾಲಾಜಿ.