R Praggnanandhaa: ಫ್ಯಾಬಿಯಾನೊ ಕರುವಾನಾಗೆ ಸೋಲುಣಿಸಿದ ಆರ್. ಪ್ರಜ್ಞಾನಂದ
R Praggnanandhaa: ಭಾರತದ ಚೆಸ್ ಚತುರ ಆರ್. ಪ್ರಜ್ಞಾನಂದ ಅವರು 2024 ರ ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್‌ನಲ್ಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರಿಗೆ ಸೋಲುಣಿಸಿದ್ದರು. ಈ ಗೆಲುವಿನ ಮೂಲಕ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಆರ್. ಪ್ರಜ್ಞಾನಂದ ಭಾರತದ ಅಗ್ರ ಶ್ರೇಯಾಂಕಿತ ಚೆಸ್ ಪಟುವಾಗಿ ಹೊರಹೊಮ್ಮಿದ್ದರು.

ಸ್ಟಾವೆಂಜರ್‌ನಲ್ಲಿ ನಡೆದ ನಾರ್ವೆ ಚೆಸ್ ಸ್ಪರ್ಧೆಯಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ಫ್ಯಾಬಿಯಾನೊ ಕರುವಾನಾ ಅವರಿಗೆ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ (R Praggnanandhaa) ಸೋಲುಣಿಸಿದ್ದಾರೆ. ಈ ಗೆಲುವಿನೊಂದಿಗೆ FIDE ಚೆಸ್ ರ್ಯಾಂಕಿಂಗ್ನಲ್ಲಿ ಪ್ರಜ್ಞಾನಂದ ಟಾಪ್-10 ಗೆ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಇದೇ ಟೂರ್ನಿಯಲ್ಲಿ ವಿಶ್ವದ ನಂಬರ್ 1 ಚದುರಂಗ ಚತುರ ಮ್ಯಾಗ್ನಸ್ ಕಾರ್ಲ್‌ಸೆನ್ ಅವರ ವಿರುದ್ಧ ಆರ್. ಪ್ರಜ್ಞಾನಂದ ಗೆಲುವು ಸಾಧಿಸಿದ್ದರು. ಇದೀಗ ಫ್ಯಾಬಿಯಾನೊ ಕರುವಾನಾಗೂ ಸೋಲುಣಿಸುವ ಮೂಲಕ ನಾರ್ವೆ ಕ್ಲಾಸಿಕಲ್ ಗೇಮ್ ಚೆಸ್ ಟೂರ್ನಿಯಲ್ಲಿ ಪ್ರಜ್ಞಾನಂದ ಮುನ್ನುಗ್ಗಿದ್ದಾರೆ.
ಇನ್ನು ನಾರ್ವೆ ಚೆಸ್ ಟೂರ್ನಿಯ 5 ಸುತ್ತುಗಳ ಮುಕ್ತಾಯದ ವೇಳೆಗೆ ಹಿಕರು ನಕಮುರಾ ಅಗ್ರಸ್ಥಾನ ಅಲಂಕರಿಸಿದ್ದರೆ, ಕಾರ್ಲ್‌ಸೆನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಹಾಗೆಯೇ ಫ್ಯಾಬಿಯಾನೊ ಕರುವಾನಾ ವಿರುದ್ಧ ಗೆಲುವಿನೊಂದಿಗೆ ಆರ್. ಪ್ರಜ್ಞಾನಂದ ಮೂರನೇ ಸ್ಥಾನಕ್ಕೇರಿದ್ದಾರೆ.
ಅಗ್ರಸ್ಥಾನದಲ್ಲಿ ವೈಶಾಲಿ:
ಮತ್ತೊಂದೆಡೆ ಪ್ರಜ್ಞಾನಂದ ಅವರ ಸಹೋದರಿ ವೈಶಾಲಿ ಅವರು ಪಿಯಾ ಕ್ರಾಮ್ಲಿಂಗ್ ಅವರನ್ನು ಸೋಲಿಸುವ ಮೂಲಕ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದ್ದಾರೆ. ಈ ಗೆಲುವಿನೊಂದಿಗೆ ಒಟ್ಟು 8.5 ಅಂಕಗಳೊಂದಿಗೆ ಮಹಿಳಾ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಹಾಗೆಯೇ ಈ ಪಟ್ಟಿಯಲ್ಲಿ ಭಾರತದ ಚೆಸ್ ಚುತುರೆ ಕೊನೆರು ಹಂಪಿ 5ನೇ ಸ್ಥಾನದಲ್ಲಿದ್ದಾರೆ.
5 ಸುತ್ತುಗಳ ಮುಕ್ತಾಯದ ವೇಳೆಗೆ ಅಂಕ ಪಟ್ಟಿ:
ಪುರುಷರ ವಿಭಾಗ:
- ಹಿಕರು ನಕಮುರಾ – 10 ಅಂಕಗಳು
- ಮ್ಯಾಗ್ನಸ್ ಕಾರ್ಲ್‌ಸೆನ್ – 9 ಅಂಕಗಳು
- ಆರ್ ಪ್ರಜ್ಞಾನಂದ- 8.5 ಅಂಕಗಳು
- ಅಲಿರೆಜಾ ಫಿರೋಜ್ಜಾ – 6.5 ಅಂಕಗಳು
- ಫ್ಯಾಬಿಯಾನೋ ಕರುವಾನಾ – 5 ಅಂಕಗಳು
- ಡಿಂಗ್ ಲಿರೆನ್ – 2.5 ಅಂಕಗಳು
ಇದನ್ನೂ ಓದಿ: ಕಾರ್ಟೂನ್ನಿಂದ…ಚೆಸ್ ವಿಶ್ವಕಪ್ ತನಕ: ಪ್ರಜ್ಞಾನಂದರ ಸಾಧನೆಯ ಹಿಂದಿದ್ದಾರೆ ಮಹಾತಾಯಿ
ಮಹಿಳಾ ವಿಭಾಗ:
- ವೈಶಾಲಿ ಆರ್ – 8.5 ಅಂಕಗಳು
- ಅನ್ನಾ ಮುಜಿಚುಕ್ – 8 ಅಂಕಗಳು
- ಜು ವೆನ್ಜುನ್ – 7.5 ಅಂಕಗಳು
- ಲೀ ಟಿಂಗ್ಜಿ – 6 ಅಂಕಗಳು
- ಕೊನೆರು ಹಂಪಿ- 5.5 ಅಂಕಗಳು
- ಪಿಯಾ ಕ್ರಾಮ್ಲಿಂಗ್ – 5 ಅಂಕಗಳು
Published On - 12:15 pm, Sun, 2 June 24