Pro Kabaddi 2022: ಬೆಂಗಳೂರು ಬುಲ್ಸ್ನ ಮಕಾಡೆ ಮಲಗಿಸಿದ ತಮಿಳ್ ತಲೈವಾಸ್
Tamil Thalaivas vs Bengaluru Bulls: ಮೊದಲಾರ್ಧದ ಮುನ್ನಡೆ ಕಾಯ್ದುಕೊಂಡ ತಮಿಳ್ ತಲೈವಾಸ್ ದ್ವಿತಿಯಾರ್ಧದ ಆರಂಭದಲ್ಲೇ ಪಾಯಿಂಟ್ಗಳಿಸಿತು. ಈ ಬಾರಿ ರೈಡರ್ ಮಂಜೀತ್ ಕೂಡ ಉತ್ತಮವಾಗಿ ರೈಡ್ ಮಾಡಿದರು.
ಪ್ರೋ ಕಬಡ್ಡಿ ಲೀಗ್ನ 83ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ತಮಿಳ್ ತಲೈವಾಸ್ ವಿರುದ್ದ ಹೀನಾಯ ಸೋಲನುಭವಿಸಿದೆ. ಪಂದ್ಯದ ಆರಂಭದಲ್ಲಿ ಬೆಂಗಳೂರು ಬುಲ್ಸ್ ತಂಡದ ನಾಯಕ ಪವನ್ ಕುಮಾರ್ ಶೆಹ್ರಾವತ್ ಆರಂಭಿಕ ಪಾಯಿಂಟ್ ಕಲೆಹಾಕಿದ್ದರು. ಆದರೆ ಆ ಬಳಿಕ ಅದ್ಭುತವಾಗಿ ಕಂಬ್ಯಾಕ್ ಮಾಡಿದ ತಮಿಳ್ ತಲೈವಾಸ್ ಟ್ಯಾಕಲ್ಗಳ ಮೂಲಕ ಗಮನ ಸೆಳೆದರು.
ಅದರಂತೆ ಒಂದೆಡೆ ಟ್ಯಾಕಲ್ಗಳ ಮೂಲಕ ಯಶಸ್ಸು ಸಾಧಿಸಿದರೆ, ಮತ್ತೊಂದೆಡೆ ತಮಿಳ್ ತಲೈವಾಸ್ ತಂಡದ ಸ್ಟಾರ್ ರೈಡರ್ ಅಜಿಂಕ್ಯ ಪವಾರ್ 6 ರೈಡ್ ಪಾಯಿಂಟ್ ಪಡೆದರು. ಪರಿಣಾಮ ಬೆಂಗಳೂರು ಬುಲ್ಸ್ ತಂಡವು ಮೊದಲಾರ್ಧದಲ್ಲಿ 4 ಬಾರಿ ಆಲೌಟ್ ಆಯಿತು. ಈ ಮೂಲಕ ಮೊದಲಾರ್ಧದ ಮುಕ್ತಾಯದ ವೇಳೆಗೆ ತಮಿಳ್ ತಲೈವಾಸ್ 21 ಅಂಕಗಳನ್ನು ಗಳಿಸಿತು. ಆದರೆ ಮತ್ತೊಂದೆಡೆ ಬೆಂಗಳೂರು ಬುಲ್ಸ್ ಕಲೆಹಾಕಿದ್ದು ಕೇವಲ 8 ಪಾಯಿಂಟ್ ಮಾತ್ರ.
ಇನ್ನು ಮೊದಲಾರ್ಧದ ಮುನ್ನಡೆ ಕಾಯ್ದುಕೊಂಡ ತಮಿಳ್ ತಲೈವಾಸ್ ದ್ವಿತಿಯಾರ್ಧದ ಆರಂಭದಲ್ಲೇ ಪಾಯಿಂಟ್ಗಳಿಸಿತು. ಈ ಬಾರಿ ರೈಡರ್ ಮಂಜೀತ್ ಕೂಡ ಉತ್ತಮವಾಗಿ ರೈಡ್ ಮಾಡಿದರು. ಅದರಂತೆ ದ್ವಿತಿಯಾರ್ಧದ ತಮಿಳು ತಲೈವಾಸ್ ಬೇಗನೆ 30 ಪಾಯಿಂಟ್ಗಳ ಗಡಿದಾಟಿತು. ಇದೇ ವೇಳೆ ಬೆಂಗಳೂರು ಬುಲ್ಸ್ ತಂಡವು 12 ಪಾಯಿಂಟ್ನಲ್ಲೇ ಉಳಿದುಕೊಂಡಿತು.
ಕೊನೆಯ 10 ನಿಮಿಷಗಳ ಪಂದ್ಯ ಬಾಕಿಯಿರುವಾಗ ಬೆಂಗಳೂರು ಬುಲ್ಸ್ 12 ಪಾಯಿಂಟ್ನಲ್ಲಿದ್ದರೆ, ತಮಿಳ್ ತಲೈವಾಸ್ ಅದಾಗಲೇ 34 ಅಂಕಗಳಿಸಿತ್ತು. ಈ ಮೂಲಕ 22 ಪಾಯಿಂಟ್ಗಳ ಮುನ್ನಡೆಯನ್ನು ಪಡೆದಿತ್ತು. ಇದಾದ ಬಳಿಕ ಮತ್ತೆ 2 ಬಾರಿ ಬೆಂಗಳೂರು ಬುಲ್ಸ್ ತಂಡವನ್ನು ಆಲೌಟ್ ಮಾಡಿದ ತಮಿಳ್ ತಲೈವಾಸ್ ಪಾಯಿಂಟ್ ಅಂತರವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಅದರಂತೆ ಅಂತಿಮವಾಗಿ ತಮಿಳ್ ತಲೈವಾಸ್ 42 ಪಾಯಿಂಟ್ಗಳ ಕಲೆಹಾಕಿತು. ಇತ್ತ 24 ಪಾಯಿಂಟ್ಗಳಿಸಲಷ್ಟೇ ಶಕ್ತರಾದ ಬೆಂಗಳೂರು ಬುಲ್ಸ್ ತಂಡವು 18 ಪಾಯಿಂಟ್ಗಳಿಂದ ಪರಾಜಯಗೊಂಡಿತು.
ಈ ಪಂದ್ಯದಲ್ಲಿ ತಮಿಳ್ ತಲೈವಾಸ್ ಪರ ಅಜಿಂಕ್ಯ ಪವಾರ್ 10 ರೈಡಿಂಗ್ ಪಾಯಿಂಟ್ಗಳಿಸಿದರೆ, ಮಂಜೀತ್ 8 ಪಾಯಿಂಟ್ಗಳನ್ನು ಕಲೆಹಾಕಿದರು. ಹಾಗೆಯೇ ಅಭಿಷೇಕ್ ಮತ್ತು ಸಾಗರ್ ತಲಾ 4 ಟ್ಯಾಕಲ್ ಪಾಯಿಂಟ್ಗಳನ್ನು ಗಳಿಸಿದ್ದರು. ಬೆಂಗಳೂರು ಬುಲ್ಸ್ ಪವನ್ ಕುಮಾರ್ 9 ರೈಡ್ ಪಾಯಿಂಟ್ ಕಲೆಹಾಕಿದ್ದರು.
ಇದನ್ನೂ ಓದಿ: IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!
ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ
ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್