Pro Kabaddi League 2022: ಕೊನೇ ಕ್ಷಣದಲ್ಲಿ ಬೆಂಗಳೂರು ಬುಲ್ಸ್ ತಂಡದ ಎದುರಾಳಿ ಬದಲಾವಣೆ
Bengaluru Bulls vs Bengal Warriors: ತಮಿಳ್ ತಲೈವಾಸ್ ಹಾಗೂ ಗುಜರಾತ್ ಜೈಂಟ್ಸ್ ನಡುವಣ ಮೊದಲ ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಬೆಂಗಳೂರು ಬುಲ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಣ ಎರಡನೇ ಪಂದ್ಯ ರಾತ್ರಿ 8.30ಕ್ಕೆ ಶುರುವಾಗಲಿದೆ.

ಪ್ರೊ ಕಬಡ್ಡಿ ಲೀಗ್‌ನ ದ್ವಿತಿಯಾರ್ಧದ ಮೊದಲ ಪಂದ್ಯದ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಈ ಹಿಂದಿನ ವೇಳಾಪಟ್ಟಿಯಂತೆ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಪಾಟ್ನಾ ಪೈರೇಟ್ಸ್ ಮುಖಾಮುಖಿಯಾಗಬೇಕಿತ್ತು. ಆದರೀಗ ಬೆಂಗಳೂರು ಬುಲ್ಸ್ ಪೈರೇಟ್ಸ್ ಬದಲಿಗೆ ಬೆಂಗಾಲ್ ವಾರಿಯರ್ಸ್ ವಿರುದ್ಧ ಆಡಲಿದೆ. ಇದಾಗ್ಯೂ ಈ ಬದಲಾವಣೆ ಯಾಕೆ ಮಾಡಲಾಗಿದೆ ಎಂಬುದನ್ನು ಪ್ರೋ ಕಬಡ್ಡಿ ಆಯೋಜಕರು ಸ್ಪಷ್ಟಪಡಿಸಿಲ್ಲ. ಪ್ರಸ್ತುತ ಬುಲ್ಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದ್ದು, ಬೆಂಗಾಲ್ ವಾರಿಯರ್ಸ್ 8ನೇ ಸ್ಥಾನದಲ್ಲಿದೆ. ಹೀಗಾಗಿ ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ.
ಇನ್ನು ಗುರುವಾರ ನಡೆಯಲಿರುವ ಪ್ರೊ ಕಬಡ್ಡಿ ಲೀಗ್‌ನ 66ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ಹಾಗೂ ಗುಜರಾತ್ ಜೈಂಟ್ಸ್ ಸೆಣಸಲಿದೆ . ತಮಿಳ್ ತಲೈವಾಸ್ ಪ್ರಸ್ತುತ ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ 30 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಜೈಂಟ್ಸ್ 10 ಪಂದ್ಯಗಳ ಬಳಿಕ 10 ನೇ ಸ್ಥಾನದಲ್ಲಿದೆ.
ಪಂದ್ಯದ ಸಮಯ? ಇಂದು 2 ಪಂದ್ಯಗಳಿವೆ. ತಮಿಳ್ ತಲೈವಾಸ್ ಹಾಗೂ ಗುಜರಾತ್ ಜೈಂಟ್ಸ್ ನಡುವಣ ಮೊದಲ ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಬೆಂಗಳೂರು ಬುಲ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಣ ಎರಡನೇ ಪಂದ್ಯ ರಾತ್ರಿ 8.30ಕ್ಕೆ ಶುರುವಾಗಲಿದೆ.
ತಮಿಳ್ ತಲೈವಾಸ್ vs ಗುಜರಾತ್ ಜೈಂಟ್ಸ್ ಸಂಭಾವ್ಯ ಸ್ಟಾರ್ಟಿಂಗ್ 7 ಆಟಗಾರರು: ತಮಿಳ್ ತಲೈವಾಸ್: ಮಂಜೀತ್, ಸುರ್ಜಿತ್ ಸಿಂಗ್, ಭವಾನಿ ರಜಪೂತ್, ಸಾಗರ್, ಸಾಹಿಲ್ ಸಿಂಗ್, ಅಜಿಂಕ್ಯ ಪವಾರ್, ಮೋಹಿತ್ ಗುಜರಾತ್ ಜೈಂಟ್ಸ್: ಸುನಿಲ್ ಕುಮಾರ್, ಪರ್ವೇಶ್ ಭೈನ್ಸ್ವಾಲ್, ಅಜಯ್ ಕುಮಾರ್, ಗಿರೀಶ್ ಮಾರುತಿ, ರಾಕೇಶ್ ನರ್ವಾಲ್, ರಾಕೇಶ್, ಅಂಕಿತ್
ಬೆಂಗಳೂರು ಬುಲ್ಸ್ vs ಬೆಂಗಾಲ್ ವಾರಿಯರ್ಸ್ ಸಂಭಾವ್ಯ ಸ್ಟಾರ್ಟಿಂಗ್ 7 ಆಟಗಾರರು: ಬೆಂಗಳೂರು ಬುಲ್ಸ್: ಪವನ್ ಶೆಹ್ರಾವತ್, ಚಂದ್ರನ್ ರಂಜಿತ್, ದೀಪಕ್ ನರ್ವಾಲ್, ಮಹೇಂದ್ರ ಸಿಂಗ್, ಸೌರಭ್ ನಂದಲ್, ಮಯೂರ್ ಕದಮ್, ಅಮನ್.
ಬೆಂಗಾಲ್ ವಾರಿಯರ್ಸ್: ಮಣಿಂದರ್ ಸಿಂಗ್, ಸುಕೇಶ್ ಹೆಗ್ಡೆ, ಮೊಹಮ್ಮದ್ ನಬಿಬಕ್ಷ್, ರಾನ್ ಸಿಂಗ್, ಅಬೋಜರ್ ಮಿಘಾನಿ, ಅಮಿತ್ ನಿರ್ವಾಲ್, ಸಚಿನ್ ವಿಟ್ಲ.
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
(Pro Kabaddi League 2022, Bengaluru Bulls vs Bengal Warriors: Who will win today)
