AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women’s Asia Cup Rising Stars: ಯುಎಇ ವಿರುದ್ಧ ಮುಗ್ಗರಿಸಿದ ಟೀಂ ಇಂಡಿಯಾ

Women's Asia Cup Rising Stars: ಥೈಲ್ಯಾಂಡ್‌ನಲ್ಲಿ ಆರಂಭವಾದ ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟಿ20 ಪಂದ್ಯಾವಳಿಯಲ್ಲಿ ರಾಧಾ ಯಾದವ್ ನಾಯಕತ್ವದ ಭಾರತ ಎ ಮಹಿಳಾ ತಂಡ ಯುಎಇ ವಿರುದ್ಧ ಹೀನಾಯ ಸೋಲು ಅನುಭವಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡ 130 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತ್ತು. ಯುಎಇ ನಾಯಕಿ ಇಶಾ ಓಜಾ ಅವರ ಸ್ಫೋಟಕ 72 ರನ್‌ಗಳ ನೆರವಿನಿಂದ ಯುಎಇ 7 ವಿಕೆಟ್‌ಗಳಿಂದ ಸುಲಭವಾಗಿ ಗೆದ್ದು, ಭಾರತಕ್ಕೆ ಆಘಾತ ನೀಡಿದೆ.

Women's Asia Cup Rising Stars: ಯುಎಇ ವಿರುದ್ಧ ಮುಗ್ಗರಿಸಿದ ಟೀಂ ಇಂಡಿಯಾ
Ind Vs Uae
ಪೃಥ್ವಿಶಂಕರ
|

Updated on:Feb 13, 2026 | 9:38 PM

Share

ಒಂದೆಡೆ 2026 ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಪ್ರಸ್ತುತ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿದ್ದರೆ, ಮತ್ತೊಂದೆಡೆ ಥೈಲ್ಯಾಂಡ್‌ನಲ್ಲಿ ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್‌ ಟೂರ್ನಿಯಲ್ಲಿ (Women’s Asia Cup Rising Stars) ಭಾರತ ಎ ಮಹಿಳಾ ತಂಡ ಕೂಡ ಇಂದಿನಿಂದ ತನ್ನ ಅಭಿಯಾನವನ್ನು ಆರಂಭಿಸಿದೆ. ಇಂದು ನಡೆದ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಿದ ಭಾರತ ಎ ಮಹಿಳಾ ತಂಡ ಹೀನಾಯ ಸೋಲಿಗೆ ಕೊರಳೊಡ್ಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ 20 ಓವರ್​ಗಳಲ್ಲಿ ಕೇವಲ 130 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಯುಎಇ 3 ವಿಕೆಟ್ ಕಳೆದುಕೊಂಡು 19.2 ಓವರ್​ಗಳಲ್ಲಿ ಗೆಲುವಿನ ದಡ ಮುಟ್ಟಿತು.

ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್‌

ಇಂದಿನಿಂದ ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್‌ ಟಿ20 ಪಂದ್ಯಾವಳಿ ಫೆಬ್ರವರಿ 13 ಶುಕ್ರವಾರದಂದು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಪ್ರಾರಂಭವಾಗಿದೆ. 2025 ರ ಮಹಿಳಾ ವಿಶ್ವಕಪ್ ಗೆದ್ದ ಮತ್ತು ಇತ್ತೀಚೆಗೆ ಡಬ್ಲ್ಯೂಪಿಎಲ್ 2026 ಅನ್ನು ಗೆದ್ದ ಸ್ಟಾರ್ ಆಲ್‌ರೌಂಡರ್ ರಾಧಾ ಯಾದವ್ ಈ ಪಂದ್ಯಾವಳಿಯಲ್ಲಿ ಭಾರತೀಯ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಡಬ್ಲ್ಯೂಪಿಎಲ್ ಎರಡರಲ್ಲೂ ತಮ್ಮ ಛಾಪು ಮೂಡಿಸಿದ ಹಲವಾರು ಇತರ ಆಟಗಾರ್ತಿಯರು ಸಹ ಭಾರತೀಯ ತಂಡದ ಭಾಗವಾಗಿದ್ದಾರೆ. ಆದರೆ ಇದರ ಹೊರತಾಗಿಯೂ ಭಾರತ ಮಹಿಳಾ ತಂಡ ಮೊದಲ ಪಂದ್ಯದಲ್ಲಿಯೇ ಸೋಲನ್ನು ಅನುಭವಿಸಬೇಕಾಯಿತು.

ಭಾರತ ಎ ತಂಡದ ಬ್ಯಾಟಿಂಗ್ ವೈಫಲ್ಯ

ಈ ಪಂದ್ಯದಲ್ಲಿ, ಭಾರತ ಎ ತಂಡ ಮೊದಲು ಬ್ಯಾಟಿಂಗ್ ಮಾಡಿತ್ತಾದರೂ ತಂಡದ ಬ್ಯಾಟಿಂಗ್ ಶೋಚನೀಯವಾಗಿ ವಿಫಲವಾಯಿತು. ಯುಎಇಯಂತಹ ದುರ್ಬಲ ತಂಡದ ವಿರುದ್ಧ ಭಾರತ ಎ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ ಕೇವಲ 130 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಅನುಷ್ಕಾ ಶರ್ಮಾ 47 ರನ್‌ ಕಲೆಹಾಕುವ ಮೂಲಕ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ತನುಜಾ ಕನ್ವರ್ ಕೆಳ ಕ್ರಮಾಂಕದಲ್ಲಿ 34 ರನ್​ಗಳ ಕಾಣಿಕೆ ನೀಡಿದರು. ಇವರಿಬ್ಬರನ್ನು ಹೊರತುಪಡಿಸಿ, ಇತರ 7 ಆಟಗಾರ್ತಿಯರಿಗೆ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. ಯುಎಇ ಪರ ಸಮೈರಾ 3 ವಿಕೆಟ್‌ ಪಡೆದರು.

IND vs PAK: ಟಿ20 ವಿಶ್ವಕಪ್​ನಲ್ಲಿ ಭಾರತ- ಪಾಕ್ ಮುಖಾಮುಖಿ ದಾಖಲೆ ಹೇಗಿದೆ?

ಇಶಾ ಓಜಾ ಸ್ಫೋಟಕ ಬ್ಯಾಟಿಂಗ್

ಈ ಗುರಿ ಬೆನ್ನಟ್ಟಿದ ಯುಎಇ ಪರ ನಾಯಕಿ ಮತ್ತು ಆರಂಭಿಕ ಬ್ಯಾಟರ್ ಇಶಾ ಓಜಾ 61 ಎಸೆತಗಳಲ್ಲಿ ಔಟಾಗದೆ 72 ರನ್ ಗಳಿಸಿ, ಯುಎಇ ಕೇವಲ 19.2 ಓವರ್‌ಗಳಲ್ಲಿ ಈ ಗುರಿ ತಲುಪಲು ಸಹಾಯ ಮಾಡಿದಲ್ಲದೆ ಎಲ್ಲರನ್ನೂ ಅಚ್ಚರಿಗೊಳಿಸಿದರು. ನಾಯಕಿ ರಾಧಾ ಸೇರಿದಂತೆ ಭಾರತೀಯ ಬೌಲರ್‌ಗಳು ಇಶಾ ಓಜಾ ಅವರನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ವಿಫಲರಾದರು. ಅಂತಿಮವಾಗಿ, ಯುಎಇ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಭಾರತಕ್ಕೆ ಮರೆಯಲಾಗದ ಆಘಾತ ನೀಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:36 pm, Fri, 13 February 26

ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ