ಗುತ್ತಿಗೆ ಅವಧಿ ಪಟ್ಟಿಯಿಂದ ಧೋನಿ ಹೆಸರು ಕೈಬಿಟ್ಟಿದ್ದಕ್ಕೆ ಬಿಸಿಸಿಐ ಸ್ಪಷ್ಟನೆ
ಬಿಸಿಸಿಐ ವಾರ್ಷಿಕ ಗುತ್ತಿಗೆ ಅವಧಿ ಪಟ್ಟಿಯಿಂದ ಎಂ.ಎಸ್. ಧೋನಿ ಹೆಸರನ್ನ ಕೈಬಿಟ್ಟಿದ್ದಕ್ಕೆ ಉದ್ಭವಿಸಿದ್ದ ಹಲವು ಊಹಾಪೋಹಗಳಿಗೆ ಇದೀಗ ಬ್ರೇಕ್ ಬಿದ್ದಿದೆ. ಒಪ್ಪಂದ ಪಟ್ಟಿಯಿಂದ ಧೋನಿಯನ್ನ ಕೈಬಿಟ್ಟಿದ್ದಕ್ಕೆ, ಧೋನಿ ಆಟ ಯುಗಾಂತ್ಯವಾಯ್ತು ಅಂತ ಎಲ್ರೂ ಅಂದುಕೊಂಡಿದ್ರು. ಆದ್ರೆ ಬಿಸಿಸಿಐನ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದು, ಒಪ್ಪಂದದಿಂದ ಧೋನಿ ಹೆಸರು ಕೈಬಿಟ್ಟಿದ್ದಕ್ಕೂ ಹಾಗೂ ಧೋನಿ ಭವಿಷ್ಯಕ್ಕೂ ಯಾವುದೇ ಸಂಬಂಧವಿಲ್ಲ ಅಂತ ತಿಳಿಸಿದ್ದಾರೆ. ಮಾಹಿ ಕಳೆದ ಆರು ತಿಂಗಳಿನಿಂದ ಯಾವುದೇ ಪಂದ್ಯವನ್ನ ಆಡಿಲ್ಲ. ಹಾಗಾಗಿ ಬಿಸಿಸಿಐ ನಿಯಮದ ಪ್ರಕಾರ ಹೆಸರನ್ನ ಕೈಬಿಡಲಾಗಿದೆ. ಈ […]
ಬಿಸಿಸಿಐ ವಾರ್ಷಿಕ ಗುತ್ತಿಗೆ ಅವಧಿ ಪಟ್ಟಿಯಿಂದ ಎಂ.ಎಸ್. ಧೋನಿ ಹೆಸರನ್ನ ಕೈಬಿಟ್ಟಿದ್ದಕ್ಕೆ ಉದ್ಭವಿಸಿದ್ದ ಹಲವು ಊಹಾಪೋಹಗಳಿಗೆ ಇದೀಗ ಬ್ರೇಕ್ ಬಿದ್ದಿದೆ. ಒಪ್ಪಂದ ಪಟ್ಟಿಯಿಂದ ಧೋನಿಯನ್ನ ಕೈಬಿಟ್ಟಿದ್ದಕ್ಕೆ, ಧೋನಿ ಆಟ ಯುಗಾಂತ್ಯವಾಯ್ತು ಅಂತ ಎಲ್ರೂ ಅಂದುಕೊಂಡಿದ್ರು. ಆದ್ರೆ ಬಿಸಿಸಿಐನ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದು, ಒಪ್ಪಂದದಿಂದ ಧೋನಿ ಹೆಸರು ಕೈಬಿಟ್ಟಿದ್ದಕ್ಕೂ ಹಾಗೂ ಧೋನಿ ಭವಿಷ್ಯಕ್ಕೂ ಯಾವುದೇ ಸಂಬಂಧವಿಲ್ಲ ಅಂತ ತಿಳಿಸಿದ್ದಾರೆ.
ಮಾಹಿ ಕಳೆದ ಆರು ತಿಂಗಳಿನಿಂದ ಯಾವುದೇ ಪಂದ್ಯವನ್ನ ಆಡಿಲ್ಲ. ಹಾಗಾಗಿ ಬಿಸಿಸಿಐ ನಿಯಮದ ಪ್ರಕಾರ ಹೆಸರನ್ನ ಕೈಬಿಡಲಾಗಿದೆ. ಈ ವಿಷ್ಯವನ್ನ ಧೋನಿಗೂ ತಿಳಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ಧೋನಿ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ, ಟಿ-ಟ್ವೆಂಟಿ ವಿಶ್ವಕಪ್ ಆಡಲಿದ್ದಾರೆ ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
Published On - 2:12 pm, Fri, 17 January 20