ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚಿಂದಿ ಚಿತ್ರಾನ್ನ, 7 ವಿಕೆಟ್​ಗಳ ಅಂತರದಿಂದ ಭಾರತ ಗೆಲುವು

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಸರಣಿ ಗೆಲುವಿನ ನಿರ್ಣಾಯಕ ಕದನದಲ್ಲಿ ಭಾರತ 7 ವಿಕೆಟ್​ಗಳ ಅಂತರದಿಂದ ಗೆದ್ದು ರಣಕೇಕೆ ಹಾಕಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಚಿಂದಿ ಚಿತ್ರಾನ್ನ: ನಿಜ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ದಾಖಲಿಸಿದ್ರೆ, ದ್ವಿತೀಯ ಏಕದಿನ ಪಂದ್ಯ ಗೆದ್ದಿದ್ದ ಕೊಹ್ಲಿ ಪಡೆ ಸಮಬಲ ಸಾಧಿಸಿತ್ತು. ಹೀಗಾಗಿ ಚಿನ್ನಸ್ವಾಮಿಯಲ್ಲಿ ಪಂದ್ಯ ರಣರೋಚಕತೆಯನ್ನ ಕಾಯ್ದುಕೊಂಡಿತ್ತು. ಬೆಂಗಳೂರು ಕಾದಾಟದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ […]

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚಿಂದಿ ಚಿತ್ರಾನ್ನ, 7 ವಿಕೆಟ್​ಗಳ ಅಂತರದಿಂದ ಭಾರತ ಗೆಲುವು
Follow us
ಸಾಧು ಶ್ರೀನಾಥ್​
|

Updated on:Jan 20, 2020 | 2:18 PM

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಸರಣಿ ಗೆಲುವಿನ ನಿರ್ಣಾಯಕ ಕದನದಲ್ಲಿ ಭಾರತ 7 ವಿಕೆಟ್​ಗಳ ಅಂತರದಿಂದ ಗೆದ್ದು ರಣಕೇಕೆ ಹಾಕಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಚಿಂದಿ ಚಿತ್ರಾನ್ನ: ನಿಜ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ದಾಖಲಿಸಿದ್ರೆ, ದ್ವಿತೀಯ ಏಕದಿನ ಪಂದ್ಯ ಗೆದ್ದಿದ್ದ ಕೊಹ್ಲಿ ಪಡೆ ಸಮಬಲ ಸಾಧಿಸಿತ್ತು. ಹೀಗಾಗಿ ಚಿನ್ನಸ್ವಾಮಿಯಲ್ಲಿ ಪಂದ್ಯ ರಣರೋಚಕತೆಯನ್ನ ಕಾಯ್ದುಕೊಂಡಿತ್ತು. ಬೆಂಗಳೂರು ಕಾದಾಟದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ದುಕೊಳ್ಳುತ್ತೆ. ಅದ್ರಂತೆ ಜೋಷ್​ನಿಂದ ಬ್ಯಾಟಿಂಗ್​ಗಿಳಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಆಘಾತವನ್ನ ಪಡೆಯುತ್ತೆ. ಡೇವಿಡ್ ವಾರ್ನರ್ 3ರನ್​ಗೆ ವಿಕೆಟ್ ಒಪ್ಪಿಸ್ತಾರೆ.

ಫಿಂಚ್​ಗೆ ರನೌಟ್ ಶಾಕ್ ಕೊಟ್ಟ ಸ್ಮಿತ್ ಶತಕ ವ್ಯರ್ಥ: ವಾರ್ನರ್ ಔಟ್ ಆಗ್ತಿದ್ದಾಗೆ, ನಾಯಕ ಆರೋನ್ ಫಿಂಚ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡೋಣ ಅಂತ ಪ್ಲ್ಯಾನ್ ಮಾಡಿಕೊಳ್ತಿರುವಾಗ್ಲೇ ಶಾಕ್ ಕಾದಿತ್ತು. ಮೊಹಮ್ಮದ್ ಶಮಿ ಓವರ್​ನಲ್ಲಿ ಆರೋನ್ ಫಿಂಚ್ ರನೌಟ್ ಆಗ್ತಾರೆ. ತನ್ನ ರನೌಟ್​ಗೆ ಸ್ಮಿತ್ ಕಾರಣವನ್ನಾಗಿಸಿದ ಫಿಂಚ್ ಮೈದಾನದಲ್ಲಿ ಸ್ಟೀವನ್ ಸ್ಮಿತ್ ಮೇಲೆ ಹರಿಹಾಯ್ತಾರೆ.

ಇನ್ನು 3ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದಿದ್ದ ಸ್ಟೀವ್ ಸ್ಮಿತ್, ಭರ್ಜರಿ ಶತಕ ಸಿಡಿಸಿ ಘರ್ಜಿಸಿದ್ರು. ಬೆಂಗಳೂರು ಮೈದಾನದಲ್ಲಿ 14 ಬೌಂಡ್ರಿ ಹಾಗೂ 1 ಸಿಕ್ಸರ್ ಸಹಿತ 131ರನ್​ಗಳನ್ನ ಗಳಿಸಿದ ಸ್ಮಿತ್ ಶತಕ ಕೊನೆಗೂ ವ್ಯರ್ಥವಾಗಿ ಹೋಯ್ತು.

ಇನ್ನು ಮಾರ್ನಸ್ ಅರ್ಧಶತಕ ಗಳಿಸಿದ್ರೆ, ಅಲೆಕ್ಸ್ ಕ್ಯಾರಿ 35ರನ್​ಗಳಿಸಿದ್ರು. ಇನ್ನುಳಿದಂತೆ ಆಸಿಸ್​ನ ಕೆಳಕ್ರಮಾಂಕದಲ್ಲಿ ಅಷ್ಟೆನೂ ಅಬ್ಬರ ಇರ್ಲಿಲ್ಲ. ಈ ಮೂಲಕ ಆಸ್ಟ್ರೇಲಿಯಾ ನಿಗಧಿತ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 286ರನ್​ಗಳನ್ನ ಗಳಿಸ್ತು.

4 ವಿಕೆಟ್ ಪಡೆದ ಮೊಹಮ್ಮದ್ ಶಮಿ.. ಜಡ್ಡುಗೆ 2 ವಿಕೆಟ್: ಆಸಿಸ್ ಬ್ಯಾಟ್ಸ್​ಮನ್​ಗಳನ್ನ ಪತರುಗುಟ್ಟುವಂತೆ ಮಾಡಿದ್ದು ಶಮಿ ಉರಿದಾಳಿ ಬೌಲಿಂಗ್. ಬೆಂಗಳೂರಿನ ಅಖಾಡದಲ್ಲಿ ಕಾಂಗರೂಗಳ ಮೇಲೆ ಬೆಂಕಿ ಚೆಂಡು ಪ್ರಯೋಗಿಸಿದ ಮೊಹಮ್ಮದ್ ಶಮಿ 4 ವಿಕೆಟ್ ಪಡೆದು ಮಿಂಚಿದ್ರು. ಇನ್ನು ರವೀಂದ್ರ ಜಡೇಜಾ 2 ವಿಕೆಟ್ ಪಡೆದು ಕಮಾಲ್ ಮಾಡಿದ್ರು.

ರೋಹಿತ್ ಸೂಪರ್ ಶತಕ.. ಕೊಹ್ಲಿ ಪವರ್​ಫುಲ್ ಬ್ಯಾಟಿಂಗ್! ಆಸ್ಟ್ರೇಲಿಯಾ ನೀಡಿದ್ದ 287ರನ್​ಗಳ ಗುರಿ ಬೆನ್ನತ್ತಿದ್ದ ಟೀಮ್ ಇಂಡಿಯಾ ಪರ ರೋಹಿತ್ ಜೊತೆ ಕನ್ನಡಿಗ ಕೆ.ಎಲ್.ರಾಹುಲ್ ಕಣಕ್ಕಿಳಿದಿದ್ರು. ಶಿಖರ್ ಧವನ್ ಫೀಲ್ಡಿಂಗ್ ಮಾಡುವಾಗ ಇಂಜುರಿಯಾದ ಹಿನ್ನೆಲೆ, ರಾಹುಲ್ ಬಂದಿದ್ರು.

ಕನ್ನಡಿಗ ಕೆ.ಎಲ್.ರಾಹುಲ್ 19ರನ್​ಗಳಿಸಿ ಔಟಾದ್ರೆ, ವಿರಾಟ್ ಕೊಹ್ಲಿ 89ರನ್​ಗಳಿಸಿ ತಂಡವನ್ನ ಗೆಲುವಿನ ದಾರಿಗೆ ಕೊಂಡೊಯ್ದದ್ರು. ಇನ್ನು ಶ್ರೇಯಸ್ ಐಯ್ಯರ್ ಅಜೇಯ 44ರನ್​ಗಳಿಸಿದ್ರೆ, ಕನ್ನಡಿಗ ಮನೀಶ್ ಪಾಂಡೆ ಅಜೇಯ 8ರನ್​ಗಳಿಸುವ ಮೂಲಕ ಬೌಂಡ್ರಿ ಶಾಟ್​ನಿಂದ ಮ್ಯಾಚ್ ವಿನ್ನಿಂಗ್ ಮಾಡ್ತಾರೆ.

ಈ ಮೂಲಕ ಭಾರತ 3 ವಿಕೆಟ್ ನಷ್ಟಕ್ಕೆ 47.3 ಓವರ್​ನಲ್ಲಿ 289ರನ್​ಗಳಿಸುವ ಮೂಲಕ 7 ವಿಕೆಟ್​ಗಳ ಅಂತರದಿಂದ ಗೆಲುವು ಸಾಧಿಸುತ್ತೆ. ಬೆಂಗಳೂರು ತಂದ ಭಾಗ್ಯದಿಂದ ಭಾರತ ತಂಡ ಆಸಿಸ್ ವಿರುದ್ಧ ಸರಣಿ ಗೆದ್ದು, ವಿಜಯದ ಕಹಳೆಯನ್ನ ಊದಿದೆ. ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರೆ, ವಿರಾಟ್ ಕೊಹ್ಲಿ ಸರಣಿ ಶ್ರೇಷ್ಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Published On - 7:01 am, Mon, 20 January 20

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ