ಅಂದು ತಿಂಡಿಪೋತ ಎನಿಸಿಕೊಂಡಿದ್ದ ಸರ್ಫರಾಜ್ ಈಗ ದಾಖಲೆ ವೀರ!

ಶಿಮ್ಲಾ: 2015ರಲ್ಲಿ ಆರ್​ಸಿಬಿ ತಂಡದಲ್ಲಿದ್ದ ಸರ್ಫರಾಜ್ ಖಾನ್ ಅನ್ನೋ ಹುಡುಗನೊಬ್ಬ ರಾಜಸ್ಥಾನ್ ರಾಯಲ್ಸ್ ಬೌಲರ್​ಗಳನ್ನ ಚೆಂಡಾಡಿಬಿಟ್ಟಿದ್ದ. ಕೇವಲ 20 ಎಸೆತಗಳಲ್ಲೇ 45 ರನ್​ಗಳಿಸಿ ಅಬ್ಬರಿಸಿದ್ದ. ಆವತ್ತು ಈ ಸಿಡಿಲ ಮರಿಯ ಆರ್ಭಟ ಕಂಡು ಸ್ವತಃ ಆರ್​ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಏನ್ ಆಡ್ತೀಯಪ್ಪಾ ನೀನು ಅಂತಾ ಕೈ ಮುಗಿದಿದ್ರು. ಆವತ್ತು ಈ ಸರ್ಫರಾಜ್ ಖಾನ್ ಆಟ ನೋಡಿದವರೆಲ್ಲ, ಈತ ಭಾರತದ ಭವಿಷ್ಯದ ಸ್ಟಾರ್ ಕ್ರಿಕೆಟಿಗ ಅಂತಾ ಮಾತನಾಡಿದ್ರು. ಆದ್ರೆ ನಂತರದಲ್ಲಿ ಸರ್ಫರಾಜ್ ಸುದ್ದಿಯಲ್ಲೂ ಇರಲಿಲ್ಲ, ಸದ್ದೂ […]

ಅಂದು ತಿಂಡಿಪೋತ ಎನಿಸಿಕೊಂಡಿದ್ದ ಸರ್ಫರಾಜ್ ಈಗ ದಾಖಲೆ ವೀರ!
Follow us
ಸಾಧು ಶ್ರೀನಾಥ್​
|

Updated on: Jan 28, 2020 | 9:52 AM

ಶಿಮ್ಲಾ: 2015ರಲ್ಲಿ ಆರ್​ಸಿಬಿ ತಂಡದಲ್ಲಿದ್ದ ಸರ್ಫರಾಜ್ ಖಾನ್ ಅನ್ನೋ ಹುಡುಗನೊಬ್ಬ ರಾಜಸ್ಥಾನ್ ರಾಯಲ್ಸ್ ಬೌಲರ್​ಗಳನ್ನ ಚೆಂಡಾಡಿಬಿಟ್ಟಿದ್ದ. ಕೇವಲ 20 ಎಸೆತಗಳಲ್ಲೇ 45 ರನ್​ಗಳಿಸಿ ಅಬ್ಬರಿಸಿದ್ದ. ಆವತ್ತು ಈ ಸಿಡಿಲ ಮರಿಯ ಆರ್ಭಟ ಕಂಡು ಸ್ವತಃ ಆರ್​ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಏನ್ ಆಡ್ತೀಯಪ್ಪಾ ನೀನು ಅಂತಾ ಕೈ ಮುಗಿದಿದ್ರು.

ಆವತ್ತು ಈ ಸರ್ಫರಾಜ್ ಖಾನ್ ಆಟ ನೋಡಿದವರೆಲ್ಲ, ಈತ ಭಾರತದ ಭವಿಷ್ಯದ ಸ್ಟಾರ್ ಕ್ರಿಕೆಟಿಗ ಅಂತಾ ಮಾತನಾಡಿದ್ರು. ಆದ್ರೆ ನಂತರದಲ್ಲಿ ಸರ್ಫರಾಜ್ ಸುದ್ದಿಯಲ್ಲೂ ಇರಲಿಲ್ಲ, ಸದ್ದೂ ಮಾಡಲಿಲ್ಲ. ಯಾಕಂದ್ರೆ ಆರ್​ಸಿಬಿ ಈತನನ್ನ ಕೈ ಬಿಟ್ಟಿತ್ತು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನ ಸೇರಿಕೊಂಡಿದ್ದ ಸರ್ಫರಾಜ್​ಗೆ ಅಷ್ಟಾಗಿ ಸದ್ದು ಮಾಡಿಯೂ ಇರಲಿಲ್ಲ. ಆದ್ರೀಗ ರಣಜಿ ಕ್ರಿಕೆಟ್​ನಲ್ಲಿ ಸರ್ಫರಾಜ್ ಖಾನ್, ಸಿಡಿದೆದ್ದ ಸಿಂಹದಂತೆ ಘರ್ಜಿಸೋದಕ್ಕೆ ಶುರುಮಾಡಿದ್ದಾನೆ. ಶತಕವೆಲ್ಲಾ ಲೆಕ್ಕಕ್ಕಿಲ್ಲ ಬಿಡಿ, ತ್ರಿಬಲ್ ಸೆಂಚುರಿ ಡಬಲ್ ಸೆಂಚುರಿ ಸಿಡಿಸಿ ಸದ್ದು ಮಾಡ್ತಿದ್ದಾನೆ.

ಯುಪಿ ವಿರುದ್ಧ ತ್ರಿಶತಕ.. ಹಿಮಾಚಲ ಪ್ರದೇಶ ವಿರುದ್ಧ ದ್ವಿಶತಕ: ರಣಜಿಯಲ್ಲಿ ಮುಂಬೈ ತಂಡವನ್ನ ಪ್ರತಿನಿಧಿಸೋ ಸರ್ಫರಾಜ್ ಖಾನ್, ಮೊನ್ನೆ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಭರ್ಜರಿ ತ್ರಿಶತಕ ಸಿಡಿಸಿದ್ದ. ಅಜೇಯ 301 ರನ್​ಗಳಿಸಿದ್ದ ಸರ್ಫರಾಜ್, ದಿಗ್ಗಜರಾದ ಸಚಿನ್ ತೆಂಡುಲ್ಕರ್, ಸುನಿಲ್ ಗವಾಸ್ಕರ್ ರಣಜಿ ಕ್ರಿಕೆಟ್​ನಲ್ಲಿ ಮಾಡಿದ ಸಾಧನೆಯ ಪಟ್ಟಿಗೆ ಸೇರ್ಪಡೆಗೊಂಡಿದ್ದ.

ಆದ್ರೀಗ ಹಿಮಾಚಲ್ ಪ್ರದೇಶ ವಿರುದ್ಧದ ಪಂದ್ಯದಲ್ಲೂ ಅಬ್ಬರಿಸಿದ ಸರ್ಫರಾಜ್ ಖಾನ್, ಭರ್ಜರಿ ದ್ವಿಶತಕ ಸಿಡಿಸಿದ್ದಾನೆ. ಧರ್ಮಶಾಲಾದಲ್ಲಿ ಟಾಸ್ ಗೆದ್ದ ಮುಂಬೈ ಮೊದಲು ಬ್ಯಾಟಿಂಗ್ ಮಾಡೋದಕ್ಕೆ ನಿರ್ಧರಿಸಿತ್ತು. ಆದ್ರೆ 16 ರನ್​ಗಳಿಸುವಷ್ಟರಲ್ಲೇ ಮುಂಬೈ ಪ್ರಮುಖ 3 ವಿಕೆಟ್​ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದ್ರೆ ಮುಂಬೈ ಪರ ದಿನದಾಟದಂತ್ಯವರೆಗೂ ಒಂಟಿ ಸಲಗದಂತೆ ಅಬ್ಬರಿಸಿದ ಸರ್ಫರಾಜ್, ಭರ್ಜರಿ ದ್ವಿಶತಕ ಸಿಡಿಸಿದ್ದಾನೆ.

ಹಿಮಾಚಲ ಪ್ರದೇಶ ವಿರುದ್ಧ 213 ಎಸೆತಗಳನ್ನ ಎದುರಿಸಿದ ಸರ್ಫರಾಜ್ ಖಾನ್, 32 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಸಹಿತ ಅಜೇಯ 226 ರನ್​ಗಳಿಸಿದ್ದಾನೆ. ಇಂದು ಮತ್ತೊಂದು ತ್ರಿಶತಕ ಸಿಡಿಸೋ ಉತ್ಸಾಹದಲ್ಲಿದ್ದಾನೆ.

ಪಾಂಡಾ ಅಂತಾ ನಿಂದಿಸಿಕೊಳ್ಳುತ್ತಿದ್ದ ಸರ್ಫರಾಜ್ ಇಂದು ದಾಖಲೆ ವೀರ! ತನ್ನ 12ನೇ ವಯಸ್ಸಿನಲ್ಲೇ ಸಚಿನ್ ತೆಂಡುಲ್ಕರ್ ವಿನೋದ್ ಕಾಂಬ್ಳಿ ಶಾಲಾ ಟೂರ್ನಿಯಲ್ಲಿ ಮಾಡಿದ್ದ ದಾಖಲೆಯನ್ನ ಪುಡಿಗಟ್ಟಿ ಸದ್ದು ಮಾಡಿದ್ದ ಸರ್ಫರಾಜ್ ಖಾನ್, ಭಾರತದ ಪರ ಅಂಡರ್ ನೈಂಟೀನ್ ವಿಶ್ವಕಪ್​ನಲ್ಲೂ ಮಿಂಚಿದ್ದ. ಹೀಗಾಗೇ ಆರ್​ಸಿಬಿ ಫ್ರಾಂಚೈಸಿ ಸರ್ಫರಾಜ್​ನನ್ನ ಖರೀದಿಸಿತ್ತು. ಆರ್​ಸಿಬಿ ಪರ ಕೊನೆಯಲ್ಲಿ ಕಣಕ್ಕಿಳಿದ್ರೂ ಸರ್ಫರಾಜ್ ತಾನೇನು ಅನ್ನೋದನ್ನ ಪ್ರೂವ್ ಮಾಡಿದ್ದ.

ಆದ್ರೆ ಸರ್ಫರಾಜ್​ನನ್ನ ಆರ್​ಸಿಬಿ ತಂಡ ಕೈ ಬಿಟ್ಟಿತ್ತು. ಸ್ವತಃ ನಾಯಕ ವಿರಾಟ್ ಕೊಹ್ಲಿಯೇ ಸರ್ಫರಾಜ್​ಗೆ, ನೀನು ಮುಂದಿನ ಹಂತದ ಕ್ರಿಕೆಟ್ ಆಡೋದಕ್ಕೆ ಫಿಟ್ ಆಗಿಲ್ಲಾ ಅಂತಾ ನೇರವಾಗೇ ಹೇಳಿದ್ರು. ಅದು ನಿಜವೂ ಆಗಿತ್ತು. ತಿಂಡಿ ಪೋತನಾಗಿದ್ದ ಸರ್ಫರಾಜ್​ಗೆ, ಫಿಟ್ನೆಸ್ ಬಗ್ಗೆ ಅರಿವೇ ಇರಲಿಲ್ಲ. ಹೀಗಾಗೇ ಡ್ರೆಸ್ಸಿಂಗ್ ರೂಮ್​ನಲ್ಲಿ ಸರ್ಫರಾಜ್​ಗೆ ಪಾಂಡಾ ಅಂತಾ ಕರೆಯುತ್ತಿದ್ರು.

ಈ ಎಲ್ಲಾ ನಿಂದನೆಗೆ ಒಂದು ದಿನ ಉತ್ತರ ಕೊಡಲೇಬೇಕು ಅಂತಾ ನಿರ್ಧರಿಸಿದ್ದ ಸರ್ಫರಾಜ್, ಪ್ರತಿನಿತ್ಯ ವರ್ಕೌಟ್ ಮಾಡೋದಕ್ಕೆ ಶುರುಮಾಡಿದ. ತಿಂಡಿಪೋತನಾಗಿದ್ದವ ಕ್ರಮಬದ್ಧವಾದ ಆಹಾರ ಪದ್ಧತಿಯನ್ನ ಅನುಸರಿಸತೊಡಗಿದ. ಕ್ರಿಕೆಟ್ ಕೌಶಲ್ಯದ ಜೊತೆಯಲ್ಲೇ ಫಿಟ್ನೆಸ್ ಮಹತ್ವವನ್ನ ಅರಿತ ಸರ್ಫರಾಜ್, ಇವತ್ತು ದಾಖಲೆ ವೀರನಾಗಿ ಹೊರಹೊಮ್ಮಿದ್ದಾನೆ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಭಾರತ ತಂಡವನ್ನ ಪ್ರತಿನಿಧಿಸೋ ಆಟಗಾರ ಅನ್ನೋದನ್ನ ಪ್ರೂವ್ ಮಾಡಿ ತೋರಿಸಿದ್ದಾನೆ.

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು