ಕಿವೀಸ್ ನೆಲದಲ್ಲಿ ಕೊಹ್ಲಿ ಪಡೆಗೆ ಭರ್ಜರಿ ಗೆಲುವು: ಶ್ರೇಯಸ್ ಘರ್ಜನೆಗೆ ಖೇಲ್ ಖತಂ
ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ನ ಆಕ್ಲೆಂಡ್ನಲ್ಲಿರುವ ಈಡನ್ ಪಾರ್ಕ್ ಅಂಗಳದಲ್ಲಿ ನಡೆದ ಮೊದಲ ಟಿ20 ಮ್ಯಾಚ್ನಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ನಿನ್ನೆಯ ರನ್ ಹೊಳೆಯಲ್ಲಿ ಕಿವೀಸ್ ಪಡೆ ಕೊಚ್ಚಿಹೋಗಿದ್ದು, 1 ಓವರ್ ಬಾಕಿ ಇರುವಂತೆಯೇ 6 ವಿಕೆಟ್ಗಳ ಹೀನಾಯ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್, ಭರ್ಜರಿ ಬ್ಯಾಟಿಂಗ್ ಮಾಡಿ 5 ವಿಕೆಟ್ ಕಳೆದುಕೊಂಡು 203ರನ್ ಗಳಿಸಿತ್ತು. ಈ ಗುರಿಯನ್ನ ಬೆನ್ನುಹತ್ತಿದ ಭಾರತ, ಇನ್ನೂ 1 ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಆ ಮೂಲಕ […]
ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ನ ಆಕ್ಲೆಂಡ್ನಲ್ಲಿರುವ ಈಡನ್ ಪಾರ್ಕ್ ಅಂಗಳದಲ್ಲಿ ನಡೆದ ಮೊದಲ ಟಿ20 ಮ್ಯಾಚ್ನಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ನಿನ್ನೆಯ ರನ್ ಹೊಳೆಯಲ್ಲಿ ಕಿವೀಸ್ ಪಡೆ ಕೊಚ್ಚಿಹೋಗಿದ್ದು, 1 ಓವರ್ ಬಾಕಿ ಇರುವಂತೆಯೇ 6 ವಿಕೆಟ್ಗಳ ಹೀನಾಯ ಸೋಲು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್, ಭರ್ಜರಿ ಬ್ಯಾಟಿಂಗ್ ಮಾಡಿ 5 ವಿಕೆಟ್ ಕಳೆದುಕೊಂಡು 203ರನ್ ಗಳಿಸಿತ್ತು. ಈ ಗುರಿಯನ್ನ ಬೆನ್ನುಹತ್ತಿದ ಭಾರತ, ಇನ್ನೂ 1 ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಆ ಮೂಲಕ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯನ್ನೂ ಪಡೆದಿದೆ. ಕೆ.ಎಲ್.ರಾಹುಲ್ 27 ಬಾಲ್ನಲ್ಲಿ 56 ರನ್, ವಿರಾಟ್ ಕೊಹ್ಲಿ 32 ಬಾಲ್ನಲ್ಲಿ 45 ರನ್ ಮತ್ತು ಶ್ರೇಯಸ್ ಅಯ್ಯರ್ 29 ಬಾಲ್ನಲ್ಲಿ ಔಟಾಗದೆ 58 ರನ್ ಸಿಡಿಸಿ ಅಬ್ಬರದ ಬ್ಯಾಟಿಂಗ್ ಮಾಡಿದ್ರು. ಇದರೊಂದಿಗೆ 6 ತಿಂಗಳ ಹಿಂದೆ ನಡೆದಿದ್ದ ಏಕದಿನ ವಿಶ್ವಕಪ್ ಸೆಮಿ ಫೈನಲ್ನಲ್ಲಿ ಎದುರಾಗಿದ್ದ ಸೋಲಿಗೆ ಕೊಹ್ಲಿ ಪಡೆ ಮುಯ್ಯಿ ತೀರಿಸಿಕೊಂಡಿತು.