AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣಜಿಯಲ್ಲಿ ಸತತ ಎರಡನೇ ಶತಕ; ದಿಗ್ಗಜರ ಸಾಲಿಗೆ ರಿಂಕು ಸಿಂಗ್ ಎಂಟ್ರಿ..!

ರಿಂಕು ಸಿಂಗ್ ರಣಜಿ ಟ್ರೋಫಿಯಲ್ಲಿ ಸತತ ಶತಕಗಳ ಮೂಲಕ ಮಿಂಚಿದ್ದಾರೆ, ಗೋವಾ ವಿರುದ್ಧ ಅಜೇಯ 118 ರನ್ ಗಳಿಸಿ, ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಸರಾಸರಿಯನ್ನು 61.33ಕ್ಕೆ ಏರಿಸಿದ್ದಾರೆ. 50+ ಇನ್ನಿಂಗ್ಸ್‌ಗಳಲ್ಲಿ ಅತಿ ಹೆಚ್ಚು ಸರಾಸರಿ ಹೊಂದಿರುವ ಬ್ಯಾಟರ್‌ಗಳ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿ, ವಿನೋದ್ ಕಾಂಬ್ಲಿಯನ್ನು ಹಿಂದಿಕ್ಕಿದ್ದಾರೆ. ಟಿ20 ಸ್ಟಾರ್ ರಿಂಕು, ಈಗ ರೆಡ್-ಬಾಲ್ ಕ್ರಿಕೆಟ್‌ನಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

ರಣಜಿಯಲ್ಲಿ ಸತತ ಎರಡನೇ ಶತಕ; ದಿಗ್ಗಜರ ಸಾಲಿಗೆ ರಿಂಕು ಸಿಂಗ್ ಎಂಟ್ರಿ..!
ರಿಂಕು ಸಿಂಗ್Image Credit source: KKR x
ಪೃಥ್ವಿಶಂಕರ
|

Updated on: Oct 19, 2026 | 3:33 PM

Share

ಟಿ20 ಕ್ರಿಕೆಟ್‌ನಲ್ಲಿ ಸಿಕ್ಸರ್‌ಗಳ ಮಳೆ ಸುರಿಸುವ ಮೂಲಕ ಅಭಿಮಾನಿಗಳನ್ನು ರಂಜಿಸುವ ರಿಂಕು ಸಿಂಗ್ ಇದೀಗ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲೂ ಅಬ್ಬರಿಸುತ್ತಿದ್ದಾರೆ. ರಣಜಿ ಟ್ರೋಫಿ 2026-27ರ ಆವೃತ್ತಿಯಲ್ಲಿ ರಿಂಕು ಸತತ ಎರಡನೇ ಶತಕ ಸಿಡಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಗೋವಾ ವಿರುದ್ಧದ ಪಂದ್ಯದಲ್ಲಿ ಅಜೇಯ 118 ರನ್ ಕಲೆಹಾಕಿರುವ ರಿಂಕು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕನಿಷ್ಠ 50 ಇನಿಂಗ್ಸ್‌ಗಳನ್ನು ಆಡಿರುವ ಬ್ಯಾಟರ್‌ಗಳ ಪೈಕಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ಆಟಗಾರರ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್‌ಮನ್ ಅಗ್ರಸ್ಥಾನದಲ್ಲಿರುವುದು ವಿಶೇಷ.

ತಂಡಕ್ಕೆ ಆಸರೆಯಾದ ರಿಂಕು

ಗೋವಾ ವಿರುದ್ಧದ ರಣಜಿ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡದ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ಕುಸಿಯಿತು. ಕೇವಲ 33 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ತಂಡ, ಬಳಿಕವೂ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಒಂದು ಹಂತದಲ್ಲಿ 137 ರನ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ ರಿಂಕು ಸಿಂಗ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. 186 ಎಸೆತಗಳನ್ನು ಎದುರಿಸಿದ ಅವರು, 11 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 118 ರನ್ ಗಳಿಸಿದರು.

ಕೊನೆಯ ವಿಕೆಟ್‌ಗೆ ವಂಶ್ ಚೌಧರಿ ಅವರೊಂದಿಗೆ ಮಹತ್ವದ ಜೊತೆಯಾಟವಾಡಿದ ರಿಂಕು, ತಂಡದ ಮೊತ್ತವನ್ನು 202 ರನ್‌ಗಳಿಗೆ ತಲುಪಿಸಿದರು. ಗೋವಾ ತಂಡದ ಬೌಲರ್ ಯಶ್ ಕಸ್ವಾಂಕರ್ 86 ರನ್ ನೀಡಿ 5 ವಿಕೆಟ್‌ಗಳನ್ನು ಪಡೆದರೂ, ರಿಂಕು ಅವರ ಹೋರಾಟದ ನೆರವಿನಿಂದ ಉತ್ತರ ಪ್ರದೇಶ ತಂಡ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

ವಿನೋದ್ ಕಾಂಬ್ಲಿಯನ್ನು ಹಿಂದಿಕ್ಕಿದ ರಿಂಕು

ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಬಿಹಾರ ವಿರುದ್ಧ ರಿಂಕು ಸಿಂಗ್ 112 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಇದೀಗ ಗೋವಾ ವಿರುದ್ಧ ಅಜೇಯ 118 ರನ್ ಗಳಿಸುವ ಮೂಲಕ ಸತತ ಎರಡನೇ ಶತಕ ದಾಖಲಿಸಿದ್ದಾರೆ. ಈ ಎರಡು ಇನಿಂಗ್ಸ್‌ಗಳ ಬಳಿಕ ಅವರ ಪ್ರಥಮ ದರ್ಜೆ ಕ್ರಿಕೆಟ್​ನ ಬ್ಯಾಟಿಂಗ್ ಸರಾಸರಿ 61.33ಕ್ಕೆ ಏರಿಕೆಯಾಗಿದೆ. ಈ ಮೂಲಕ 59.67 ಸರಾಸರಿ ಹೊಂದಿದ್ದ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಲಿ ಅವರನ್ನು ಹಿಂದಿಕ್ಕಿದ್ದಾರೆ.

ಇದುವರೆಗೆ 55 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ರಿಂಕು, 78 ಇನಿಂಗ್ಸ್‌ಗಳಲ್ಲಿ ಒಟ್ಟು 3,987 ರನ್ ಗಳಿಸಿದ್ದಾರೆ. ಅವರ ಖಾತೆಯಲ್ಲಿ 11 ಶತಕಗಳು ಹಾಗೂ 23 ಅರ್ಧಶತಕಗಳಿವೆ. 176 ರನ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಇದಲ್ಲದೆ, ಉತ್ತರ ಪ್ರದೇಶ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ದಾಖಲಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ರಿಂಕು ಪಾತ್ರರಾಗಿದ್ದಾರೆ.

ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ಆಟಗಾರರ ಪಟ್ಟಿ

  • ಡಾನ್ ಬ್ರಾಡ್‌ಮನ್ — 95.14
  • ವಿಜಯ್ ಮರ್ಚೆಂಟ್ — 71.64
  • ಜಾರ್ಜ್ ಹೆಡ್ಲಿ — 69.86
  • ಅಜಯ್ ಶರ್ಮಾ — 67.46
  • ವಿಲಿಯಂ ಪಾನ್ಸ್‌ಫೋರ್ಡ್ — 65.18
  • ವಿಲಿಯಂ ವುಡ್‌ಫುಲ್ — 64.99
  • ಶಾಂತನು ಸುಗ್ವೇಕರ್ — 63.10
  • ಸರ್ಫರಾಜ್ ಖಾನ್ — 62.92
  • ರಿಂಕು ಸಿಂಗ್ — 61.33
  • ಕೆ.ಸಿ. ಇಬ್ರಾಹಿಂ — 61.24

ರಿಂಕು ಸಿಂಗ್-ಪ್ರಿಯಾ ಸರೋಜ್ ಮದುವೆಗೆ ದಿನಾಂಕ ನಿಗದಿ

ಕೊನೆಯ 11 ಇನಿಂಗ್ಸ್‌ಗಳಲ್ಲಿ 850 ರನ್‌

ಈ ಪಟ್ಟಿಯಲ್ಲಿ ರಿಂಕು ಸಿಂಗ್ ಸ್ಥಾನ ಪಡೆದಿರುವುದು ರೆಡ್ ಬಾಲ್ ಕ್ರಿಕೆಟ್‌ನಲ್ಲೂ ಅವರ ಸಾಮರ್ಥ್ಯ ಮತ್ತು ಸ್ಥಿರ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ವಿಶೇಷವಾಗಿ ಟಿ20 ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ರಿಂಕು, ದೀರ್ಘಾವಧಿಯ ಇನಿಂಗ್ಸ್‌ಗಳನ್ನು ಆಡುವ ಸಾಮರ್ಥ್ಯವನ್ನೂ ಸಾಬೀತುಪಡಿಸುತ್ತಿದ್ದಾರೆ. ಅಲ್ಲದೆ ಕೊನೆಯ 11 ಪ್ರಥಮ ದರ್ಜೆ ಇನಿಂಗ್ಸ್‌ಗಳಲ್ಲಿ ರಿಂಕು ಬರೋಬ್ಬರಿ 850 ರನ್‌ ಕಲೆಹಾಕಿದ್ದಾರೆ. ರಿಂಕು ತಮ್ಮ ಕೊನೆಯ 11 ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 118*, 112, 60, 20, 176, 165*, 68, 89, 6, 26, 10 ರನ್ ಬಾರಿಸಿದ್ದಾರೆ. ಈ ಇನಿಂಗ್ಸ್‌ಗಳಲ್ಲಿ ಅವರು ಒಟ್ಟು 850 ರನ್ ದಾಖಲಿಸಿದ್ದು, ಅವರ ಬ್ಯಾಟಿಂಗ್ ಸರಾಸರಿ 94.44 ಆಗಿದೆ. ಇದರಲ್ಲಿ ಅವರು ನಾಲ್ಕು ಶತಕಗಳು ಮತ್ತು ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಹಣದ ವಿಚಾರಕ್ಕೆ ಕಿರಿಕ್: ಧನ್ವೀರ್ ಮಾತನಾಡಿದ ಇನ್ನೊಂದು ಆಡಿಯೋ ವೈರಲ್
ಹಣದ ವಿಚಾರಕ್ಕೆ ಕಿರಿಕ್: ಧನ್ವೀರ್ ಮಾತನಾಡಿದ ಇನ್ನೊಂದು ಆಡಿಯೋ ವೈರಲ್
ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ 215 ಕೋಟಿ ರೂ: ಸಿಎಂ ಘೋಷಣೆ
ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ 215 ಕೋಟಿ ರೂ: ಸಿಎಂ ಘೋಷಣೆ
ದೆಹಲಿಯ ಯಮುನಾ ನದಿಯಲ್ಲಿ ತೇಲಿದ ವಿಷಕಾರಿ ನೊರೆ
ದೆಹಲಿಯ ಯಮುನಾ ನದಿಯಲ್ಲಿ ತೇಲಿದ ವಿಷಕಾರಿ ನೊರೆ
‘ಬರೀ ಟಾಸ್ಕ್ ಆಡಿದರೆ ಸಾಲದು’: ಧನುಷ್ ಆಟದ ಬಗ್ಗೆ ಲಕ್ಷ್ಮಿ ನೇರ ಮಾತು
‘ಬರೀ ಟಾಸ್ಕ್ ಆಡಿದರೆ ಸಾಲದು’: ಧನುಷ್ ಆಟದ ಬಗ್ಗೆ ಲಕ್ಷ್ಮಿ ನೇರ ಮಾತು
ಹಾಸನದಲ್ಲೊಂದು ಅಪರೂಪದ ಘಟನೆ: ಎರಡು ಕಾಡಾನೆಗಳ ಜಗಳ ಬಿಡಿಸಿದ ಶ್ವಾನ
ಹಾಸನದಲ್ಲೊಂದು ಅಪರೂಪದ ಘಟನೆ: ಎರಡು ಕಾಡಾನೆಗಳ ಜಗಳ ಬಿಡಿಸಿದ ಶ್ವಾನ
ಧನ್ವೀರ್ ಗೌಡ ಮನೆಗೆ ಮುತ್ತಿಗೆ ಹಾಕುತ್ತೇವೆ’: ಝೈದ್ ಖಾನ್ ಫ್ಯಾನ್ಸ್ ಗರಂ
ಧನ್ವೀರ್ ಗೌಡ ಮನೆಗೆ ಮುತ್ತಿಗೆ ಹಾಕುತ್ತೇವೆ’: ಝೈದ್ ಖಾನ್ ಫ್ಯಾನ್ಸ್ ಗರಂ
ಪಿ.ಎಸ್.ಲೇನ್ ರಸ್ತೆಯಲ್ಲಿ ಏಕಾಏಕಿ ಕುಸಿದ ಕಾಂಪೌಂಡ್​​: ಬೈಕ್​​ಗಳು ಜಖಂ
ಪಿ.ಎಸ್.ಲೇನ್ ರಸ್ತೆಯಲ್ಲಿ ಏಕಾಏಕಿ ಕುಸಿದ ಕಾಂಪೌಂಡ್​​: ಬೈಕ್​​ಗಳು ಜಖಂ
ಶೂನಲ್ಲಿ ಹೈಡ್ರೋಪೋನಿಕ್ ಗಾಂಜಾ ಇಟ್ಟುಕೊಂಡು ಬಂದು ಬೆಂಗಳೂರಿನಲ್ಲಿ ಲಾಕ್
ಶೂನಲ್ಲಿ ಹೈಡ್ರೋಪೋನಿಕ್ ಗಾಂಜಾ ಇಟ್ಟುಕೊಂಡು ಬಂದು ಬೆಂಗಳೂರಿನಲ್ಲಿ ಲಾಕ್
ಸೀಗೆಗುಡ್ಡದಲ್ಲಿ ಜನವೋ ಜನ,ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ
ಸೀಗೆಗುಡ್ಡದಲ್ಲಿ ಜನವೋ ಜನ,ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ
ಧನ್ವೀರ್ ಫೋಟೋಗೆ ಮಸಿ ಬಳಿದು ಝೈದ್ ಖಾನ್ ಅಭಿಮಾನಿಗಳ ಆಕ್ರೋಶ
ಧನ್ವೀರ್ ಫೋಟೋಗೆ ಮಸಿ ಬಳಿದು ಝೈದ್ ಖಾನ್ ಅಭಿಮಾನಿಗಳ ಆಕ್ರೋಶ